ಸ್ಯಾಮ್‌ಸಂಗ್‌ 'ವರ್ಟಿಕಲ್' ಸ್ಮಾರ್ಟ್‌ಟಿವಿ ಲಾಂಚ್!.ಸ್ಮಾರ್ಟ್‌ಫೋನಿನಂತೆ ಕಾಣಲಿದೆ!

|

ಸ್ಯಾಮ್‌ಸಂಗ್‌ ಕಂಪನಿ ಪ್ರಸ್ತತ ಸ್ಮಾರ್ಟ್‌ಟಿವಿ ಕ್ಷೇತ್ರದಲ್ಲಿ ಮಿಂಚುತ್ತಿದ್ದು, ತನ್ನ ಗುಣಮಟ್ಟದ ಉತ್ಪನ್ನಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ತನ್ನ ಪ್ರತಿ ಹೊಸ ಸರಣಯ ಸ್ಮಾರ್ಟ್‌ಟಿವಿಗಳಲ್ಲಿ ಹೊಸತನವನ್ನು ಅಳವಡಿಸಿಕೊಂಡು ಸಾಗುತ್ತಿರುವ ಕಂಪನಿಯು ಇದೀಗ ಗ್ರಾಹಕರಿಗೆ ಮತ್ತೊಂದು ಅಚ್ಚರಿ ನೀಡಿದೆ. ಈ ಸ್ಮಾರ್ಟ್‌ಟಿವಿ ಡಿಸ್‌ಪ್ಲೇಯು ವರ್ಟಿಕಲ್ ಆಕಾರದಲ್ಲಿದೆ.

ಸ್ಯಾಮ್‌ಸಂಗ್‌ 'ವರ್ಟಿಕಲ್' ಸ್ಮಾರ್ಟ್‌ಟಿವಿ ಲಾಂಚ್!ಸ್ಮಾರ್ಟ್‌ಫೋನಿನಂತೆ ಕಾಣಲಿದೆ!

ಹೌದು, ಸ್ಯಾಮ್‌ಸಂಗ್ ಕಂಪನಿಯು ಸೆರೋ ಹೆಸರಿನ 'ವರ್ಟಿಕಲ್' ಮಾದರಿಯ ಸ್ಮಾರ್ಟ್‌ಟಿವಿಯನ್ನು ಇತ್ತೀಚಿಗೆ ದಕ್ಷಿಣ ಕೋರಿಯಾದಲ್ಲಿ ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಟಿವಿಯನ್ನು ಉದ್ದವಾಗಿ ಮತ್ತು ಅಗಲವಾದ ಆಕಾರದಲ್ಲಿ ವೀಕ್ಷಿಸಬಹುದಾಗಿದೆ. ಗ್ರಾಹಕರು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗಿದ್ದು, ಸ್ಮಾರ್ಟ್‌ಫೋನ್ ಮಾದರಿಯಲ್ಲಿಯೇ ಟಿವಿ ತಯಾರಿಸುವ ಐಡಿಯಾ ಮೂಡಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್‌ 'ವರ್ಟಿಕಲ್' ಸ್ಮಾರ್ಟ್‌ಟಿವಿ ಲಾಂಚ್!ಸ್ಮಾರ್ಟ್‌ಫೋನಿನಂತೆ ಕಾಣಲಿದೆ!

ಸ್ಮಾರ್ಟ್‌ಫೋನ್‌ ಅನ್ನು ತಮ್ಮ ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡುವವರೇ ಹೆಚ್ಚು ಆ ಮೂಲಕ ಸ್ಮಾರ್ಟ್‌ಟಿವಿಯಲ್ಲಿಯೂ ಸ್ಮಾರ್ಟ್‌ಫೋನ್‌ ಬಳಕೆಮಾಡವವರಿದ್ದಾರೆ. ಹೀಗಾಗಿ ಸ್ಯಾಮ್‌ಸಂಗ್ ವರ್ಟಿಕಲ್ ಮಾದರಿ ಡಿಸೈನ್‌ನಲ್ಲಿ ಟಿವಿ ಪರಿಚಯಿಸಿದೆ. ಹಾಗಾದರೇ ಸ್ಯಾಮ್‌ಸಂಗ್‌ನ ಸೆರೊ ವರ್ಟಿಕಲ್ ಮಾದರಿ ಸ್ಮಾರ್ಟ್‌ಟಿವಿ ಯಾವೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವರ್ಟಿಕಲ್ ಮಾದರಿ

ವರ್ಟಿಕಲ್ ಮಾದರಿ

ಮೊದಲ ವರ್ಟಿಕಲ್ ಸ್ಮಾರ್ಟ್‌ಟಿವಿ ಇದಾಗಿದ್ದು, ಸ್ಮಾರ್ಟ್‌ಫೋನ್ ನಂತೆಯೇ ಇದರ ಡಿಸ್‌ಪ್ಲೇಯು ವರ್ಟಿಕಲ್ ಆಕಾರದಲ್ಲಿ ಇರಲಿದೆ. ಸ್ಮಾರ್ಟ್‌ಫೋನ್ ಜಮಾನಕ್ಕೆ ಹೊಂದಿಕೊಂಡಿರುವ ಗ್ರಾಹಕರಿಗೆ ಸ್ಮಾರ್ಟ್‌ಫೋನ್ ಮಾದರಿಯಂತೆ ವರ್ಟಿಕಲ್ ಟಿವಿ ಇರಲಿದೆ. ಬೇಕಿದ್ದರೆ ನಾರ್ಮಲ್ ಟಿವಿ ಮಾದರಿಗೆ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.

ಗ್ರಾಹಕರ ಆಯ್ಕೆಗೆ ಮಣೆ

ಗ್ರಾಹಕರ ಆಯ್ಕೆಗೆ ಮಣೆ

ಸ್ಯಾಮ್‌ಸಂಗ್ ಕಂಪನಿಯು ತನ್ನ ಸ್ಮಾರ್ಟ್‌ಟಿವಿಯ ಸ್ಕ್ರೀನ್‌ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಮುಂದೆಯೂ ಗ್ರಾಹಕರ ಅಭಿರುಚಿಗೆ ತಕ್ಕನಾಗಿ ಕಂಪನಿಯು ನೂತನ ಮಾದರಿ ಡಿಸ್‌ಪ್ಲೇ ಆಕಾರಗಳನ್ನು ಪರಿಚಯಿಸಲಿದೆ ಎಂದು ಕಂಪನಿಯ ವಿಶುವಲ್ ಡಿಸ್‌ಪ್ಲೇ ಬ್ಯುಸಿನೆಸ್‌ ಮುಖ್ಯಸ್ಥ ಹ್ಯಾಮ್ ಜೋಂಗ್-ಹೇ ಅವರು ಹೇಳಿದ್ದಾರೆ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಸ್ಯಾಮ್‌ಸಂಗ್‌ನ ಹೊಸ 'ಸೆರೊ' ಸ್ಮಾರ್ಟ್‌ಟಿವಿಯು 43 ಇಂಚಿನಲ್ಲಿದ್ದು, QLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ವರ್ಟಿಕಲ್ ಆಕಾರದ ರಚನೆಯನ್ನು ಹೊಂದಿರುವ ಜೊತೆಗೆ ಪೊರ್ಟರೇಟ್ ಆಕಾರಕ್ಕೆ ಬದಲಾಯಿಸಿಕೊಳ್ಳಬಹುದು. ಉಳಿದಂತೆ ಸ್ಯಾಮ್‌ಸಂಗ್‌ನ ಸ್ಪೆಷಲ್ ಫೀಚರ್ಸ್‌ಗಳು ಇರಲಿವೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್ ಕನೆಕ್ಟ್

ಸ್ಮಾರ್ಟ್‌ಫೋನ್ ಕನೆಕ್ಟ್

ಸ್ಮಾರ್ಟ್‌ಟಿವಿಗೆ ಸ್ಮಾರ್ಟ್‌ಫೋನ್‌ ಅನ್ನು ಕನೆಕ್ಟ್‌ ಮಾಡಿ ಫೋನಿನಲ್ಲಿರುವ ಕಂಟೆಟ್‌ಗಳನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡುತ್ತಾರೆ. ಆದರೆ ಟಿವಿ ಪೊರ್ಟರೇಟ್ ಮಾದರಿಯಲ್ಲಿರುತ್ತದೆ ಕನೆಕ್ಟ್‌ ಮಾಡಿದಾಗ ಫೋನ್‌ ತರಹ ಡಿಸ್‌ಪ್ಲೇ ವೀಕ್ಷಿಸದಂತೆ ಅನಿಸುವುದಿಲ್ಲ. ಸೆರೊ ಸ್ಮಾರ್ಟ್‌ಟಿವಿಗೆ ಫೋನ್‌ ಕನೆಕ್ಟ್ ಮಾಡಬಹುದಾಗಿದ್ದು, ಫೋನಿನಂತೆ ಸ್ಕ್ರೀನ್ ವರ್ಟಿಕಲ್ ಆಕಾರದಲ್ಲಿ ಕಾಣಿಸಲಿದೆ.

ಲಭ್ಯತೆ

ಲಭ್ಯತೆ

ಸ್ಯಾಮ್‌ಸಂಗ್ ಸೆರೊ ಸ್ಮಾರ್ಟ್‌ಟಿವಿಯು ಪ್ರಸ್ತುತ ದಕ್ಷಿಣ ಕೋರಿಯಾ ಮಾರುಕಟ್ಟೆಯಲ್ಲಿ ಲಾಂಚ್‌ ಆಗಿದ್ದು, ಮುಂದಿನ ತಿಂಗಳ ಅಂತ್ಯದೊಳಗೆ ಖರೀದಿಗೆ ದೊರೆಯಲಿದೆ ಎನ್ನಲಾಗಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವುದರ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Samsung introduced a “vertical” TV for smartphone-addicted millennials in its home market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X