ಸದ್ಯ ಟ್ರೆಂಡಿಂಗ್‌ನಲ್ಲಿರುವ ಸ್ಮಾರ್ಟ್‌ ಸ್ಪೀಕರ್ಸ್‌ಗಳ ಲಿಸ್ಟ್‌ ಇಲ್ಲಿದೆ ನೋಡಿ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಡಿವೈಸ್‌ಗಳು ಹೆಚ್ಚು ಟ್ರೆಂಡ್‌ ಆಗುತ್ತಿದ್ದು, ಆ ಲಿಸ್ಟ್‌ಗೆ ಆಡಿಯೋ ಸ್ಪೀಕರ್ಸ್‌ಗಳು ಸೇರಿವೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಟೆಕ್ ಕಂಪನಿಗಳು ಹಲವು ಸ್ಮಾರ್ಟ್‌ ಸ್ಪೀಕರ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಅವುಗಳಲ್ಲಿ ಕೆಲವು ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದರೇ, ಮತ್ತೆ ಕೆಲವು ದುಬಾರಿ ಬೆಲೆಯನ್ನು ಹೊಂದಿವೆ.

ಸ್ಪೀಕರ್ಸ್‌ಗಳು

ಹೌದು, ಸ್ಮಾರ್ಟ್‌ ಸ್ಪೀಕರ್ಸ್‌ಗಳು ಆಕರ್ಷಕ ಲುಕ್‌ ಜೊತೆಗೆ ಅನುಕೂಲಕರ ಫೀಚರ್ಸ್‌ಗಳನ್ನು ಪಡೆದಿವೆ. ಈ ಡಿವೈಸ್‌ಗಳು ಬ್ಲೂಟೂತ್ ಕನೆಕ್ಟಿವಿಟಿ ಮೇಲೆ ಕಾರ್ಯ ನಿರ್ವಹಿಸುತ್ತವೆ. ಕೆಲವು ಡಿವೈಸ್‌ಗಳು ಅಲೆಕ್ಸಾ ಹಾಗೂ ಗೂಗಲ್‌ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯಗಳನ್ನು ಪಡೆದಿವೆ. ಪ್ರಸಕ್ತ ವರ್ಷದಲ್ಲಿ ಕೆಲವು ಸ್ಮಾರ್ಟ್‌ ಡಿವೈಸ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಹಾಗಾದರೇ 2020ನಲ್ಲಿ ಗಮನ ಸೆಳೆದಿರುವ ಟಾಪ್‌ ಸ್ಮಾರ್ಟ್‌ ಸ್ಪೀಕರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಮೆಜಾನ್ ಇಕೋ ಸ್ಟುಡಿಯೊ

ಅಮೆಜಾನ್ ಇಕೋ ಸ್ಟುಡಿಯೊ

ಗಮನ ಸೆಳೆದ ಸ್ಮಾರ್ಟ್‌ ಸ್ಪೀಕರ್ಸ್‌ಗಳ ಪೈಕಿ ಅಮೆಜಾನ್ ಇಕೋ ಸ್ಟುಡಿಯೊ ಸಹ ಒಂದಾಗಿದೆ. ಈ ಡಿವೈಸ್‌ 5 ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, 51 ಎಂಎಂ ಮಿಡ್-ರೇಂಜ್ ಮತ್ತು 133 ಎಂಎಂ ಸಬ್ ವೂಫರ್ ವ್ಯವಸ್ಥೆಯನ್ನು ಪಡೆದಿದೆ. ಹಾಗೆಯೇ ಈ ಡಿವೈಸ್‌ ವೈಫೈ, ಬ್ಲೂಟೂತ್ ಮತ್ತು ಸಹಜವಾಗಿ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್‌ನಲ್ಲಿ ನಿರ್ಮಿಸಲಾಗಿದೆ. ಸಬ್ ವೂಫರ್ ಸಹ ಶಕ್ತಿಯುತವಾಗಿದೆ.

ಆಪಲ್‌ ಹೋಮ್‌ಪ್ಯಾಡ್‌

ಆಪಲ್‌ ಹೋಮ್‌ಪ್ಯಾಡ್‌

ಆಪಲ್‌ ಹೋಮ್‌ಪ್ಯಾಡ್‌ ಡಿವೈಸ್‌ ಒಂದು ಆಕರ್ಷಕ ಸ್ಮಾರ್ಟ್ ಸ್ಪೀಕರ್ ಆಗಿದೆ. ಈ ಡಿವೈಸ್‌ ಆಪಲ್ ಉತ್ಪನ್ನಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಇನ್ನೊಂದು ಆಕರ್ಷಕ ವಿಷಯವೆಂದರೆ ಇದು ಇತರೆ ಆಪಲ್ ಡಿವೈಸ್‌ಗಳಂತೆ ಸುಂದರ ರಚನೆ ಪಡೆದಿದೆ.

ಗೂಗಲ್‌ ಹೋಮ್‌

ಗೂಗಲ್‌ ಹೋಮ್‌

ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಸದ್ಯ ಮಾರುಕಟ್ಟೆಯಲ್ಲಿನ ಅತ್ಯುತ್ತಮ ಸ್ಮಾರ್ಟ್ ಸ್ಪೀಕರ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್ ಸ್ಪೀಕರ್ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಬರುತ್ತದೆ. ಇದನ್ನು ಬಳಸುವುದು ಸರಳವಾಗಿದೆ ಮತ್ತು ಇದನ್ನು Google ಹೋಮ್ ಅಪ್ಲಿಕೇಶನ್‌ನಿಂದ ನಿಯಂತ್ರಿಸಬಹುದು. ಗೂಗಲ್ ಪ್ಲೇ ಮ್ಯೂಸಿಕ್, ಯೂಟ್ಯೂಬ್ ಮ್ಯೂಸಿಕ್, ಸ್ಪಾಟಿಫೈನಂತಹ ಎಲ್ಲಾ ರೀತಿಯ ಸ್ಟ್ರೀಮಿಂಗ್ ಸೇವೆಗಳನ್ನು ಆಕ್ಸಸ್‌ ಮಾಡಬಹುದು.

ಸೋನಿ SRS-XB402M

ಸೋನಿ SRS-XB402M

ಸೋನಿ ಕಂಪನಿಯ ಈ ಸ್ಮಾರ್ಟ್‌ ಸ್ಪೀಕರ್‌ ರಚನೆಯು ಆಕರ್ಷಕ ಆಗಿದ್ದು, ಮುಂಭಾಗ ಮತ್ತು ಹಿಂಭಾಗದ ಫೈರಿಂಗ್ ಸ್ಪೀಕರ್‌ಗಳೊಂದಿಗೆ ಸೊಗಸಾದ ಫ್ಯಾಬ್ರಿಕ್ ಫಿನಿಶ್ ವಿನ್ಯಾಸವನ್ನು ಹೊಂದಿದೆ. ಅಲೆಕ್ಸಾಕ್ಕೆ ಸಂಪರ್ಕಿಸಲು ಸಾಧನಕ್ಕೆ ಸೋನಿ ಮ್ಯೂಸಿಕ್ ಸೆಂಟರ್ ಅಪ್ಲಿಕೇಶನ್ ಅಗತ್ಯವಿದೆ. ಒಮ್ಮೆ ಮಾಡಿದ ನಂತರ ಅದು ಸಾಮಾನ್ಯ ಅಲೆಕ್ಸಾ ಮಾಡುವ ಎಲ್ಲ ಕೆಲಸಗಳನ್ನು ಮಾಡಬಹುದು.

Best Mobiles in India

English summary
Smart speakers have come a long way since they were launched a decade after the regular Bluetooth ones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X