Subscribe to Gizbot

ಇತಿಹಾಸದಲ್ಲಿಯೇ ಅತ್ಯಧಿಕ ಸಾಮರ್ಥ್ಯದ ಎಸ್‌ಎಸ್‌ಡಿ ರಿಲೀಸ್!!..ಸ್ಟೋರೇಜ್ ಶಕ್ತಿ ಊಹಿಸಲು ಸಾಧ್ಯವಿಲ್ಲ!!

Written By:

ಇತ್ತೀಚಿಗಷ್ಟೆ ವಿಶ್ವದಾಖಲೆ ನಿರ್ಮಿಸಿದ್ದ 30 ಟಿಬಿ ಸಂಗ್ರಹದ ಸ್ಯಾಮ್ಸಂಗ್ ಎಸ್‌ಎಸ್‌ಡಿಗಿಂತಲೂ ಮೂರುಪಟ್ಟು ಹೆಚ್ಚು ಶೇಖರಣೆ ಹೊಂದಿರುವ ನೂತನ ಎಸ್‌ಎಸ್‌ಡಿಯನ್ನು ನಿಂಬಸ್ ಟೆಕ್ ಸಂಸ್ಥೆ ಬಿಡುಗಡೆ ಮಾಡಿದೆ.! ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ನಿರ್ಮಿಸಿದ ದಾಖಲೆಯನ್ನು ಕೇವಲ ಒಂದು ತಿಂಗಳಲ್ಲಿಯೇ ನಿಂಬಸ್ ಟೆಕ್ ಸಂಸ್ಥೆ ಮುರಿದಿದೆ.!!

ವಿಶ್ವ ಟೆಕ್ ಪ್ರಪಂಚವೇ ಆಶ್ಚರ್ಯವಾಗುವಂತಹ 100 TB ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ (ಎಸ್‌ಎಸ್‌ಡಿ) ಡಿವೈಸ್ ಅನ್ನು ನಿಂಬಸ್ ಟೆಕ್ ಸಂಸ್ಥೆ ತಾಯಾರಿಸಿದೆ. ಸೀಗೇಟ್ ಘೋಷಿಸಿದ 60TB ಎಸ್ಎಸ್‌ಡಿ ಇನ್ನು ಕಾರ್ಯರೂಪಕ್ಕೆ ಬಂದಿಲ್ಲವಾದ್ದರಿಂದ ಪ್ರಪಂಚದ ಅತಿ ಹೆಚ್ಚಿನ ಸಾಮರ್ಥ್ಯದ ಎಸ್‌ಎಸ್‌ಡಿ ತಯಾರಿಸಿದ ಕೀರ್ತಿ ಇದೀಗ ನಿಂಬಸ್ ಕಂಪೆನಿ ಪಾಲಾಗಿದೆ.!

ಇತಿಹಾಸದಲ್ಲಿಯೇ ಅತ್ಯಧಿಕ ಸಾಮರ್ಥ್ಯದ ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ಗೆ ನಿಂಬಸ್ ಡಾಟಾ ಎಕ್ಸಾಡ್ರೈವ್ DC100 ಎಂದು ಹೆಸರಿಡಲಾಗಿದ್ದು, ಕೇವಲ 3.5 ಇಂಚಿನ ಗ್ರಾತ್ರದ ಈ ನೂತನ ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ ಕೆಪಾಸಿಟಿ ತಲೆತಿರುಗುವಂತಿದೆ. ಹಾಗಾದರೆ ಈ ಫ್ಲಾಶ್‌ಡ್ರೈವ್‌ನ ಇನ್ನಿತರ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸಾಡ್ರೈವ್ DC100 ಸಾಮರ್ಥ್ಯ ಎಷ್ಟು?

ಎಕ್ಸಾಡ್ರೈವ್ DC100 ಸಾಮರ್ಥ್ಯ ಎಷ್ಟು?

3.5-ಇಂಚಿನ ಗಾತ್ರದಲ್ಲಿರುವ ನಿಂಬಸ್ ಡಾಟಾ ಎಕ್ಸಾಡ್ರೈವ್ DC100 ಎಸ್‌ಎಸ್‌ಡಿಯಲ್ಲಿ 20,000 ಹೆಚ್‌ಡಿ ಸಿನೆಮಾಗಳನ್ನು ಶೇಖರಿಸಿಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಸೀಕ್ವೆಂಟಲ್ ರೈಟ್ ಅಂಡ್ ರೀಡ್ ಸ್ಪೀಡ್ 500MBsನಷ್ಟಿದೆ ಎಂದು ಹೇಳಲಾಗಿದೆ. ಅಲ್ಲದೇ, ಇದು ಪ್ರತಿ ಟೆರಾಬೈಟ್ಗೆ 85% ಹೆಚ್ಚಿನ ಶಕ್ತಿಯನ್ನು ಹೊಂದಿದೆ.!!

ತಂತ್ರಜ್ಞಾನ ಯಾವುದು?

