ಅಚ್ಚರಿ ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವಿಧಾನಗಳು

By Suneel
|

ಸ್ಮಾರ್ಟ್‌ಫೋನ್‌ ಚಾರ್ಜರ್‌ಗೆ ಇಂದು ಹಲವು ವಿಧಾನಗಳು. ಅಂತಹ ಸರಳ ವಿಧಾನಗಳನ್ನು ನೀವು ಗಿಜ್‌ಬಾಟ್‌ನ ಲೇಖನಗಳನ್ನು ಓದುತ್ತಿದ್ದರೇ ತಿಳಿಯುತ್ತದೆ. ಯಾವಾಗ್ಲೂ ಕೇವಲ ಎರಡು ಪಿನ್‌ಗಳ ಪ್ಲಗ್‌ ಇರುವ ಚಾರ್ಜರ್‌ಗಳನ್ನೇ ಬಳಸುವ ನೀವು ಇಂದು ಅಸಂಪ್ರದಾಯಿಕವಾಗಿ ಅಂದ್ರೆ ವಿದ್ಯುತ್‌ ಮೋರೆಹೋಗುವ ಬದಲಾಗಿ ಇತರೆ ವಿಧಾನಗಳಿಂದ ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದೆ.

ಓದಿರಿ: ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಕರೆಂಟ್ ಬೇಕಾಗಿಯೇ ಇಲ್ಲ!!!

ಇಂದು ಹಲವು ರೀತಿಯ ಪರಿಸರ ಸ್ನೇಹಿ ಮೊಬೈಲ್‌ ಚಾರ್ಜರ್ ವಿಧಾನಗಳಿವೆ. ಅಂತಹ ಚಾರ್ಜರ್‌ ವಿಧಾನ ಅಂದ್ರೆ ಜಿಮ್‌ ಮಾಡುವ ಮುಖಾಂತರ, ಲ್ಯಾಪ್‌ಟಾಪ್‌ ಬ್ಯಾಗ್‌ ಬಳಸಿ, ರನ್ನಿಂಗ್‌ ಶೂಗಳನ್ನು ಬಳಸಿ, ಶಾಕರ್‌ ಬಾಲ್‌ ಬಳಸಿ ಸಹ ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದೆ. ಹಾಗಾದರೆ ಅಂತಹ ಅಚ್ಚರಿ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

ಸೋಲಾರ್ ಸನ್‌ಫ್ಲವರ್‌

ಸೋಲಾರ್ ಸನ್‌ಫ್ಲವರ್‌

ಈ ಮೊಬೈಲ್‌ ಚಾರ್ಜರ್‌ ಗ್ಯಾಜೆಟ್‌ ಅನ್ನು ನೀವು ಇತರೆ ಕೆಲಸದಲ್ಲಿ ತೊಡಗಿದ್ದಾಗ ಕಿಟಕಿ ಪಕ್ಕದ ಸೂರ್ಯನ ನೆರಳಿಗೆ ಇಟ್ಟು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡಿ.
ಬೆಲೆ $79.00 ( 5355 ರೂ)

ಹ್ಯಾಂಡ್‌ ಟರ್ಬೈನ್‌ ಸ್ಮಾರ್ಟ್‌ಫೋನ್‌ ಚಾರ್ಜರ್‌

ಹ್ಯಾಂಡ್‌ ಟರ್ಬೈನ್‌ ಸ್ಮಾರ್ಟ್‌ಫೋನ್‌ ಚಾರ್ಜರ್‌

ಮನೆಯಿಂದ ಹೊರಗೆ ಪ್ರವಾಸ ಹೋದಾಗ ಇದನ್ನು ಬಳಸಬಹುದಾಗಿದೆ. ವಾತಾವರಣ ಮುನ್ಸೂಚನೆ, ರೇಡಿಯೋ ಹೊಂದಿರುವ ಕೂಲ್‌ ಟರ್ಬೈನ್‌ ಸ್ಮಾರ್ಟ್‌ಫೋನ್‌ ಚಾರ್ಜರ್.
ಬೆಲೆ $55.46 (3759 ರೂ)

ಕ್ಯಾಂಪ್‌ಸ್ಟವ್‌

ಕ್ಯಾಂಪ್‌ಸ್ಟವ್‌

ಗೆಳೆರೊಂದಿಗೆ ಪ್ರವಾಸ ಹೋದಾಗ ರಾತ್ರಿವೇಳೆ ಖಂಡಿತ ಕ್ಯಾಂಪ್‌ ಫೈಯರ್‌ ಮಾಡುತ್ತೇವೆ. ಅಂತೆಯೇ ನಾವು ಇಲ್ಲಿ ತಿಳಿಸುತ್ತಿರುವ ಹೊಸ ಸ್ಮಾರ್ಟ್‌ಫೋನ್‌ ಚಾರ್ಜರ್ ಥರ್ಮೊಇಲೆಕ್ಟ್ರಿಕ್‌ ಡಿವೈಸ್‌. ಇದನ್ನು ಕ್ಯಾಂಪ್‌ಸ್ಟವ್‌ ಎಂತಲೂ ಸಹ ಕರೆಯುತ್ತಾರೆ. ಇದು ಶಾಖವನ್ನು ಇಲೆಕ್ಟ್ರಿಸಿಟಿಯಾಗಿ ಪರಿವರ್ತಿಸುತ್ತದೆ. ಆದ್ದರಿಂದ ಇದನ್ನು ಸಹ ಫೋನ್‌ ಚಾರ್ಜರ್‌ಗಾಗಿ ಬಳಸಬಹುದು.
ಬೆಲೆ $129.95 (8809 ರೂ)

ಎಪಿಫಾನಿ ಒನ್‌ ಪಕ್‌

ಎಪಿಫಾನಿ ಒನ್‌ ಪಕ್‌

ನೀವು ಈ ಗ್ಯಾಜೆಟ್‌ನಲ್ಲಿ ಬಿಸಿಯಾದ ಅಥವಾ ತಣ್ಣನೆಯ ಯಾವುದೇ ಪಾನಿಯಗಳು ಅಥವಾ ಟೀ, ಕಾಫಿ ಕುಡಿದರು ಸಹ ಆ ವೇಳೆಯಲ್ಲಿ ಈ ಎಪಿಫಾನಿ ಒನ್‌ ಪಕ್‌ ಪೋರ್ಟೆಬಲ್‌ ಗ್ಯಾಜೆಟ್‌ನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಬಹುದಾಗಿದೆ.
ಬೆಲೆ $115.00 (7795 ರೂ)

ಇಲೆಕ್ಟ್ರೀ

ಇಲೆಕ್ಟ್ರೀ

ಈ ಬೋನ್‌ಸೈ ಮನೆಯ ಅಲಂಕಾರಿಕ ಗ್ಯಾಜೆಟ್‌ ಕೇವಲ ಅಲಂಕಾರಕ್ಕೆ ಮಾತ್ರವಲ್ಲ. ಬೆಳಕಿನ ಸಹಾಯದಿಂದ ಮೊಬೈಲ್‌ ಬ್ಯಾಟರಿ ಚಾರ್ಜ್‌ ಮಾಡಬಹುದಾಗಿದೆ.
ಬೆಲೆ $455.93 (30907 ರೂ)

ಪವರ್‌ಟ್ರೆಕ್‌

ಪವರ್‌ಟ್ರೆಕ್‌

ಇದು ಪೊರ್ಟೆಬಲ್‌ ಬ್ಯಾಟರಿ ಪ್ಯಾಕ್‌ ಹಾಗೂ ಫ್ಯೂಯಲ್‌ ಕೋಶವಾಗಿ ಕೆಲಸ ಮಾಡುತ್ತದೆ. ಇದು ಟ್ರಾವೆಲಿಂಗ್‌ ಮತ್ತು ತುರ್ತು ವೇಳೆಯಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ಸಹಾಯಕ. ನೆನಪಿಡಿ ಈ ಪವರ್‌ಟ್ರೆಕ್‌ ಕಾರ್ಯನಿರ್ವಹಿಸಲು ಕೇವಲ ನೀರು ಸಾಕು.
ಬೆಲೆ $299.00 (20269 ರೂ)

