ಅಬ್ಬಾ!!..ಐಫೋನ್‌ನಲ್ಲಿರುವ ಫೇಸ್‌ಲಾಕ್ ಬಗ್ಗೆ ನಿಮಗೆಷ್ಟು ಗೊತ್ತು?

10 ಲಕ್ಷದಲ್ಲಿ ಒಂದನ್ನು ತಪ್ಪಾಗಿ ಗುರುತು ಹಿಡಿದರೂ ಹಿಡಿಯಬಹುದು.!

|

ನಾವು ಊಹೆ ಮಾಡುವುದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನ ಬೆಳೆಯುತ್ತಿದ್ದು, ಹೊಸದಾಗಿ ಪರಿಚಯವಾಗುತ್ತಿರುವ ಒಂದೊಂದು ತಂತ್ರಜ್ಞಾನವನ್ನು ಸಹ ಅತ್ಯದ್ಬುತ ಎನ್ನಬಹುದು. ಅದಕ್ಕೆ ಹೊಸ ಸೇರ್ಪಡೆ ಆಪಲ್ ಕಂಪೆನಿ ಹೊಸ ಐಫೋನ್ 8ನಲ್ಲಿ ತಂದಿರುವ 'ಇನ್‌ಫ್ರಾರೆಡ್ ಫೇಷಿಯಲ್ ರೆಕಗ್ನಿಷನ್' ಅನ್‌ಲಾಕ್ ಸೌಲಭ್ಯ.!!

ಹೌದು, ಸ್ಮಾರ್ಟ್‌ಫೋನ್‌ನ ಮಾಲೀಕ ಫೋನ್ ತೆರೆಯಲು ಆತನ ಮುಖದ ಚಹರೆಯ ಗುರುತು ಹಿಡಿದು ಸ್ಮಾರ್ಟ್‌ಫೋನ್ ತನ್ನಿಂತಾನೆ ಅನ್‌ಲಾಕ್ ಆಗಲಿರುವ ಈ ತಂತ್ರಜ್ಞಾನ ಇದೀಗ ಕುತೋಹಲ ಹುಟ್ಟಿಸಿದ್ದು, ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.! ಹಾಗಾದರೆ, ಇನ್‌ಫ್ರಾರೆಡ್ ಫೇಷಿಯಲ್ ರೆಕಗ್ನಿಷನ್' ಹೇಗೆ ಕಾರ್ಯನಿರ್ವಹಿಸುತ್ತದೆ? ಫೇಕ್ ಮಾಡಲು ಸಾಧ್ಯವೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

10 ಲಕ್ಷದಲ್ಲಿ ಒಂದು ತಪ್ಪಾಗಬಹುದು!!

10 ಲಕ್ಷದಲ್ಲಿ ಒಂದು ತಪ್ಪಾಗಬಹುದು!!

ಆಪಲ್ ಕಂಪೆನಿ ಬಿಡುಗಡೆ ಮಾಡಿರುವ ನೂತನ ಐಫೋನ್‌ನಲ್ಲಿ ಸೇರಿರುವ ‘ಇನ್‌ಫ್ರಾರೆಡ್ ಫೇಷಿಯಲ್ ರೆಕಗ್ನಿಷನ್' ಅತ್ಯುತ್ತಮವಾಗಿದ್ದು, 10 ಲಕ್ಷದಲ್ಲಿ ಒಂದನ್ನು ತಪ್ಪಾಗಿ ಗುರುತು ಹಿಡಿದರೂ ಹಿಡಿಯಬಹುದು.! ಉಳಿದಂತೆ ಆಪಲ್ ತಂದಿರುವ ಈ ತಂತ್ರಜ್ಞಾನದಲ್ಲಿ ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬುದು ಪರಿಣಿತರ ಅಭಿಪ್ರಾಯ.!!

ಫೇಕ್ ಮಾಡಲು ಸಾಧ್ಯವಿಲ್ಲ!!

ಫೇಕ್ ಮಾಡಲು ಸಾಧ್ಯವಿಲ್ಲ!!

ಆಪಲ್ ತಂದಿರುವ ಫೇಸ್‌ಲಾಕ್ ರೀತಿಯೇ ಮೊದಲು ಸಹ ಫೆಸ್‌ಲಾಕ್‌ಗಳು ಲಭ್ಯವಿದ್ದವು.! ಆದರೆ, ಆ ವ್ಯವಸ್ಥೆ ಮೊಬೈಲ್‌ನಲ್ಲಿದ್ದ ಫೋಟೊದ ಆಧಾರದಲ್ಲಿ ಗುರುತು ಹಿಡಿಯುವ ಕಾರ್ಯವನ್ನು ನಿರ್ವಹಿಸುತ್ತಿತ್ತು.!! ಅಂದರೆ, ಮೊಬೈಲ್‌ ಬಳಕೆದಾರನ ಫೋಟೊ ಇದ್ದರೆ ಸುಲಭವಾಗಿ ಮೊಬೈಲ್ ತೆರೆಯಬಹುದಿತ್ತು.! ಆದರೆ, ಐಫೋನ್‌ನಲ್ಲಿ ಸಾಧ್ಯವಿಲ್ಲಾ.!!

ಸ್ಕ್ಯಾನಿಂಗ್‌ ವ್ಯವಸ್ಥೆ ಹೇಗೆ ಕೆಲಸ ಮಾಡಬಲ್ಲದು?

ಸ್ಕ್ಯಾನಿಂಗ್‌ ವ್ಯವಸ್ಥೆ ಹೇಗೆ ಕೆಲಸ ಮಾಡಬಲ್ಲದು?

ಮುಖದ ಸ್ಕ್ಯಾನಿಂಗ್‌ ವ್ಯವಸ್ಥೆ ಸ್ಮಾರ್ಟ್‌ಫೋನ್‌ನಲ್ಲಿ ಹೇಗೆ ಕೆಲಸ ಮಾಡಬಲ್ಲದು ಎಂಬುದಕ್ಕೆ ಕ್ವಾಲ್ಕಂ ಕಂಪೆನಿಯ ‘ಸ್ಪೆಕ್ಟ್ರಾ' ಡೆಪ್ತ್ ಸೆನ್ಸಿಂಗ್ ಕ್ಯಾಮೆರಾ ಸಿಸ್ಟಂ ಉತ್ತಮ ಉದಾಹರಣೆಯಾಗಬಲ್ಲದು.! 3D ತಂತ್ರಜ್ಞಾನದ ಮೂಲಕ ನಮ್ಮ ಮುಖದ ಸಣ್ಣ ಸಣ್ಣ ಚುಕ್ಕಿಯನ್ನೂ ಗುರುತು ಹಿಡಿಯುವ ‘ಸ್ಪೆಕ್ಟ್ರಾ' ಸ್ಮಾರ್ಟ್‌ಫೋನ್ ಅನ್‌ಲಾಕ್ ಆಗಲು ಸಹಾಯಕ.!!

ಐಫೋನ್ ಫೇಸ್‌ಲಾಕ್ ಇತಿಮಿತಿ.!!

ಐಫೋನ್ ಫೇಸ್‌ಲಾಕ್ ಇತಿಮಿತಿ.!!

ಇಷ್ಟೆಲ್ಲಾ ಅಭಿವೃದ್ದಿ ಹೊಂದಿರುವ ಆಪಲ್ ಫೇಸ್‌ಲಾಕ್ ವ್ಯವಸ್ಥೆಗೂ ಸಹ ಇತಿಮಿತಿ ಇದೆ.! ಐಫೋನ್‌ನಲ್ಲಿ ಬಳಸಿರುವ ‘ಇನ್‌ಫ್ರಾರೆಡ್ ಫೇಷಿಯಲ್ ರೆಕಗ್ನಿಷನ್' ತಂತ್ರಜ್ಞಾನ ಟೋಪಿ, ಸ್ಕಾರ್ಫ್ ಹಾಗೂ ಮುಖದ ಮೇಲಿರುವ ಮತ್ತಿತರ ವಸ್ತುಗಳು ಕ್ಯಾಮೆರಾದ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಲ್ಲ ಸಾಧ್ಯತೆ ಇದೆ ಎಂಬುದು ಕ್ವಾಲ್ಕಂ ಅಭಿಪ್ರಾಯ ವ್ಯಕ್ತಪಡಿಸಿದೆ.!!

ಸಮುದ್ರ ತೀರದಲ್ಲಿ ಸರಿಯಾಗಿ ವರ್ಕ್ ಆಗೊಲ್ಲಾ!!

ಸಮುದ್ರ ತೀರದಲ್ಲಿ ಸರಿಯಾಗಿ ವರ್ಕ್ ಆಗೊಲ್ಲಾ!!

ಐಫೋನ್‌ನಲಲ್ಲಿ ತಂದಿರುವ ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್' ತಂತ್ರಜ್ಞಾನದ ಯಶಸ್ಸಿನ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದು.!! ಸೂರ್ಯನ ಕಿರಣಗಳು ಮುಖದ ಮೇಲೆ ಬೀಳುತ್ತಿರುವಾಗ ಮುಖದ ಸ್ಕ್ಯಾನಿಂಗ್‌ಗೆ ಅಡಚಣೆಯಾಗಬಹುದು ಮತ್ತು ಬಯಲು, ಸಮುದ್ರ ತೀರ ಮತ್ತಿತರ ಪ್ರದೇಶಗಳಲ್ಲಿ ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್' ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ತಜ್ಞರ ಅನುಮಾನವಾಗಿದೆ.

10000 ರೂ.ಒಳಗೆ ಲಭ್ಯವಿರುವ ಟಾಪ್ 5 4GB RAM ಸ್ಮಾರ್ಟ್‌ಪೋನ್ ಲೀಸ್ಟ್!!10000 ರೂ.ಒಳಗೆ ಲಭ್ಯವಿರುವ ಟಾಪ್ 5 4GB RAM ಸ್ಮಾರ್ಟ್‌ಪೋನ್ ಲೀಸ್ಟ್!!

Best Mobiles in India

English summary
This year marks the 10th anniversary of the launch of the iPhone, to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X