TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಶಿಯೋಮಿ ಲಾಂಚ್ ಮಾಡಿರುವ Mi TV ಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶಿಯೋಮಿ ಊಹಿಸಿದ್ದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಸೃಷ್ಠಿ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಕ್ಕ ಯಶಸ್ಸಿನ ಫಲವಾಗಿ ಮತ್ತೆ ಮೂರು Mi TVಗಳನ್ನು ಶಿಯೋಮಿ ಲಾಂಚ್ ಮಾಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನಲ್ಲಿ ಸ್ಪರ್ಧೆಯೂ ನಿರ್ಮಾಣವಾಗಿದೆ.
ಶಿಯೋಮಿ ಹೊಸದಾಗಿ ಲಾಂಚ್ ಮಾಡಿರುವ Mi TVಗಳು ಸ್ಮಾರ್ಟ್ ಆಗಿದ್ದು, ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಸದ್ಯ ನೋಡುತ್ತಿರುವ TV ಅನುಭವನ್ನು ಬದಲಾವಣೆ ಮಾಡಲಿದೆ ಎನ್ನಲಾಗಿದೆ. ಇದರಲ್ಲಿ ಶಿಯೋಮಿ ಅಭಿವೃದ್ಧಿ ಪಡಿಸಿರುವ ಪ್ಯಾಚ್ ವಾಲ್ UI ಅನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುವ ಈ ಟಿವಿಗಳ ಕುರಿತು ಮಾಹಿತಿಯನ್ನು ಮುಂದೆ ನೀಡಲಾಗಿದೆ. ನೀವು ಮನೆಗೆ TV ತರಬೇಕು ಎನ್ನುವ ಪ್ಲಾನ್ ಮಾಡಿದ್ದರೆ ಇವುಗಳು ಒಳ್ಳೆಯ ಆಯ್ಕೆಯಾಗಲಿದೆ.
ಒಟ್ಟು ಮೂರು Mi TV:
ಶಿಯೋಮಿ ಈ ಬಾರಿ ಮಾರುಕಟ್ಟೆಗೆ ಒಟ್ಟು ಮೂರು ಸ್ಮಾರ್ಟ್ TVಯನ್ನು ಲಾಂಚ್ ಮಾಡಿದೆ. 32 ಇಂಚಿನ ಡಿಸ್‌ಪ್ಲೇ ಹೊಂದಿರುವ Mi TV 4C Pro, 49 ಇಂಚಿನ ಡಿಸ್‌ಪ್ಲೇ ಹೊಂದಿರುವ Mi TV 4A Pro ಮತ್ತು 55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ Mi TV 4 Proವನ್ನು ಬಿಡುಗಡೆ ಮಾಡಿದೆ.
Mi TV 4 Pro ವಿಶೇಷತೆ:
Mi TV 4 Proನಲ್ಲಿ 55 ಇಂಚಿನ 4K HDR ಸಪೋರ್ಟ್ ಮಾಡುವ ಫ್ರೇಮ್ ಲೈಸ್ ಡಿಸ್‌ಪ್ಲೇ ಯನ್ನು ಕಾಣಬಹುದಾಗಿದೆ, ಅಲ್ಲದೇ 20W ಸ್ಟೀರಿಯೋ ಸ್ಪೀಕರ್ ಹೊಂದಿದೆ. ಇದರೊಂದಿಗೆ 64 ಬಿಟ್ ಕ್ವಾಡ್ ಕೋರ್ ಪ್ರೋಸೆಸರ್ ಜೊತೆಗೆ 7 ಜನರೇಷನ್ ಇಮೇಜಿಂಗ್ ಟೆಕ್ನಾಲಜಿ, ಮಾಲಿ-450 ಗ್ರಾಫಿಕ್ಸ್ ಹೊಂದಿದೆ. ಇದಲ್ಲದೇ HDMI ಪೋರ್ಟ್, 2 USB ಪೋರ್ಟ್ ಜೊತೆಗೆ 2 GB RAM ಮತ್ತು 8 GB ಸ್ಟೋರೇಜ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಬಿಲ್ಟ್ ಇನ್ ಕೋರ್ಮ್ ಕಾಸ್ಟ್ ಇದರಲ್ಲಿದೆ. ಅಲ್ಲದೇ ಗೂಗಲ್ ವಾಯ್ಸ್ ಸರ್ಚ್ ಕಾಣಿಸಿಕೊಂಡಿದೆ.
Mi TV 4A Pro ವಿಶೇಷತೆ:
Mi TV 4A Pro ಟಿವಿಯೂ 1080p ಫುಲ್ HD ಅಲ್ಟ್ರಾ ಬ್ರೈಟ್ ಡಿಸ್‌ಪ್ಲೇಯನ್ನು ಹೊಂದಿದ್ದು, ಜೊತೆಗೆ HDR ಸಪೋರ್ಟ್ ಮಾಡಲಿದೆ. ಅಲ್ಲದೇ 20W ಸ್ಟೀರಿಯೋ ಸ್ಪೀಕರ್ ಹೊಂದಿದೆ. ಇದರೊಂದಿಗೆ 64 ಬಿಟ್ ಕ್ವಾಡ್ ಕೋರ್ ಪ್ರೋಸೆಸರ್ ಜೊತೆಗೆ 7 ಜನರೇಷನ್ ಇಮೇಜಿಂಗ್ ಟೆಕ್ನಾಲಜಿ, ಮಾಲಿ-450 ಗ್ರಾಫಿಕ್ಸ್ ಹೊಂದಿದೆ. ಇದಲ್ಲದೇ HDMI ಪೋರ್ಟ್, 2 USB ಪೋರ್ಟ್ ಜೊತೆಗೆ 2 GB RAM ಮತ್ತು 8 GB ಸ್ಟೋರೇಜ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಬಿಲ್ಟ್ ಇನ್ ಕೋರ್ಮ್ ಕಾಸ್ಟ್ ಇದರಲ್ಲಿದೆ. ಅಲ್ಲದೇ ಗೂಗಲ್ ವಾಯ್ಸ್ ಸರ್ಚ್ ಕಾಣಿಸಿಕೊಂಡಿದೆ.
Mi TV 4C Pro ವಿಶೇಷತೆ:
Mi TV 4C Pro ಸ್ಮಾರ್ಟ್ ಟಿವಿಯಲ್ಲಿ HD ರೆಡಿ ಪ್ಯಾನಲ್ ಅನ್ನು ಹೊಂದಿದೆ. 20W ಸ್ಟೀರಿಯೋ ಸ್ಪೀಕರ್ ಹೊಂದಿದೆ.ಅಲ್ಲದೇ 20W ಸ್ಟೀರಿಯೋ ಸ್ಪೀಕರ್ ಹೊಂದಿದೆ. ಇದರೊಂದಿಗೆ 64 ಬಿಟ್ ಕ್ವಾಡ್ ಕೋರ್ ಪ್ರೋಸೆಸರ್ ಜೊತೆಗೆ 7 ಜನರೇಷನ್ ಇಮೇಜಿಂಗ್ ಟೆಕ್ನಾಲಜಿ, ಮಾಲಿ-450 ಗ್ರಾಫಿಕ್ಸ್ ಹೊಂದಿದೆ. ಇದಲ್ಲದೇ HDMI ಪೋರ್ಟ್, 2 USB ಪೋರ್ಟ್ ಜೊತೆಗೆ 2 GB RAM ಮತ್ತು 8 GB ಸ್ಟೋರೇಜ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಬಿಲ್ಟ್ ಇನ್ ಕೋರ್ಮ್ ಕಾಸ್ಟ್ ಇದರಲ್ಲಿದೆ. ಅಲ್ಲದೇ ಗೂಗಲ್ ವಾಯ್ಸ್ ಸರ್ಚ್ ಕಾಣಿಸಿಕೊಂಡಿದೆ.
ಇನ್ನು ಇದೆ:
ಈ ಎಲ್ಲಾ ಟಿವಿಗಳಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಯುರೋಸ್ ನೌ, ಜಿಯೋ ಸಿನೆಮಾ, ಹೂಕ್ ಮತ್ತು ಎಪಿಕ್ ಗಳನ್ನು ಕಾಣಬಹುದಾಗಿದೆ. ಇವುಗಳು ಶಿಯೋಮಿ ಅಭಿವೃದ್ಧಿ ಮಾಡಿರುವ ಪ್ಯಾಚ್ವಾಲ್ UIನಲ್ಲಿ ದೊರೆಯಲಿದೆ. ಇದಲ್ಲದೇ ಶೀಘ್ರವೇ ಅಮೆಜಾನ್ ಪ್ರೈಮ್ ವಿಡಿಯೊ ಸಹ ಹೊಸ ಟಿವಿಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ಬೆಸ್ಟ್ ಅಂಶ:
ಈ ಮೂರು ಟಿವಿಗಳು ಬ್ಲೂಟೂತ್ v4.2 ಸಪೋರ್ಟ್ ಮಾಡಲಿದ್ದು, ಬೆಸ್ಟ್ ಎನ್ನಿಸಿಕೊಳ್ಳಲಿರುವ 11 ಬಟನ್‌ಗಳ ರಿಮೋಟ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೇ ಇದರಲ್ಲಿ ವಾಯ್ಸ್ ಸರ್ಚ್ ಬಟನ್ ಅನ್ನು ಹೊಂದಿರಲಿದೆ. ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.
ಬೆಲೆ:
ಶಿಯೋಮಿ ಒಟ್ಟು ಮೂರು ಸ್ಮಾರ್ಟ್ TVಗಳು ಬೇರೆ ಬೇರೆ ಬೆಲೆಯಲ್ಲಿ ಲಾಂಚ್ ಆಗಲಿದೆ. 32 ಇಂಚಿನ ಡಿಸ್‌ಪ್ಲೇ ಹೊಂದಿರುವ Mi TV 4C Pro ರೂ.14,999ಕ್ಕೆ ಮಾರಾಟವಾಗಲಿದೆ. 49 ಇಂಚಿನ ಡಿಸ್‌ಪ್ಲೇ ಹೊಂದಿರುವ Mi TV 4A Pro ರೂ.29,999ಕ್ಕೆ ಲಭ್ಯವಿರಲಿದೆ ಮತ್ತು 55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ Mi TV 4 Pro ರೂ.49,999ಕ್ಕೆ ಮಾರಾಟವಾಗಲಿದೆ.
ಎಲ್ಲಿ ಲಭ್ಯ:
ಅಕ್ಟೋಬರ್ 9 ರಂದು ಅಮೆಜಾನ್‌ನಲ್ಲಿ ಹಾಗೂ Mi.comನಲ್ಲಿ 32 ಇಂಚಿನ ಡಿಸ್‌ಪ್ಲೇ ಹೊಂದಿರುವ Mi TV 4C Pro ಮತ್ತು 49 ಇಂಚಿನ ಡಿಸ್‌ಪ್ಲೇ ಹೊಂದಿರುವ Mi TV 4A Pro ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಅಕ್ಟೋಬರ್ 10 ರಂದು ಫ್ಲಿಪ್‌ಕಾರ್ಟ್‌ನಲ್ಲಿ Mi TV 4 Pro ಫ್ಲಿಪ್‌ಕಾರ್ಟ್‌ನಲ್ಲಿ ಹಾಗೂ Mi.comನಲ್ಲಿ ಸೇಲ್ ಆಗಲಿದೆ.