ಫೆಸ್ಟೀವ್‌ ಸೀಸನ್‌ನಲ್ಲಿ 'ಪವರ್‌ ಬ್ಯಾಂಕ್‌' ಖರೀದಿಸುವವರಿಗೆ ಡಬಲ್‌ ದಮಾಕಾ!

By Suneel
|

ದಿನ ಕಳೆದಂತೆ ಸ್ಮಾರ್ಟ್‌ಫೋನ್‌ಗಳು, 'ಸಿಪಿಯು, ಮೆಮೊರಿ ಮತ್ತು ಡಿಸ್‌ಪ್ಲೇ' ವಿಷಯಗಳಲ್ಲಿ ಹೆಚ್ಚು ಸ್ಮಾರ್ಟ್‌ ಆಗುತ್ತಿವೆ. ಅಲ್ಲದೇ ಅಪರಿಮಿತ ಫೀಚರ್‌ಗಳು, ಅಪ್ಲಿಕೇಶನ್‌ಗಳ ಬಳಕೆಯು ಹೆಚ್ಚಾಗುತ್ತಿದೆ. ಆಪ್‌ ಮತ್ತು ಫೀಚರ್‌ಗಳ ಬಳಕೆ ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ಗೆ ಪವರ್‌ ಹಸಿವು ಹೆಚ್ಚಾಗಿ, ಬ್ಯಾಟರಿ ಪವರ್‌ ಬ್ಯಾಕಪ್‌ ಕಡಿಮೆ ಆಗುತ್ತದೆ.

ಸ್ಮಾರ್ಟ್‌ಫೋನ್‌ಗಳಿಗೆ ಪವರ್‌ ಬ್ಯಾಂಕ್‌ಗಳು ಮಾತ್ರ ಇಂದು ಸಹಾಯಕಾರಿಯಾಗಿವೆ. ಸ್ಮಾರ್ಟ್‌ಫೋನ್‌ಗಳು ಇಂದು ಬ್ಯಾಟರಿ ಪವರ್‌ ಲಾಸ್‌ ಆಗದಂತೆ ಕಾಪಾಡಿಕೊಳ್ಳಲು ಪವರ್‌ ಬ್ಯಾಂಕ್‌ಗಳನ್ನು(Power Banks) ಹೋದಲೆಲ್ಲಾ ಕ್ಯಾರಿ ಮಾಡಬಹುದು. ಅಂದಹಾಗೆ ಹಬ್ಬದ ಸೀಸನ್‌ನಲ್ಲಿ ಪವರ್‌ ಬ್ಯಾಂಕ್‌ ಖರೀದಿಸುವವರಿಗೆ ಡಬಲ್ ದಮಾಕಾ ಆಫರ್ ಸಿಗಲಿದೆ. ಹಬ್ಬದ ಸೀಸನ್‌ನಲ್ಲಿ ಆಫರ್‌ನಲ್ಲಿ ಖರೀದಿಸಬಹುದಾದ ಟಾಪ್‌ 5 ಪವರ್‌ ಬ್ಯಾಂಕ್‌ಗಳ ಫೀಚರ್‌, ಬೆಲೆ, ಆಫರ್ ಬಗ್ಗೆ ಮಾಹಿತಿ ತಿಳಿದು ಖರೀದಿಸಬಹುದಾಗಿದೆ.

ದಿಪಾವಳಿ, ನವರಾತ್ರಿ ಅಮೆಜಾನ್‌ ಆಫರ್: ವಿಂಡೋಸ್‌ ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಶೇ.40 ರಿಯಾಯ್ತಿ

CATZ 13, 13,000mAh ಪವರ್‌ ಬ್ಯಾಂಕ್‌

CATZ 13, 13,000mAh ಪವರ್‌ ಬ್ಯಾಂಕ್‌

CATZ 13 ಪವರ್ ಬ್ಯಾಂಕ್‌ ನಮ್ಮ ಮೊದಲ ಆಯ್ಕೆಯಾಗಿದೆ. ಬೆಲೆಗೆ ತಕ್ಕಂತ ಉತ್ತಮ ಗುಣಮಟ್ಟದ ಪವರ್‌ ಬ್ಯಾಂಕ್ ಇದಾಗಿದ್ದು, ಹೆಚ್ಚಿನ ಮಟ್ಟದ ಪವರ್‌ ಸಾಮರ್ಥ್ಯ ಹೊಂದಿದೆ.
# ಟಾರ್ಚ್‌ ಆಗಿ ಬಳಸಿ : CATZ 13 ಅನ್ನು ಫ್ಲ್ಯಾಶ್‌ಲೈಟ್‌ ಆಗಿ ಬಳಸಬಹುದು

# ಸಿಂಗಲ್ ಇನ್‌ಪುಟ್ ಮತ್ತು ಡ್ಯುಯಲ್‌ ಔಟ್‌ಪುಟ್‌: ಒಂದೇ ಸಮಯದಲ್ಲಿ ಎರಡು ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದು.

#ಬಜೆಟ್‌ ಬೆಲೆಯಲ್ಲಿ ಖರೀದಿಸಿ : ಬಜೆಟ್‌ ಬೆಲೆ ರೂ.2,011 ಕ್ಕೆ ಅಮೆಜಾನ್‌ನಲ್ಲಿ ಖರೀದಿಸಬಹುದು.

Mi 20,400mAh ಪವರ್‌ ಬ್ಯಾಂಕ್‌

Mi 20,400mAh ಪವರ್‌ ಬ್ಯಾಂಕ್‌

ಚೈನೀಸ್‌ ಆಪಲ್‌ ಎಂದೇ ಕರೆಯಲ್ಪಡುವ ಶ್ಯೋಮಿ ಪವರ್‌ ಬ್ಯಾಂಕ್‌ ಪ್ರಾಡಕ್ಟ್‌ ಕ್ಷೇತ್ರಕ್ಕೂ ಕಾಲಿರಿಸಿದೆ. Mi 20,400mAh ಪವರ್‌ ಬ್ಯಾಂಕ್‌ ಪ್ರಾಡಕ್ಟ್ ಶ್ಯೋಮಿಯ ಸ್ವಂತ ಪ್ರಾಡಕ್ಟ್‌ ಆಗಿದೆ.

# Mi 20,400mAh ಬ್ಯಾಟರಿ ಯುನಿಟ್, ನಿಮ್ಮ ಫೋನ್‌, ಟ್ಯಾಬ್ಲೆಟ್‌ಗಳು, ಕ್ಯಾಮೆರಾಗಳು ಮತ್ತು ಎಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ಟ್ರಾವೆಲಿಂಗ್‌ ಸಮಯದಲ್ಲಿ ನಿರಂತರ ಪವರ್‌ನಿಂದ ಕಾಪಾಡುವ ಉತ್ತಮ ಸಾಮರ್ಥ್ಯ ಹೊಂದಿದೆ.

#ಹಲವು ಡಿವೈಸ್‌ಗಳ ಚಾರ್ಜಿಂಗ್: Mi 20,400mAh ಪವರ್‌ ಬ್ಯಾಂಕ್‌ ಒನ್‌ಪ್ಲಸ್ 3, ಮಿ 5 ಡಿವೈಸ್‌ಗಳನ್ನು 5 ಬಾರಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.
#ಬೆಲೆ: ಮಾರುಕಟ್ಟೆ ಬೆಲೆ ರೂ.2,199 ಆಗಿದ್ದು, ಮಿ ಪವರ್‌ ಬ್ಯಾಂಕ್‌ ಅಮೆಜಾನ್‌ನಲ್ಲಿ ರೂ. 1,899 ಗೆ ಖರೀದಿಗೆ ಲಭ್ಯವಿದೆ.

 CATZ Eye 4000mAh ಪವರ್‌ ಬ್ಯಾಂಕ್‌

CATZ Eye 4000mAh ಪವರ್‌ ಬ್ಯಾಂಕ್‌

CATZ Eye 4000mAh ಪವರ್‌ ಬ್ಯಾಂಕ್‌ ಟ್ರೆಂಡಿಯಸ್ಟ್ ಮತ್ತು ಆಕರ್ಷಕ ಪವರ್‌ ಬ್ಯಾಂಕ್‌ ಆಗಿದೆ. ಇದರಲ್ಲಿ ಎಲ್‌ಇಡಿ ಲೈಟ್‌ ಡಿಸ್‌ಪ್ಲೇ ಸಹ ಇದೆ.

# ಬಜೆಟ್‌ ಬೆಲೆಯಲ್ಲಿ ಪವರ್‌ ಬ್ಯಾಂಕ್‌ ಖರೀದಿಸಲು ಬಯಸುವವರು CATZ Eye 4000mAh ಪವರ್‌ ಬ್ಯಾಂಕ್‌ ಖರೀದಿಸಬಹುದಾಗಿದೆ. ಹಗುರ ತೂಕ, ಸುಲಭವಾಗಿ ಕ್ಯಾರಿ ಮಾಡಬಹುದು. ಕಪ್ಪು ಬಣ್ಣದಲ್ಲಿ ಲಭ್ಯವಿರುವ ಇದರ ತೂಕ ಕೇವಲ 159 ಗ್ರಾಂ ಇದೆ.

# ಐಫೋನ್ 6 ಮತ್ತು 6 ಪ್ಲಸ್‌ ಅನ್ನು 1.5 ಬಾರಿ , ಸ್ಯಾಮ್‌ಸಂಗ್ ಎಸ್‌6 ಅನ್ನು 1.5 ಬಾರಿ, ಎಚ್‌ಟಿಸಿ ಡಿಸೈರ್ ಅನ್ನು 4.5 ಬಾರಿ ಮತ್ತು ಸೋನಿ ಎಕ್ಸ್‌ಪೇರಿಯಾ ಸೀರೀಸ್ ಡಿವೈಸ್‌ಗಳನ್ನು 2 ಬಾರಿ ಚಾರ್ಜ್ ಮಾಡುವ ಸಾಮಾರ್ಥ್ಯ ಹೊಂದಿದೆ.

# ಖರೀದಿ ಬೆಲೆ: ಶೇ.50 ಡಿಸ್ಕೌಂಟ್‌ನೊಂದಿಗೆ ರೂ. 749 ಕ್ಕೆ ಈ ಹಬ್ಬದ ಸೀಸನ್‌ನಲ್ಲಿ ಖರೀದಿಸಬಹುದಾಗಿದೆ.

PTron Gusto 3000mAh ಪವರ್‌ ಬ್ಯಾಂಕ್‌

PTron Gusto 3000mAh ಪವರ್‌ ಬ್ಯಾಂಕ್‌

ಶರ್ಟ್‌ ಮತ್ತು ಪ್ಯಾಟ್‌ಗಳ ಜೇಬಿನಲ್ಲಿ ಕ್ಯಾರಿ ಮಾಡುವಂತಹ ಸ್ಲಿಮ್ ಪವರ್‌ ಬ್ಯಾಂಕ್‌ಗಾಗಿ ಹುಡುಕಾಟ ಮಾಡುತ್ತಿದ್ದಲ್ಲಿ PTron Gusto ನಿಮಗಾಗಿ ರೆಡಿ ಇದೆ.

# ಕೇವಲ 50 ಗ್ರಾಂ ಇದೆ.
# ಮೈಕ್ರೋ USB ಕೇಬಲ್‌ನಿಂದ ಅಭಿವೃದ್ದಿ ಪಡಿಸಿದ್ದು ಮತ್ತು ಎಂಬಡೆಡ್ ಕನೆಕ್ಟರ್‌ನಿಂದ ಎಲ್ಲಾ ಆಂಡ್ರಾಯ್ಡ್ ಮತ್ತು ಐಓಎಸ್ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳನ್ನು ಚಾರ್ಜ್‌ ಮಾಡಬಹುದು.

# ಇದನ್ನು USB ಕೇಬಲ್‌ಗೆ ಕನೆಕ್ಟ್ ಮಾಡಲು ಆಗುವುದಿಲ್ಲ. ಅಮೆಜಾನ್‌ನಲ್ಲಿ ರೂ.599 ಕ್ಕೆ ಖರೀದಿಸಬಹುದು.

 ಒನ್‌ಪ್ಲಸ್ 10,000mAh ಪವರ್ ಬ್ಯಾಂಕ್‌

ಒನ್‌ಪ್ಲಸ್ 10,000mAh ಪವರ್ ಬ್ಯಾಂಕ್‌

ಒನ್‌ಪ್ಲಸ್ 10,000mAh ಪವರ್ ಬ್ಯಾಂಕ್‌, ಮಿ ಮತ್ತು ಇತರೆ ಪ್ರಖ್ಯಾತ ಪವರ್‌ ಬ್ಯಾಂಕ್‌ಗಳ ರೀತಿಯಲ್ಲಿ ಹಲವು ವ್ಯತ್ಯಾಸಗಳಲ್ಲಿ ಲಭ್ಯವಿಲ್ಲ. ಇದು 222 ಗ್ರಾಂ ಇದ್ದು, ಕ್ಯಾರಿ ಮಾಡುವವರಿಗೆ ಇಷ್ಟವಾಗುವುದಿಲ್ಲ.

# ಒನ್‌ಪ್ಲಸ್ 10,000mAh ಪವರ್ ಬ್ಯಾಂಕ್‌ ಅನ್ನು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ರೂ.1,795 ರೂಗೆ ಖರೀದಿಸಬಹುದು.

Best Mobiles in India

Read more about:
English summary
Top 5 Power Banks to Look At This Festive Season. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X