ಭಾರತದಲ್ಲಿ ಲಭ್ಯವಿರುವ ಟಾಪ್ 5 ಸೂಲಾರ್ ಪವರ್‌ಬ್ಯಾಂಕ್ ಇಲ್ಲಿವೆ!!..ಯಾವುವು ಗೊತ್ತಾ?

ಸೌರ ಶಕ್ತಿಯನ್ನು ಬಳಸಿಕೊಂಡು ಉಪಯೋಗಿಸಬಹುದಾದ ಹಲವು ಉತ್ಪನ್ನಗಳು ನಮ್ಮ ಸೇವೆಗೆ ಲಭ್ಯವಿವೆ. ಅವುಗಳಲ್ಲಿ ಒಂದು ಸೂಲಾರ್ ಪವರ್‌ಬ್ಯಾಂಕ್.!!

|

ತಂತ್ರಜ್ಞಾನ ಬೆಳವಣೆಗೆಗಳಲ್ಲಿವಣೆಗೆ ಜೊತೆಗೆ ಪರಿಸರಸ್ನೇಹಿ ತಂತ್ರಜ್ಞಾನ ಬೆಳವಣಿಗೆಯೂ ಸಹ ಮುಖ್ಯವಾಗಿರುತ್ತದೆ. ಆದರೆ, ಪರಿಸರವನ್ನೇ ತಂತ್ರಜ್ಞಾನವಾಗಿ ಬದಲಾಯಿಸಿಕೊಂಡರೆ ಎಷ್ಟು ಉತ್ತಮ ಅಲ್ಲವೇ?..ಅದಕ್ಕೆ ಒಂದು ಸೂಕ್ತ ಉದಾಹರಣೆಯೇ ಸೋಲಾರ್ ತಂತ್ರಜ್ಞಾನ.! ಇಂತಹ ಸೌರ ಶಕ್ತಿಯನ್ನು ಬಳಸಿಕೊಂಡು ಉಪಯೋಗಿಸಬಹುದಾದ ಹಲವು ಉತ್ಪನ್ನಗಳು ನಮ್ಮ ಸೇವೆಗೆ ಲಭ್ಯವಿವೆ. ಅವುಗಳಲ್ಲಿ ಒಂದು ಸೂಲಾರ್ ಪವರ್‌ಬ್ಯಾಂಕ್.!!

ಸೂರ್ಯನ ಬೆಳಕನ್ನೇ ವಿದ್ಯುತ್ ಶಕ್ತಿಯನ್ನಾಗಿ ಬದಲಾಯಿಸಿ ನಿಮ್ಮ ಮೊಬೈಲ್‌ಗೆ ಯಾವಾಗಲೂ ಚಾರ್ಜ್ ನೀಡುವಂತಹ ಇಂತಹ ಪವರ್‌ಬ್ಯಾಂಕ್‌ಗಳು ಹೆಚ್ಚು ಅವಶ್ಯಕವಾಗಿದ್ದು, ಹೆಚ್ಚು ಪ್ರಯಾಣಿಕ ಜನರಿಗೆ ಬಹಳ ಉಪಯೋಗವಾಗಿವೆ.! ಹಾಗಾದರೆ, ಯಾವ ಸೋಲಾರ್ ಪವರ್‌ಬ್ಯಾಂಕ್ ಬ್ಯಾಂಕ್ ಖರೀದಿಸಬೇಕು? ಅವುಗಳ ಕಾರ್ಯನಿರ್ವಹಣೆ ಹೇಗಿದೆ? ಎಂಬುದನ್ನು ಕಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

#5 ಅಮೆಜರ್ 83981 ಸೂಲಾರ್ ಪವರ್‌ಬ್ಯಾಂಕ್!!

#5 ಅಮೆಜರ್ 83981 ಸೂಲಾರ್ ಪವರ್‌ಬ್ಯಾಂಕ್!!

