Subscribe to Gizbot

ಮಾರುಕಟ್ಟೆಗೆ ಬರುವುದಿಲ್ಲ ಮೈಕ್ರೋಸಾಫ್ಟ್ ಬ್ಯಾಂಡ್ 3...!

Posted By: Precilla Dias

ಫಿಟ್ನೆಸ್ ಬ್ಯಾಂಡ್ ಗಳಲ್ಲಿ ಉತ್ತಮವಾಗಿದೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದ ಮೈಕ್ರೋಸಾಫ್ಟ್ ಬ್ಯಾಂಡ್ 2 ಈಗಾಗಲೇ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೈಕ್ರೋಸಾಫ್ಟ್ ಬ್ಯಾಂಡ್ 3 ಮಾರುಕಟ್ಟೆಗೆ ಬಿಡುಗಡೆಯಾಗ ಬೇಕಿತ್ತು. ಆದರೆ ಕಂಪನಿಯೂ ಸರಣಿಯಲ್ಲಿ ಫೆಟ್ನೆಸ್ ಮತ್ತು ವೃಸ್ಟ್ ಬ್ಯಾಂಡ್ ಗಳನ್ನು ಬಿಡುಗಡೆ ಮಾಡದಂತೆ ತೀರ್ಮಾನ ಕೈಗೊಂಡಿದ್ದು, ಹಿನ್ನಲೆಯಲ್ಲಿ ಮೈಕ್ರೋಸಾಫ್ಟ್ ಬ್ಯಾಂಡ್ 3 ಮಾರುಕಟ್ಟೆಗೆ ಬರುವುದಿಲ್ಲ ಎನ್ನಲಾಗಿದೆ.

ಮಾರುಕಟ್ಟೆಗೆ ಬರುವುದಿಲ್ಲ ಮೈಕ್ರೋಸಾಫ್ಟ್ ಬ್ಯಾಂಡ್ 3...!

ಈಗಾಗಲೇ ಮೈಕ್ರೋಸಾಫ್ಟ್ ಬ್ಯಾಂಡ್ 3 ವಿನ್ಯಾಸವು ರೂಪಿತವಾಗಿದ್ದು, ಮಾರುಕಟ್ಟೆಗೆ ಲಗ್ಗೆ ಇಡಬೇಕಾಗಿತ್ತು. ಆದರೆ ಕಂಪನಿಯ ನಿರ್ಧಾರದಿಂದ ಮೈಕ್ರೋಸಾಫ್ಟ್ ಬ್ಯಾಂಡ್ 3 ಬಳಕದಾರರಿಗೆ ನಿರಾಸೆಯನ್ನು ಮಾಡಿದೆ. ಆದರೆ ಕಂಪನಿಯೂ ಮತ್ತೊಂದು ಬ್ಯಾಂಡ್ ಬಿಡುಗಡೆ ಮಾಡುವ ಬದಲು ಮೈಕ್ರೋಸಾಫ್ಟ್ ಬ್ಯಾಂಡ್ 2 ಅನ್ನೇ ಇನ್ನಷ್ಟು ಅಭಿವೃದ್ಧಿ ಮಾಡಲಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಮೈಕ್ರೋಸಾಫ್ಟ್ ಬ್ಯಾಂಡ್ 3 ವಿಶೇಷತೆಗಳ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ಕಪ್ಪು ಬಣ್ಣದಲ್ಲಿ ಈ ಬ್ಯಾಂಡ್ ದೊರೆಯುತ್ತಿತ್ತು, ಅಲ್ಲದೇ ನೋಡಲು ಮೈಕ್ರೋಸಾಫ್ಟ್ ಬ್ಯಾಂಡ್ 2 ಮಾದರಿಯಲ್ಲಿಯೇ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

HP Sprocket First Impressions (Kannada)
ಮಾರುಕಟ್ಟೆಗೆ ಬರುವುದಿಲ್ಲ ಮೈಕ್ರೋಸಾಫ್ಟ್ ಬ್ಯಾಂಡ್ 3...!

ಮೈಕ್ರೋಸಾಫ್ಟ್ ಬ್ಯಾಂಡ್ 3 ಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ 100% ಚಾರ್ಜ್ ಆಗುತ್ತಿತ್ತು. ಇದೇ ಬೇರೆ ವಾಚ್ ಗಳು ಒಂದುವರೆ ಗಂಟೆಯಾದರೂ ಫೂಲ್ ಚಾರ್ಜ್ ಆಗುತ್ತಿರಲಿಲ್ಲ. ಅಲ್ಲದೇ ಮೈಕ್ರೋಸಾಫ್ಟ್ ಬ್ಯಾಂಡ್ 3 ಫುಲ್ ವಾಟರ್ ಫ್ರೂಪ್ ಆಗಿದ್ದು, ಮಳೆಯಲ್ಲಿ ನೆಂದರೂ. ನೀರಿನಲ್ಲಿ ಬಿದ್ದರೂ ಯಾವುದೇ ಚಿಂತೆ ಇಲ್ಲ.

ಬಂಪರ್ ಆಫರ್ ಕೊಟ್ಟ ಜಿಯೋ: ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಆಡ್‌ಆನ್‌ ಡೇಟಾ..!

ಇದಲ್ಲದೇ ಮೈಕ್ರೋಸಾಫ್ಟ್ ಬ್ಯಾಂಡ್ 3ನಲ್ಲಿ ಎರಡು ಸೆನ್ಸಾರ್ ಗಳಿದ್ದು, ಇದು ಸ್ವಿಮಿಂಗ್ ವ್ಯಾಯಮವನ್ನು ರೆಕಾರ್ಡ್ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಅಮೊಲೈಡ್ ಡಿಸ್ ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದ್ದು, ಬ್ಲೂಟೂತ್ 4.0 ಕನೆಕ್ಟಿವಿ ಸಹ ಇತ್ತು. ಒಟ್ಟಿನಲ್ಲಿ ಕಂಪನಿ ಬಿಡುಗಡೆ ಮಾಡಿದ ಬೆಸ್ಟ್ ಬ್ಯಾಂಡ್ ಇದಾಗುತ್ತಿತ್ತು.

Source

Read more about:
English summary
Microsoft Band 3 would have been the best smart band if the company had not canceled the lineup.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot