Subscribe to Gizbot

146 ಇಂಚಿನ ಸ್ಯಾಮ್‌ಸಂಗ್‌ "ಮೈಕ್ರೋ ಎಲ್ಇಡಿ" ಟಿವಿ ಹೇಗಿದೆ ಗೊತ್ತಾ?

Written By:

ಅಮೇರಿಕಾದಲ್ಲಿ ನಡೆದ ‍2018ನೇ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ(CES) ಕಂಡುಬಂದ ಸ್ಯಾಮ್ಸಂಗ್ ಕಂಪನಿಯ 146 ಇಂಚಿನ ಹೊಸ ಟಿವಿ ಎಲ್ಲರನ್ನು ಬೆರಗಾಗಿಸಿದೆ.!! ಸುಮಾರು 10 ಅಡಿ ಅಗಲ ಹಾಗೂ 6 ಅಡಿ ಎತ್ತರದಿಂದ ಮನೆಯ ಒಂದು ಗೋಡೆಯಷ್ಟು ದೊಡ್ಡದಾದ ಟಿವಿಗೆ ಸ್ಯಾಮ್‌ಸಂಗ್ "ದಿ ವಾಲ್" ಎಂದು ಹೆಸರಿಟ್ಟಿದೆ.!!

ಹೌದು, ಎಲ್ಇಡಿ ಟಿವಿಗಳನ್ನು ಬದಿಗೊತ್ತಲು ಒಎಲ್ಇಡಿ (Organic Light Emitting Diode) ಟಿವಿಗಳು ಈಗಾಗಲೇ ಮಾರುಕಟ್ಟೆಗೆ ಬಂದಿರುವುದು ನಿಮಗೆ ಗೊತ್ತು. ಆದರೆ, ಸ್ಯಾಮ್‌ಸಂಗ್ ಕಂಪೆನಿ ಇವೆಲ್ಲಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ 'ಮೈಕ್ರೋ ಎಲ್ಇಡಿ'(mLED) ತಂತ್ರಜ್ಞಾನದ ದಿ-ವಾಲ್ ಎಂಬ ಟಿವಿಯನ್ನು ಪರಿಚಯಿಸಿದೆ.!!

 146 ಇಂಚಿನ ಸ್ಯಾಮ್‌ಸಂಗ್‌

ದಿ-ವಾಲ್ ಇದೀಗ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಲು ಇನ್ನೊಂದು ಕಾರಣ ಕೂಡ ಇದ್ದು, ಈ 146 ಇಂಚಿನ ಟಿವಿಯ ಪರದೆಯನ್ನು ಗೋಡೆಗೆ ಸರಿಹೊಂದುವಂತಹ ಹಾಗೆ ಬದಲಾವಣೆ ಮಾಡಬಹುದು ಎಂದು ಸ್ಯಾಮ್‌ಸಂಗ್ ಕಂಪೆನಿ ತಿಳಿಸಿದೆ.! ಹಾಗಾದರೆ, 146 ಇಂಚಿನ ದಿ-ವಾಲ್ ಟಿವಿಯ ಇನ್ನಿತರ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
146 ಇಂಚಿನ ಟಿವಿ!!

146 ಇಂಚಿನ ಟಿವಿ!!

ಟಿವಿ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಟಿವಿ ಎಂಬ ಹೆಗ್ಗಳಿಕೆಗೆ ಸ್ಯಾಮ್‌ಸಂಗ್ ಪ್ರದರ್ಶಿಸಿರುವ ದಿ-ವಾಲ್ ಟಿವಿ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ 146 ಇಂಚಿನ ಟಿವಿಯ ಪರದೆಯನ್ನು ಸ್ಯಾಮ್‌ಸಂಗ್ ಪರಿಚಯಿಸಿದ್ದು, ಮನೆಯಲ್ಲಿಯೇ ಥಿಯೇಟರ್‌ಗಿಂತಲೂ ಹೆಚ್ಚಿನ ಗುಣಮಟ್ಟದಲ್ಲಿ ಮನೆಯಲ್ಲಿಯೇ ಇನ್ನು ಟಿವಿ ವೀಕ್ಷಿಸಬಹುದಾಗಿದೆ.!!

ಇದು ಮೈಕ್ರೋಎಲ್ಇಡಿ ಟಿವಿ!

ಇದು ಮೈಕ್ರೋಎಲ್ಇಡಿ ಟಿವಿ!

ಎಲ್ಇಡಿ ಟಿವಿಗಳನ್ನು ಬದಿಗೊತ್ತಿದ್ದ ಒಎಲ್ಇಡಿ ಟಿವಿಗಳ ನಂತರ ಇದೀಗ ಮೈಕ್ರೋಎಲ್ಇಡಿ ಟಿವಿ ಮಾರುಕಟ್ಟೆಗೆ ಕಾಲಿಡಲು ಮುಂದಾಗಿದೆ.ಮೈಕ್ರೋ-ಎಲ್‍ಇಡಿ ಟಿವಿಯಯನ್ನು ಗ್ಯಾಲಿಯಂ ನೈಟ್ರೈಡ್ನಿಂದ(GaN) ಮಾಡಿದ ಕಡುಚಿಕ್ಕ ಎಲ್ಇಡಿ ಬಲ್ಬ್‌ಗಳಿಂದ ತಯಾರಿಸಲಾಗಿದೆ.!!

ಒಎಲ್ಇಡಿಗಿಂತ ಹೆಚ್ಚು ಬಾಳಿಕೆ!!

ಒಎಲ್ಇಡಿಗಿಂತ ಹೆಚ್ಚು ಬಾಳಿಕೆ!!

ಒಎಲ್ಇಡಿ ಟಿವಿಗಳ ಬಲ್ಬ್‌ಗಳನ್ನು ಆರ್ಗ್ಯಾನಿಕ್ ವಸ್ತುಗಳಿದ ತಯಾರಿಸುವುದರಿಂದ ವರುಷಗಳು ಕಳೆದಂತೆ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಆದರೆ, ಮೈಕ್ರೋ ಎಲ್ಇಡಿಯು ಇನ್ಆರ್ಗ್ಯಾನಿಕ್ ವಸ್ತುಗಳಾದ್ದರಿಂದ ಒಎಲ್ಇಡಿಗಿಂತ ಹೆಚ್ಚು ಹೊಳಪಿನ ಬೆಳಕನ್ನು ಹೊರಸೂಸುತ್ತವೆ ಮತ್ತು ಹೆಚ್ಚು ಬಾಳಿಕೆ ಬರುತ್ತವೆ.!!

ಬೇಕಾದ ಅಳತೆಯಲ್ಲಿ ‘ದಿ ವಾಲ್’!!

ಬೇಕಾದ ಅಳತೆಯಲ್ಲಿ ‘ದಿ ವಾಲ್’!!

ಮನೆಯ ಗೋಡೆ ಎಷ್ಟು ದೊಡ್ಡದಿದೆ ಎಂಬುದರ ಮೇಲೆ ನಿಮಗೆ ಬೇಕಾದ ಅಳತೆಯ ‘ದಿ ವಾಲ್' ಟಿವಿ ಸಿಗಲಿದೆ. ಸ್ಯಾಮ್ಸಂಗ್ ಕಂಪನಿ ಮೈಕ್ರೋಎಲ್ಇಡಿಗಳ ಮಾಡ್ಯುಲಾರ್ ಬಳಸಿ ಮಾಡುವುದರಿಂದ ಹೇಗೆ ಬೇಕೊ ಹಾಗೆ ಟಿವಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಒಂದು ಸಾಮಾನ್ಯ ಗೋಡೆಗೆ 146 ಇಂಚಿನ ಪರದೆ ಸರಿಹೊಂದುವುದರಿಂದ ಅದನ್ನು ಮೊದಲು ಹೊರತರಲಾಗಿದೆ ಅಷ್ಟೆ!!

Bike-Car ಜಾತಕ ಹೇಳುವ ಆಪ್..!
‘ದಿ ವಾಲ್' ಬೆಲೆ ಎಷ್ಟು?

‘ದಿ ವಾಲ್' ಬೆಲೆ ಎಷ್ಟು?

ಇತ್ತೀಚಿಗಷ್ಟೆ ಮಾರುಕಟ್ಟೆಗೆ ಪರಿಚಿತವಾಗಿರುವ 146 ಇಂಚಿನ ‘ದಿ ವಾಲ್' ಟಿವಿ ಬೆಲೆಯೂ ಈ ವರೆಗೂ ನಿಗಧಿಯಾಗಿಲ್ಲ. ಆದರೆ, 2018ರ ಕೊನೆಯಲ್ಲಿ ಕೊಳ್ಳುಗರಿಗೆ ಸಿಗಲಿದೆ ಎಂದು ಹೇಳಿರುವ ಟಿವಿಯನ್ನು ಸ್ಯಾಮ್‌ಸಂಗ್ ಕಂಪೆನಿ 2 ರಿಂದ 3 ಲಕ್ಷದವರೆಗೂ ಮಾರಾಟ ಮಾಡಬಹುದು ಎಂದು ಟಿವಿ ಲೋಕ ಅಂದಾಜಿಸಿದೆ.!!

ಓದಿರಿ:ಬೆಂಗಳೂರು ನಗರದಲ್ಲಿ ''ಉಚಿತ ವೈಫೈ'' ಭಾಗ್ಯ ಕರುಣಿಸಿದ ಜಿಯೋ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Wall is truly gigantic, and shipping this year. We took it all in at CES 2018.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot