1699 ರೂ.ಗೆ 'ಫಿಡ್ಜೆಟ್ ಸ್ಪಿನ್ನರ್' ರೀತಿಯ ಮೊಬೈಲ್ ಮಾರುಕಟ್ಟೆಗೆ!!..ಏನು ಫೀಚರ್ಸ್?

Written By:

ಯಾವ ಯಾವ ಸಮಯದಲ್ಲಿ ಯಾವ ಯಾವ ಟ್ರೆಂಡ್ ಹೊತ್ತು ಮೊಬೈಲ್‌ಗಳು ಬಿಡಿಗಡೆಯಾಗುತ್ತವೆ ಎಂಬುದು ಆ ದೇವರಿಗೆ ಗೊತ್ತು.! ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇಷ್ಟು ದಿವಸ ಟ್ರೆಂಡ್ ಆಗಿದ್ದ, ಯಾವಾಗಲೂ ಬೆರಳಿನಲ್ಲಿ ಆಡಿಸುತ್ತಿದ್ದ 'ಫಿಡ್ಜೆಟ್ ಸ್ಪಿನ್ನರ್' ರೀತಿಯಲ್ಲಿಯೇ ಹೊಸ ಮೊಬೈಲ್ ಒಂದು ಬಿಡುಗಡೆಯಾಗಿದೆ.!!

ಫಿಡ್ಜೆಟ್ ಸ್ಪಿನ್ನರ್ ರೂಪದಲ್ಲಿಯೇ ಇರುವ ಈ ಫೋನ್ ಹೆಸರು 'ಸ್ಪಿನ್ನರ್ ಮೊಬೈಲ್' ಎಂದೇ ಪರಿಚಿತವಾಗಿದ್ದು, ಎಲ್ಲರಿಗೂ ಕುತೋಹಲ ಮೂಡಿಸಿದೆ.!ಕೇವಲ 1699 ರೂಪಾಯಿಗಳಿಗೆ ಈ ಸ್ಪಿನ್ನರ್ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದು ಇದೀಗ ಟ್ರೆಂಡ್ ಆಗಿದೆ.!! ಹಾಗಾದರೆ, ಈ ಸ್ಪಿನ್ನರ್ ಮೊಬೈಲ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಪಿನ್ನರ್ ಫೋನ್ ಡಿಸ್‌ಪ್ಲೇ!!

ಸ್ಪಿನ್ನರ್ ಫೋನ್ ಡಿಸ್‌ಪ್ಲೇ!!

ಫಿಡ್ಜೆಟ್ ಸ್ಪಿನ್ನರ್' ರೀತಿಯಲ್ಲಿಯೇ ಈ ಫೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದು "ಕ್ಯೂವಿಜಿ(128x128) ಸ್ಕ್ರೀನ್, ಹೊಂದಿದೆ. ಮೇಲ್ಬಾಗದಲ್ಲಿ ಸ್ಕ್ರೀನ್ ಮಧ್ಯಬಾಗದಲ್ಲಿ ಸ್ಪಿನ್ನರ್ ಹಾಗೂ ಕೆಳಬಾಗದಲ್ಲಿ ಕೀಪ್ಯಾಡ್ ಇದ್ದು, ಫೋನ್ ವಿಶಿಷ್ಟವಾಗಿ ರೂಪಿತವಾಗಿದೆ.!!

ಸಿಮ್‌ಕಾರ್ಡ್ ಮತ್ತು ನೆಟ್‌ವರ್ಕ್!!

ಸಿಮ್‌ಕಾರ್ಡ್ ಮತ್ತು ನೆಟ್‌ವರ್ಕ್!!

