ಈ ಟೆಕ್‌ನಿಂದ ಪಕ್ಕಾ ಸೆಕೆಂಡ್‌ನಲ್ಲಿ ಯಾವುದೇ ಗ್ಯಾಜೆಟ್ ಫುಲ್‌ ಚಾರ್ಜ್‌ ಮಾಡಬಹುದು..!

By Suneel
|

ಯಾವುದೇ ಸ್ಮಾರ್ಟ್‌ಫೋನ್‌ ಪೂರ್ಣ ಚಾರ್ಜ್‌ ಆಗಲು 1 ರಿಂದ 2 ಗಂಟೆ ಸಮಯ ಬೇಕಾಗಿತ್ತು. ಆದರೆ ಈ ವರ್ಷದ ಆರಂಭದಿಂದ ಹಲವು ಹೊಸ ಹೊಸ ಡಿವೈಸ್‌ಗಳು ಕೇವಲ 30 ನಿಮಿಷಗಳಲ್ಲಿ ಚಾರ್ಜ್‌ ಆಗುವಂತಹ ಟರ್ಬೋ ಚಾರ್ಜರ್ ಅನ್ನು ಅಭಿವೃದ್ದಿ ಪಡಿಸಿವೆ. ಇನ್ಮುಂದೆ 30 ನಿಮಿಷವು ಸಹ ಯಾವುದೇ ಗ್ಯಾಜೆಟ್ ಪೂರ್ಣ ಚಾರ್ಜ್‌ ಮಾಡಲು ಬೇಕಿಲ್ಲ. ಹೌದು, ಅಂತಹದೊಂದು ಟೆಕ್ನಾಲಜಿಯನ್ನು ಸಂಶೋಧಕರ ತಂಡವೊಂದು ಅಭಿವೃದ್ದಿಪಡಿಸಿದೆ. ಈ ತಂಡದಲ್ಲಿ ನಮ್ಮ ಭಾರತೀಯರು ಇದ್ದಾರೆ.

ಕೇಂದ್ರ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರು ಅಮೆರಿಕದಲ್ಲಿ, ಹೆಚ್ಚು ವಿದ್ಯುತ್ ಪವರ್ ಸ್ಟೋರ್‌ ಮಾಡಿಕೊಳ್ಳುವ ಫ್ಲೆಕ್ಸಿಬಲ್‌ ಸೂಪರ್‌ಕೆಪಾಸಿಟರ್ಸ್‌ ಅನ್ನು ತಯಾರಿಸಲು ವ್ಯವಸ್ಥೆಯೊಂದನ್ನು ಅಭಿವೃದ್ದಿಪಡಿಸಿದ್ದಾರೆ. ಸೂಪರ್‌ಕೆಪಾಸಿಟರ್ಸ್ 30,000 ಕ್ಕಿಂತ ಹೆಚ್ಚು ಬಾರಿ ಯಾವುದೇ ಡಿವೈಸ್ ಅನ್ನು ಆರಂಭದಿಂದ ಪೂರ್ಣ ಚಾರ್ಜ್‌ ಮಾಡಬಲ್ಲದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿರಿ.

ಚಾರ್ಜರ್ ಇಲ್ಲದೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ 5 ವಿಧಾನಗಳು ನಿಮಗೆ ಗೊತ್ತೇ?

ಬ್ಯಾಟರಿ ಬದಲು ಸೂಪರ್‌ಕೆಪಾಸಿಟರ್ಸ್ ಬಳಸಿದಲ್ಲಿ..!

ಬ್ಯಾಟರಿ ಬದಲು ಸೂಪರ್‌ಕೆಪಾಸಿಟರ್ಸ್ ಬಳಸಿದಲ್ಲಿ..!

ಬ್ಯಾಟರಿ ಬದಲು ಸೂಪರ್‌ಕೆಪಾಸಿಟರ್ಸ್ ಬಳಸಿದಲ್ಲಿ ಕೆಲವೇ ಸೆಕೆಂಡ್‌ಗಳಲ್ಲಿ ಮೊಬೈಲ್‌ ಅನ್ನು ಪೂರ್ಣ ಚಾರ್ಜ್‌ ಮಾಡಬಹುದು. ನಂತರ ಒಂದು ವಾರದವರೆಗೆ ಮೊಬೈಲ್ ಚಾರ್ಜ್‌ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಫ್ಲೋರಿಡಾ ವಿಶ್ವವಿದ್ಯಾಲಯದ ಪೋಸ್ಟ್‌ ಡಾಕ್ಟರಲ್ ಸಹಾಯಕಿ 'ನಿತಿನ್ ಚೌಧರಿ' ಹೇಳಿದ್ದಾರೆ. ಸೂಪರ್‌ಕೆಪಾಸಿಟರ್ಸ್‌ ಅನ್ನು ಮೊಬೈಲ್ ಮಾತ್ರವಲ್ಲದೇ ಯಾವುದೇ ಗ್ಯಾಜೆಟ್‌ ಚಾರ್ಜ್‌ ಮಾಡಲು ಬಳಸಬಹುದು.

