ಅಲಾರಂ ಜಾಗವನ್ನು ಆಕ್ರಮಿಸಿರುವ ಸ್ಮಾರ್ಟ್‌ ಅಲಾರಂಗಳು..!!

|

ತಂತ್ರಜ್ಞಾನ ಹೆಚ್ಚು ಬಳಕೆಯಾಗುತ್ತಿದ್ದಂತೆ ನಮ್ಮ ನಿತ್ಯ ಜೀವನವೂ ಡಿಜಿಟಲ್ ಆಗುತ್ತಿದೆ. ನಾವು ಬಳಸುವ ಸಣ್ಣ ವಸ್ತುಗಳು ಸ್ಮಾರ್ಟ್‌ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿವೆ. ಸ್ಮಾರ್ಟ್‌ಫೋನಿನಿಂದ ಆರಂಭವಾದ ಸ್ಮಾರ್ಟ್‌ ಶಕೆ ಸ್ಮಾರ್ಟ್‌ ಬಾಚಣಿಗೆಯ ವರೆಗೂ ಬಂದಿದ್ದು, ಇನ್ನು ಮುಂದುವರೆಯಲಿದೆ. ಇದೇ ಮಾದರಿಯಲ್ಲಿ ಹಲವು ವಸ್ತುಗಳು ಸ್ಮಾರ್ಟ್‌ ಆಗುತ್ತಿವೆ.

ಅಲಾರಂ ಜಾಗವನ್ನು ಆಕ್ರಮಿಸಿರುವ ಸ್ಮಾರ್ಟ್‌ ಅಲಾರಂಗಳು..!!

ಇದೇ ಮಾದರಿಯಲ್ಲಿ ನಮ್ಮನ್ನು ನಿತ್ಯ ಎಬ್ಬಿಸುವ ಅಲಾರಂಗಳು ಸ್ಮಾರ್ಟ್‌ಆಗಿದ್ದು, ರಾತ್ರಿ ಕೀ ಕೊಡುವ ಅಗತ್ಯವೂ ಇಲ್ಲ, ಬೆಳಗೆದ್ದು ಅದರ ತಲೆಯ ಮೇಲೆ ಹೊಡೆದು ಸುಮ್ಮನಾಗಿಸುವ ಪ್ರಮೇಯವು ಇಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಂಡಿರುವ ಅಲಾರಂಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸ್ಮಾರ್ಟ್‌ವಾಚ್‌ಗಳು:

ಸ್ಮಾರ್ಟ್‌ವಾಚ್‌ಗಳು:

ನಿಮ್ಮ ಕೈನಲ್ಲಿ ಕಟ್ಟುವ ಸ್ಮಾರ್ಟ್‌ವಾಚುಗಳನ್ನು ನೀವು ಅಲಾರಂ ಮಾದರಿಯಲ್ಲಿ ಬಳಖೆ ಮಾಡಿಕೊಳ್ಳಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಕಡಿಮೆ ಸ್ಮಾರ್ಟ್‌ಫೋನಿನಂತೆಯೇ ಕಾರ್ಯನಿರ್ವಹಿಸುತ್ತಿದ್ದು, ಅಲಾರಂ ಮಾದರಿಯಲ್ಲಿಯೂ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಸ್ಪೀಕರ್:

ಸ್ಮಾರ್ಟ್‌ಸ್ಪೀಕರ್:

ನಿಮ್ಮ ಮನೆಯಲ್ಲಿ ಹೊಸದಾಗಿ ಕಾಲಿಟ್ಟಿರುವ ಸ್ಮಾರ್ಟ್‌ ಸ್ಪೀಕರ್‌ಗಳು ಅಲಾರಂ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿವೆ. ಒಮ್ಮೆ ಅಲಾರಂ ಸೆಟ್ ಮಾಡಿಟ್ಟರೆ ನೀವು ಹೇಳಿದ ಸಮಯಕ್ಕೆ ನಿಮ್ಮನ್ನು ಎಚ್ಚರಿಸಲು ಸ್ಮಾರ್ಟ್‌ ಸ್ಪೀಕರ್‌ಗಳು ಶಕ್ತವಾಗಿವೆ.

Bike-Car ಜಾತಕ ಹೇಳುವ ಆಪ್..!
ಸ್ಮಾರ್ಟ್‌ಫೋನ್:

ಸ್ಮಾರ್ಟ್‌ಫೋನ್:

ಸದ್ಯ ಅತೀ ಹೆಚ್ಚಿನ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಲಾರಂ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಹೆಚ್ಚುವರಿ ಅಲಾರಂ ಖರೀದಿಸುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಅತೀ ಹೆಚ್ಚಿನ ಮನೆಗಳಲ್ಲಿ ಅಲಾರಂ ಜಾಗವನ್ನು ಸ್ಮಾರ್ಟ್‌ಫೋನ್‌ಗಳೇ ಅಲಂಕರಿಸಿವೆ.

Best Mobiles in India

English summary
smart alarms in market. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X