ಧೋನಿ ಸ್ಮಾರ್ಟ್ ಬ್ಯಾಟಿನಿಂದ ಹರಿಯಲಿದೆ ರನ್ ಹೊಳೆ..! ಏನಿದು ಸ್ಮಾರ್ಟ್ ಬ್ಯಾಟ್, ಯಾಕಾಗಿ ಬಳಕೆ..?

Written By:

  ತಂತ್ರಜ್ಞಾನ ಎನ್ನುವುದು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಕ್ರೀಡಾ ವಲಯವು ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಭಾರತೀಯರ ಮನದಲ್ಲಿ ಸ್ಥಾನ ಪಡೆದಿರುವ ಕ್ರಿಕೆಟ್ ತಂತ್ರಜ್ಞಾನವನ್ನು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಈ ಬಾರಿ ಹವಾ ಎಬ್ಬಿಸಿರುವ ಚಾಂಪಿಯನ್ಸ್ ಹೊಸ ಮಾದರಿಯ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ.

  ಈ ಬಾರಿ ಧೋನಿ ಸ್ಮಾರ್ಟ್ ಬ್ಯಾಟಿನಿಂದ ಬ್ಯಾಟಿಂಗ್...! ಏನಿದು ಸ್ಮಾರ್ಟ್ ಬ್ಯಾಟ್, ಯ

  ಓದಿರಿ: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ ವೊಡಾಫೋನ್..!!!

  ಒಟ್ಟು 18 ದಿನಗಳ ಕಾಲ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಸೆಣೆಸಾಡಲಿದ್ದು, ಈ ಟೂರ್ನಿಯಲ್ಲಿ ಐಸಿಸಿ ಹೊಸದೊಂದು ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ. ಅದುವೇ 'ಸ್ಮಾರ್ಟ್ ಬ್ಯಾಟ್'. ಈ ಹೊಸ ತಂತ್ರಜ್ಞಾನದ ಬಳಕೆಗಾಗಿ ವಿವಿಧ ತಂಡಗಳ ಬ್ಯಾಟ್ ಮಾನ್ಸ್ ತಮ್ಮ ಬ್ಯಾಟ್‌ಗಳಲ್ಲಿ ಚಿಪ್ ಅಳವಡಿಸಿಕೊಂಡಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಸ್ಮಾರ್ಟ್ ಕ್ರಿಕೆಟ್ ಟೂರ್ನಮೆಂಟ್:

  ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಐಸಿಸಿ ಸ್ಮಾರ್ಟ್ ಕ್ರಿಕೆಟ್ ಟೂರ್ನಮೆಂಟ್ ಎಂದು ಕರೆದಿದ್ದು, ಇದಕ್ಕಾಗಿ ಹಲವು ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನಗಳು ಆಟದ ನಿಖರತೆಯನ್ನು ಹೆಚ್ಚಿಸುವುದಲ್ಲದೇ ಆಟಗಾರರಿಗೆ ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಲು ಸಹಾಯಕಾರಿಯಾಗಲಿದೆ.

  ಹೊಸ ಮಾದರಿಯ ತಂತ್ರಜ್ಞಾನ ಬಳಕೆ:

  2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೊಸ ಮಾದರಿಯ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು 8 ತಂಡಗಳಲ್ಲಿರುವ ಪ್ರಮುಖ ಮೂರು ಬ್ಯಾಟ್ಸ್ ಮಾನ್‌ಗಳು ಈ ಸ್ಮಾರ್ಟ್ ಬ್ಯಾಟ್ ಅನ್ನು ಬಳಸಲು ಐಸಿಸಿ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಸ್ಪೆಡರ್ ಕ್ಯಾಮ್ ನೊಂದಿಗೆ ಈ ಬಾರಿ ಡ್ರೋಣ್ ಕ್ಯಾಮೆರಾಗಳು ಮೈದಾನದಲ್ಲಿ ಹಾರಾಡಲಿದೆ. ಅದುವೇ ಮೊದಲ ಬಾರಿಗೆ.

  LBW ನಿರ್ಧರಿಸಿಲು ಕ್ಯಾಮೆರಾ:

  ಇದರೊಂದಿಗೆ LBW ತೀರ್ಪು ನೀಡಲು ಈ ಬಾರಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಅನೇಕ ತಂತ್ರಜ್ಞಾನಗಳು ಪ್ರಥಮವಾಗಿ ಕಾಣಿಸಿಕೊಳ್ಳಲಿದೆ.

  ಟೀಂ ಇಂಡಿಯಾದಲ್ಲಿ ಸ್ಮಾರ್ಟ್ ಬ್ಯಾಟ್ ಬಳಸುವವರು ಯಾರು..?

  ಸದ್ಯ ಪ್ರತಿ ತಂಡದ ಮೂರು ಸದಸ್ಯರು ಮಾತ್ರವೇ ಸ್ಮಾರ್ಟ್ ಬ್ಯಾಟ್ ಬಳಸುವ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ನಮ್ಮ ತಂಡದಲ್ಲಿ ಸ್ಮಾರ್ಟ್ ಬ್ಯಾಟ್ ಬಳಸುವವರು ಎಂದರೆ ನಾಯಕ ಕೊಹ್ಲಿ, ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಆಲ್ ರೌಂಡರ್ ಯುವರಾಜ್ ಸಿಂಗ್.

  ಮೊನ್ನೆ ಧೋನಿ ಸಿಕ್ಸ್ ಹೊಡೆದಿದ್ದು ಈ ಸ್ಮಾರ್ಟ್ ಬ್ಯಾಟಿನಲ್ಲೇ:

  ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಎಂ.ಎಸ್. ಧೋನಿ ಇದೇ ಸ್ಮಾರ್ಟ್ ಬ್ಯಾಟಿನಲ್ಲಿ ಸಿಕ್ಸರ್ ಸಿಡಿಸಿದ್ದರು. ಈ ಸ್ಮಾರ್ಟ್ ಬ್ಯಾಟ್ ಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಮುಂದೆ ತಿಳಿಯಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಓದಿರಿ; ಸ್ಮಾರ್ಟ್‌ಫೋನ್‌ಗಳ ಮೇಲೆ ಶಾಕಿಂಗ್ ಆಫರ್ ನೀಡಿದ ಫ್ಲಿಪ್‌ಕಾರ್ಟ್‌: ಸ್ಮಾರ್ಟ್‌ಫೋನ್‌ ಖರೀದಿಗೆ ಇದೇ ಒಳ್ಳೆ ಸಮಯ..!!!

   

  Read more about:
  English summary
  We see new technology being introduced by International Cricket Council every now and then to enhance the experience of the game. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more