Subscribe to Gizbot

100 ರೂ.ಗಳಲ್ಲಿ ಖರೀದಿಸಬಹುದಾದ 5 ವಿಶೇಷ ಸ್ಮಾರ್ಟ್‌ಫೋನ್‌ ಪರಿಕರಗಳು!!

Written By:

ಸ್ಮಾರ್ಟ್‌ಫೋನ್‌ನಲ್ಲಿಯೇ ಎಷ್ಟೊಂದು ಫೀಚರ್‌ಗಳಿದ್ದರೂ ಅವುಗಳ ಬಳಕೆಗಾಗಿ ಇತರ ಡಿವೈಸ್‌ಗಳ ಅವಶ್ಯಕತೆ ಇರುತ್ತದೆ. ಹೆಡ್‌ಫೋನ್, ಗೇಮ್ ಜಾಯ್‌ಸ್ಟಕ್, ಬ್ಯಾಕ್ ಕವರ್, ಹೀಗೆ ಹತ್ತು ಹಲವು ಸ್ಮಾರ್ಟ್‌ಫೋನ್ ಪರಿಕರಗಳು ಪ್ರಮುಖವಾಗಿ ಬೇಕಿರುತ್ತವೆ. ಹಾಗಾಗಿ ಸ್ಮಾರ್ಟ್‌ಫೊನ್‌ ಬಳಕೆದಾರರು ಅವುಗಳನ್ನು ಖರೀದಿಬೇಕು.

ಇನ್ನು ಸ್ಮಾರ್ಟ್‌ಫೋನ್ ಅಸೆಸರಿಸ್‌ಗಳ ಮಾರುಕಟ್ಟೆಯೂ ಬಹಳ ದೊಡ್ಡದಾಗಿ ಬೆಳೆದು ನಿಂತಿದೆ. ಆದರೆ, ಯಾವ ರೀತಿಯ ವಿಶೇಷವಾದ ಸ್ಮಾರ್ಟ್‌ಫೋನ್ ಅಸೆಸರಿಸ್‌ಗಳನ್ನು ಇವೇ ಎಂಬುದೆ ಹೆಚ್ಚು ಜನ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಿಳಿದಿಲ್ಲ!!

ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆ!!?

ಹಾಗಾಗಿ, ಸ್ಮಾರ್ಟ್‌ಫೋನ್‌ ಬಳಕೆದಾರರು ಕೇವಲ 100 ರೂಪಾಯಿಗಳಲ್ಲಿ ಖರೀದಿಸಬಹುದಾದ ವಿಶೇಷವಾದ ಸ್ಮಾರ್ಟ್‌ಫೋನ್‌ ಪರಿಕರಗಳು ಯಾವುವು? ಅವುಗಳ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 3.5MM ಆಂಟಿ ಡಸ್ಟ್ ಇಯರ್‌ಫೋನ್ ಪ್ಲಗ್.

#1 3.5MM ಆಂಟಿ ಡಸ್ಟ್ ಇಯರ್‌ಫೋನ್ ಪ್ಲಗ್.

ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚು ಬಳಸುವ 3.5MM ಆಡಿಯೋ ಜಾಕ್ ಯಾವಾಗಲೂ ಧೂಳಿನಿಂದ ತೊಂಬಿಕೊಳ್ಳುತ್ತದೆ.ಇದರಿಂದ ಜಾಕ್‌ನ ಕಾರ್ಯನಿರ್ವಹಣೆಯೂ ಹಾಳಾಗಬಹುದು. ಹಾಗಾಗಿ, ಜಾಕ್‌ ಮುಚ್ಚಿಡಲು ಆಕರ್ಷಕವಾಗಿ ಕಾಣುವ 3.5MM ಆಂಟಿ ಡಸ್ಟ್ ಇಯರ್‌ಫೋನ್ ಪ್ಲಗ್ ಅನ್ನು ಖರೀದಿಸಬಹುದು.

#2 USB LED ಲ್ಯಾಂಪ್.

#2 USB LED ಲ್ಯಾಂಪ್.

ಸ್ಮಾರ್ಟ್‌ಫೋನ್‌ನಲ್ಲಿ ಟಾರ್ಚ್‌ಲೈಟ್ ಇದ್ದರೂ ಕೂಡ USB LED ಲ್ಯಾಂಪ್ ಖರೀದಿ ಉತ್ತಮ ಎನ್ನಬಹುದು. ಹೇಗಾದರೂ ಭಾಗಬಹುದಾದ ಮತ್ತು ಕಡಿಮೆ ಶಕ್ತಿಯನ್ನು ಬಳಸುವ ಈ ಎಲ್‌ಇಡಿ ಲ್ಯಾಂಪ್‌ಗಳು ಕೇವಲ 100 ರೂ.ಒಳಗೆ ಸಿಗುತ್ತವೆ.

#3 ಕ್ಲಾಸಿಟೆಕ್ ಸೆಲ್ಫಿ ಸ್ಟಿಕ್ ಮತ್ತು AUS ಕೇಬಲ್.

#3 ಕ್ಲಾಸಿಟೆಕ್ ಸೆಲ್ಫಿ ಸ್ಟಿಕ್ ಮತ್ತು AUS ಕೇಬಲ್.

ಕ್ಲಾಸಿಟೆಕ್ ಸೆಲ್ಫಿ ಸ್ಟಿಕ್ ಬಹುತೇಕ' ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಸಪೋರ್ಟ್ ಮಾಡುತ್ತದೆ ಎನ್ನಬಹುದು. AUS ಕೇಬಲ್ ಸಪೊರ್ಟ್‌ ಇದ್ದು, ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಹಾಗಾಗಿ ಸೆಲ್ಫಿ ಪ್ರಿಯರು ಕ್ಲಾಸಿಟೆಕ್ ಸೆಲ್ಫಿ ಸ್ಟಿಕ್ ಖರೀದಿಸಬಹುದು.

#4 ಒಟಿಜಿ ಆಡಾಪ್ಟರ್ ( Wire Swipe OTP Adapter)

#4 ಒಟಿಜಿ ಆಡಾಪ್ಟರ್ ( Wire Swipe OTP Adapter)

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪ್ಯೂಟರ್‌ ರೀತಿಯ ಕಾರ್ಯನಿರ್ವಹಣೆಗೆ ಒಟಿಜಿ ಆಡಾಪ್ಟರ್ ಪ್ರಮುಖವಾಗಿ ಬೇಕಿವೆ. ಹಾಗಾಗಿ ಅತ್ಯುತ್ತಮ ವೈರ್‌ಸ್ವೈಪ್ ಒಟಿಜಿ ಆಡಾಪ್ಟರ್ ಖರೀದಿಸಿ ಸ್ಮಾರ್ಟ್‌ಫೋನ್‌ ಅನ್ನು ಕಂಪ್ಯೂಟರ್‌ ರೀತಿಯಲ್ಲಿ ಉಪಯೋಗಿಸಬಹುದು.

#5 ಯುಎಸ್‌ಬಿ ಎಲ್‌ಇಡಿ ನೈಟ್ ಲೈಟ್ ಬಲ್ಬ್.

#5 ಯುಎಸ್‌ಬಿ ಎಲ್‌ಇಡಿ ನೈಟ್ ಲೈಟ್ ಬಲ್ಬ್.

ಯುಎಸ್‌ಬಿ ಸಪೋರ್ಟ್ ಹೊಂದಿರುವ ಎಲ್‌ಇಡಿ ನೈಟ್ ಲೈಟ್ ಬಲ್ಬ್‌ಗಳು ಮಾರುಕಟ್ಟೆಯಲ್ಲಿ ಕೇವಲ 100 ರೂಪಾಯಿಗಳಲ್ಲಿ ಖರೀದಿಸಬಹುದಾಗಿದ್ದು, ಮನೆಯಲಂಕಾರಕ್ಕೆ ಮತ್ತು ಇನ್ನಿತರ ಉಪಯೋಗಕ್ಕೆ ಇವು ಸಹಾಯಕವಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here are a few mobile accessories that you can buy for less than Rs 100 in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot