Subscribe to Gizbot

ಗೂಗಲ್ ಕನ್ನಡಕ ಫೇಲ್ ಆಯ್ತು..! ಸ್ನ್ಯಾಪ್‌ಚಾಟ್‌ ಕನ್ನಡಕ ಏನ್‌ ಆಯ್ತು..?

Written By:

ದಿನಕ್ಕೊಂದು ಹೊಸ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಹೊಸ ಮಾದರಿಯ ಗ್ಯಾಜೆಟ್‌ಗಳು ನಮ್ಮ ಜೀವನ ವಿಧಾನವನ್ನು ಬದಲಾವಣೆಯನ್ನು ಮಾಡಲಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಕೆಲವು ದಿನಗಳ ಹಿಂದೆ ಗೂಗಲ್ ಕನ್ನಡಕ ಮಾರುಕಟ್ಟೆಗೆ ಬಂದು ಹಾಗೇ ಮರೆಯಾಗಿತ್ತು.

ಗೂಗಲ್ ಕನ್ನಡಕ ಫೇಲ್ ಆಯ್ತು..! ಸ್ನ್ಯಾಪ್‌ಚಾಟ್‌ ಕನ್ನಡಕ ಏನ್‌ ಆಯ್ತು..?

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಇಯರ್ ಎಂಡ್ ಸೇಲ್‌: ಟಿವಿ, ಪೋನ್ ಭಾರೀ ಕಡಿಮೆ ಬೆಲೆಗೆ..!

ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ನಾಪ್‌ಚಾಟ್ ತನ್ನದೇ ಕನ್ನಡಕವೊಂದನ್ನು ಲಾಂಚ್ ಮಾಡಿದ್ದು, ಸ್ಮಾರ್ಟ್‌ ಕನ್ನಡಕದ ಮಾದರಿಯಲ್ಲಿ ಕಾಣಿಸಿಕೊಂಡಿರುವ ಈ ಕನ್ನಡಕ ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಆದರೆ ಅಷ್ಟಾಗಿ ಖ್ಯಾತಿಯನ್ನು ಗಳಿಸಿಕೊಂಡಿಲ್ಲ ಎನ್ನಲಾಗಿದೆ. ದಿನ ಕಳೆದಂತೆ ಇದು ಸಹ ಬೇಡಿಕೆಯನ್ನು ಕಳೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನ್ನಡಕದಲ್ಲಿ ವಿಡಿಯೋ ಕ್ಯಾಮೆರಾ:

ಕನ್ನಡಕದಲ್ಲಿ ವಿಡಿಯೋ ಕ್ಯಾಮೆರಾ:

ಸ್ನಾಪ್‌ಚಾಟ್ ಆಪ್‌ನೊಂದಿಗೆ ಲಿಂಕ್ ಆಗುತ್ತಿದ್ದ ಕನ್ನಡಕದಲ್ಲಿ ವಿಡಿಯೊ ಕ್ಯಾಮೆರಾ ಅಳವಡಿಸಲಾಗಿದ್ದು, ಗೂಗಲ್ ಕನ್ನಡಕಕ್ಕಿಂತ ವಿಭಿನ್ನವಾಗಿದೆ. ಇದರ ಗ್ಲಾಸ್‌ಗಳು ಕಪ್ಪು ಬಣ್ಣದಲ್ಲಿದ್ದು, ಇದರಲ್ಲಿನ ವಿಡಿಯೊ ಕ್ಯಾಮೆರಾದಲ್ಲಿ 10 ರಿಂದ 30 ಸೆಕೆಂಡ್‌ವರೆಗೆ ರೆಕಾರ್ಡ್‌ ಮಾಡಬಹುದು.

ಸ್ನ್ಯಾಪ್‌ಚಾಟ್‌ ಕನ್ನಡಕ-ಆಪ್‌ ನೊಂದಿಗೆ ಲಿಂಕ್:

ಸ್ನ್ಯಾಪ್‌ಚಾಟ್‌ ಕನ್ನಡಕ-ಆಪ್‌ ನೊಂದಿಗೆ ಲಿಂಕ್:

ಸ್ನ್ಯಾಪ್‌ಚಾಟ್‌ ಕನ್ನಡಕವನ್ನು ಬಳಕೆದಾರರು ತಮ್ಮ ಸ್ನಾಪ್‌ಚಾಟ್ ಆಪ್‌ನೊಂದಿಗೆ ಲಿಂಕ್‌ ಮಾಡಿಕೊಳ್ಳಬಹುದಾಗಿತ್ತು. ಅಲ್ಲದೇ ಮೊಬೈಲ್‌ಗೆ ಸಂಪರ್ಕ ಸಾಧಿಸುವ ಕಾರಣ ಇದು ಆರಂಭದಲ್ಲಿ ಬೇಡಿಕೆಯನ್ನು ಗಳಿಸಿಕೊಂಡಿತ್ತು.

ಸ್ನಾಪ್‌ಚಾಟ್ ವಿಡಿಯೋ ಫೋಸ್ಟ್:

ಸ್ನಾಪ್‌ಚಾಟ್ ವಿಡಿಯೋ ಫೋಸ್ಟ್:

ಈ ಕನ್ನಡಕದಲ್ಲಿ ರೆಕಾರ್ಡ್ ಆದ ವಿಡಿಯೊವನ್ನು ಸ್ನಾಪ್‌ಚಾಟ್ ನಲ್ಲಿ ನೇರವಾಗಿ ಪೋಸ್ಟ್ ಮಾಡಬಹುದಾಗಿದೆ. ಈ ಕನ್ನಡ ಬ್ಲೂಟೂಥ್‌ ಮೂಲಕ ಮೊಬೈಲ್‌ಗೆ ಸಿಂಕ್ ಆಗಲಿದೆ. ಈ ಕನ್ನಡಕದಲ್ಲಿ ಎಚ್‌ಡಿ ಗುಣಮಟ್ಟದ ವಿಡಿಯೊ ರೇಕಾರ್ಡ್ ಮಾಡಬಹುದು.

ಫೋಟೋ ತೆಗಿಯಲು ಸಾಧ್ಯವಿಲ್ಲ:

ಫೋಟೋ ತೆಗಿಯಲು ಸಾಧ್ಯವಿಲ್ಲ:

ಸ್ನ್ಯಾಪ್‌ಚಾಟ್‌ ಕನ್ನಡಕದಲ್ಲಿ ಫೋಟೋ ತೆಗೆಯಲು ಸಾಧ್ಯವಿಲ್ಲ ಎನ್ನಲಾಗಿದೆ. ಕೇಲವ ವಿಡಿಯೋವನ್ನು ಮಾತ್ರವೇ ಮಾಡಲು ಸಾಧ್ಯ. ಈ ಕನ್ನಡದಲ್ಲಿ ಫೋಟೋವನ್ನು ತೆಗೆಯಲು ಸಾಧ್ಯವಿಲ್ಲ ಇದೇ ಈ ಕನ್ನಡದ ಅನಾನುಕೂಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Snapchat Spectacles Are A Social Media Game Changer. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot