ಶಿಯೋಮಿಯ ಈ ಸ್ಮಾರ್ಟ್ ಡಿವೈಸ್ ಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು!

|

ತಮ್ಮ ಬ್ರ್ಯಾಂಡ್ ನ್ನು ಯಶಸ್ಸಿಗೆ ಕೊಂಡೊಯ್ಯಲು ಸೋನಿ ಮತ್ತು ಹೆಚ್ ಟಿಸಿ ಸಂಸ್ಥೆಗಳು ಹೆಣಗಾಡುತ್ತಿದ್ದ ಸಂದರ್ಬದಲ್ಲಿ ಶಿಯೋಮಿಗೆ ಸ್ಮಾರ್ಟ್ ಫೋನ್ ತನ್ನದೇ ಜಾಗವನ್ನು ಸೃಷ್ಟಿಸಿಕೊಂಡು ಯಶಸ್ಸಿನ ಶಿಖರವೇರಿತು. ಆಂಡ್ರಾಯ್ಡ್ ಫೋನ್ ಗಳಿಗೆ ಕಸ್ಟಮ್ ROMಗಳನ್ನು ನಿರ್ಮಿಸುವ ಸಾಫ್ಟ್ ವೇರ್ ಕಂಪೆನಿಯಾಗಿ ಆರಂಭವಾಗಿದ್ದ ಸಂಸ್ಥೆ 2011 ರಲ್ಲಿ ತನ್ನ ಮೊದಲ ಫೋನ್ ನ್ನು ಮಾರುಕಟ್ಟೆಗೆ ಪರಿಚಯಿಸಿ ಹಾರ್ಡ್ ವೇರ್ ಮಾರುಕಟ್ಟೆಗೂ ಪದಾರ್ಪಣೆ ಮಾಡಿತು.

ಶಿಯೋಮಿಯ ಈ ಸ್ಮಾರ್ಟ್ ಡಿವೈಸ್ ಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು!

ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ನ್ನು ನೀಡುವ ಶಿಯೋಮಿ ಸಂಸ್ಥೆ ಸದ್ಯ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.ಹೆಚ್ಚಿನವರು ಶಿಯೋಮಿಯನ್ನು ಒಂದು ಫೋನಿನ ಬ್ರ್ಯಾಂಡ್ ಆಗಿ ಮಾತ್ರವೇ ನೋಡಿದ್ದೀರಿ. ಆದರೆ ಕಂಪೆನಿಯು ಕೆಲವು ಆಕ್ಸಸರೀಸ್ ಗಳನ್ನು, ಫಿಟ್ನೆಸ್ ಬ್ಯಾಂಡ್, ಟಿವಿಗಳನ್ನು ಕೂಡ ಸೇಲ್ ಮಾಡುತ್ತದೆ. ಆದರೆ ಇದನ್ನೂ ಹೊರತು ಪಡಿಸಿ ಶಿಯೋಮಿ ತಯಾರಿಸುವ ಕೆಲವು ಪ್ರೊಡಕ್ಟ್ ಗಳಿವೆ. ಇವು ಖಂಡಿತ ನಿಮಗೆ ಆಶ್ಚರ್ಯವೆನ್ನಿಸಬಹುದು. ಹಾಗಾದ್ರೆ ಪ್ರೊಡಕ್ಟ್ ಗಳು ಯಾವುದು ಇಲ್ಲಿದೆ ನೋಡಿ.

ಟೂತ್ ಬ್ರಷ್:

ಟೂತ್ ಬ್ರಷ್:

ನೀವು ರೆಡ್ಮಿ ಡಿವೈಸ್ ಗಳನ್ನು ಹೊಂದಿದ್ದರೆ ಖಂಡಿತ ಶಿಯೋಮಿ ಪ್ರೊಡಕ್ಟ್ ಜೊತೆಗೆ ಈಗಾಗಲೇ ಹಲವು ಸಮಯ ಕಳೆದಿರುತ್ತೀರಿ.ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ನಿಮ್ಮ ದಿನವನ್ನು ಶಿಯೋಮಿ ವಸ್ತುವಿನಿಂದ ಆರಂಭವಿಸಬಹುದು. ಹೌದು ಎಂಐ ಎಲೆಕ್ಟ್ರಿಕ್ ಟೂತ್ ಬ್ರಷ್ ಬಳಸುವ ಮೂಲಕ ನೀವು ಬೆಳಗ್ಗೆ ಹಲ್ಲುಜ್ಜಿ ನಿಮ್ಮ ಮುಂದಿನ ಕೆಲಸ ಆರಂಭಿಸಬಹುದು.ಇದು ವೈಬ್ರೇಷನ್ ನ್ನು ಸೃಷ್ಟಿಮಾಡುವುದಕ್ಕಾಗಿ ಮ್ಯಾಗ್ನೆಟಿಕ್ ಲಿವಿಟೇಷನ್ ಸೋನಿಕ್ ಮೋಟರ್ ನ್ನು ಬಳಕೆ ಮಾಡುತ್ತದೆ. ಚೀನಾದ ಕಂಪೆನಿಯು ಹೇಳುವ ಪ್ರಕಾರ ಇದು ಒಂದು ನಿಮಿಷಕ್ಕೆ ಸುಮಾರು 31,000 ವೈಬ್ರೇಷನ್ ನ್ನು ಸೃಷ್ಟಿಮಾಡುತ್ತದೆ.

ನೀವು ಸ್ಟ್ಯಾಂಡರ್ಡ್ ಅಥವಾ ಜಂಟಲ್ ಮೋಡ್ ನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಬಹುದು. IPX7 ವಾಟರ್ ರೆಸಿಸ್ಟೆಂಟ್ ನ್ನು ಅಳವಡಿಸಲಾಗಿದೆ. ಇತರೆ ಎಲ್ಲಾ ಸ್ಮಾರ್ಟ್ ಡಿವೈಸ್ ಗಳಂತೆ ಇದರಿಂದಲೂ ಕೂಡ ನೀವು ಬ್ರಷ್ ಮಾಡಿದ ಒಟ್ಟು ಸಮಯ, ಅದರ ಕವರೇಜ್ ಮತ್ತು ನಿಮ್ಮ ಬ್ರಷ್ಶಿಂಗ್ ಅಭ್ಯಾಸದ ಇತರೆ ಕೆಲವು ಸೂಕ್ಷ್ಮ ಅಂಶಗಳನ್ನು ಲೆಕ್ಕ ಹಾಕುವುದಕ್ಕೆ ಅನುವು ಮಾಡಿಕೊಡುವ ಆಪ್ ಇರುತ್ತದೆ. ಟೂತ್ ಬ್ರಷ್ 700 mAh ಬ್ಯಾಟರಿಯನ್ನು ಹೊಂದಿದ್ದು ಒಮ್ಮೆ ಚಾರ್ಜ್ ಮಾಡಲು 12 ತಾಸುಗಳು ಬೇಕಾಗುತ್ತದೆ ಮತ್ತು 18 ದಿನಗಳ ವರೆಗೆ ಬ್ರಷ್ ಮಾಡಲು ಸಾಧ್ಯವಾಗುತ್ತದೆ.

ಸೆಲ್ಫ್-ಬ್ಯಾಲೆನ್ಸಿಂಗ್ ಸ್ಕೂಟರ್:

ಸೆಲ್ಫ್-ಬ್ಯಾಲೆನ್ಸಿಂಗ್ ಸ್ಕೂಟರ್:

