Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಾಯಂದಿರ ದಿನಕ್ಕೆ ಗಿಫ್ಟ್ ನೀಡಲು ಸೂಕ್ತವಾಗಿರುವ 5 ಗೆಡ್ಜೆಟ್ ಗಳು
ಮೇ 12 ರಂದು ಅಂತರಾಷ್ಟ್ರೀಯ ತಾಯಂದಿನ ದಿನ. ಇದು ತಮ್ಮ ತಾಯಂದಿರಿಗೆ ಮಕ್ಕಳು ಪ್ರೀತಿಪೂರ್ವಕವಾಗಿ ಗೌರವ ಸಲ್ಲಿಸುವ ಸುದಿನ ಮತ್ತು ತಾಯಿಯ ಎಲ್ಲಾ ರೀತಿಯ ತ್ಯಾಗಕ್ಕೆ ಮಕ್ಕಳಿಂದ ವಿಶೇಷ ಗೌರವ ನೀಡಲು ಇರುವ ದಿನ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅವರ ತಾಯಿಯೇ ವಿಶೇಷ ವ್ಯಕ್ತಿಯಾಗಿರುತ್ತಾರೆ. ಈ ವಿಶೇಷ ದಿನದಂದು ನಾವು ನಿಮಗೆ ತಾಯಂದಿರಿಗೆ ಏನು ಉಡುಗೊರೆ ಕೊಡಬಹುದು ಎಂಬ ಬಗ್ಗೆ ಕೆಲವು ಪ್ರಮುಖ ಗೆಡ್ಜೆಟ್ಸ್ ಗಳನ್ನು ನೀಡುವುದಕ್ಕೆ ಸಲಹೆ ನೀಡುತ್ತಿದ್ದೇವೆ.

ಜೆಬಿಎಲ್ ಲಿಂಕ್ ವ್ಯೂ ಸ್ಮಾರ್ಟ್ ಡಿಸ್ಪ್ಲೇ
ಇದು ಬಹುಶ್ಯಃ ದುಬಾರಿ ಗಿಫ್ಟ್ ಆಗಬಹುದು ಆದರೆ ಖಂಡಿತ ಬೆಲೆಗೆ ತಕ್ಕದ್ದಾಗಿದೆ. ಜೆಬಿಎಲ್ ಲಿಂಕ್ ವ್ಯೂ ಸ್ಮಾರ್ಟ್ ಡಿಸ್ಪ್ಲೇ ಮೂಲಕ ನಿಮ್ ಮತಾಯಿ ಮ್ಯೂಸಿಕ್ ನ್ನು ಎಲ್ಲೇ ಬೇಕಿದ್ದರೂ ಯಾವುದೇ ಸಮಯದಲ್ಲೇ ಬೇಕಿದ್ದರೂ ಎಂಜಾಯ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಈ ಡಿವೈಸ್ ಅತ್ಯುತ್ತಮ ಆಡಿಯೋ ಅನುಭವವನ್ನು ನೀಡುತ್ತದೆ ಜೊತೆಗೆ ಅತ್ಯುತ್ತಮವಾಗಿರುವ ದೊಡ್ಡ, ಸ್ಮಾರ್ಟ್ ಡಿಸ್ಪ್ಲೇಯನ್ನು ಹೊಂದಿದ್ದು ಉತ್ತಮ ಅನುಭವವನ್ನು ನೀಡುತ್ತದೆ.
ಯುಟ್ಯೂಬ್ ಟ್ಯೂಟೋರಿಯಲ್ ಮತ್ತು ಹೊಸ ವಿಚಾರಗಳನ್ನು ನೋಡುವುದಕ್ಕೆ ಕೂಡ ನಿಮ್ಮ ತಾಯಿ ಇದನ್ನು ಬಳಕೆ ಮಾಡಬಹುದು. ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗಲೂ ಕೂಡ ನಿಮ್ಮ ತಾಯಿ ಇದನ್ನು ಎಂಜಾಯ್ ಮಾಡಬಹುದು.ಗೂಗಲ್ ಅಸಿಸ್ಟೆಂಟ್ ಸಹಾಯವೂ ಕೂಡ ಇದರಲ್ಲಿದ್ದು ಆಕೆಗೆ ಬೋರ್ ಆಗುವುದನ್ನು ಇದರಿಂದ ತಪ್ಪಿಸಬಹುದು. ಜೆಬಿಎಲ್ ಲಿಂಕ್ ವ್ಯೂ ಸ್ಮಾರ್ಟ್ ಡಿಸ್ಪ್ಲೇಯ ಬೆಲೆ 28,248 ರುಪಾಯಿಗಳು.

ಶಿಯೋಮಿ ಎಂಐ ಬ್ಯಾಂಡ್ 3
ಪ್ರತಿಯೊಬ್ಬರು ಕೂಡ ತಮ್ಮ ತಾಯಂದಿರುವ ಆರೋಗ್ಯವಾಗಿರಬೇಕು ಎಂದು ಬಯಸುತ್ತಾರೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಾವು ಈ ಸ್ಮಾರ್ಟ್ ಬ್ಯಾಂಡ್ ನ್ನು ಈ ಲಿಸ್ಟ್ ನಲ್ಲಿ ಸೇರಿಸುತ್ತಿದ್ದೇವೆ.ಶಿಯೋಮಿ ಎಂಐ ಬ್ಯಾಂಡ್ 1,999 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತದೆ ಆದರೆ ಇದಕ್ಕೆ ಕೆಲವು ಆಫರ್ ಗಳನ್ನು ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ನಿರೀಕ್ಷಿಸಬಹುದು.
ಎಂಐ ಬ್ಯಾಂಡ್ 3 ನಲ್ಲಿ ಎಲ್ಲಾ ರೀತಿಯ ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ ಲಭ್ಯವಿರುತ್ತದೆ ಮತ್ತು ನಿಮ್ಮ ತಾಯಿ ತನ್ನ ಆರೋಗ್ಯ ಹೆಚ್ಚಿಸಿಕೊಂಡು ಫಿಟ್ ಆಗಿ ಇರುವುದಕ್ಕೆ ಬಳಕೆ ಮಾಡಬಹುದು. ಈ OLED ಸ್ಮಾರ್ಟ್ ಬ್ಯಾಂಡ್ ದೊಡ್ಡ OLED ಟಚ್ ಸ್ಕ್ರೀನ್ ನ್ನು ಹೊಂದಿದ್ದು ಕರೆಯನ್ನು ರಿಸೀವ್ ಮತ್ತು ರಿಜೆಕ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಎಸ್ಎಂಎಸ್ ಓದುವುದು, ವಾಟ್ಸ್ ಆಪ್ ಮತ್ತು ಇತರೆ ಮೆಸೇಜ್ ಗಳನ್ನು ಮತ್ತು ಆಪ್ ನೋಟಿಫಿಕೇಷನ್ ಗಳನ್ನು ಕೂಡ ರಿಸೀವ್ ಮಾಡುವುದು ಇತ್ಯಾದಿಗಳನ್ನು ಕೂಡ ಆಕೆ ಮಾಡಬಹುದು.
50ಎಂ ವರೆಗೆ ವಾಟರ್ ರೆಸಿಸ್ಟೆಂಟ್ ಆಗಿ ಕೂಡ ಇದು ಕೆಲಸ ಮಾಡುತ್ತದೆ. ಹಾರ್ಟ್ ಬೀಟ್ ರೇಟ್, ಹೆಜ್ಜೆಗಳ ಲೆಕ್ಕ, ನಿದ್ದೆ ಮಾಡಿದ ಸಮಯ, ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ ಸಮಯ, ಇತ್ಯಾದಿಗಳ ಟ್ರ್ಯಾಕಿಂಗ್ ಗೂ ಕೂಡ ಇದು ನೆರವಾಗುತ್ತದೆ.
20 ದಿನಗಳ ಬ್ಯಾಟರಿ ಲೈಫ್ ನ್ನು ಇದು ಹೊಂದಿರುತ್ತದೆ. ಹೆಚ್ಚುವರಿ ಫೀಚರ್ ಗಳಾಗಿರುವ ನಿಮ್ಮ ಫೋನ್ ಲೊಕೇಟಿಂಗ್, ಸ್ಲೀಪ್ ಅನಾಲಿಸಿಸ್, ಸ್ಟಾಪ್ ವಾಚ್, ಹವಾಮಾನದ ವರದಿ ತಿಳಿಯುವಿಕೆ ಇತ್ಯಾದಿ ಫೀಚರ್ ಗಳು ಕೂಡ ಇದರಲ್ಲಿದೆ.

ಸರಿಗಮ ಕರ್ವಾನ್ ಪ್ರೀಮಿಯಂ ಪೋರ್ಟೆಬಲ್ ಡಿಜಿಟಲ್ ಮ್ಯೂಸಿಕ್ ಪ್ಲೇಯರ್
ಒಂದು ವೇಳೆ ನಿಮ್ಮ ತಾಯಿ ಹಳೆಯ ಬಾಲಿವುಡ್ ಹಾಡುಗಳನ್ನು ಇಷ್ಟಪಡುತ್ತಾರಾದರೆ ಖಂಡಿತ ಈ ಪ್ರೊಡಕ್ಟ್ ನ್ನು ಅವರು ಇಷ್ಟಪಡುತ್ತಾರೆ. ಸರಿಗಮ ಕರ್ವಾನ್ ಮ್ಯೂಸಿಕ್ ಪ್ಲೇಯರ್ ಸುಮಾರು 500-ಪ್ರಿಲೋಡೆಡ್ ಹಾಡುಗಳನ್ನು ಹೊಂದಿರುತ್ತದೆ. ಅದರಲ್ಲಿ ಕಿಶೋರ್ ಕುಮಾರ್, ಅಮಿತಾಬ್ ಬಚ್ಚನ್, ರೇಖಾ, ಆರ್.ಡಿ. ಬರ್ಮನ್, ಆನಂದ್ ಭಕ್ಷಿ, ಗುಲ್ಜಾರ್, ಲಕ್ಷ್ಮೀಕಾಂತ್ ಪ್ಯಾರೇಲಾಲ್ ಮತ್ತು ಇನ್ನು ಹಲವು ಮಂದಿಯ ಹಾಡುಗಳಿರುತ್ತವೆ.
ರೊಮ್ಯಾನ್ಸ್, ಸ್ಯಾಜ್, ಗಝಲ್, ಭಕ್ತಿಗೀತೆಗಳು, ಫಿಲ್ಮ್ ಇನ್ಸ್ಟ್ರುಮೆಂಟಲ್, ಗುರ್ಬಾನಿ, ಸಾಂಗ್ಸ್ ಜೊತೆಗೆ ಡೈಲಾಗ್ಸ್, ಹಿಂದೂಸ್ತಾನಿ ಕ್ಲಾಸಿಕ್ ಮತ್ತು ಇತ್ಯಾದಿ ವಿಭಾಗಗಳಿರುತ್ತದೆ.ಇದರ ಬೆಲೆ ಅಮೇಜಾನ್ ಇಂಡಿಯಾದಲ್ಲಿ 5,600 ರುಪಾಯಿಗಳು.

ಯುರೇಕಾ ಫೋರ್ಭ್ಸ್ 0.4ಲೀಟರ್ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್
ಈ ಡಿವೈಸ್ ನಿಮ್ಮ ತಾಯಿಯ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಸ್ವಯಂಚಾಲಿತ ವ್ಯಾಕ್ಯೂಮ್ ಕ್ಲೀನರ್ ಆಗಿದೆ.ಇದು ಎಲ್ಲಾ ರೀತಿಯ ನೆಲವನ್ನು ಸ್ವಚ್ಛಗೊಳಿಸುತ್ತದೆ. ಕಾರ್ಪೆಟ್, ವುಡ್, ಟೈಲ್ಸ್ ಇತ್ಯಾದಿ. ಸಾಮಾನ್ಯ ವ್ಯಾಕ್ಯೂಮ್ ಕ್ಲೀನರ್ ತಲುಪದ ಜಾಗವನ್ನು ಕೂಡ ತಲುಪಿ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಫರ್ನಿಚರ್ ಇಟ್ಟಿರುವ ಸಣ್ಣಸಣ್ಣ ಸಂದುಗೊಂದಿಯ ಜಾಗವನ್ನು ಕೂಡ ಇದು ಸ್ವಚ್ಛ ಮಾಡುತ್ತದೆ.
ರಿಮೋಟ್ ಸಹಾಯದಿಂದ ಕೂಡ ಕ್ಲೀನ್ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.ಮನೆಯ ಯಾವುದೇ ಮೂಲೆಯನ್ನು ಬೇಕಿದ್ದರೂ ಇದರ ಸಹಾಯದಿಂದ ಸ್ವಚ್ಛಗೊಳಿಸಬಹುದು. ಇದರಲ್ಲಿ ಆಂಟಿ-ಫಾಲಿಂಗ್ ಸೆನ್ಸರ್ ಮತ್ತು ನಾನ್-ಕೊಲಿಷನ್ ಸೆನ್ಸರ್ ನ್ನು ಅಳವಡಿಸಲಾಗಿದೆ. ಇದರ ಬೆಲೆ ಅಮೇಜಾನ್ ಇಂಡಿಯಾದಲ್ಲಿ 18,127 ರುಪಾಯಿಗಳು.

ಗೂಗಲ್ ಕ್ರೋಮ್ ಕಾಸ್ಟ್ 3
ಒಂದು ವೇಳೆ ಅವರು ಹೆಚ್ಚು ಸಮಯ ಮೂವಿ ಮತ್ತು ಟಿವಿ ಸೀರಿಯಲ್ ನ್ನು ನೆಟ್ ಫ್ಲಿಕ್ಸ್ ಮತ್ತು ಇತರೆ ಸ್ಟ್ರೀಮಿಂಗ್ ಚಾನಲ್ ಗಳಲ್ಲಿ ಕಳೆಯುತ್ತಾರಾದರೆ ಖಂಡಿತ ನಿಮ್ಮ ತಾಯಿಗೆ ಗೂಗಲ್ ಕ್ರೋಮ್ ಕಾಸ್ಟ್ 3 ಬೆಸ್ಟ್ ಗಿಫ್ಟ್ ಆಗಿರುತ್ತದೆ. ಇದರ ಮೂಲಕ ಟಿವಿಗೆ ಸ್ಮಾರ್ಟ್ ಫೋನ್ ಮೂಲಕ ನೇರವಾಗಿ ಕನೆಕ್ಟ್ ಮಾಡಿಕೊಳ್ಳಬಹುದು.
ಟಿವಿ ಶೋಗಳು, ಮೂವಿಗಳು, ಗೇಮ್ ಗಳು ಮತ್ತು ಇತ್ಯಾದಿ ಸುಮಾರು 800+ ಕಂಪ್ಯಾಟೆಬಲ್ ಆಪ್ ಗಳಾಗಿರುವ ಯುಟ್ಯೂಬ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಸೋನಿ ಲೈವ್ ಮತ್ತು ಗಾನಾ ಇತ್ಯಾದಿಗಳನ್ನು ಸ್ಮಾರ್ಟ್ ಫೋನ್ ಅಥವಾ ಡಿವೈಸ್ ಮೂಲಕ ಸ್ರೀಮ್ ಮಾಡುವುದಕ್ಕೆ ನೆರವಾಗುತ್ತದೆ.
ಹೊಸ ಕ್ರೋಮ್ ಕಾಸ್ಟ್ 1080 ಪಿಕ್ಸಲ್ಸ್ ಜೊತೆಗೆ ಗೂಗಲ್ ಅಸಿಸ್ಟೆಂಟ್ ಗೂ ಬೆಂಬಲ ನೀಡುತ್ತದೆ. ಅಂದರೆ ಆಕೆ ವಾಯ್ಸ್ ಕಮಾಂಟ್ ಗಳ ಮೂಲಕ ತನ್ನ ಟಿವಿಯನ್ನು ಕಂಟ್ರೋಲ್ ಮಾಡಬಹುದು. ಟಿವಿಯ HDMI ಪೋರ್ಟ್ ಗೆ ನೇರವಾಗಿ ಡಿವೈಸ್ ನ್ನು ಪ್ಲಗ್ ಮಾಡುವುದಕ್ಕೆ ಇದರಲ್ಲಿ ಸಾಧ್ಯವಾಗುತ್ತದೆ ಮತ್ತು ಐಫೋನ್, ಐಪ್ಯಾಡ್, ಆಂಡ್ರಾಯ್ಡ್ ಫೋನ್, ಟ್ಯಾಬ್ಲೆಟ್ ಮತ್ತು ಮ್ಯಾಕ್ ಮತ್ತು ವಿಂಡೋಸ್ ಲ್ಯಾಪ್ ಟಾಪ್ ಮತ್ತು ಕ್ರೋಮ್ ಬುಕ್ ನಲ್ಲಿ ಇದನ್ನು ಬಳಕೆ ಮಾಡಬಹುದು. ಈ ಡಿವೈಸ್ ನ್ನು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 3,499 ರುಪಾಯಿಗೆ ಖರೀದಿಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470