2018 ರಲ್ಲಿ ಕುತೋಹಲ ಮೂಡಿಸಿರುವ ಹೊಸ 5 ರೋಬೋಗಳಿವು!!

ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಯಂತ್ರಗಳದ್ದೇ ಮಾತಾಗಿದ್ದು, ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳು ಕುತೋಹಲ ಮೂಡಿಸಿವೆ.!!

|

ಸೌದಿಯಲ್ಲಿ ರೋಬೋಟ್ ಒಂದು ಪೌರತ್ವ ಪಡೆದ ನಂತರ ಮಾನವನ ಬುದ್ಧಿಶಕ್ತಿಯನ್ನು ಮೀರಿಸುವಂತಹ ಕೃತಕ ಬುದ್ಧಿಮತ್ತೆ ಹೊಂದಿರುವ ಯಂತ್ರಗಳು ಹೆಸರಾಗುತ್ತಿವೆ.! ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಯಂತ್ರಗಳದ್ದೇ ಮಾತಾಗಿದ್ದು, ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳು ಕುತೋಹಲ ಮೂಡಿಸಿವೆ.!!

ಮಾನವನ ದೈಹಿಕ ಮತ್ತು ಬೌದ್ಧಿಕ ಶಕ್ತಿ ಹೊಂದಿರುವ ಪ್ರತಿರೂಪವನ್ನು ತಂತ್ರಜ್ಞಾನದ ಮೂಲಕ ರೋಬೋಗಳಾಗಿ ತಯಾರಿಸಲು ಸಾಕಷ್ಟು ಸಂಸ್ಥೆಗಳು ಯತ್ನಿಸುತ್ತಿವೆ ಮತ್ತು ಅದರಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನು ಸಹ ಪಡೆದಿವೆ.! ಹಾಗಾದರೆ, ಹೊಸ ವರ್ಷಕ್ಕೆ ಕೆಲ ರೋಬೋಗಳು ಬಿಡುಗಡೆಗೆ ಸಿದ್ಧಗೊಂಡಿದ್ದು, ಅವುಗಳು ಯಾವುವು? ಅವುಗಳ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭಾವನೆ ತಿಳಿಯುವ ಓಲಿ.!!

ಭಾವನೆ ತಿಳಿಯುವ ಓಲಿ.!!

ವಿಶ್ವದ ಮೊದಲ ಸಂವೇದನಾಶೀಲ ‘ಓಲಿ' ರೋಬೋವನ್ನು ಅಮೆರಿಕ ಮೂಲದ ಎಮೋಟೆಕ್ ಇಂಟರ್‌ನ್ಯಾಷನಲ್ ಸಂಸ್ಥೆ ಆವಿಷ್ಕರಿಸಿದೆ. ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯವನ್ನು ಮಾಡುವ ರೀತಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ವೈಫೈ ಮೂಲಕ ಈ ಓಲಿ ಗ್ಯಾಜೆಟ್ ನಿರ್ವಹಣೆ ಮಾಡುವ ಶಕ್ತಿ ಹೊಂದಿದೆ.!!

ಸ್ನೇಹಿತನಾಗಿ ಜಿಂಬೊ

ಸ್ನೇಹಿತನಾಗಿ ಜಿಂಬೊ

ಮನೆಯ ಎಲ್ಲ ಸದಸ್ಯರಿಗೆ ನೆಚ್ಚಿನ ಸಂಗಾತಿಯಾಗಿ ಕಾರ್ಯ ನಿರ್ವಹಿಸಲು ಜಿಂಬೊ ರೋಬೋವನ್ನು ಅಸೂಸ್ ಸಂಸ್ಥೆ ನಿರ್ಮಾಣ ಮಾಡಿದೆ. ಮಕ್ಕಳೊಂದಿಗೆ ಸ್ನೇಹಿತನಾಗಿ, ಅವರೊಂದಿಗೆ ಮಾತನಾಡುತ್ತಾ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಶಿಕ್ಷಕನಾಗುವ ಜಿಂಬೊ ಸ್ವತಂತ್ರವಾಗಿ ಸಂವೇದಿಸುತ್ತದೆ.!!

ಮನೆ ನೋಡಿಕೊಳ್ಳಲು ಕುರಿ!!

ಮನೆ ನೋಡಿಕೊಳ್ಳಲು ಕುರಿ!!

ಆಮೇಟಿಂಗ್ ವಿನ್ಯಾಸ ಹೊಂದಿರುವ ಈ ರೋಬೋ ಹೆಸರೆ 'ಕುರಿ' ಎಂದರೆ ಆಶ್ಚರ್ಯಪಡಬೇಡಿ. ಇದು ಅತ್ಯಂತ ಬುದ್ಧಿವಂತ ರೋಬೋವಾಗಿದ್ದು, ವಿಡಿಯೊ, ಫೋಟೊ ಸೆರೆ ಹಿಡಿಯುವ, ಮನುಷ್ಯನ ಮುಖಗಳನ್ನು ಗುರುತಿಸುವ ಎಚ್.ಡಿ. ಕ್ಯಾಮೆರಾ ರೋಬೊದಲ್ಲಿದೆ. ಇದು ಸಂಪೂರ್ಣ ಬ್ಯಾಟರಿಚಾಲಿತವಾಗಿದ್ದು, ನಿಮ್ಮ ಮನೆ ಕಾಯುತ್ತದೆ.!!

ಸ್ವಾಗತಕಾರನಾಗಿ ರೋಬೋ!!

ಸ್ವಾಗತಕಾರನಾಗಿ ರೋಬೋ!!

ಕಚೇರಿ ಸಿಬ್ಬಂದಿಯನ್ನು ಭೇಟಿಯಾಗಲು ಬರುವ ವ್ಯಕ್ತಿಗಳನ್ನು ಮಾತನಾಡಿಸುವ ಸ್ಯಾನ್‌ಬಾಟ್‌ ಮ್ಯಾಕ್ಸ್ ರೋಬೊ, ಅವರ ಮಾಹಿತಿಯನ್ನು ಕಲೆಹಾಕಿ ಅವರ ಫೋಟೊ ಕ್ಲಿಕ್ಕಿಸುವ ಸ್ಯಾನ್‌ಬಾಟ್‌ ಮ್ಯಾಕ್ಸ್, ಆಫೀಸ್ ಸ್ವಾಗತಕಾರನಾಗಿ ಕಾರ್ಯ ನಿರ್ವಹಿಸುತ್ತದೆ.ಪ್ರಶ್ನೆಗಳಿಗೆ ಕೃತಕ ಬುದ್ಧಿಮತ್ತೆಯಿಂದ ಉತ್ತರಿಸುವ ಗುಣವನ್ನು ಈ ರೋಬೋ ಹೊಂದಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಉದ್ಯಾನ ರಕ್ಷಕ ಟರ್ಟಿಲ್ ರೋಬೋ

ಉದ್ಯಾನ ರಕ್ಷಕ ಟರ್ಟಿಲ್ ರೋಬೋ

ಸೌರಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಟರ್ಟಿಲ್ ರೋಬೋವನ್ನು ಫ್ರಾಂಕ್ಲಿನ್ ರೊಬಾಟಿಕ್ಸ್ ಸಂಸ್ಥೆ ನಿರ್ಮಿಸಿದೆ. ಉದ್ಯಾನದಲ್ಲಿ ಕಳೆಗಳನ್ನು ನಾಶ ಮಾಡುವ ದೃಷ್ಟಿಯಿಂದ ಟರ್ಟಿಲ್ ರೋಬೊ ಸಂಶೋಧಿಸಲಾಗಿದೆ. ಉದ್ಯಾನದಲ್ಲಿ ಆಟಿಕೆ ರೀತಿ ಚಲಿಸಿಕೊಂಡು ಹೋಗಿ ಪ್ರತಿನಿತ್ಯ ಕಳೆಯನ್ನು ಕಿತ್ತುಹಾಕಿ ಸುಂದರ ಗಿಡಗಳನ್ನು ರಕ್ಷಿಸುತ್ತದೆ.!!

2018ರಲ್ಲಿ ಜಿಯೋ ಮಣಿಸಲಿದೆ ಏರ್‌ಟೆಲ್!!..3G/4G ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ಸ್!!2018ರಲ್ಲಿ ಜಿಯೋ ಮಣಿಸಲಿದೆ ಏರ್‌ಟೆಲ್!!..3G/4G ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ಸ್!!

Best Mobiles in India

English summary
People are calling it a “fourth industrial revolution” where robots are effortlessly being incorporated into factories and bringing incredible precision. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X