ರಕ್ಷಾಬಂಧನ ಸ್ಪೆಶಲ್ : ನಿಮ್ಮ ಒಡಹುಟ್ಟಿದವರಿಗೆ ಈ ಗಿಫ್ಟ್ ನೀಡಿ!

By Tejaswini P G

  ರಕ್ಷಾಬಂಧನ ಕೇವಲ ಒಂದು ಹಬ್ಬವಲ್ಲ. ಇದು ಒಡಹುಟ್ಟಿದವರ ಮಧ್ಯೆ ಇರುವ ಪ್ರೀತಿ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಮಾಡುವ ಆಚರಣೆ ಇದು. ನೀವು ನಿಮ್ಮ ಒಡಹುಟ್ಟಿದವರೊಂದಿಗೆ ಕಳೆದ ಸಂತೋಷದ ಕ್ಷಣಗಳೆಷ್ಟೋ ಅಥವ ಆಡಿದ ಜಗಳಗಳೆಷ್ಟೋ.ಈ ರಕ್ಷಾಬಂಧನದ ಸಂದರ್ಭದಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳ ಸಲುವಾಗಿ ಒಂದು ಉತ್ತಮ ಉಡುಗೊರೆಯನ್ನು ನೀಡಿ.

  ರಕ್ಷಾಬಂಧನ ಸ್ಪೆಶಲ್ : ನಿಮ್ಮ ಒಡಹುಟ್ಟಿದವರಿಗೆ ಈ ಗಿಫ್ಟ್ ನೀಡಿ!

  ನೀವು ಹಾಗೂ ನಿಮ್ಮ ಒಡಹುಟ್ಟಿದವರ ಆಸಕ್ತಿಗಳು ವಿಭಿನ್ನವಾಗಿದ್ದರೆ ನಿಮ್ಮ ಒಡಹುಟ್ಟಿದವರಿಗೆ ಅವರಿಗಿಷ್ಟವಾಗುವಂಥ ಉಡುಗೊರೆ ನೀಡುವುದು ಕಷ್ಟವಾಗಬಹುದು. ಅದಕ್ಕಾಗಿಯೆ ನಾವಿಲ್ಲಿ ಸಿದ್ಧಪಡಿಸಿದ್ದೇವೆ ಎಲ್ಲಾ ವಯಸ್ಸಿನ ಸಹೋದರ ಸಹೋದರಿಯರು ಇಷ್ಟಪಡುವಂಥ ಉಡುಗೊರೆಗಳ ಪಟ್ಟಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಯುಇ ಬೂಮ್ 2

  ಈ ಉಡುಗೊರೆ ಟ್ರಾವೆಲ್ ಇಷ್ಟಪಡುವ ಸಹೋದರರಿಗಾಗಿ.

  ಯುಇ ಬೂಮ್ 2 ಅದು ಇರುವಲ್ಲೆಲ್ಲಾ ಪಾರ್ಟಿ ಮೂಡ್ ಸೃಷ್ಟಿಸುತ್ತದೆ. ಇದು ಜೀವನದ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆಯಲು ಬಯಸುವವರಿಗೆ ಒಂದು ವಿಶಿಷ್ಟ ಉಡುಗೊರೆ. ಯುಇ ಬೂಮ್ 2 ಪಾರ್ಟಿಯನ್ನು ದೂರದಿಂದಲೇ ಕಂಟ್ರೋಲ್ ಮಾಡಲು ಆಪನ್ನು ಹೊಂದಿದೆ. ಸರಳವಾದ ವೈಯರ್ ಲೆಸ್ ಸೌಲಭ್ಯದಿಂದ ಟ್ಯಾಪ್ ಕಂಟ್ರೋಲ್ಗಳು,ಬ್ಲಾಕ್ ಪಾರ್ಟಿ ಮೊದಲಾದ ಫೀಚರ್ಗಳನ್ನು ಆಕ್ಸೆಸ್ ಮಾಡಬಹುದು.

  ನೀರು ಅಥವ ಮಣ್ಣಾದರೂ ಹಾಳಾಗದಂತೆ ಡಿಸೈನ್ ಮಾಡಲಾಗಿರುವ ಯುಇ ಬೂಮ್ 2 ಎಲ್ಲಾ ದಿಕ್ಕಿನಲ್ಲಿಯೂ ಶ್ರೇಷ್ಠ ಗುಣಮಟ್ಟದ ಸೌಂಡ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಯುಇ ಬೂಮ್ 2 ಚೆರ್ರಿಬಾಂಬ್, ಫ್ಯಾಂಟಮ್, ಗ್ರೀನ್ ಮೆಶೀನ್, ಟ್ರಾಪಿಕಲ್ ಮತ್ತು ಬ್ರೈನ್ ಫ್ರೀಝ್ ಬಣ್ಣಗಳಲ್ಲಿ ಲಭ್ಯವಿದೆ.

  ಯುಇ ಬೂಮ್ 2 ನ ಬೆಲೆ ರೂ 15,995/-

  ದಿ ಗೇಮರ್ ಲಾಗಿಟೆಕ್ G310

  ನಿಮ್ಮ ಗೇಮಿಂಗ್ ಪ್ರಿಯ ಸಹೋದರರಿಗೆ ಲಾಗಿಟೆಕ್ G310 ಮೆಕ್ಯಾನಿಕಲ್ ಕೀಬೋರ್ಡ್ ಸೂಕ್ತ ಉಡುಗೊರೆಯಾಗುತ್ತದೆ.ನಮ್ಮನ್ನು ನಂಬಿ, ಇದು ಗೇಮಿಂಗ್ ಪ್ರಿಯರಿಗೆ ಸ್ವರ್ಗ!! ಈ ಉಡುಗೊರೆಯೊಂದಿಗೆ ನಿಮ್ಮ ಸಹೋದರರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ!

  ದಿ ಗೇಮರ್ ಲಾಗಿಟೆಕ್ G310 ನ ಬೆಲೆ ರೂ 8,795/-

  ಒಪ್ಪೋ F3

  ಈ ರಕ್ಷಾಬಂಧನದ ಸಂದರ್ಭದಲ್ಲಿ ನಿಮ್ಮ ಸಹೋದರಿಯೊಂದಿಗಿನ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯಿರಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾ ಫೋನ್ ಬಳಸಿ.ಒಪ್ಪೋ F3 ಯಲ್ಲಿದೆ ಡ್ಯುಯಲ್ ಸೆಲ್ಫೀ ಕ್ಯಾಮೆರಾ, ಒಂದು ನಿಮ್ಮ ಸಹೋದರಿಯೊಂದಿಗಿನ ಸೆಲ್ಫೀ ತೆಗೆಯಲು, ಮತ್ತೊಂದು ನಿಮ್ಮ ಕುಟುಂಬದೊಂದಿಗಿನ ಸೆಲ್ಫೀಗಾಗಿ.

  ಇದರ 16 MP ಫ್ರಂಟ್ ಕ್ಯಾಮೆರಾ ಬಳಸಿ ನಿಮ್ಮ ಸಹೋದರಿ ದಿನಪೂರ್ತಿ ಅವಳ ಇಮೋಶನ್ಗಳನ್ನು ಸೆರೆ ಹಿಡಿಯಬಹುದು.ಅಲ್ಲದೆ ಡ್ಯುಯಲ್ ಸೆಲ್ಫೀ ಕ್ಯಾಮೆರಾ ಬಳಸಿ ನಿಮ್ಮ ಕುಟುಂಬದೊಂದಿಗೆ ಗ್ರೂಪ್ ಸೆಲ್ಫೀ ತೆಗೆಯಬಹುದು.

  ಒಪ್ಪೋ F3 64GB ಇಂಟರ್ನಲ್ ಮೆಮೋರಿ ಹೊಂದಿದ್ದು, ಇದರ ಟ್ರಿಪಲ್ ಕಾರ್ಡ್ ಸ್ಲಾಟ್ ಬಳಸಿ ಅವಳಿಗೆ ಬೇಕಾದ ಎಲ್ಲಾ ಆಪ್ಗಳನ್ನು ಇನ್ಸ್ಟಾಲ್ ಮಾಡಬಹುದು. ಎಲ್ಲೇ ಇದ್ದರೂ ಬೇಕಾದ ಶೋ ಹಾಗೂ ವೀಡಿಯೋಗಳನ್ನು ಸ್ಟ್ರೀಮ್ ಮಾಡಬಹುದು.ಇನ್ನೇಕೆ ತಡ, ಈ ರಕ್ಷಾಬಂಧನಕ್ಕೆ ತನ್ನಿ ನಿಮ್ಮ ಸಹೋದರಿಯ ಮುಖದಲ್ಲಿ ಮುದ್ದಾದ ಸೆಲ್ಫೀ ಸ್ಮೈಲ್.

  ಒಪ್ಪೋ F3 ನ ಬೆಲೆ ರೂ 19,990/-

  ಫಿಬಿಟ್ ಆಲ್ಟಾ HR

  ಹೆಲ್ತ್ ಆಂಡ್ ಫಿಟ್ನೆಸ್ ಮಾರುಕಟ್ಟೆಯ ದಿಗ್ಗಜ, ಫಿಬಿಟ್ ತಂದಿದೆ ಫಿಬಿಟ್ ಆಲ್ಟಾ HR. ಸ್ಲೀಪ್ ಟ್ರ್ಯಾಕಿಂಗ್ ಮಾಡುವುದು, ನಿಮ್ಮ ಆರೋಗ್ಯದ ಸೂಕ್ಷ್ಮ ಒಳನೋಟಗಳನ್ನು ನೀಡುವುದು, ಫಿಬಿಟ್ ಆಪ್ನ ಮೂಲಕ ಉತ್ತಮ ಆರೋಗ್ಯಕ್ಕಾಗಿ ಅಗತ್ಯ ಸಲಹೆಗಳನ್ನು ನೀಡುವುದಲ್ಲದೆ, ನಿಮ್ಮ ವೆಲ್ನೆಸ್ ಗೋಲ್ ಗಳನ್ನು ತಲುಪಲು ಸಹಾಯ ಮಾಡುತ್ತದೆ.

  ಫಿಬಿಟ್ ಆಲ್ಟಾ HR ಜಗತ್ತಿನ ಅತ್ಯಂತ ಸ್ಲಿಮ್ ಆದ ರಿಸ್ಟ್ ಬ್ಯಾಂಡ್ ಆಗಿದ್ದು ಸತತವಾಗಿ ನಿಮ್ಮ ಹಾರ್ಟ್ ರೇಟ್ ಅನ್ನು ಟ್ರ್ಯಾಕ್ ಮಾಡುತ್ತದಲ್ಲದೆ ಪ್ಯೂರ್ಪಲ್ಸ್ ಹಾರ್ಟ್ ರೇಟ್ ಟೆಕ್ನಾಲಜಿ, ಅಟೋಮ್ಯಾಟಿಕ್ ಎಕ್ಸರ್ಸೈಜ್ ರೆಕಗ್ನಿಶನ್, ಸ್ಲೀಪ್ ಟ್ರ್ಯಾಕಿಂಗ್ ಫೀಚರ್ಗಳನ್ನು ಹೊಂದಿದೆ. ಶ್ರೇಷ್ಠ ವಿನ್ಯಾಸ, 7 ದಿನಗಳ ಬ್ಯಾಟರಿ ಬ್ಯಾಕಪ್, ಸ್ಮಾರ್ಟ್ ನೋಟಿಫಿಕೇಶನ್ ಮುಂತಾದ ಫೀಚರ್ ಪಡೆದಿದೆ.ಫಿಬಿಟ್ ಆಲ್ಟಾ HR ಫುಶಿಯಾ, ಕೋರಲ್, ಇಂಡಿಗೋ, ಬ್ರೌನ್ ಮತ್ತು ಬ್ಲ್ಯಾಕ್ ಮೊದಲಾದ ನ್ಯೂಟ್ರಲ್ ಹಾಗೂ ಪಾಪ್ ಕಲರ್ಗಳಲ್ಲಿ ಲಭ್ಯವಿದೆ. ನಿಮ್ಮ ಸಹೋದರಿಗೆ ನೀಡಿ ಈ ಸ್ಟೈಲಿಶ್ ಫಿಟ್ನೆಸ್ ಟ್ರ್ಯಾಕರ್ ಹಾಗೂ ನಿಮ್ಮ ಸಹೋದರಿಗೆ ಫಿಟ್ ಆಗಿರಲು ಸಹಾಯ ಮಾಡಿ!!

  ಫಿಬಿಟ್ ಆಲ್ಟಾ HR ನ ಬೆಲೆ ರೂ 14,999/-

  ಫಿಬಿಟ್ ಬ್ಲೇಝ್

  ನಿಮ್ಮ ಫಿಟ್ನೆಸ್ ಫ್ರೀಕ್ ಸಹೋದರರಿಗೆ ಗಿಫ್ಟ್ ಮಾಡಿ ಫಿಬಿಟ್ ಬ್ಲೇಝ್. ಗನ್ ಮೆಟಲ್,ಬ್ರೌನ್, ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ಲಭ್ಯವಿರುವ ಫಿಬಿಟ್ ಬ್ಲೇಝ್ ಆಕರ್ಷಕ ವಿನ್ಯಾಸವನ್ನೂ ಹೊಂದಿದೆ. ಫಿಬಿಟ್ ಬ್ಲೇಝ್ ಪ್ಯೂರ್ ಪಲ್ಸ್ ಹಾರ್ಟ್ ರೇಟ್ ಟ್ರ್ಯಾಕಿಂಗ್,ಸ್ಮಾರ್ಟ್ ಟ್ರ್ಯಾಕ್ ಆಟೋಮ್ಯಾಟಿಕ್ ಎಕ್ಸರ್ಸೈಜ್ ರೆಕಗ್ನಿಶನ್, ಸ್ಲೀಪ್ ಟ್ರ್ಯಾಕಿಂಗ್ ,ಫಿಟ್ ಸ್ಟಾರ್ ಮೊದಲಾದ ಫೀಚರ್ಸ್ ಹೊಂದಿದೆ.

  ಫಿಬಿಟ್ ಬ್ಲೇಝ್ ಕಾಲ್,ಟೆಕ್ಸ್ಟ್, ಕ್ಯಾಲೆಂಡರ್ ಅಲರ್ಟ್ ಮುಂತಾದ ಸ್ಮಾರ್ಟ್ ನೋಟಿಫಿಕೇಶನ್ ಸೌಲಭ್ಯ ಹೊಂದಿದೆ. ಅಲ್ಲದೆ 5 ದಿನಗಳ ಬ್ಯಾಟರಿ ಬ್ಯಾಕಪ್ ನೀಡುವ ಫಿಬಿಟ್ ಬ್ಲೇಝ್ ನಿಮ್ಮ ಸಹೋದರರಿಗೆ ಐಡಿಯಲ್ ಗಿಫ್ಟ್.

  ಫಿಬಿಟ್ ಬ್ಲೇಝ್ ನ ಬೆಲೆ ರೂ 19,990/-

  ಸೆನೈಸರ್ ಮೊಮೆಂಟಮ್ ಇನ್-ಇಯರ್ ವೈಯರ್ ಲೆಸ್

  ಸಂಗೀತ ಪ್ರಿಯರಿಗೆ ಸೂಕ್ತ ಉಡುಗೊರೆ, ಸೆನೈಸರ್ ಮೊಮೆಂಟಮ್ ಇನ್-ಇಯರ್ ವೈಯರ್ ಲೆಸ್ ಹೊಂದಿದೆ ಸ್ಲೀಕ್ ಡಿಸೈನ್, ಶ್ರೇಷ್ಠ ಸೌಂಡ್ ಹಾಗೂ ಮೊಬಿಲಿಟಿ. ವೈಯರ್ಲೆಸ್ ವರ್ಶನ್ ಮತ್ತುಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ನೀಡಲಿದೆ ಸಂಗೀತ ಪ್ರಿಯರಿಗೆ ಉತ್ತಮ ಅನುಭವ. ಉತ್ತಮ ಗುಣಮಟ್ಟದ ಮೂಲವಸ್ತುಗಳನ್ನು ಬಳಸಿ ತಯಾರಿಸಿರುವ ಈ ನೆಕ್ ಬ್ಯಾಂಡ್ ಹೆಡ್ ಸೆಟ್ ನ ಇಂಟಗ್ರೇಟೆಡ್ ಮೈಕ್ರೋಫೋನ್, ಒನ್ ಟಚ್ ಪೇರಿಂಗ್ ಗೆ NFC,22 ಘಂಟೆಗಳ ಬ್ಯಾಟರಿ ಬ್ಯಾಕಪ್ ಮಾಡುತ್ತದೆ ಅದನ್ನು ಮೊಬೈಲ್ನ ಪರ್ಫೆಕ್ಟ್ ಪಾರ್ಟ್ನರ್.

  ಬ್ಲ್ಯಾಕ್ ಮತ್ತು ಐವರಿ ಕಲರ್ಗಳಲ್ಲಿ ಲಭ್ಯವಾಗುವ ಹೊಸ ಮೊಮೆಂಟಮ್ ತುಂಬ ಸ್ಟೈಲಿಶ್ ಆಗಿದೆ. ಮೊಮೆಂಟಮ್ ಹೆಡ್ಫೋನ್ ನ ಹಳೆ ಮಾಡೆಲ್ಗಳಿಗಿಂತ ಉತ್ತಮವಾಗಿದ್ದು ತುಂಬ ಕಂಫರ್ಟೇಬಲ್ ಆಗಿದೆ.

  ಸೆನೈಸರ್ ಮೊಮೆಂಟಮ್ ಇನ್-ಇಯರ್ ವೈಯರ್ ಲೆಸ್ ನ ಬೆಲೆ ರೂ 14,990/-

  ವರ್ಸಸ್ ನ್ಯೂ ಲೋಗೊ

  ವರ್ಸಸ್ ವರ್ಸೇಸ್ ನ ಹೊಸ ಪ್ರಾಡಕ್ಟ್, ನ್ಯೂ ಲೋಗೋ ಐಕಾನಿಕ್ ಲುಕ್ ಹೊಂದಿದೆ. ಟೈಮ್ ಓನ್ಲೀ ಮತ್ತು ಕ್ರೋನೋ ಆವೃತ್ತಿಗಳಲ್ಲಿ ಲಭ್ಯವಿರುವ ನ್ಯೂ ಲೋಗೋ ನ ಟಾಪ್ ರಿಂಗ್ ಮೇಲೆ ಡಬಲ್ ಲೋಗೋ ಎನ್ಗ್ರೇವ್ ಮಾಡಲಾಗಿದೆ.

  ಮೆನ್ಸ್ ಆವೃತ್ತಿಯ XL ಕೇಸ್ ನಲ್ಲಿ ಕ್ವಾರ್ಟ್ಝ್ ಮೂವ್ಮೆಂಟ್ ಇದ್ದು ಅರೇಬಿಕ್ ನ್ಯೂಮರಲ್ ಹವರ್ ಮಾರ್ಕರ್ಸ್ ಹೊಂದಿದೆ. ಎನರ್ಜಟಿಕ್ ಬ್ಲ್ಯಾಕ್ ವಿದ್ ಬ್ಲೂ ಡಯಲ್ ಹೊಂದಿರುವ ನ್ಯೂ ಲೋಗೋ 5 ಬೇರೆ ಕಲರ್ಗಳಲ್ಲಿ ಲಭ್ಯವಿದೆ.ಇದು ಲೆದರ್ ಸ್ಟ್ರ್ಯಾಪ್, ಐಪಿ ಗೋಲ್ಡ್ /ರೋಸ್ ಗೋಲ್ಡ್ ಅಥವ 2-ಕಲರ್ ಬ್ರೇಸ್ಲೆಟ್ ಹೊಂದಿದ್ದು, ಬ್ರೇಸ್ಲೇಟ್ನ ಸೆಂಟ್ರಲ್ ಲಿಂಕ್ ಡಯಲ್ನಂತೆಯೇ ಕ್ಲೌ ಡಿ ಪ್ಯಾರಿಸ್ ಡಿಸೈನ್ ಹೊಂದಿದೆ.

  ವರ್ಸಸ್ ನ್ಯೂ ಲೋಗೊ ನ ಬೆಲೆ ರೂ 15,990/-

  ಅಲ್ಟಿಮೇಟ್ ಇಯರ್ಸ್ ವಂಡರ್ ಬೂಮ್

  ಈ ರಕ್ಷಾಬಂಧನಕ್ಕೆ ನಿಮ್ಮ ಒಡಹುಟ್ಟಿದವರಿಗೆ ನೀಡಿ ಗಿಫ್ಟ್ ಆಫ್ ಮ್ಯೂಸಿಕ್. ಅಲ್ಟಿಮೇಟ್ ಇಯರ್ಸ್ ಕುಟುಂಬದ ಹೊಸ ಸದಸ್ಯ, ವಂಡರ್ಬೂಮ್ ಪೋರ್ಟೇಬಲ್, ವಾಟರ್ ಪ್ರೂಫ್ ಮತ್ತು ಗೊ ಎನಿವೇರ್ ಸ್ಪೀಕರ್ ಆಗಿದೆ.ವಂಡರ್ಬೂಮ್ ಸ್ಪೀಕರ್ ನಲ್ಲಿ ಕೇಳಿ ನಿಮ್ಮ ಬಾಲ್ಯದ ಫೇವರೆಟ್ ಹಾಡುಗಳನ್ನು. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿ ಬೆಸೆಯಲಿದೆ. ಕ್ಲಿಯರ್, ಕ್ರಿಸ್ಪ್ ಮತ್ತು ನಾನ್ ಸ್ಟಾಪ್ ಸೌಂಡ್ ನೀಡುವ ವಂಡರ್ಬೂಮ್ ಸ್ಪೀಕರ್ ಉತ್ತಮ ಬಾಸ್ ಕೂಡ ಹೊಂದಿದೆ.

  ವಂಡರ್ ಬೂಮ್ ನ ಬೆಲೆ ರೂ 7.995/-

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Do wish to mark a difference this Raksha Bandhan? If so, here are some gift options that you can gift for your geeky siblings.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more