ಅಮೆಜರ್ 83891' ಪವರ್‌ಬ್ಯಾಂಕ್ ಒಂದು ಉತ್ತಮ ಸೂಲಾರ್ ಪವರ್‌ಬ್ಯಾಂಕ್ ಆಗಿದ್ದು, ಪಾಲಿಮರ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿರುವ ಈ ಪವರ್‌ಬ್ಯಾಂಕ್ 3500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ.! ಸೂರ್ಯನ ಬೆಳಕಿನಲ್ಲಿ ಚಾರ್ಜ್ ಆಗುವ ಈ ಪವರ್‌ಬ್ಯಾಂಕ್ ಅನ್ನು USB ಅಥವಾ AC ಅಡಾಪ್ಟರ್ ಮೂಲಕ ಕಂಪ್ಯೂಟರ್ ಮೂಲಕ ಚಾರ್ಜ್ ಮಾಡಬಹುದು!!
ಅಮೆಜರ್ 83981 ಪವರ್‌ಬ್ಯಾಂಕ್ ಕ್ರಮವಾಗಿ 3,449 ಮತ್ತು ರೂ 4,549 ಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್.ಕಾಂನಲ್ಲಿ ಲಭ್ಯವಿವೆ.

#4 IFITech 15000mAh ಸೂಲಾರ್ ಪವರ್ ಬ್ಯಾಂಕ್

#4 IFITech 15000mAh ಸೂಲಾರ್ ಪವರ್ ಬ್ಯಾಂಕ್

ಡ್ಯುಯಲ್ ಯುಎಸ್‌ಬಿ ಪೋರ್ಟಬಲ್ IFITech ಸೂಲಾರ್ ಪವರ್ ಬ್ಯಾಂಕ್ ಅತ್ಯುತ್ತಮ ಬ್ಯಾಟರಿಶಕ್ತಿಯನ್ನು ಹೊಂದಿದ್ದು, 15000mAh ಸಾಮರ್ಥ್ಯದ ಶಕ್ತಿ ಹೊಂದಿದೆ.ಇಂದೇ ಸಮಯದಲ್ಲಿ 2 ಸ್ಮಾರ್ಟ್‌ಫೋನ್‌ಗಳಿಗೆ ಬಹುಬೇಗ ಚಾರ್ಜಿಂಗ್ ಮಾಡಲು ಇದರಿಂದ ಸಾಧ್ಯವಾಗುತ್ತದೆ. ಲಿ-ಐಯಾನ್ ಪಾಲಿಮರ್‌ ಉತ್ಪನ್ನವಾಗಿರುವ ಈ ಸೂಲಾರ್ ಪವರ್ ಬ್ಯಾಂಕ್ ಉತ್ತಮ ಗುಣಮಟ್ಟದ ಮತ್ತು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದೆ.!! IFITech® 15000mAh ಸೌರ ಪವರ್ ಬ್ಯಾಂಕ್ ಅಮೆಜಾನ್ ನಲ್ಲಿ 2,950 ರೂ. ಬೆಲೆಯನ್ನು ಹೊಂದಿದೆ.!!

#3 ಕೂಲ್‌ನೆಟ್ ಹೈ ಪರ್ಫಾರ್ಮೆನ್ಸ್ ಸೂಲಾರ್ ಚಾರ್ಜರ್!!

#3 ಕೂಲ್‌ನೆಟ್ ಹೈ ಪರ್ಫಾರ್ಮೆನ್ಸ್ ಸೂಲಾರ್ ಚಾರ್ಜರ್!!

ಡ್ಯುಯಲ್ ಯುಎಸ್‌ಬಿ ಔಟ್‌ಪುಟ್ ಸೂಲಾರ್ ಪಚರ್‌ಬ್ಯಾಂಕ್ ಇದಾಗಿದ್ದು, 13000mAh ಬ್ಯಾಟರಿ ಮತ್ತು ಆಟೊಕಟ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ. ಶಾರ್ಟ್ ಸರ್ಕ್ಯೂಟ್‌ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ರಕ್ಷಿಸಲ ಈ ಸೋಲಾರ್‌ಪವರ್‌ಬ್ಯಾಂಕ್ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ. ಜಿತೆಗೆ ಎಲ್ಇಡಿ ಫ್ಲಾಶ್ ಲೈಟ್ ಸಹ ಸೋಲಾರ್‌ ಪವರ್‌ಬ್ಯಾಂಕ್‌ನಲ್ಲಿದೆ.!! ಈ ಪವರ್‌ಬ್ಯಾಂಕ್‌ ಆನ್‌ಲೈನ್‌ನಲ್ಲಿ 1,500 ರೂ.ಗೆ ಲಭ್ಯವಿದೆ.!!

 #2 ವೋಲ್ಟಾಯಿಕ್ AMP ಸೂಲಾರ್ ಪವರ್‌ಬ್ಯಾಂಕ್!!

#2 ವೋಲ್ಟಾಯಿಕ್ AMP ಸೂಲಾರ್ ಪವರ್‌ಬ್ಯಾಂಕ್!!

4,000 mAh, 15Wh ಬ್ಯಾಟರಿ ಶಕ್ತಿಯನ್ನು ಹೊಂದಿರುವ ವೋಲ್ಟಾಯಿಕ್ AMP ಸೂಲಾರ್ ಪವರ್‌ಬ್ಯಾಂಕ್ ಮೊನೊಕ್ರಿಸ್ಟಲಿನ್ ಸೌರ ಫಲಕಗಳನ್ನು ಹೊಂದಿದೆ.ಪವರ್‌ಬ್ಯಾಂಕ್ ಸಂಪೂರ್ಣ ಜಲನಿರೋಧಕವಾಗಿದ್ದು, ಪೋರ್ಟಬಲ್ V15 ಬ್ಯಾಕಪ್ ಬ್ಯಾಟರಿಯನ್ನು ಒಳಗೊಂಡಿದೆ. ಈ ಪವರ್‌ಬ್ಯಾಂಕ್ ಆನ್‌ಲೈನ್‌ನಲ್ಲಿ $ 89 ಗೆ ಲಭ್ಯವಿದೆ ( ಸುಮಾರು ರೂ. 5,800)

#1 Reliable 15000 mAh ಹೈ ಪರ್ಫಾರ್ಮೆನ್ಸ್ ಸೋಲಾರ್ ಪವರ್ ಬ್ಯಾಂಕ್

#1 Reliable 15000 mAh ಹೈ ಪರ್ಫಾರ್ಮೆನ್ಸ್ ಸೋಲಾರ್ ಪವರ್ ಬ್ಯಾಂಕ್

12000mah ಶಕ್ತಿ ಹೊಂದಿರುವ, ಹಾಗೂ ಎಸಿ ಅಡಾಪ್ಟರ್‌ನಿಂದ ವೇಗವಾಗಿ ಚಾರ್ಜಿಂಗ್ ನೀಡುವ ಪವರ್ ಬ್ಯಾಂಕ್ ಇದಾಗಿದೆ. ಸೂರ್ಯನ ಬೆಳಕು ಅಥವಾ ಯಾವುದೇ ರೀತಿಯ ಬೆಳಕಿನಲ್ಲಿಯೂ ಚಾರ್ಜ್ ಆಗುವ ಸಾಮರ್ಥ್ಯವನ್ನು ಈ ಪವರ್‌ಬ್ಯಾಂಕ್ ಹೊಂದಿದ್ದು, ಸುರಕ್ಷಿತ ಚಾರ್ಜಿಂಗ್ ಅನುಭವವನ್ನು ನೀಡಲಿದೆ. ಈ ಪವರ್ ಬ್ಯಾಂಕ್ ಬೆಲೆ ಅಮೆಜಾನ್‌ನಲ್ಲಿ 1,249 ರೂ.ಬೆಲೆಯನ್ನು ಹೊಂದಿದೆ.!!

<strong>ಭಾರತದಲ್ಲಿ ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ ಹೇರುವ ಸಾಧ್ಯತೆ!!?..ಏಕೆ..ಏನಾಯ್ತು?</strong>ಭಾರತದಲ್ಲಿ ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ ಹೇರುವ ಸಾಧ್ಯತೆ!!?..ಏಕೆ..ಏನಾಯ್ತು?

Best Mobiles in India

English summary
Solar power bank is essential in situations where there is no availability of electricity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X