 ಪವರ್‌ಪಾಟ್‌

ಪವರ್‌ಪಾಟ್‌

ಬೆಂಕಿ ಹಚ್ಚಿ ಪವರ್‌ಪಾಟ್‌ಗೆ ನೀರನ್ನು ತುಂಬಿ ಬಿಸಿಮಾಡಿದರೆ ಬಿಸಿಯಾದ ಶಾಖವನ್ನು ಪವರ್‌ಪಾಟ್‌ ಫೋನ್‌ ಚಾರ್ಜ್‌ ಮಾಡಲು ಇಲೆಕ್ಟ್ರಿಸಿಟಿ ಉತ್ಪಾದಿಸುತ್ತದೆ.
ಬೆಲೆ $149.00 (10100 ರೂ)

ಬೈಕ್‌ಚಾರ್ಜ್‌

ಬೈಕ್‌ಚಾರ್ಜ್‌

ಚಿತ್ರದಲ್ಲಿನ ಡೈನಮೋ ಸಿಸ್ಟಮ್‌ ಅನ್ನು ಬೈಕ್‌ಗೆ ವ್ಯವಸ್ಥೆಗೊಳಿಸಿದರೆ ಫೋನ್‌ ಚಾರ್ಜ್‌ ಮಾಡಬಹುದು.
ಬೆಲೆ $99.99 (6778 ರೂ)

ಸೋಲಾರ್‌ಮಂಕಿ ಅಡ್ವೆಂಚರ್

ಸೋಲಾರ್‌ಮಂಕಿ ಅಡ್ವೆಂಚರ್

ಇದು ಪ್ರಶಸ್ತಿ ವಿಜೇತ ಫೋನ್‌ ಚಾರ್ಜರ್‌ ವಿಧಾನ. ಇದನ್ನು ಪ್ರಾವಾಸಿಗರು ಬಳಸಿದರೆ ಹೆಚ್ಚು ಅನುಕೂಲ.
ಬೆಲೆ $111.05 (7528 ರೂ)

ಸಾಕೆಟ್‌

ಸಾಕೆಟ್‌

ಪ್ಲೇ ಸಾಕರ್‌ ಆಟದ ಸಮಯದಲ್ಲಿ ಎನರ್ಜಿ ಉಳಿಸಿಕೊಂಡು ನಂತರದಲ್ಲಿ ಬಾಲ್‌ಗೆ ಯುಎಸ್‌ಬಿ ಡಿವೈಸ್‌ ಅನ್ನು ಕನೆಕ್ಟ್‌ ಮಾಡಿ ಫೋನ್‌ ಚಾರ್ಜ್‌ ಮಾಡಬಹುದಾಗಿದೆ.
ಬೆಲೆ $99.00 (6711 ರೂ )

ಗಿಜ್‌ಬಾಟ್‌

ಗಿಜ್‌ಬಾಟ್‌

ಚಾರ್ಜರ್ ಬಳಸದೆಯೇ ಫೋನ್ ಚಾರ್ಜ್ ಮಾಡಲು ಟಾಪ್ ವಿಧಾನಗಳುಚಾರ್ಜರ್ ಬಳಸದೆಯೇ ಫೋನ್ ಚಾರ್ಜ್ ಮಾಡಲು ಟಾಪ್ ವಿಧಾನಗಳು

ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಲೇಖನಗಳಿಗಾಗಿ ಲೈಕ್‌ ಮಾಡಿ ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಹಾಗೂ ನಿರಂತರ ಲೇಖನಗಳನ್ನು ಓದಲು ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ ಫಾಲೋ ಮಾಡಿ

Best Mobiles in India

English summary
Smartphone Chargers You Have Not Seen Before. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X