ಸೂಪರ್‌ಕೆಪಾಸಿಟರ್ಸ್

ಸೂಪರ್‌ಕೆಪಾಸಿಟರ್ಸ್

ಪ್ರಸ್ತುತದಲ್ಲಿ ಸೂಪರ್‌ಕೆಪಾಸಿಟರ್ಸ್ ಪರಿಕಲ್ಪನೆಯು ತಯಾರಾದ ಪುರಾವೆ ಹೊಂದಿದ್ದು, ಫೋನ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಎಲೆಕ್ಟ್ರಾನಿಕ್ ವಾಹನಗಳಲ್ಲಿ ಬಳಕೆ ಮಾಡಬಹುದು ಎಂದು ಹೇಳಲಾದ ಅಧ್ಯಯನ 'ಎಸಿಎಸ್ ನ್ಯಾನೊ' ನಿಯತಕಾಲಿಕೆಯಲ್ಲಿ ಪ್ರಕಟಣೆಗೊಂಡಿದೆ.

ಸೂಪರ್‌ಕೆಪಾಸಿಟರ್ಸ್, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅತ್ಯುತ್ತಮವಾಗಿ ಬಳಕೆ ಆಗಲಿದೆ. ಕಾರಣ 18 ತಿಂಗಳ ನಂತರ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್‌ ಆಗುವುದು ಕಡಿಮೆ, ಹಾಗೂ ಬ್ಯಾಟರಿ ಡಿಗ್ರೇಡ್ ಆಗಿಬಿಡುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನ್ಯಾನೋ ವಸ್ತುಗಳ ಬಳಕೆ

ನ್ಯಾನೋ ವಸ್ತುಗಳ ಬಳಕೆ

ವಿಜ್ಞಾನಿಗಳು ಸೂಪರ್‌ಕೆಪಾಸಿಟರ್ಸ್‌ಗೆ ನ್ಯಾನೋ ವಸ್ತುಗಳನ್ನು ಬಳಸಿ ಅಭಿವೃದ್ದಿಪಡಿಸಿ, ಎಲೆಕ್ಟ್ರಾನಿಕ್‌ ಡಿವೈಸ್‌ಗಳಲ್ಲಿ ಬ್ಯಾಟರಿ ಬದಲು ಸೂಪರ್‌ಕೆಪಾಸಿಟರ್ಸ್ ಅನ್ನು ಬಳಸಲು ಅಧ್ಯಯನ ನಡೆಸುತ್ತಿದ್ದಾರೆ.

ಸೂಪರ್‌ಕೆಪಾಸಿಟರ್ಸ್ ಅಭಿವೃದ್ದಿ ಹೇಗೆ?

ಸೂಪರ್‌ಕೆಪಾಸಿಟರ್ಸ್ ಅಭಿವೃದ್ದಿ ಹೇಗೆ?

ಸೂಪರ್‌ಕೆಪಾಸಿಟರ್ಸ್, ಲಿಥಿಯಂ ಐಯಾನ್ ಬ್ಯಾಟರಿಯಷ್ಟೇ ಹೆಚ್ಚಿನ ಮಟ್ಟದಲ್ಲಿ ಪವರ್ ಅನ್ನು ಹಿಡಿದಿಡಲಿದೆ. ಆದ್ದರಿಂದ ಸಂಶೋಧಕರ ತಂಡ ಎರಡು ಆಯಾಮದ ವಸ್ತುಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸೂಪರ್‌ಕೆಪಾಸಿಟರ್ಸ್ ಅಭಿವೃದ್ದಿಗಾಗಿ ಪ್ರಯೋಗ ನಡೆಸುತ್ತಿದ್ದಾರೆ. ಇತರೆ ಸಂಶೋಧಕರು ಗ್ರಾಫೈನ್ ಮತ್ತು ಇತರೆ ಎರಡು ಆಯಾಮದ ವಸ್ತುಗಳಿಂದ ಸೂಪರ್‌ಕೆಪಾಸಿಟರ್ಸ್ ಅಭಿವೃದ್ದಿಪಡಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟದಲ್ಲಿ ಯಶಸ್ವಿ ಆಗಿದ್ದಾರೆ.

ಲಿಥಿಯಂ ಐಯಾನ್ ಬ್ಯಾಟರಿ

ಲಿಥಿಯಂ ಐಯಾನ್ ಬ್ಯಾಟರಿ

ಲಿಥಿಯಂ ಐಯಾನ್‌ ಬ್ಯಾಟರಿ 1,500 ಬಾರಿ ಡಿವೈಸ್‌ಗಳನ್ನು ಚಾರ್ಜ್‌ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಸೂಪರ್‌ಕೆಪಾಸಿಟರ್ಸ್ 30,000 ಬಾರಿ ಡಿವೈಸ್‌ ಅನ್ನು ಕೆಲವೇ ಸೆಕೆಂಡ್‌ನಲ್ಲಿ ಪೂರ್ಣ ಚಾರ್ಜ್‌ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಪ್ರಪಂಚದಾದ್ಯಂತ ಶಕ್ತಿಯ ಸಾಂಧ್ರತೆ ಮತ್ತು ವಿದ್ಯುತ್ ಪವರ್ ಸ್ಥಿರತೆಗಾಗಿ ಇದು ಉಪಯೋಗವಾಗಲಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
New Supercapacitor Tech Produces Batteries That Charge in Seconds. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X