Subscribe to Gizbot

ನೂತನ 3D ಟಚ್ಸ್ಕ್ರೀನ್ ತಂತ್ರಜ್ಞಾನ ನಿಮ್ಮನ್ನು ವಿಸ್ಮಯಗೊಳಿಸುತ್ತದೆ!!

Written By:

ಇನ್ನು ಮುಂದೆ ಸ್ಮಾರ್ಟ್‌ಫೋನ್ ಬಳಕೆದಾರರು ಟಚ್ ಸ್ಕ್ರೀನ್ ಮೇಲೆ ಕಾಣುವ ಚಿತ್ರಗಳು ಮತ್ತು ವಸ್ತುಗಳನ್ನು ಸ್ಪರ್ಶಿಸಿ ಆನಂದಿಸಬಹುದಾಗಿದೆ.! ನೀವು ಊಹಿಸದಿದ್ದರೂ ಸಹ ಇಂತಹದೊಂದು ತಂತ್ರಜ್ಞಾನ ಅಭಿವೃದ್ದಿಯಾಗಿದ್ದು, ಮನೋಭೌತಶಾಸ್ತ್ರದ ಮಾದರಿಯನ್ನು ದಾಖಲಿಸಿ ಸಂಶೋಧಕರು ಇದನ್ನು ರೂಪಿಸಿದ್ದಾರೆ.

ಸೆಂಟ್ ಪೀಟರ್ಸ್‌ಬರ್ಗ್‌ನ 'ಡಿಸ್ನಿ ರಿಸರ್ಚ್ ಗ್ರೂಪ್' ತಂತ್ರಜ್ಞರು ಈ ನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸ್ಮಾರ್ಟ್ಫೋನ್ ಪರದೆ ಮೇಲೆ ಕಾಣಿಸುವ ಚಿತ್ರಗಳು ಮತ್ತು ವಸ್ತುಗಳ ಸ್ಪರ್ಶದ ಅನುಭವ ಬೆರಳ ತುದಿಗೆ ಲಭ್ಯವಾಗುವಂತೆ ಮಾಡಲು 'ಡಿಸ್ನಿ ರಿಸರ್ಚ್ ಗ್ರೂಪ್' ಹೊರಟಿದೆ.!!

ನೂತನ 3D ಟಚ್ಸ್ಕ್ರೀನ್ ತಂತ್ರಜ್ಞಾನ ನಿಮ್ಮನ್ನು ವಿಸ್ಮಯಗೊಳಿಸುತ್ತದೆ!!

ಓದಿರಿ: ಆಫರ್ ಮುಗಿದರೂ ಜಿಯೋ ಉಚಿತವಾಗಿರುವುದೇಕೆ?..ಎಷ್ಟು ದಿನ ಈ ಆಫರ್?

ಟಚ್ ಸ್ಕ್ರೀನ್ ಮೇಲೆ ಕಾಣುವ ಚಿತ್ರಗಳು ಮತ್ತು ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಅದರ ನೈಜ ವಸ್ತುವನ್ನೇ ಮುಟ್ಟಿದಂತಹ ಅನುಭವ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಆಗಲಿದೆ ಎಂದು ಡಿಸ್ನಿ ರಿಸರ್ಚ್ ಗ್ರೂಪ್ ತಂತ್ರಜ್ಞರು ಹೇಳಿದ್ದಾರೆ. ಇನ್ನು ಬೆಟ್ಟ ಮತ್ತು ಕಣಿವೆ ಪ್ರದೇಶಗಳ ವಕ್ರವಾದ ಮೇಲ್ಮೈಯನ್ನು ಸಹ ನೈಜರೀತಿಯಲ್ಲಿಯೇ ಸ್ಪರ್ಶಿಸಿದಂತಹ ಅನುಭವವಾಗುತ್ತದೆ ಎಂದು ಹೇಳಿದ್ದಾರೆ.

ನೂತನ 3D ಟಚ್ಸ್ಕ್ರೀನ್ ತಂತ್ರಜ್ಞಾನ ನಿಮ್ಮನ್ನು ವಿಸ್ಮಯಗೊಳಿಸುತ್ತದೆ!!

ಈ ಬಗ್ಗೆ ಹೇಳಿರುವ ಡಿಸ್ನಿ ರಿಸರ್ಚ್ ನಿರ್ದೇಶಕ ಇವಾನ್ ಪೊಪೆರೀವ್, ಚರ್ಮದ ಸಹಾಯದ ಮೂಲಕ ಟಚ್ ಸ್ಕ್ರೀನ್ ಮೇಲಿನ 3D ಉಬ್ಬನ್ನು ಮೆದುಳು ಗ್ರಹಿಸುತ್ತದೆ. ಇದರಿಂದಾಗಿ ಸ್ಪರ್ಶ ಪರದೆ ಮೇಲ್ಮೈ ಸಂಪೂರ್ಣವಾಗಿ ನುಣುಪಾಗಿದ್ದರೂ ಸಹ ನಮ್ಮ ಮೆದುಳು ನೈಜವಾದ ಉಬ್ಬು ಇದೆ ಎಂದು ಭಾವಿಸುತ್ತದೆ ಎಂದು ಹೇಳಿದ್ದಾರೆ.!!

ಓದಿರಿ: ಎಲೆಕ್ಟ್ರಾನಿಕ್ ಕಾಂಡಮ್ ಬಿಡುಗಡೆ!!.. ತಂತ್ರಜ್ಞಾನ ಏನಿದೆ ಗೊತ್ತಾ?

English summary
Calculate the gradient of the virtual surface we want to render. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot