ಸ್ಮಾರ್ಟ್ ಶೂ ಬಿಡುಗಡೆಗೊಳಿಸಿದ ನೈಕ್

  ನೈಕ್ ಕಂಪೆನಿ ತನ್ನ ಎರಡನೇ ಸ್ಮಾರ್ಟ್ ಶೂವನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಲೇಸ್ ಇರುವುದಿಲ್ಲ ಮತ್ತು ನೀವು ಶೂ ಮುಟ್ಟದೆ ಇದ್ದರೂ ಕೂಡ ನಿಮ್ಮ ಕಾಲಿಗೆ ಇದು ಹೊಂದಿಕೊಂಡು ಟೈಟ್ ಆಗಿ ಹೊಂದಿಕೊಳ್ಳುವ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದೆ. ಇದಕ್ಕಾಗಿ ನೀವು ಕೇವಲ ಆಪ್ ನ್ನು ಹೊಂದಿರಬೇಕಾಗಿರುತ್ತದೆ ಅಷ್ಟೇ. ಹೊಸ ಸ್ಮಾರ್ಟ್ ಶೂನ ಹೆಸರು 'Nike Adapt BB’. 2016 ರಲ್ಲಿ ಬಿಡುಗಡೆಗೊಂಡಿರುವ 'Nike HyperAdapt 1.0’ ಶೂನ ಯಶಸ್ಸಿನ ಮುಂದಿನ ಅವತರಣಿಕೆ ಇದು ಎಂದು ಹೇಳಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ದೇಹಾರೋಗ್ಯ ಕಾಪಾಡಲು ಸಹಕಾರಿ:

  ಹೆಸರೇ ಸೂಚಿಸುವಂತೆ ಈ ಶೂ ನ ಪ್ರಮುಖ ಉದ್ದೇಶವೇನೆಂದರೆ ಯಾವುದೇ ಸಂದರ್ಬದಲ್ಲೇ ಆದರೂ ದೇಹಾರೋಗ್ಯ ಕಾಪಾಡಿಕೊಂಡು ಫಿಟ್ ಆಗಿ ಇರುವುದು.ಇದರಲ್ಲಿ ಅಡ್ವಾನ್ಸ್ಡ್ ಲೇಸಿಂಗ್ ಸಿಸ್ಟಮ್ ನ್ನು ಅಳವಡಿಸಲಾಗಿದೆ. ಹಾಗಾಗಿ ಧರಿಸಿರುವವರು ನಡೆದರೂ, ಓಡಿದರೂ ಅಥವಾ ಬಾಸ್ಕೆಟ್ ಬಾಲ್ ಆಡಿದರೂ ಕೂಡ ಕಂಫರ್ಟ್ ಆಗಿರಬೇಕು ಎಂಬ ಉದ್ದೇಶದಿಂದ ತಯಾರಿಸಲಾಗಿರುವ ಶೂ ಇದಾಗಿದೆ.

  ತಯಾರಕರ ಹೇಳಿಕೆ:

  ವಿಪಿಯ ಕ್ರಿಯೇಟಿವ್ ಡೈರೆಕ್ಟರ್ ಇನೋವೇಷನ್ ಎರಿಕ್ ಅವರ್ ತಿಳಿಸುವಂತೆ "ಈ ಶೂವನ್ನು ಪ್ರಮುಖವಾಗಿ ಬಾಸ್ಕೆಟ್ ಬಾಲ್ ಆಟಗಾರರಿಗಾಗಿ ತಯಾರಿಸಲಾಗಿದ್ದು, ಅಥ್ಲೆಟ್ ಗಳು ಇಂತಹ ಶೂ ಬಗ್ಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ತಯಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯ ಬಾಸ್ಕೆಟ್ ಬಾಲ್ ಆಟದ ಸಂದರ್ಬದಲ್ಲಿ ಕ್ರೀಡಾಪಟುವಿನ ಪಾದದ ಬದಲಾವಣೆಗಳು ಮತ್ತು ಆ ಸಂದರ್ಬದಲ್ಲಿ ಶೂ ರಕ್ತದ ಹರಿವನ್ನು ಹೆಚ್ಚಿಸಲು ನೆರವು ನೀಡುತ್ತದೆ ಮತ್ತು ನಂತರ ಶೂ ಸಡಿಲಗೊಳಿಸಿದಾಗಲೂ ಪ್ರದರ್ಶನಕ್ಕೆ ಸಹಕಾರಿಯಾಗಿರುತ್ತದೆ ಆ ಮೂಲಕ ಒಬ್ಬ ಅಥ್ಲೀಟ್ ಗೆ ಉತ್ತಮ ಅನುಭವವು ಈ ಶೂದಿಂದ ಲಭ್ಯವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

  ತಂತ್ರಜ್ಞಾನ:

  ನೈಕ್ ಅಡಾಪ್ಟ್ ಬಿಬಿ ಶೂ ಒಳಗೆ ಕಸ್ಟಮ್ ಮೋಟರ್ ನ್ನು ಅಳವಡಿಸಲಾಗಿದ್ದು ಪಾದದಲ್ಲಿ ಉಂಟಾಗುವ ಒತ್ತಡವನ್ನು ಸ್ವಯಂಚಾಲಿತವಾಗಿ ಸೆನ್ಸ್ ಮಾಡಿ ಧರಿಸಿರುವವರಿಗೆ ಆರಾಮದಾಯಕವಾಗಿರುವ ಅನುಭವವನ್ನು ನೀಡುವಲ್ಲಿ ಸಹಕರಿಸುತ್ತದೆ. ಕಾಲಿನ ಕೆಳಗಿನ ಅಂದರೆ ಪಾದದ ಲೇಸಿಂಗ್ ಸುಮಾರು 32 ಪೌಂಡ್ ನಷ್ಟು(14.5kgs) ಯಷ್ಟು ಒತ್ತಡವನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದು ಧರಿಸಿರುವವರು ಯಾವುದೇ ಆಕ್ಟಿವಿಟಿ ಮಾಡಿದರೂ ಕೂಡ ಒತ್ತಡ ರಹಿತವಾಗಿ ಕಾರ್ಯ ನಿರ್ವಹಿಸಲು ಅನುಕೂಲಕರವಾಗಿರುತ್ತದೆ.

  ಯಾವಾಗ ಬಿಡುಗಡೆ:

  ನೈಕ್ ಅಡಾಪ್ಟ್ ಆಪ್ ನಲ್ಲಿ ಬೇರೆಬೇರೆ ಟಾಸ್ಕ್ ಗಳಿಗೆ ಅನುಗುಣವಾಗಿ ವಿಭಿನ್ನ ಫೀಡ್ ಗಳನ್ನು ಸೆಟ್ ಮಾಡಿಕೊಂಡು ಬಳಸಬಹುದು. ಅದರಲ್ಲೂ ಪ್ರಮುಖವಾಗಿ ಪ್ಲೇಯರ್ ಗಳಿಗೆ ಆಟದ ವಿಭಿನ್ನ ಹಂತಗಳಲ್ಲಿ ವಿಭಿನ್ನ ಸೆಟ್ಟಿಂಗ್ಸ್ ಇನ್ ಫುಟ್ ಮಾಡಲು ಅವಕಾಶ ನೀಡುತ್ತದೆ. ನಂತರ ವಾರ್ಮ್ ಅಪ್ ಮಾಡುವಾಗ ಪುನಃ ಸೆಟ್ಟಿಂಗ್ಸ್ ಗಳನ್ನು ಬದಲಾಯಿಸಿಕೊಳ್ಳಬಹುದು. ಇದು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಶೂ ಆಗಿದೆ ಮತ್ತು ಫೆಬ್ರವರಿಯಲ್ಲಿ ಈ ಶೂ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ತಿಳಿದುಬಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Nike launches 'smart' shoes that fit without you touching them, support wireless charging
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more