ಶಿಯೋಮಿಗೆ ಸೆಡ್ಡು ಹೊಡೆಯಲು ಮೊಟೊ ಎಮ್ ಬಿಡುಗಡೆ!? ಇದು ಸ್ಮಾರ್ಟ್‌ಫೋನ್ ದರಸಮರ?

Written By:

ಪೂರ್ಣ ಮೆಟಲ್ ದೇಹ ರಚನೆ ಹೊಂದಿರುವ ಲೆನೊವೊ ಸ್ವಾಮ್ಯದ ಮೊಟೊರೊಲ ಮೊಟೊ ಎಮ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದು ಲಾಂಚ್ ಆಗಿದೆ.! ಮುಂಬೈನಲ್ಲಿ ಇಂದು ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಫೊನ್ ಬಿಡುಗಡೆಗೊಂಡಿದೆ.

ಮೊಟೊರೊಲ ಮೊಟೊ ಎಂ ಗುರುವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸ್ಮಾರ್ಟ್‌ಫೋನ್ 15,999 ರೂಪಾಯಿಗಳ ಬೆಲೆಯನ್ನು ಹೊಂದಿದೆ. ಕಡಿಮೆ ಬೆಲೆಗೆ ಅತ್ಯಾಧುನಿಕ ಫೀಚರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದ ಶಿಯೋಮಿ ಕಂಪೆನಿಗೆ ಸೆಡ್ಡು ಹೊಡೆಯಲು ಮೊಟೊ ಎಮ್ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ!!

ಸ್ಮಾರ್ಟ್‌ಫೋನ್ ಬೇಗ ಹಾಳಾಗಲು ನಾವು ಮಾಡುತ್ತಿರುವ 4 ತಪ್ಪುಗಳು!?

ಇನ್ನು ಮೊಟೊ ಎಮ್ ಸ್ಮಾರ್ಟ್‌ಫೋನ್ ವಿನ್ಯಾಸವು ಕಂಪೆನಿಯ ಹಳೆಯ ಸ್ಮಾರ್ಟ್‌ಫೋನ್ ಮೊಟೊ ಎಕ್ಸ್ ಹೊಲಿಕೆಯನ್ನೇ ಹೊಂದಿದ್ದು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ!! ಹಾಗಾದರೆ ಮೊಟೊ ಎಮ್ ಯಾವ ಯಾವ ಹೆಚ್ಚಿನ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೂರ್ಣಮೆಟಲ್ ದೇಹರಚನೆ!!

ಪೂರ್ಣಮೆಟಲ್ ದೇಹರಚನೆ!!

ಮೊಟೊ ಎಮ್ ಸ್ಮಾರ್ಟ್‌ಫೋನ್ ಪೂರ್ಣವಾಗಿ ಮೆಟಲ್‌ ದೇಹ ರಚನೆ ಹೊಂದಿದ್ದು, ಹೆಚ್ಚು ಬಾಳಿಕೆ ಬರುವಂತೆ ಮೊಬೈಲ್ ವಿನ್ಯಾಸ ಮಾಡಲಾಗಿದೆ. ಶಿಯೋಮಿ ನೀಡುತ್ತಿರುವ ಫೀಚರ್‌ಗಳ ಜೊತೆ ಗುಣಮಟ್ಟವನ್ನು ನಿಡುವುದು ಇದರ ಉದ್ದೇಶ ಎನ್ನಲಾಗಿದೆ!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ನೂತನ ಮೊಟೊ ಎಮ್ ಸ್ಮಾರ್ಟ್‌ಫೋನ್ 5.5 ಇಂಚಿನ 2.5D ಕರ್ವಡ್ ಐಪಿಎಸ್ ಡಿಸ್‌ಪ್ಲೇ ಹೊಂದಿದ್ದು, ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಆಕ್ಟ-ಕೋರ್ ಮೀಡಿಯಟೆಕ್ ಹೀಲಿಯೋ p15 ಸಿಪಿಯು ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.

4GB RAM ಮತ್ತು 64GB ಆಂತರಿಕ ಮೆಮೊರಿ.

4GB RAM ಮತ್ತು 64GB ಆಂತರಿಕ ಮೆಮೊರಿ.

ಮೊಟೊ ಸರಣಿಯ ಸ್ಮಾರ್ಟ್‌ಫೋನ್‌ ಗಳಲ್ಲಿಯೇ ಅತ್ಯುತ್ತಮ ಎನ್ನುವಂತರ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಮೊಟೊ ಎಮ್ ಹೊಂದಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸೆಲ್ಫಿ ಪ್ರಿಯರ ಮನಗೆಲ್ಲಲು ಪ್ರಯತ್ನ ನಡೆಸಿರುವಂತೆ ಮೊಟೊ ಎಮ್ ಅತ್ಯುತ್ತಮ ಕ್ಯಾಮೆರಾಗಳನ್ನು ಒಳಗೊಂಡಿದೆ. ಕ್ರಮವಾಗಿ 16 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿರುವ ಮೊಟೊ ಎಮ್‌ನಲ್ಲಿ ಅತ್ಯುತ್ತಮ ಚಿತ್ರಗಳನ್ನು ತೆಗೆಯಬಹುದಾಗಿದೆ.

ಇತರ ಹೆಚ್ಚಿನ ಫೀಚರ್ ಯಾವುವು.

ಇತರ ಹೆಚ್ಚಿನ ಫೀಚರ್ ಯಾವುವು.

ಇಂದಿನ ಸ್ಮಾರ್ಟ್‌ಫೊನ್‌ಗಳ ಸಾಮಾನ್ಯ ಫೀಚರ್‌ ಎಂಬಂತೆ ಮೊಟೊ ಎಂ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಇದರ ಜೊತೆಗೆ ಲೈಟ್ ಸೆನ್ಸಾರ್,ಪ್ರಾಕ್ಸಿಮಿಟಿ ಸೆನ್ಸಾರ್ ಜೊತೆಗೆ ಬೇಗ ಚಾರ್ಜ್ ಆಗುವ ಫೀಚರ್ ಅನ್ನು ಮೊಟೊ ಎಂನಲ್ಲಿ ನೊಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
he very-first all-metal smartphone from Lenovo-owned Motorola, Moto M, to Know More Visit To Kannada.Gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot