Subscribe to Gizbot

2G/3G ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟ ಜಿಯೋ: ಒಮ್ಮೆ ಖರೀದಿಸಿದರೆ 8 ತಿಂಗಳ ರಿಚಾರ್ಜ್ ಬೇಕಾಗಿಲ್ಲ...!

Written By:

ಜಿಯೋ ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಿಚಾರ ತಿಳಿದಿದೆ. ಈಗಾಗಲೇ ಫೊರ್ಟಬಲ್ ಹಾಟ್ ಸ್ಪಾಟ್ ಮಾರಾಟದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿರುವ ಜಿಯೋ ಫೈ ಶೀಘ್ರವೇ ಮತ್ತೊಂದು ಹೊಸತನಕ್ಕೆ ಕಾರಣವಾಗಲಿದೆ. ಈಗಾಗಲೇ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವ ಜಿಯೋ ಫೈ ಕೊಳ್ಳುವವರಿಗೆ ಹೊಸದೊಂದು ಆಫರ್ ನೀಡಲು ಜಿಯೋ ಮುಂದಾಗಿದೆ.

ಜಿಯೋ: ಒಮ್ಮೆ ಖರೀದಿಸಿದರೆ 8 ತಿಂಗಳ ರಿಚಾರ್ಜ್ ಮಾಡಿಸಬೇಕಾಗಿಲ್ಲ...!

ಮಾರುಕಟ್ಟೆಯಲ್ಲಿ ಏರ್‌ಟೆಲ್ ಹಾಟ್‌ಸ್ಪಾಟ್ ಸೇರಿದಂತೆ ಇತರೆ ಡೇಟಾ ಕಾರ್ಡ್‌ಗಳನ್ನು ಹಿಂದಿಕ್ಕಿ ಶೇ.51ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿರುವ ಜಿಯೋ, ಈ ಹೊಸ ಆಫರ್ ಮೂಲಕ ಈ ಪ್ರಮಾಣವನ್ನು ಅಧಿಕ ಮಾಡಿಕೊಳ್ಳಲಿದೆ. ರೂ.1,999 ನೀಡಿ ಜಿಯೋ ಫೈ ಖರೀದಿಸಿದರೆ ಎಂಟು ತಿಂಗಳ ಕಾಲ ಯಾವುದೇ ರಿಚಾರ್ಜ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಗ್ರಾಹಕರಿಗೆ ಏನು ಲಾಭ:

ಗ್ರಾಹಕರಿಗೆ ಏನು ಲಾಭ:

ರೂ.1999 ನೀಡಿ ಜಿಯೋ ಫೈ ಖರೀದಿ ಮಾಡಿದರೆ ಬಳಕೆದಾರರಿಗೆ ಸುಮಾರು ರೂ.3595 ಗಳಷ್ಟು ಹೆಚ್ಚುವರಿ ಲಾಭಗಳು ದೊರೆಯಲಿದೆ. ಗ್ರಾಹಕರಿಗೆ ರೂ.1295ಗಳಷ್ಟು ಮೌಲ್ಯದ ಡೇಟಾವನ್ನು ಜಿಯೋ ಉಚಿತವಾಗಿ ನೀಡಲಿದೆ. ಇದಲ್ಲದೇ ರೂ.2300 ಮೌಲ್ಯದ ವೋಚರ್ ಗಳನ್ನು ಬಳಕೆದಾರರಿಗೆ ತ್ವರೆ ಮಾಡಲಿದೆ. ಇದನ್ನು ವಿವಿಧ ವಸ್ತುಗಳ ಖರೀದಿಯ ಮೇಲೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಎಂಟು ತಿಂಗಳು ಉಚಿತ ಡೇಟಾ:

ಎಂಟು ತಿಂಗಳು ಉಚಿತ ಡೇಟಾ:

ರೂ.1999 ನೀಡಿ ಜಿಯೋ ಫೈ ಖರೀದಿ ಮಾಡಿದರೆ ಎಂಟು ತಿಂಗಳು ಉಚಿತ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ 1.5GB ಪ್ಲಾನ್ ಬಳಕೆ ಮಾಡಿಕೊಂಡರೆ ಎಂಟು ತಿಂಗಳು ಉಚಿತ ಸೇವೆ ದೊರೆಯಲಿದೆ. ಇದೇ ಮಾದರಿಯಲ್ಲಿ ನಿತ್ಯ 2GB ಡೇಟಾ ಬಳಕೆ ಮಾಡಿ ಮಾಡಿಕೊಂಡರೆ ಆರು ತಿಂಗಳು ಉಚಿತ ಸೇವೆ ದೊರೆಯಲಿದೆ. ಅಲ್ಲದೇ 3GB ಡೇಟಾ ನಿತ್ಯ ಬೇಕಾದರೆ ನಾಲ್ಕು ತಿಂಗಳು ಉಚಿತ ಸೇವೆಯೂ ದೊರೆಯಲಿದೆ.

ರೂ.2300 ಮೌಲ್ಯದ ವೋಚರ್:

ರೂ.2300 ಮೌಲ್ಯದ ವೋಚರ್:

ರೂ.1999 ನೀಡಿ ಜಿಯೋ ಫೈ ಖರೀದಿ ಮಾಡಿದರೆ ರೂ.2300 ಮೌಲ್ಯದ ವೋಚರ್ ಗಳು ದೊರೆಯಲಿದ್ದು, ಇದನ್ನು ಬಳಕೆದಾರರು ಪೇಟಿಎಂ, Ajio ಮತ್ತು ರಿಲಯನ್ಸ್ ಡಿಜಿಟಲ್‌ನಲ್ಲಿ ಬಳಕೆ ಮಾಡಿಕೊಂಡು ತಮಗೆ ಅವಶ್ಯವಾದ ವಸ್ತುಗಳನ್ನು ಖರೀಡಿ ಮಾಡಬಹುದಾಗಿದೆ.

ಎಲ್ಲಿ ಲಭ್ಯ:

ಎಲ್ಲಿ ಲಭ್ಯ:

ಈ ಆಫರ್ ಜಿಯೋ ವೆಬ್‌ಸೈಟನಲ್ಲಿ ಖರೀದಿಸಿದವರಿಗೆ ಮತ್ತು ಆಫ್‌ಲೈನ್ ಜಿಯೋ ಸ್ಟೋರ್‌ಗಳಲ್ಲಿ ಖರೀದಿಸಿದವರಿಗೆ ದೊರೆಯಲಿದೆ ಎನ್ನಲಾಗಿದ್ದು, ಶೀಘ್ರವೇ ಈ ಆಫರ್ ಕೊನೆಗೂಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

ಮಾರುಕಟ್ಟೆಯಲ್ಲಿ ಸಂಚಲನ:

ಮಾರುಕಟ್ಟೆಯಲ್ಲಿ ಸಂಚಲನ:

ಈ ಹೊಸ ಆಫರ್ ನೀಡುವ ಮೂಲಕ ಜಿಯೋ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ. ಈಗಾಗಲೇ ಹೆಚ್ಚಿನ ಮಂದಿಯನ್ನು ಸೆಳೆದಿರುವ ಜಿಯೋ ಈ ಹೊಸ ಆಫರ್ ಮೂಲಕ ಮತ್ತಷ್ಟು ಮಂದಿಯನ್ನು ತನ್ನತ್ತ ಸೆಳೆಯುವಂತಹ ಪ್ರಯತ್ನವನ್ನು ಮಾಡುತ್ತಿದೆ. ಏರ್‌ಟೆಲ್‌ ಇದರಿಂದಾಗಿ ಹೆಚ್ಚಿನ ಹೊಡೆತ ತಿನ್ನುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಪ್ರಭಾವ: ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ..!

English summary
Reliance JioFi Rs 1,999 Offer Detailed: 336GB Data for Eight Months at No Additional Cost. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot