ವಾಟ್ಸ್ಆಪ್ ಬಳಕೆದಾರರಿಗೂ ತಿಳಿದಿಲ್ಲ ವಾಟ್ಸ್‌ಆಪ್ ಎಷ್ಟು ಸೇಫ್ ಅಂತ. ಹೌದು ಫೇಸ್‌ಬುಕ್ ಒಡೆತನಕ್ಕೆ ಸೇರಿರುವ ವಾಟ್ಸ್‌ಆಪ್ ತನ್ನ ಬಳಕೆದಾರಿಗೆ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಸೇವೆಯನ್ನು ನೀಡುತ್ತಿದ್ದು, ವಾಟ್ಸ್‌ಆಪ್ ನಲ್ಲಿರುವ ಯಾವುದೇ ಮಾಹಿತಿಯೂ ಮೂರನೇ ವ್ಯಕ್ತಿಗೆ ದೊರೆಯದಂತೆ ಮಾಡುತ್ತಿದೆ.

ಓದಿರಿ: ನೂತನ ಆಂಡ್ರಾಯ್ಡ್ ಓರಿಯೊನಲ್ಲಿದೆ ಹೊಸ ಆಚ್ಚರಿಗಳು: ಇಲ್ಲಿದೇ ನೋಡಿ.!
ಇಂದೊಂದು ಸೋಶಿಯಲ್ ಮೇಸೆಜಿಂಗ್ ತಾಣವಾಗಿದ್ದು, ಇಲ್ಲಿ ನಡೆಯವ ಚಾಟಿಂಗ್‌ಗಳು ಬಹಳ ಸೇಫ್ ಆಗಿದ್ದು, ಕಳುಹಿಸಿದರು ಮತ್ತು ಸ್ವೀಕರಿಸಿದವರನ್ನು ಬಿಟ್ಟರೇ ಮಧ್ಯದಲ್ಲಿ ಮೂರನೇ ವ್ಯಕ್ತಿ ಯಾವುದೇ ತಂತ್ರಜ್ಙಾನವನ್ನು ಬಳಸಿಕೊಂಡು ಆ ಮೇಸೆಜ್‌ಗಳನ್ನು ಓದಲು ಇಲ್ಲವೇ ಕಾಪಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.
ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಸೇವೆ:
ವಾಟ್ಸ್‌ಆಪ್ ತನ್ನ ಬಳಕೆದಾರರ ಸುರಕ್ಷತೆಗಾಗಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಸೇವೆಯನ್ನು ನೀಡುತ್ತಿದ್ದು, ಕಳೆದ ವರ್ಷವೇ ಈ ಸೇವೆಯನ್ನು ವಾಟ್ಸ್‌ಆಪ್ ಆರಂಭಿಸಿತ್ತು. ಇಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವೇ ಚಾಟಿಂಗ್ ನಡೆಯಲಿದೆ.
ವಾಟ್ಸ್‌ಆಪ್ ಸಹ ನಿಮ್ಮ ಮೇಸೆಜ್ ಓದುವುದಿಲ್ಲ:
ನೀವು ನಿಮ್ಮ ಸ್ನೇಹಿತರೊಂದಿಗೆ ನಡೆಸುವ ಚಾಟ್ ಅನ್ನು ವಾಟ್ಸ್‌ಆಪ್ ಸಹ ಓದುವುದಿಲ್ಲ ನೀವು ಕಳುಹಿಸಿದ ಮೇಸೆಜ್ ನೇರವಾಗಿ ನಿಮ್ಮ ಸ್ನೇಹಿತರಿಗೆ ತಲುಪಲಿದೆ. ಮೂರನೇ ವ್ಯಕ್ತಿ ಇದನ್ನು ಓದಲು ಸಾಧ್ಯವೇ ಇಲ್ಲ ಎನ್ನಲಾಗಿದೆ.
ಹ್ಯಾಕ್ ಮಾಡಿದರೂ ಮೇಸೆಜ್ ಓದಲು ಸಾಧ್ಯವಿಲ್ಲ:
ಹಾಗೇ ಹೀಗೆ ಮಾಡಿ ನಿಮ್ಮ ಚಾಟ್ ಅನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡಿದರೂ ಸಹ ಅವರಿಗೆ ಓದಲು ಸಾಧ್ಯವಾಗುವುದು ಒಂದೇ ಒಂದು ಮೇಸೆಜ್ ಮಾತ್ರ. ಏಕೆಂದರೆ ವಾಟ್ಸ್‌ಆಪ್ ಪ್ರತಿ ಮೇಸೆಜಿಗೂ ಒಂದೊಂದು ಕೀ ಗಳನ್ನು ನೀಡಿರುತ್ತದೆ.
ಭಾರತದಲ್ಲಿ 200 ಮಿಲಿಯನ್, ವಿಶ್ವದಲ್ಲಿ 1.3 ಬಿಲಿಯನ್:
ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದ್ದು, ಭಾರತದಲ್ಲೇ ಸುಮಾರು 200 ಮಿಲಿಯನ್ ಬಳಕೆದಾರರನ್ನು ಕಾಣಬಹುದಾಗಿದೆ. ಅಲ್ಲದೇ ವಿಶ್ವದಲ್ಲಿ ಸುಮಾರು 1.3 ಬಿಲಿಯನ್ ಮಂದಿ ವಾಟ್ಸ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಈ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ.
ಶೀಘ್ರವೇ ಪೇಮೆಂಟ್ ಸೇವೆ:
ವಾಟ್ಸ್ಆಪ್ ಶೀಘ್ರವೇ ಪೇಮೆಂಟ್ ಸೇವೆಯನ್ನು ನೀಡಲಿದೆ. ಈಗಾಗಲೇ ಈ ಆಯ್ಕೆಯೂ ಬೀಟಾ ಬಳಕೆದಾರರಿಗೆ ಲಭ್ಯವಿದ್ದು, ಇದು ಯಶಸ್ವಿಯಾದ ನಂತರದಲ್ಲಿಲ ಸಾಮಾನ್ಯ ಬಳಕೆದಾರರಿಗೂ ಈ ಆಯ್ಕೆ ಲಭ್ಯವಿರಲಿದೆ. ಅಲ್ಲದೇ ಇದು ಸೇಫ್ ಸಹ ಇದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.