ಈ ಸ್ಪಿನ್ನರ್ ಮೊಬೈಲ್ ಸಂಪೂರ್ಣ ಬೇಸಿಕ್ ಫಿಚರ್ಸ್ ಹೊಂದಿದ್ದು, ಕೇವಲ 850/900/1800/1900mHz, 2G ನೆಟ್‌ವರ್ಕ್‌ಗೆ ಮಾತ್ರ ಈ ಮೊಬೈಲ್ ಸಪೋರ್ಟ್ ಮಾಡಲಿದೆ.!! ಇನ್ನು 1 ಸಿಮ್ ಕಾರ್ಡ್ ಅನ್ನು ಮಾತ್ರ ಈ ಮೊಬೈಲ್‌ನಲ್ಲಿ ಉಪಯೋಗಿಸಬಹುದಾಗಿದೆ.!!

RAM ಮತ್ತೆ ಮೆಮೊರಿ!!

RAM ಮತ್ತೆ ಮೆಮೊರಿ!!

ಈ ಮೊಬೈಲ್‌ಗೆ RAM ಮತ್ತೆ ಮೆಮೊರಿ ಫೀಚರ್ ಹೇಳುವ ಅವಶ್ಯಕತೆಯೇ ಇಲ್ಲ.ಆದರೂ RAM ಮತ್ತೆ ಮೆಮೊರಿ ಲಭ್ಯವಿರುವುದಕ್ಕೆ ಹೇಳಲೇಬೆಕಿದೆ.!ಈ ಮೊಬೈಲ್ ಫೋನ್ 32 ಎಂಬಿ RAM - 32 ಎಂಬಿ ಆಂತರಿಕ ಮೆಮೊರಿಯನ್ನು ಹೊಂದಿದೆ.! ಇದರಲ್ಲಿ 200 SMS ಮತ್ತು 500 ಕಾಟ್ಯಾಕ್ಟ್ ಸೇವ್ ಮಾಡಬಹುದು.!!

ಮೊಬೈಲ್ ಕಲರ್ ಮತ್ತು ಬ್ಯಾಟರಿ ಎಷ್ಟು?

ಮೊಬೈಲ್ ಕಲರ್ ಮತ್ತು ಬ್ಯಾಟರಿ ಎಷ್ಟು?

ಸ್ಪಿನ್ನರ್ ಮೊಬೈಲ್ 5 ರಿಂದ 6 ಕಲರ್‌ಗಳಲ್ಲಿ ಮಾರುಕಟ್ಟೆಗೆ ಬಂದಿದ್ದು, 800 ಎಎಎಚ್ ಬ್ಯಾಟರಿ ಶಕ್ತಿಯನ್ನು ಹೊಂದಿದೆ.!! ಮೊಬೈಲ್ ಮಾರಾಟಗಾರ ಕಂಪೆನಿ ಹೇಳುವಂತೆ 10 ಗಂಟೆಗಳ ಸ್ಟ್ಯಾಂಡ್‌ ಬೈ ಬಳಕೆ ನೀಡಲಿದೆ.!!

ಮೊಬೈಲ್ ಖರೀದಿಸಬಹುದೇ?

ಮೊಬೈಲ್ ಖರೀದಿಸಬಹುದೇ?

ಟ್ರೆಂಡ್‌ಗೆ ತಕ್ಕಂತೆ ರೂಪಿತವಾಗಿರುವ ಚೀನಾ ಮೊಬೈಲ್ ಇದಾಗಿದ್ದು, ಉತ್ಪನ್ನದ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿಲ್ಲ ಎನ್ನಬಹುದು.!! ಕೇವಲ ಮೋಜಿಗಾಗಿ ಇರುವ ಈ ಸ್ಪಿನ್ನರ್ ಮೊಬೈಲ್ ಖರೀದಿಸಿದರೆ ಆಟವಾಡಬಹುದೇನೊ ಅಷ್ಟೆ!

ಓದಿರಿ:ಅನ್ಯಗ್ರಹ ಜೀವಿಗಳಿಂದ ಸಿಗ್ನಲ್!..ಸ್ಪಷ್ಟಪಡಿಸಿದ ಪ್ರಸಿದ್ದ ವಿಜ್ಞಾನಿ 'ಸ್ಟೀಫನ್ ಹಾಕಿಂಗ್'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Worlds Slimmest SPINNER Mobile Phone ever.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot