ನಿಮ್ಮ ಸ್ಮಾರ್ಟ್‌ಫೋನ್ ಜೊತೆಗಿರಲಿ ಈ ಆಕ್ಸಸರೀಸ್‌ಗಳು!

|

ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅವಶ್ಯ ಡಿವೈಸ್‌ ಆಗಿದ್ದು, ಹಾಗೆಯೇ ಸ್ಮಾರ್ಟ್‌ಫೋನ್ ಜೊತೆಗೆ ಕೆಲವು ಇತರೆ ಡಿವೈಸ್‌ಗಳು ಅಷ್ಟೇ ಅವಶ್ಯ ಅನಿಸುತ್ತವೆ. ಈ ನಿಟ್ಟಿನಲ್ಲಿ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ ಜೊತೆಗೆ ಸ್ಕ್ರೀನ್‌ ಗಾರ್ಡ್‌, ಬ್ಯಾಕ್‌ ಕವರ್, OTG ಕೇಬಲ್, ಆಡಿಯೊ ಕನೆಕ್ಟರ್ ಕೇಬಲ್, ಪೆನ್‌ಡ್ರೈವ್‌, ಹೀಗೆ ಕೆಲವೊಂದು ಪರಿಕರಗಳನ್ನು ಸಹ ಖರೀದಿಸುತ್ತಾರೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತಾರವಾಗಿ ಬೆಳೆದಿದ್ದು, ಹೊಸ ಸ್ಮಾರ್ಟ್‌ಫೋನ್‌ಗಳಂತೆ ಇದೀಗ ನೂತನ ಆಕ್ಸಸರಿಸಗಳು ಲಗ್ಗೆ ಇಡುತ್ತಿವೆ. ಆದರೆ ಎಲ್ಲ ಆಕ್ಸಸರಿಸಗಳು ಅವಶ್ಯ ಅನಿಸುವುದಿಲ್ಲ. ಆದರೆ ಕೆಲವು ಪರಿಕರಗಳು ಅವಶ್ಯ ಅನಿಸುತ್ತವೆ. ಈ ನಿಟ್ಟಿನಲ್ಲಿ ಗ್ರಾಹಕರು ಫೋನ್‌ನೊಂದಿಗೆ ಕೆಲವು ಆಕ್ಸಸರಿಸಗಳನ್ನು ಹೊಂದಬಯಸುತ್ತಾರೆ. ಅಗ್ಗದ ಪ್ರೈಸ್‌ನಲ್ಲಿ ಫೋನ್ ಆಕ್ಸಸರಿಗಳು ಲಭ್ಯ. ಅಂತಹ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಟೆಂಪರ್‌ ಗ್ಲಾಸ್‌

ಟೆಂಪರ್‌ ಗ್ಲಾಸ್‌

ಪ್ರತಿ ಸ್ಮಾರ್ಟ್‌ಫೋನಿನ ಸ್ಕ್ರೀನ್‌ಗೂ ಸೆಟ್‌ ಆಗುವ ಟೆಂಪರ್‌ ಗ್ಲಾಸ್‌ ಮಾರುಕಟ್ಟೆಯಲ್ಲಿ ಲಭ್ಯ. ಗ್ರಾಹಕರು ಆನ್‌ಲೈನ್ ತಾಣಗಳ ಮೂಲಕವು ಈ ಗ್ಲಾಸ್‌ ತರಸಬಹುದು. 200ರೂ. ಒಳಗೆ ಲಭ್ಯವಾಗಲಿವೆ.

ಫೋನ್ ಬ್ಯಾಕ್‌ ಕವರ್

ಫೋನ್ ಬ್ಯಾಕ್‌ ಕವರ್

ಪ್ರತಿ ಫೋನಿಗೂ ಕಂಫರ್ಟ್‌ ಆಗಿ ಫಿಟ್ ಆಗುವ ತರಹೇವಾರಿ ಬ್ಯಾಕ್‌ ಕವರ್‌ ಆನ್‌ಲೈನ್‌ ತಾಣಗಳಲ್ಲಿ ಲಭ್ಯ ಇವೆ. ಪ್ಲೇನ್, ಡಿಸೈನ್, ಮಾದರಿಗಳಲ್ಲಿಯೂ ಲಭ್ಯ.

ಎಕ್ಸ್‌ಟ್ರಾ ಕ್ಯಾಮೆರಾ ಲೆನ್ಸ್‌

ಎಕ್ಸ್‌ಟ್ರಾ ಕ್ಯಾಮೆರಾ ಲೆನ್ಸ್‌

ಇಂದಿನ ಫೋನ್‌ಗಳು ಹೆಚ್ಚಿನ ಸೆನ್ಸಾರ್ ಕ್ಯಾಮೆರಾ ಹೊಂದಿದ್ದರು, ಹೆಚ್ಚಿನ ಲೆನ್ಸ್‌ ಅಗತ್ಯಕ್ಕಾಗಿ ಲೆನ್ಸ್‌ಗಳು ಕಿಟ್ ಲಭ್ಯ. ಭಿನ್ನ ದರಗಳಲ್ಲಿ ಈ ಲೆನ್ಸ್‌ ಕಿಟ್‌ಗಳು ಸಿಗುತ್ತವೆ.

OTG ಕೇಬಲ್

OTG ಕೇಬಲ್

ಸ್ಮಾರ್ಟ್‌ಫೋನ್‌ ಜೊತೆಗೆ ಪೆನ್‌ಡ್ರೈವ್ ಕನೆಕ್ಟ್ ಮಾಡಲು ಈ ಓಟಿಜಿ ಕೇಬಲ್ ನೆರವಾಗಲಿದೆ. ಅತೀ ಅಗ್ಗದ ಬೆಲೆಯಲ್ಲಿ ಈ ಓಟಿಜಿ ಕೇಬಲ್ ಲಭ್ಯ.

ಫೋನ್ ಸ್ಟ್ಯಾಂಡ್‌

ಫೋನ್ ಸ್ಟ್ಯಾಂಡ್‌

ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ TIZUM ಫೋಲ್ಡೆಬಲ್ ಡೆಸ್ಕ್‌ಟಾಪ್‌ ಸ್ಟ್ಯಾಂಡ್‌ ಬೆಲೆಯು 149ರೂ. ಆಗಿದೆ. ಈ ಸ್ಟ್ಯಾಂಡ್‌ನಲ್ಲಿ ಫೋನ್ ಇಟ್ಟು ವಿಡಿಯೊ ವೀಕ್ಷಣೆ ಮಾಡಲು ಪೂರಕವಾಗಿದೆ.

ಸೆಲ್ಫಿ ಸ್ಟಿಕ್

ಸೆಲ್ಫಿ ಸ್ಟಿಕ್

ಆನ್‌ಲೈನ್ ತಾಣಗಳಲ್ಲಿ ಹಲವು ಡಿವೈಸ್‌ಗಳಲ್ಲಿ ತರಹೇವಾರಿ ಸೆಲ್ಫಿ ಸ್ಟಿಕ್ ಗಳು ಲಭ್ಯವಿವೆ.

Adhesive cable clips- ಅಂಟುವ ಕೇಬಲ್ ಕ್ಲಿಪ್

Adhesive cable clips- ಅಂಟುವ ಕೇಬಲ್ ಕ್ಲಿಪ್

ಈ ಕೇಬಲ್ ಕ್ಲಿಪ್‌ಗಳನ್ನು ಗೋಡೆಗೆ ಸುಲಭವಾಗಿ ಅಂಟಿಸಬಹುದಾಗಿದೆ. ಡೆಕೊರೇಶನ್ ಸಂದರ್ಭಗಳಲ್ಲಿ ಈ ಕ್ಲಿಪ್ ಹೆಚ್ಚು ಉಪಯುಕ್ತ ಅನಿಸಲಿದೆ. ಅಮೆಜಾನ್ ತಾಣದಲ್ಲಿ ಈ ಕ್ಲಿಪ್ ಪ್ಯಾಕ್ ಬೆಲೆಯು 245ರೂ. ಆಗಿದೆ. (ಈ ಪ್ಯಾಕ್ ಒಟ್ಟು 20 ಕ್ಲಿಪ್‌ಗಳು ಮತ್ತು 24 ಮಿನಿ ಸ್ಟ್ರಿಪ್ಸ್).

spray n' clean device- ಸ್ಕ್ರೀನ್ ಕ್ಲಿನ್ ಡಿವೈಸ್

spray n' clean device- ಸ್ಕ್ರೀನ್ ಕ್ಲಿನ್ ಡಿವೈಸ್

ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್ ಮೇಲಿಂದ ಮೇಲೆ ಕ್ಲಿನ್ ಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಸ್ಕ್ರೀನ್ ಕ್ಲಿನ್ ಡಿವೈಸ್ ಗ್ರಾಹಕರಿಗೆ ಉತ್ತಮ ಅನಿಸಲಿದೆ. ಮುಖ್ಯವಾಗಿ ಈ ಡಿವೈಸ್‌ ಮೂಲಕ ಗ್ಯಾಡ್ಜೆಟ್ಸ್‌ ಸ್ಕ್ರೀನ್‌ ಸುಲಭವಾಗಿ ಕ್ಲಿನ್ ಮಾಡಬಹುದು. ಅಮೆಜಾನ್‌ನಲ್ಲಿ ಇದರ ಬೆಲೆಯು 400ರೂ. ಆಗಿದೆ.

Best Mobiles in India

English summary
Here are the 7 best smartphone accessories.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X