ಚೀನಾದಲ್ಲಿ ಕಳೆದೊಂದು ವರ್ಷದಿಂದ ಶಿಯೋಮಿ ಸಂಸ್ಥೆ ನೈನ್ಬೋಟ್ ಮಿನಿ ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ನ್ನು ಸೇಲ್ ಮಾಡುತ್ತಿದೆ. ಹಲವಾರು ಸೆನ್ಸರ್ ಗಳಿಂದ ಕೂಡಿರುವ ಈ ಮೆಷೀನ್ 200 ಕ್ಕೂ ಹೆಚ್ಚು ಚಲನೆಗಳನ್ನು ಸಮತೋಲನದಲ್ಲಿಡಲು ರೈಡರ್ ಗೆ ಅನುಕೂಲ ಮಾಡುತ್ತದೆ.ಕೇವಲ 3 ನಿಮಿಷದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ನೈನ್ಬೂಟ್ ಮಿನಿ ರೈಡಿಂಗ್ ನ್ನು ಕಲಿತುಬಿಡಬಹುದು ಎನ್ನಲಾಗಿದೆ. 700W ಡುಯಲ್ ಮೋಟಾರ್ ಇಂಜಿನ್ ಇದರಲ್ಲಿ ಇದೆ. ನೈನ್ ಬೂಟ್ ಮಿನಿ ಮ್ಯಾಕ್ಸಿಮಂ ಸ್ಪೀಡ್ 16 km/h ನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಒಮ್ಮೆ ಚಾರ್ಜ್ ಮಾಡಿದರೆ 18,650 mAh ನ ಬ್ಯಾಟರಿ ನಿಮಗೆ 22 ಕಿಲೋಮೀಟರ್ ನಷ್ಟು ದೂರ ಪ್ರಯಾಣಿಸಲು ಅವಕಾಶ ನೀಡುತ್ತದೆ. ಈ ಸ್ಕೂಟರ್ ಸ್ವಯಂಚಾಲಿತವಾಗಿ ಭೂಪ್ರದೇಶದ ಮಾದರಿಯನ್ನು ಗುರುತಿಸಿಕೊಳ್ಳುತ್ತದೆ ಮತ್ತು 15 ಡಿಗ್ರಿ ಇಳಿಜಾರನ್ನು ಗಮನಿಸುತ್ತದೆ. ಆದರೆ ಮಳೆಗಾಲದಲ್ಲಿ ಇದನ್ನು ಓಡಿಸುವುದು ಸ್ವಲ್ಪ ಕಷ್ಟ.ಸ್ವಯಂ ಚಾಲಿತ ಬ್ಯಾಲೆನ್ಸಿಂಗ್ ಸ್ಕೂಟರ್ ತಂತ್ರಜ್ಞಾನವನ್ನು ಸೆಗ್ವೇ ಅವರಿಂದ ಶಿಯೋಮಿ 2015 ರಲ್ಲಿ ಸ್ವಾಧೀನ ಪಡಿಸಿಕೊಂಡಿದೆ.

ವ್ಯಾಕ್ಯೂಮ್ ಕ್ಲೀನರ್ :

ವ್ಯಾಕ್ಯೂಮ್ ಕ್ಲೀನರ್ :

ಚೀನಾದ ಈ ಕಂಪೆನಿ ತಯಾರಿಸಿರುವ ಎಂಐ ರೊಬೋಟ್ ವ್ಯಾಕ್ಯೂಮ್ ಕ್ಲೀನರ್ ಸುಮಾರು 2690 ಸ್ಕ್ಯಾರ್ ಫೀಟ್ ಏರಿಯಾವನ್ನು ಒಮ್ಮೆ ಚಾರ್ಜ್ ಮಾಡುವ ಮೂಲಕ ಸ್ವಚ್ಛಗೊಳಿಸಬಹುದು. ಇದು ಹೈ ಟೆಕ್ ಲೇಸರ್ ರೇಜಿಂಗ್ ನ್ನು ಬಳಸುತ್ತದೆ. ಅಲ್ಟ್ರಾಸೋನಿಕ್ ರ್ಯಾಡರ್, ಗೈರೋ ಮತ್ತು ಅಕ್ಸಲರೋಮೀಟರ್ ನ್ನು ಅಳವಡಿಸಲಾಗಿದ್ದು ರೂಮಿನ ಆಪ್ಟಿಮಲ್ ಕ್ಲೀನಿಂಗ್ ಪಾತ್ ನ್ನು ಮ್ಯಾಪ್ ಮಾಡಲು ನೆರವಾಗುತ್ತದೆ.ಆನ್-ಬೋರ್ಡ್ ಸೆನ್ಸರ್ ಗಳು ಅಡೆತಡೆಗಳನ್ನು ತಪ್ಪಿಸುವುದಕ್ಕೆ ನೆರವಾಗುತ್ತದೆ.

ಎಂಐ ರೋಬೋಟ್ ವಾಕ್ಯೂಮ್ ಗೋಡೆಗಳಿಂದ 1 ಸೆಂಮೀ ದೂರದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಅಂಚುಗಳನ್ನು ಬ್ರಷ್ ಗಳಿಂದ ಸ್ವಚ್ಛಗೊಳಿಸುತ್ತದೆ.ಧೂಳನ್ನು ತೊಡೆದುಹಾಕಲು 1800 Pa ನಷ್ಟು ಪ್ರಬಲವಾಗಿರುವ ಹೀರಿಕೊಳ್ಳುವಿಕೆಯ ಸಾಮರ್ಥ್ಯವನ್ನು ಹೊಂದಿದೆ. 5200 mAh ನ ಬ್ಯಾಟರಿ ಸಾಮರ್ಥ್ಯವಿದ್ದು 2 ತಾಸುಗಳ ವರೆಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿದೆ. ಒಂದು ವೇಳೆ ನಿಮ್ಮದು ದೊಡ್ಡ ಮನೆಯಾಗಿದ್ದಲ್ಲಿ ಎಂಐ ವ್ಯಾಕ್ಯೂಮ್ ಕ್ಲೀನರ್ ನ್ನು ರೀಚಾರ್ಜ್ ಮಾಡುವ ಅಗತ್ಯ ಬೀಳಬಹುದು. ರಿಮೋಟ್ ಕಂಟ್ರೋಲ್ ನಲ್ಲೂ ಕೆಲಸ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದ್ದು ಅದಕ್ಕೆ ತಕ್ಕದಾದ ಆಪ್ ನ್ನು ಕೂಡ ಹೊಂದಿದೆ.

ಶೂಗಳು:

ಶೂಗಳು:

ಮಿಜಿಯಾ ಬ್ರ್ಯಾಂಡ್ ನ ಅಡಿಯಲ್ಲಿ ಶಿಯೋಮಿ ಇತ್ತೀಚೆಗಷ್ಟೇ ಸ್ಮಾರ್ಟ್ ಶೂಗಳನ್ನು ಪರಿಚಯಿಸಿದೆ. ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಎಂಬುದನ್ನು ಹೊರತು ಪಡಿಸಿದರೆ ಈ ಶೂಗಳು ಕಪ್ಪು ಅಥವಾ ಬೂದು ಬಣ್ಣದಲ್ಲಿ ಸಾಮಾನ್ಯ ಶೂಗಳಂತೆಯೇ ಕಾಣುತ್ತದೆ. ಶಿಯೋಮಿ ಇದನ್ನು ಬಹಳ ಬುದ್ಧಿವಂತಿಕೆಯಿಂದ ಡಿಸೈನ್ ಮಾಡಿದ್ದು ನಿಮ್ಮ ತೂಕವನ್ನು ಅಳೆಯಲು ಕೂಡ ಇದು ನೆರವು ನೀಡುತ್ತದೆ. ಇದು ರಾತ್ರಿಯಲ್ಲಿ ಬೆಳಕು ಪ್ರತಿಫಲಿಸುವುದಕ್ಕಾಗಿ ಸ್ಟ್ರೈಪ್ ಗಳಲ್ಲಿ ಮತ್ತು ಲೇಸ್ ಗಳಲ್ಲಿ ಬೆಳಕಿನ ಪ್ರತಿಫಲಿತ ಥ್ರೆಡ್ ನ್ನು ಹೊಂದಿದೆ.

ಇದರ ಬೆಸ್ಟ್ ವಿಚಾರವೇನೆಂದರೆ ಮಿಜಿಯಾ ಶೂಗಳು ಅಮೇಜ್ಫಿಟ್ ಚಿಪ್ ನಿಂದ ತಯಾರಿಸಲಾಗಿದೆ. ಇದು ವೇಗ, ದೂರ, ಕ್ಯಾಲೋರಿ ಬರ್ನ್ ಮತ್ತು ಇತ್ಯಾದಿ ಅಂಶಗಳನ್ನು ನೀಡುತ್ತದೆ. ಆಪ್ ಈ ಎಲ್ಲಾ ಡಾಟಾಗಳನ್ನು ವರದಿ ರೂಪದಲ್ಲಿ ನೀಡುತ್ತದೆ. ಇದರಲ್ಲಿ ಬಟನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಅದನ್ನು ಸುಲಭದಲ್ಲಿ ಬದಲಾಯಿಸುವುದಕ್ಕೆ ಅವಕಾಶವಿರುತ್ತದೆ.

ಲೇಸರ್ ಪ್ರೊಜೆಕ್ಟರ್ :

ಲೇಸರ್ ಪ್ರೊಜೆಕ್ಟರ್ :

ಎಂಐ ಟಿವಿ ಮತ್ತು ಎಂಐ ಟಿವಿ ಬಾಕ್ಸ್ ಗಳು ಈ ಪಟ್ಟಿಯಲ್ಲಿ ಎಲ್ಲರ ಫೇವರೆಟ್ ವಸ್ತುಗಳು. ಹೆಚ್ಚಿನ ಲೇಸರ್ ಪ್ರೊಜೆಕ್ಟರ್ ಗಳು ಲಕ್ಷ ರುಪಾಯಿ ಬೆಲೆಬಾಳುತ್ತದೆ ಆದರೆ ಎಂಐ ಲೇಸರ್ ಪ್ರೊಜೆಕ್ಟರ್ ನ್ನು ಕೇವಲ ಒಂದು ಲಕ್ಷದ 10 ಸಾವಿರ ರುಪಾಯಿಗೆ ಗಿಯರ್ ಬೆಸ್ಟ್ ಮೂಲಕ ಖರೀದಿಸಬಹುದು. ಲೇಸರ್ ಪ್ರೊಜೆಕ್ಟರ್ ನಲ್ಲಿ ಡಿಎಲ್ ಪಿ ಕೌಂಟರ್ ಪಾರ್ಟ್ಸ್ ನಲ್ಲಿ ಟೆಕ್ನಾಲಜಿಕಲ್ ಅಡ್ವಾಂಟೇಜ್ ಇರುತ್ತದೆ.ಆರಂಭಿಕರಿಗೆ ಅತ್ಯುತ್ತಮವಾಗಿರುವ ಶಾರ್ಪ್ ನೆಸ್ ನ್ನು ಇದು ಒದಗಿಸುತ್ತದೆ. ಈ ಪರ್ಟಿಕ್ಯುಲರ್ ಮಾಡೆಲ್ ಆಫರ್ಸ್ 5000 ಲ್ಯುಮೆನ್ಸ್ ಬ್ರೈಟ್ ನೆಸ್ ನ್ನು ಒದಗಿಸುತ್ತದೆ.

ಹೆಸರೇ ಸೂಚಿಸುವಂತೆ, ಎಂಐ ಲೇಸರ್ ಪ್ರೊಜೆಕ್ಟರ್ 150″ ಪ್ರೊಜೆಕ್ಟ್ ನ್ನು 150ಇಂಚಿನ ಸ್ಕ್ರೀನ್ ನಲ್ಲಿ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರೊಜೆಕ್ಟರ್ ಆಂಡ್ರಾಯ್ಡ್ 8.1 ನಲ್ಲಿ ರನ್ ಆಗುತ್ತದೆ ಮತ್ತು ಕ್ವಾಡ್ -ಕೋರ್ ಪ್ರೊಸೆಸರ್ ನ್ನು ಹೊಂದಿದೆ. ಇತರೆ ಫೀಚರ್ ಗಳೆಂದರೆ ವೈ-ಫೈ, ಬ್ಲೂಟೂತ್ 4.0 ಮತ್ತು ಡಾಲ್ಬೈ ಗೆ ಬೆಂಬಲವನ್ನು ಇದು ನೀಡುತ್ತದೆ. ನೀವು ಚಲನಚಿತ್ರ ಪ್ರಿಯರಾಗಿದ್ದರೆ ಖಂಡಿತ ಇದನ್ನು ಖರೀದಿಸಲು ಹಣ ಉಳಿತಾಯ ಮಾಡಬಹುದು.

ಡ್ರೋಣ್:

ಡ್ರೋಣ್:

ವೈಮಾನಿಕ ಫೋಟೋಗ್ರಫಿಯು ನಿಮ್ಮ ಕನಸಾಗಿದ್ದರೆ ಖಂಡಿತ ಇದೀಗ ಶಿಯೋಮಿ ಡ್ರೋಣ್ ನಿಂದ ಸಾಧ್ಯವಾಗಲಿದೆ. ಗೋಪ್ರೋ ಡ್ರೋಣ್ ಗಳು ಲಕ್ಷಗಟ್ಟಲೆ ಹಣವನ್ನು ಬೇಡುತ್ತದೆ ಆದರೆ DJI's ನ ಫ್ಲೈಯಿಂಗ್ ಮೆಷೀನ್ ಗಳು 4ಕೆ ರೆಕಾರ್ಡಿಂಗ್ ನ್ನು ಇದೀಗ ಕೇವಲ 60,000 ರುಪಾಯಿಯಲ್ಲಿ ಸಾಧ್ಯಗೊಳಿಸಿದೆ. ಶಿಯೋಮಿ ಎಂಐ ಡ್ರೋಣ್ ನ್ನು ಕೇವಲ 30,000 ರುಪಾಯಿಗೆ ಬಾನ್ಗೂಡ್ ನಲ್ಲಿ ಖರೀದಿಸಬಹುದಾಗಿದೆ. 5100 mAh ಬ್ಯಾಟರಿಯನ್ನು ಇದು ಹೊಂದಿದ್ದು, 27 ನಿಮಿಷ ಹಾರಾಟ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಇದು ಕ್ಲಿಕ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಫೀಚರ್ ನ್ನು ಕೂಡ ಆಫರ್ ಮಾಡುತ್ತದೆ. ಕಂಟ್ರೋಲ್ ರೇಂಜ್ ಎರಡು ಕಿಲೋಮೀಟರ್ ನಷ್ಟಿದೆ. ಎಂಐ ಡ್ರೋಣ್ ನ ಆನ್ ಬೋರ್ಡ್ ಜಿಪಿಎಸ್ ನಿಂದಾಗಿ ನೀವು ಪಿನ್ ಮಾಡಿದ ಸ್ಥಳಕ್ಕೆ ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ. ಉತ್ತಮ ಫೋಟೋ ಮತ್ತು ವೀಡಿಯೋಗಳಿಗಾಗಿ ನೀವು ಇದನ್ನು ಖರೀದಿಸುವುದಕ್ಕೆ ಖಂಡಿತ ಪ್ಲಾನ್ ಮಾಡಬಹುದು.

Most Read Articles
Best Mobiles in India

English summary
Six Peculiar Xiaomi Products You May Have Never Heard Of

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X