ತಂತ್ರಜ್ಞಾನ ಯಾವುದು?

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸ್ಟೋರೇಜ್ ಸಾಮರ್ಥ್ಯದ ಎಸ್‌ಎಸ್‌ಡಿ ತಯಾರಿಕೆಯಲ್ಲಿ ನಿಂಬಸ್ ಸ್ಯಾಮ್‌ಸಂಗ್ ಬಳಸಿದ 3D NAND (V-NAND) ತಂತ್ರಜ್ಞಾನವನೇ ಬಳಸಿದೆ ಎಂದು ಹೇಳಲಾಗಿದೆ.( ಸ್ಯಾಮ್‌ಸಂಗ್ ಕೂಡ ಇದೇ ತಂತ್ರಜ್ಞಾನ ಬಳಕೆ ಮಾಡಿತ್ತು). ಇದು ಎಸ್‌ಎಸ್‌ಡಿಯಲ್ಲಿ ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ತರಲಿದೆ.!!

2.5 ಮಿಲಿಯನ್ ಗಂಟೆಗಳ ಖಾತರಿ!!

2.5 ಮಿಲಿಯನ್ ಗಂಟೆಗಳ ಖಾತರಿ!!

ಇತಿಹಾಸದಲ್ಲಿ ಅತ್ಯಧಿಕ ಸಾಮರ್ಥ್ಯದ ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್ ನಿಂಬಸ್ ಡಾಟಾ ಎಕ್ಸಾಡ್ರೈವ್ DC100 ಮೇಲೆ ನಿಂಬಸ್ ಕಂಪೆನಿ ಐದು 5 ವರ್ಷ ಖಾತರಿ ನೀಡಿದೆ. ಕನಿಷ್ಠ 2.5 ಮಿಲಿಯನ್ ಗಂಟೆಗಳ ಬಾಳಿಕೆ ಖಾತರಿ ಹೊಂದಿರುವ ಈ ಎಸ್‌ಎಸ್‌ಡಿ ಬೆಲೆ $25,000ಗಿಂತ ಕಡಿಮೆಯಾಗುವುದಿಲ್ಲ ಎಂದು ಅಂದಾಜು ಮಾಡಬಹುದಾಗಿದೆ.!!

ಅತಿ ಚಿಕ್ಕ ಎಸ್‌ಎಸ್‌ಡಿ ಇದಲ್ಲ!!

ಅತಿ ಚಿಕ್ಕ ಎಸ್‌ಎಸ್‌ಡಿ ಇದಲ್ಲ!!

2.5 ಇಂಚಿನ ಸ್ಯಾಮ್‌ಸಂಗ್ PM1643 ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ) ವಿಶ್ವದ ಅತಿ ಚಿಕ್ಕದಾದ ದೊಡ್ಡ ಸಾಮರ್ಥ್ಯದ ಶೇಖರಣಾ ಘಟಕವಾಗಿದೆ. ವಿಶ್ವ ಟೆಕ್ ಪ್ರಪಂಚವೇ ಆಶ್ಚರ್ಯವಾಗುವಂತಹ 100 TB ಫ್ಲ್ಯಾಶ್‌ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ) ಡಿವೈಸ್ ಅನ್ನು ನಿಂಬಸ್ ತಯಾರಿಸಿದರೂ ಇದು 3.5-ಇಂಚು ಗಾತ್ರದಲ್ಲಿದೆ.!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಎಕ್ಸಾಡ್ರೈವ್ DC100 ಲಭ್ಯತೆ!!

ಎಕ್ಸಾಡ್ರೈವ್ DC100 ಲಭ್ಯತೆ!!

ಎಕ್ಸಾಡ್ರೈವ್ DC100 ಎಸ್‌ಎಸ್‌ಡಿಯನ್ನು ಗ್ರಾಹಕ ಮಾದರಿಗಳ ರೂಪದಲ್ಲಿ ತಲುಪಲು ನಿಂಬಸ್ ಪ್ರಾರಂಭಿಸಿರುವದಾಗಿ ಹೇಳಿಕೊಂಡಿದೆ. ಹಾಗಾಗಿ, ಗ್ರಾಹಕರಿಗೆ ಇದರ ಲಭ್ಯತೆಯು ತುಂಬಾ ಹತ್ತಿರದಲ್ಲಿದೆ ಎಂದು ಹೇಳಬಹುದು. ಇನ್ನು $25,000ಗಿಂತ ಹೆಚ್ಚು ಬೆಲೆ ನೀಡಿ ಎಕ್ಸಾಡ್ರೈವ್ DC100 ಎಸ್‌ಎಸ್‌ಡಿಯನ್ನು ಖರೀದಿಸುವುದೊಂದೆ ಬಾಕಿ.!!

ಓದಿರಿ:ಫೇಸ್‌ಬುಕ್ ಅನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರೆ ವಾಟ್ಸ್ಆಪ್ ಸಂಸ್ಥಾಪಕ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Nimbus has just introduced the world’s highest capacity SSD solid state disk with huge storage space. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot