Subscribe to Gizbot

ಮತ್ತೆ ಬಂದಿದ್ದಾನೆ ಆಂಡ್ರಾಯ್ಡ್ ಜನಕ: ತಯಾರಿಸಿದ್ದಾನೆ ಆಂಟಿ ಐಫೋನ್

Written By:

ಕೆಲಸದಿಂದ ನಿವೃತ್ತಿ ಹೊಂದಿದ ನಂತರದಲ್ಲಿ ವಿಶ್ರಾಂತಿಯ ಜೀವನ ನಡೆಸುವವರ ನಡುವೆ ಆಂಡ್ರಾಯ್ಡ್ ಜನಕ ಆಂಡಿ ರುಬಿನ್ ತನ್ನದೇ ಹಾದಿಯಲ್ಲಿ ನಡೆಯುವ ಮೂಲದ ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸದೊಂದು ಕ್ರಾಂತಿಯನ್ನು ಹುಟ್ಟುಹಾಕಲು ಮುಂದಾಗಿದ್ದಾನೆ, ಸದ್ಯ ಖ್ಯಾತಿಯ ಉತ್ತುಂಗದಲ್ಲಿರುವ ಆಪಲ್ ಫೋನಿಗೆ ಬದಲಾಗಿ ಆಂಟಿ ಆಪಲ್ ಫೋನ್ ತಯಾರಿಕೆಗೆ ಮುಂದಾಗಿದ್ದಾನೆ.

ಮತ್ತೆ ಬಂದಿದ್ದಾನೆ ಆಂಡ್ರಾಯ್ಡ್ ಜನಕ

ಓದಿರಿ: ಧೋನಿ ಸ್ಮಾರ್ಟ್ ಬ್ಯಾಟಿನಿಂದ ಹರಿಯಲಿದೆ ರನ್ ಹೊಳೆ..! ಏನಿದು ಸ್ಮಾರ್ಟ್ ಬ್ಯಾಟ್, ಯಾಕಾಗಿ ಬಳಕೆ..?

ರುಬಿನ್ ಗೂಗಲ್ ನಿಂದ 2014ರಲ್ಲಿ ನಿವೃತ್ತಿಯನ್ನು ಪಡೆದವರು, ಈ ಹಿಂದೆ ಆಪಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ ಅನುಭವನ್ನು ಬೆನ್ನಗೆ ಹೊತ್ತು ಬಂದವರು. ಗೂಗಲ್ ನಲ್ಲಿ ಕೆಲಸ ಆರಂಭಿಸಿದ ದಿನಗಳಲ್ಲಿ ಆಂಡ್ರಾಯ್ಡ್ ಸಿಸ್ಟಮ್ ಅನ್ನು ನಿರ್ಮಿಸಿದ ರಾಬಿನ್, ಇದನ್ನು ಮೊಬೈಲ್, ಟಿವಿ, ಕಾರ್ ಮತ್ತು ವಾಚ್ ಗಳಲ್ಲಿ ಬಳಕೆಯಾಗುವಂತೆ ಮಾಡಿದರು. ನಂತರ ಈಗ ತಮ್ಮದೇ ಆದ ಕಂಪನಿಯಿಂದ ಹೊಸದೊಂದು ಮಾದರಿಯ ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಮತ್ತು ಆಪಲ್‌ಗೆ ಪ್ರತಿಸ್ಪರ್ಧಿ:

ಆಂಡ್ರಾಯ್ಡ್ ಮತ್ತು ಆಪಲ್‌ಗೆ ಪ್ರತಿಸ್ಪರ್ಧಿ:

