1 ಕಿಲೋಮೀಟರ್ ಎತ್ತರದಿಂದ ಮೊಬೈಲ್ ಬಿದ್ದರೂ ಕಾಪಾಡುವ 'ಮೊಬೈಲ್ ಕೇಸ್‌'!

|

ಅಕಸ್ಮಾತ್ ಆಗಿ ಸ್ಮಾರ್ಟ್‌ಪೋನ್ ಕೆಳಗೆ ಬಿದ್ದರೆ ಸ್ವಲ್ಪವೂ ಒಡೆಯದಂತೆ ಕಾಪಾಡುವ ಮೊಬೈಲ್ ಕೇಸ್ ಒಂದು ಈಗ ವಿಶ್ವದೆಲ್ಲೆಡೆ ವೈರಲ್ ಆಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡುಹಿಡಿದಿರುವ ನೂತನ 'ಮೊಬೈಲ್ ಏರ್‌ಬ್ಯಾಗ್' ಒಂದು ಸ್ಮಾರ್ಟ್‌ಫೋನ್ ಕೆಳಗೆ ಬೀಳುವುದಕ್ಕಿಂತ ಮುನ್ನವೇ ಸ್ವಯಂಚಾಲಿತವಾಗಿ ತೆರೆದುಕೊಂಡು ಮೊಬೈಲ್ ಅನ್ನು ರಕ್ಷಿಸುತ್ತದೆ.

ಜರ್ಮನಿಯಲ್ಲಿರುವ ಅಲೆನ್ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾಟ್ರಾನಿಕ್ಸ್ ಎಂಜಿನಿಯರಿಂಗ್ ಓದಿತ್ತಿರುವ 25 ವರ್ಷ ವಯಸ್ಸಿನ ಮಾಸ್ಟರ್ಸ್ ವಿದ್ಯಾರ್ಥಿಯಾದ ಫಿಲಿಪ್ ಫ್ರೆನ್ಜೆಲ್ ಅವರು ಈ 'ಮೊಬೈಲ್ ಏರ್‌ಬ್ಯಾಗ್' ಅನ್ನು ಕಂಡುಹಿಡಿದಿದ್ದು, ಒಮ್ಮೆ ಫಿಲಿಪ್ ಫ್ರೆನ್ಜೆಲ್ ಅವರ ಸ್ಮಾರ್ಟ್‌ಫೋನ್ ಒಂದು ಕೆಳಗೆ ಬಿದ್ದು ಒಡೆದ ನಂತರ ಇಂತಹದೊಂದು ಆವಿಷ್ಕಾರ ನಡೆಸಿದ್ದಾರೆ.

1 ಕಿಲೋಮೀಟರ್ ಎತ್ತರದಿಂದ ಮೊಬೈಲ್ ಬಿದ್ದರೂ ಕಾಪಾಡುವ 'ಮೊಬೈಲ್ ಕೇಸ್‌'!

ಈ ಅವಿಷ್ಕಾರಕ್ಕಾಗಿ ಜರ್ಮನಿ ಮೆಕ್ಯಾಟ್ರಾನಿಕ್ಸ್ ಸೊಸೈಟಿ ಪ್ರಭಾವಿತಗೊಂಡಿದ್ದು, ಫಿಲಿಪ್ ಫ್ರೆನ್ಜೆಲ್ ಅವರು ಕಂಡುಹಿಡಿದಿರುವ ಈ ಮೊಬೈಲ್‌ಕೇಸ್‌ಗಾಗಿ 2018ರ ರಾಷ್ಟ್ರೀಯ ಮೆಕಾಟ್ರಾನಿಕ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗಾದರೆ, ಫಿಲಿಪ್ ಫ್ರೆನ್ಜೆಲ್ ಅವರು ಕಂಡುಹಿಡಿದಿರುವ 'ಮೊಬೈಲ್ ಏರ್‌ಬ್ಯಾಗ್' ಕೇಸ್ ಹೇಗಿದೆ? ಹೇಗೆ ಕೆಲಸ ಮಾಡುತ್ತಿದೆ ಎಂದು ಮುಂದೆ ತಿಳಿಯಿರಿ.

'ಎಡಿ ಕೇಸ್' ಮೊಬೈಲ್ ಏರ್‌ಬ್ಯಾಗ್'!

'ಎಡಿ ಕೇಸ್' ಮೊಬೈಲ್ ಏರ್‌ಬ್ಯಾಗ್'!

ಮೆಕ್ಯಾಟ್ರಾನಿಕ್ಸ್ ಎಂಜಿನಿಯರಿಂಗ್ ಓದಿತ್ತಿರುವ ಫಿಲಿಪ್ ಫ್ರೆನ್ಜೆಲ್ ಅವರು, ತಾವು ಕಂಡು ಹಿಡಿದಿರುವ 'ಮೊಬೈಲ್ ಏರ್‌ಬ್ಯಾಗ್' ಕೇಸ್‌ಗೆ 'ಎಡಿ ಕೇಸ್' ಎಂದು ಹೆಸರಿಟ್ಟಿದ್ದಾರೆ. ಈ ಮೊದಲು ಲಭ್ಯವಿದ್ದ ಎಲ್ಲಾ ಮೊಬೈಲ್‌ ಕೇಸ್‌ಗಳಿಗಿಮತ ಈ ಮೊಬೈಲ್ ಕೇಸ್ ವಿಭಿನ್ನವಾಗಿದ್ದು, ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವ ವಿಶೇಷ ಮೊಬೈಲ್ ಕೇಸ್ ಇದಾಗಿದೆ.

ಹೇಗಿದೆ ಈ 'ಎಡಿ ಕೇಸ್'?

ಹೇಗಿದೆ ಈ 'ಎಡಿ ಕೇಸ್'?

ಲಿಪ್ ಫ್ರೆನ್ಜೆಲ್ ಅವರು ಕಂಡುಹಿಡಿದಿರುವ ಈ 'ಎಡಿ ಕೇಸ್' ಮೊಬೈಲ್ ಏರ್‌ಬ್ಯಾಗ್ ನೋಡಲು ಸಾಮಾನ್ಯ ಮೊಬೈಲ್‌ ಕೇಸ್‌ಗಳಂತೆಯೇ ಕಾಣುತ್ತದೆ. ಆದರೆ, ಈ ಮೊಬೈಲ್‌ ಕೇಸ್‌ನ ನಾಲ್ಕು ಬದಿಯಲ್ಲಿ ರೆಕ್ಕೆಗಳನ್ನು ಜೋಡಿಸಲಾಗಿದ್ದು, ಮೊಬೈಲ್ ಕೇಸ್‌ ಒಳಗೆ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ಮೊಬೈಲ್ ಬಿದ್ದರೂ ಸಹ ಅದು ಒಡೆಯದಂತೆ ಈ ಕೇಸ್ ನೋಡಿಕೊಳ್ಳುತ್ತದೆ.

ಹೇಗೆ ಕೆಲಸ ಮಾಡುತ್ತಿದೆ ಈ 'ಎಡಿ ಕೇಸ್'?

ಹೇಗೆ ಕೆಲಸ ಮಾಡುತ್ತಿದೆ ಈ 'ಎಡಿ ಕೇಸ್'?

ಏರ್‌ಬ್ಯಾಗ್ ಕಲ್ಪನೆಯನ್ನು ಹೊಂದಿರುವ ಈ 'ಎಡಿ ಕೇಸ್' ಮೊಬೈಲ್ ಕೇಸ್ ಕ್ಷಣಮಾತ್ರದಲ್ಲಿ ಮೊಬೈಲ್ ಬೀಳುವಿಕೆ ವೇಗವನ್ನು ಗುರುತಿಸುತ್ತದೆ. ಒಮ್ಮೆ ಹೀಗೆ ಗುರುತಿಸಿದ ನಂತರ ಎಂಟು ಭಾಗಗಳಲ್ಲಿ ಏರ್‌ಕೇಸ್ ಸ್ಟಾಂಡ್‌ಗಳು ತೆರೆದುಕೊಳ್ಳುತ್ತವೆ. ಫ್ಲೆಕ್ಸಿಬಲ್ ಆಗಿರುವ ಈ ಸ್ಟಾಂಡ್‌ಗಳು ಮೊಬೈಲ್ ತೂಕಕ್ಕೆ ಸಮನಾಗಿ ಸ್ಪ್ರಿಂಗ್ಸ್ ರೀತಿಯಲ್ಲಿ ವರ್ತಿಸಿ. ಮೊಬೈಲ್ ಕಾಪಾಡುತ್ತದೆ.

ನಾಲ್ಕು ವರ್ಷಗಳ ಶ್ರಮ!

ನಾಲ್ಕು ವರ್ಷಗಳ ಶ್ರಮ!

ಲಿಪ್ ಫ್ರೆನ್ಜೆಲ್ ಅವರು ಈ ಮೊಬೈಲ್ ಏರ್‌ಬ್ಯಾಗ್ 'ಎಡಿ ಕೇಸ್' ಮೊಬೈಲ್ ಕೇಸ್ ಅನ್ನು ನಿರ್ಮಿಸಲು ನಾಲ್ಕು ವರ್ಷಗಳನ್ನು ತೆಗೆದುಕೊಂಡಿದ್ದಾರಂತೆ. ಮೊಬೈಲ್ ಯಾವುದೇ ರೀತಿಯಲ್ಲಿ ಬಿದ್ದರೂ ಒಡೆಯದಂತೆ ಕಾಪಾಡುವ ವಿನ್ಯಾಸವನ್ನು ನೀಡಿ, ಅತ್ಯಂತ ಚಿಕ್ಕದಾಗಿ ಮೊಬೈಲ್ ಕೇಸ್ ಅನ್ನು ನಿರ್ಮಿಸಬೇಕು ಎಂದು ಲಿಪ್ ಫ್ರೆನ್ಜೆಲ್ ಬಹಳ ಶ್ರಮ ಪಟ್ಟಿದ್ದಾರೆ.

ಪೆಂಟೆಂಟ್ ಪಡೆದಿದ್ದಾರೆ ಫ್ರೆನ್ಜೆಲ್!

ಪೆಂಟೆಂಟ್ ಪಡೆದಿದ್ದಾರೆ ಫ್ರೆನ್ಜೆಲ್!

ಫ್ರೆನ್ಜೆಲ್ ಅವರು ತನ್ನ ಈ ಎಡಿ ಕೇಸ್' ಮೊಬೈಲ್ ಕೇಸ್ ಆವಿಷ್ಕಾರವನ್ನು ಪೇಟೆಂಟ್‌ಗಾಗಿ ನೋಂದಾಯಿಸಿಕೊಂಡಿದ್ದಾರೆ. ಅವರು ಕಿಕ್‌ಸ್ಟಾರ್ಟರ್ ಗುಂಪಿನ ಫೌಂಡಿಂಗ್ ಅಭಿಯಾನದೊಂದಿಗೆ ಈ 'ಎಡಿ ಕೇಸ್' ಮಾರುಕಟ್ಟೆಗೆ ಬರಲಿದೆ. ಒಂದು ದಿನ ಇದೇ ಏರ್‌ಬ್ಯಾಗ್ ಸಾಧನವು ವೃತ್ತಿಪರ ಕ್ಯಾಮೆರಾಗಳು ಮತ್ತು ಮಸೂರಗಳಿಗೆ ಸಹ ಲಭ್ಯವಿರುತ್ತದೆ.

Best Mobiles in India

English summary
mobile case, mobile, smartphone, phone, ಮೊಬೈಲ್, ಮೊಬೈಲ್ ಸ್ಕ್ರೀನ್, ಸ್ಮಾರ್ಟ್‌ಫೋನ್, news

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X