ಸೋನಿಯ ಹೊಸ 'ಸೌಂಡ್‌ ಬಾರ್' ಬಿಡುಗಡೆ!..ಬೆಲೆ 29,990ರೂ!

|

ಸೋನಿ ಕಂಪನಿಯ ಆಡಿಯೊ ಉಪಕರಣಗಳು ಅಂದ್ರೆ ಮ್ಯೂಸಿಕ್‌ ಪ್ರಿಯರ ಫೇವರೇಟ್ ಆಗಿದ್ದು, ಕಂಪನಿಯ ಆಡಿಯೊ ಉತ್ಪನ್ನಗಳಲ್ಲಿ ಡಾಲ್ಬಿ ಸೌಂಡ್‌ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತದೆ. ಈ ನಿಟ್ಟಿನಲ್ಲಿ ಮುಂದುವರೆದ ಕಂಪನಿಯು ಇತ್ತೀಚಿಗೆ ಸ್ಮಾರ್ಟ್‌ಟಿವಿಗಳಿಗಾಗಿ ಸೌಂಡ್‌ ಬಾರ್‌ ಉತ್ಪನ್ನಗಳನ್ನು ಪರಿಚಯಿಸಿದ್ದು, ಇದೀಗ ತನ್ನ ಉತ್ಪನ್ನಗಳ ಲಿಸ್ಟಿಗೆ HT-X8500 ಹೆಸರಿನ ಮತ್ತೊಂದು ಹೊಸ ಸೌಂಡ್‌ ಬಾರ್‌ ಅನ್ನು ಸೇರಿಸಿಕೊಂಡಿದೆ.

ಸೋನಿಯ ಹೊಸ 'ಸೌಂಡ್‌ ಬಾರ್' ಬಿಡುಗಡೆ!..ಬೆಲೆ 29,990ರೂ!

ಹೌದು, ಸೋನಿ ಕಂಪನಿಯು HT-X8500 ಸೌಂಡ್‌ ಬಾರ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಸೌಂಡ್‌ ಬಾರ್‌ 2.1 ಚಾನಲ್, ಡಾಲ್ಬಿ ಅಟೊಮ್‌ ಸೌಂಡ್‌ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ಎರಡು ಊಫರ್‌ಗಳನ್ನು ಸಹ ಈ ಸೌಂಡ್‌ ಬಾರ್‌ ಇನ್‌ಬಿಲ್ಟ್‌ ಆಗಿ ಒಳಗೊಂಡಿದ್ದು, ಕಂಪನಿಯ ಬ್ರಾವಿಯೊ ಟಿವಿಗೆ ಬ್ಲೂಟೂತ್‌ ಮೂಲಕ ವಾಯರ್‌ಲೆಸ್‌ ಕನೆಕ್ಟ್‌ ಮಾಡಬಹುದಾದ ಆಯ್ಕೆಯನ್ನು ಹೊಂದಿದೆ.

ಸೋನಿಯ ಹೊಸ 'ಸೌಂಡ್‌ ಬಾರ್' ಬಿಡುಗಡೆ!..ಬೆಲೆ 29,990ರೂ!

ಸೋನಿಯ ಈ ಸೌಂಡ್‌ ಬಾರ್ ಟಿವಿ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲಿರುವ ರಚನೆಯನ್ನು ಹೊಂದಿದ್ದು, ಕಂಪನಿಯು ವರ್ಟಿಕಲ್‌ ಸರೌಂಡ್‌ ಸೌಂಡ್‌ ತಂತ್ರಜ್ಞಾನದ ಸೌಲಭ್ಯವನ್ನು ಈ ಸೌಂಡ್‌ ಬಾರ್‌ನಲ್ಲಿ ನೀಡಲಾಗಿದೆ ಎಂದು ಸೋನಿ ಇಂಡಿಯಾದ ಬಿಸಿನೆಸ್‌ ಮುಖ್ಯಸ್ಥ ಹಿಡೆನೋರಿ ಹಿನೋ ಅವರು ತಿಳಿಸಿದ್ದಾರೆ. ಹಾಗಾದರೇ ಸೋನಿ HT-X8500 ಸೌಂಡ್‌ ಬಾರ್‌ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ಸೋನಿ HT-X8500 ಸೌಂಡ್‌ ಬಾರ್‌ 890x64x96 ಎಂ.ಎಂ ಸುತ್ತಳತೆಯನ್ನು ಹೊಂದಿದ್ದು, ಈ ಡಿವೈಸ್‌ನ ತೂಕವು 3.1ಕಿ.ಲೋ ಗ್ರಾಂ ಆಗಿದೆ. ಹಾಗೆಯೇ ಸೌಂಡ್‌ ಬಾರ್‌ನ ಎರಡು ಬದಿಯ ಕೊನೆಯಲ್ಲಿ ಎರಡು ಊಫರ್‌ಗಳನ್ನು ಒಳಗೊಂಡಿದ್ದು, ಕಪ್ಪು ಬಣ್ಣ ಆಯ್ಕೆಯನ್ನು ಹೊಂದಿದೆ. ಟಿವಿ ಸ್ಟ್ಯಾಂಡ್‌ ಮತ್ತು ಗೋಡೆಗೆ ಹಾಕಬಹುದಾದ ಆಯ್ಕೆಯ ರಚನೆಯನ್ನು ಪಡೆದಿದೆ.

ಸಬ್‌ ಊಫರ್

ಸಬ್‌ ಊಫರ್

HT-X8500 ಸೌಂಡ್‌ ಬಾರ್‌ 2.1 ಚಾನಲ್‌ ಮಾದರಿಯಲ್ಲಿದ್ದು, ಸೌಂಡ್‌ ಬಾರ್ ಕೊನೆಯಲ್ಲಿ ಎರಡು ಇನ್‌ಬಿಲ್ಟ್‌ ಸಬ್‌ ಊಫರ್‌ಗಳನ್ನು ನೀಡಲಾಗಿದೆ. ಊಫರ್‌ ಒಳಗೊಂಡಂತೆ DTS:X ಡಾಲ್ಬಿ ಆಟೊಮ್‌ ಸೌಂಡ್‌ನ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇವು ಅತ್ಯುತ್ತಮ ಬಾಸ್‌ ಸೌಂಡ್‌ ಹೊರಬರಲು ಪೂರಕವಾಗಿವೆ.

ಬ್ಲೂಟೂತ್‌ ಕನೆಕ್ಟಿವಿಟಿ

ಬ್ಲೂಟೂತ್‌ ಕನೆಕ್ಟಿವಿಟಿ

ಸೋನಿ ತನ್ನ ಆಡಿಯೊ ಉತ್ಪನ್ನಗಳಲ್ಲಿ ಹೊಸತನಗಳನ್ನು ಅಳವಡಿಸಿಕೊಳ್ಳುತ್ತ ಸಾಗಿದ್ದು, ತನ್ನ ಹೊಸ HT-X8500 ಸೌಂಡ್ ಬಾರ್‌ನ್ನು ಟಿವಿಗೆ ಬ್ಲೂಟೂತ್‌ ಸಂಪರ್ಕ ಮಾಡಬಹುದಾದ ಆಯ್ಕೆಯನ್ನು ಒದಗಿಸಿದೆ. ಕಂಪನಿಯ ಬ್ರಾವಿಯೊ ಸರಣಿಯ ಸ್ಮಾರ್ಟ್‌ಟಿವಿಗಳಿಗೆ ಸೌಂಡ್‌ ಬಾರ್‌ ಅನ್ನು ಬ್ಲೂಟೂತ್‌ ಕನೆಕ್ಟಿವಿಟಿ ಮಾಡುವ ಸೌಲಭ್ಯವಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಸೌಂಡ್‌ ಬಾರ್‌ನ ಸ್ಪೀಕರ್ಸ್‌ಗಳಲ್ಲಿ ಎರಡು ಪೂರ್ಣ ಡ್ರೈವರ್‌ಗಳನ್ನು ಒದಗಿಸಲಾಗಿದೆ. ಇದರೊಂದಿಗೆ ಬ್ಲೂಟೂತ್ 5, HDMI eARC ಔಟ್‌ಪುಟ್ ಪೋರ್ಟ್‌ ಕನೆಕ್ಟಿವಿಟಿ ಆಯ್ಕೆ, ಎಚ್‌ಡಿಆರ್‌, ಡಾಲ್ಬಿವಿಶನ್, ಮತ್ತು ಎರಡು ಸಬ್‌ ಊಫರ್ ಹಾಗೂ 2.1 ಚಾನಲ್ ಮಾದರಿಯಲ್ಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಕಂಪನಿಯು ತನ್ನ ಹೊಸ HT-X8500 ಸೌಂಡ್‌ ಬಾರ್‌ ಅನ್ನು ಇತ್ತೀಚಿಗೆ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಡಿವೈಸ್‌ ಬೆಲೆಯು 29,990ರೂ.ಗಳು ಆಗಿದೆ. ಅಧಿಕೃತ ಸೋನಿ ಸ್ಟೋರ್‌ಗಳಲ್ಲಿ ಮತ್ತು ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ದೊರೆಯಲಿದ್ದು, ಗ್ರಾಹಕರು ಖರೀದಿಸಬಹುದಾಗಿದೆ.

Best Mobiles in India

English summary
Sony HT-X8500 2.1 Channel Dolby Atmos Soundbar Launched in India at Rs. 29,990.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X