ಸದ್ಯದ ಸ್ಮಾರ್ಟ್‌ಫೋನ್ ಲೋಕದಲ್ಲಿ ಆಂಡ್ರಾಯ್ಡ್ ಮತ್ತು ಆಪಲ್ ಗಳಿಗೆ ಪ್ರತಿ ಸ್ಪರ್ಧಿಗಳೇ ಇಲ್ಲ ಎನ್ನುವಂತಾಗಿದೆ. ರಾಬಿನ್ ತನ್ನ ಕೆಲಸದಿಂದ ನಿವೃತ್ತಿ ಹೊಂದಿದ ನಂತರದ ದಿನಗಳಲ್ಲಿ ಆಪಲ್ ಮತ್ತು ಆಂಡ್ರಾಯ್ಡ್ ಕಾರ್ಯಚರಣೆಯನ್ನು ದೀರ್ಘವಾಗಿ ಗಮನಿಸಿ, ಗ್ರಾಹಕರಿಗೆ ಇದಕ್ಕಿಂತ ಸರಳವಾದ ಮತ್ತು ಸೇಫ್ ಆದ ಓಎಸ್ ಅನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಇಕ್ಕಾಗಿಯೇ ಹುಟ್ಟುಹಾಕಿದ್ದಾರೆ ಕಂಪನಿ:

ಇಕ್ಕಾಗಿಯೇ ಹುಟ್ಟುಹಾಕಿದ್ದಾರೆ ಕಂಪನಿ:

ಆಂಟಿ ಐಫೋನ್ ತಯಾರಿಕೆಗಾಗಿ Essential Products ಎಂಬ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಅಲ್ಲದೇ ಅದರ CEO ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಕಂಪನಿಯ ಮೂಲಕ ತನ್ನದೇ ಆದ ಹೊಸ ಓಎಸ್ ಬಿಡುಗಡೆ ಮಾಡಲು ವೇದಿಕೆ ನಿರ್ಮಿಸುತ್ತಿದ್ದಾರೆ.

ಮುಕ್ತವಾಗಲಿದೆ ಆಂಟಿ ಆಪಲ್:

ಮುಕ್ತವಾಗಲಿದೆ ಆಂಟಿ ಆಪಲ್:

ಆಪಲ್ ಸಾಫ್ಟ್‌ವೇರ್ ಅನ್ನು ಆಪಲ್ ಬಿಟ್ಟರೇ ಇನ್ಯಾರು ಬಳಸುವಂತೆ ಇಲ್ಲ, ಆಪಲ್ ಸಾಫ್ಟ್‌ವೇರ್ ಹೆಚ್ಚು ಸೇಫ್ ಎನ್ನುವ ಕಾರಣಕ್ಕೆ ಹಲವರು ಇದನ್ನು ಬಳಸಲು ಇಷ್ಟ ಪಡುತ್ತಾರೆ. ಆದರೆ ಈ ಬಾರಿ ರುಬಿನ್ ಆಪಲ್ ಗಿಂತಲೂ ಹೆಚ್ಚು ಸೇಫ್ ಮತ್ತು ಸರಳವಾದ ಓಎಸ್ ತಯಾರಿಸಿದ್ದು, ಇದನ್ನು ಮುಕ್ತವಾಗಿ ಮಾರುಕಟ್ಟೆಗೆ ಬಿಡಲಿದ್ದಾರೆ.

ಹೊಸ ಅಧ್ಯಾಯ ಬರೆಯಲಿದೆ ಆಂಟಿ ಆಪಲ್:

ಹೊಸ ಅಧ್ಯಾಯ ಬರೆಯಲಿದೆ ಆಂಟಿ ಆಪಲ್:

ರಾಬಿನ್ ಹುಟ್ಟುಹಾಕಿರುವ ಆಂಟಿ ಆಪಲ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಸ್ಮಾರ್ಟ್ ಲೋಕದ ಕಡೆಗೆ ಸಾಗುತ್ತಿರುವ ಭಾರತದಂತಹ ದೇಶಗಳಿಗೆ ಈ ಓಎಸ್ ಬಾರಿ ಸಹಾಯ ಮಾಡಲಿದೆ. ಇದನ್ನು ಫೋನ್, ವಾಚ್, ಟಿವಿ, ಲೈಟ್ ಬಲ್ಬ್, ಟೋಸ್ಟರ್, ಓವನ್ ಮುಂತಾದವುಗಳಲ್ಲಿ ಬಳಸಿಕೊಂಡು ಅವುಗಳನ್ನು ಸ್ಮಾರ್ಟ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Rubin created Android, the operating system found in more than two billion phones, televisions, cars, and watches. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot