ರೆಡ್‌ಮಿಯಿಂದ ಮತ್ತೊಂದು ಸ್ಮಾರ್ಟ್‌ ಟಿವಿ..! ಕಡಿಮೆ ಬೆಲೆ, ಹೆಚ್ಚು ಫೀಚರ್ಸ್‌..!

By Gizbot Bureau
|

ಶಿಯೋಮಿಯ ಪ್ರಮುಖ ಉಪ-ಬ್ರಾಂಡ್ ಆಗಿರುವ ರೆಡ್‌ಮಿ ತನ್ನ 40 ಇಂಚಿನ ಸ್ಮಾರ್ಟ್ ಟಿವಿಯನ್ನು ತವರು ಮಾರುಕಟ್ಟೆ ಚೀನಾದಲ್ಲಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಇದು ಎರಡನೇ ಮಾದರಿಯ ಟಿವಿಯಾಗಿದ್ದು, ರೆಡ್‌ಮಿ ಬ್ರಾಂಡ್‌ನ 70 ಇಂಚಿನ ಮೊದಲ ಸ್ಮಾರ್ಟ್ ಟಿವಿಯನ್ನು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ತರಲಾಗಿತ್ತು. 40 ಇಂಚಿನ ಸ್ಮಾರ್ಟ್‌ ಟಿವಿ ಕೆಲವು ವಿಶೇಷ ಅಂಶಗಳನ್ನು ಹೊಂದಿದ್ದರೂ, ಯಾವುದೇ ವಿಶೇಷ ಫೀಚರ್‌ಗಳಿಗೆಎ ಅಪ್‌ಡೇಟ್‌ ಆಗಿಲ್ಲ. ಹೊಸ 40 ಇಂಚಿನ ರೆಡ್‌ಮಿ ಸ್ಮಾರ್ಟ್‌ ಟಿವಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸ್ಮಾರ್ಟ್‌ ಫೀಚರ್ಸ್‌

ಸ್ಮಾರ್ಟ್‌ ಫೀಚರ್ಸ್‌

ರೆಡ್‌ಮಿ ಸ್ಮಾರ್ಟ್‌ ಟಿವಿ 60 ಹರ್ಟ್ಜ್‌ ರಿಫ್ರೆಶ್ ದರದೊಂದಿಗೆ ಸರಳವಾದ 40 ಇಂಚಿನ ಎಫ್‌ಹೆಚ್‌ಡಿ 1080 ಪಿಕ್ಸೆಲ್‌ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಹೊಸ ಟಿವಿಯಲ್ಲಿ ಎರಡು 8W ಸ್ಪೀಕರ್‌ಗಳಿದ್ದು, Mali-450 MP2 GPU ಜೊತೆಗಿನ 1.4 GHz ಕ್ವಾಡ್-ಕೋರ್ ಕಾರ್ಟೆಕ್ಸ್ A53 ಅಮ್ಲೊಜಿಕ್ ಚಿಪ್‌ಸೆಟ್ ಹೊಂದಿದೆ. 1 GB RAM ಮತ್ತು 8 GB ಇಂಟರ್ನಲ್‌ ಮೆಮೊರಿ ಹೊಂದಿದೆ.

ಪ್ಯಾಚ್‌ವಾಲ್‌ ಯುಐ

ಪ್ಯಾಚ್‌ವಾಲ್‌ ಯುಐ

ಶಿಯೋಮಿ ಸ್ಮಾರ್ಟ್ ಟಿವಿಗಳಂತೆ, ರೆಡ್‌ಮಿಯ ಹೊಸ ಟಿವಿ ಪ್ಯಾಚ್‌ವಾಲ್ ಯುಐನೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿದೆ. ಇದು ಡಿಟಿಎಸ್ 2.0 + ಡಿಜಿಟಲ್ ಔಟ್ ಮತ್ತು ಡಾಲ್ಬಿ ಆಡಿಯೋವನ್ನು ಹೊಂದಿದ್ದು, ಎರಡು 8W ಸ್ಪೀಕರ್‌ಗಳಿಂದ ಉತ್ತಮ ಗುಣಮಟ್ಟದ ಆಡಿಯೋ ಔಟ್‌ಪುಟ್ ನೀಡುತ್ತದೆ. ಸಂಪರ್ಕಕ್ಕಾಗಿ ಎರಡು ಎಚ್‌ಡಿಎಂಐ ಪೋರ್ಟ್‌ಗಳು, ಇಥರ್‌ನೆಟ್ ಪೋರ್ಟ್, ವೈ-ಫೈ ಮತ್ತು ಇತರ ಗುಣಮಟ್ಟದ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್‌ಮಿ ಟಿವಿ 40 ಇಂಚಿನ ಮಾದರಿಯು ಚೀನಾದಲ್ಲಿ 999 ಯುವಾನ್‌ಗೆ (ಅಂದಾಜು 10,000 ರೂ.) ದೊರೆಯುತ್ತಿದೆ. ಈಗಾಗಲೇ ಹಲವಾರು ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟವಾಗುತ್ತಿದೆ. ಆದಾಗ್ಯೂ, ಭಾರತದ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಟಿವಿಯನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಬಗ್ಗೆ ಮಾಹಿತಿಯಿಲ್ಲ.

ಕಡಿಮೆ ಬೆಲೆ ತಂತ್ರ

ಕಡಿಮೆ ಬೆಲೆ ತಂತ್ರ

ಆಗಸ್ಟ್‌ನಲ್ಲಿ, 70 ಇಂಚಿನ ರೆಡ್‌ಮಿ ಟಿವಿಯನ್ನು ಬಿಡುಗಡೆ ಮಾಡಲಾಯಿತು. 4K HDR ರೆಸಲ್ಯೂಶನ್‌ನೊಂದಿಗೆ ಬೆಜಲ್‌-ಲೆಸ್‌ ವಿನ್ಯಾಸವನ್ನು ಸ್ಮಾರ್ಟ್‌ ಡಿವಿ ಹೊಂದಿದ್ದು, ಇದು ಪ್ರೀಮಿಯಂ ಕೊಡುಗೆಯಾಗಿದೆ. ಆದಾಗ್ಯೂ, ಕಡಿಮೆ ಬೆಲೆಗೆ ಹೆಸರುವಾಸಿಯಾದ ಕಂಪನಿಯು 70 ಇಂಚಿನ ರೆಡ್‌ಮಿ ಟಿವಿಯೊಂದಿಗೂ ಅದೇ ತಂತ್ರವನ್ನು ಆಕ್ರಮಣಕಾರಿ ರೀತಿಯಲ್ಲಿ ಅನುಸರಿಸಿತು.

ಮಾರುಕಟ್ಟೆಯ ಹಿಡಿತ

ಮಾರುಕಟ್ಟೆಯ ಹಿಡಿತ

ರೆಡ್‌ಮಿ ಟಿವಿ ಮಾದರಿಗಳ ಜಾಗತಿಕ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ, ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ರೆಡ್‌ಮಿ ಅಭಿಮಾನಿಗಳಿಗೆ ಈ ಸಾಧನ ಶೀಘ್ರದಲ್ಲಿ ಲಭ್ಯವಾಗಲಿದೆ. ಗಮನಾರ್ಹವಾಗಿ, ಈ ಟಿವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತವೆ ಎಂಬುದು ಕಂಡುಬರುತ್ತದೆ. ಏಕೆಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಈಗಾಗಲೇ ಸ್ಮಾರ್ಟ್ ಟಿವಿ ವಿಭಾಗದಲ್ಲಿ ತನ್ನ ಹಿಡಿತ ಹೊಂದಿ, ಪ್ರತಿಸ್ಪರ್ಧಿಗಳಿಗೆ ಪ್ರಮುಖ ಸ್ಪರ್ಧಿಯಾಗಿದೆ.

Most Read Articles
Best Mobiles in India

Read more about:
English summary
Xiaomi’s sub-brand Redmi took the wraps off its 40-inch smart TV in its home market China. Notably, this is the second model as the brand’s first smart TV is a 70-inch offering, which was launched in August. While it has come interesting aspects, it comes with no special features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more