'ಲ್ಯಾಪ್‌ಟಾಪ್' ಖರೀದಿಸುವಾಗ ನೀವು ಮಾಡಲೇಬಾರದ ತಪ್ಪುಗಳು!

|

ಒಂದು ಫೋನ್ ಖರೀದಿಸಿ ಅದು ನಮಗೆ ಬೇಜಾರಾದರೆ ಅದನ್ನು ಬದಲಿಸಿಬಿಡಬಹುದು. ಆದರೆ, ಒಂದು ಲ್ಯಾಪ್‌ಟಾಪ್ ಅನ್ನು ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ಭಾರೀ ಹಣ ತೆತ್ತುಖರೀದಿಸಿದ ಲ್ಯಾಪ್‌ಟಾಪ್ ಇಷ್ಟವಾಗದಿದ್ದರೆ, ಅದನ್ನು ಬದಲಿಸಲೂ ಆಗದು ಅಥವಾ ಕಡಿಮೆ ಬೆಲೆಗೆ ಮಾರಲೂ ಆಗದು. ಹಾಗಾಗಿ, ಲ್ಯಾಪ್‌ಟಾಪ್ ಖರೀದಿಸುವಾಗ ಎಚ್ಚರವಾಗಿರಬೇಕು.

ನೀವು ಲ್ಯಾಪ್‌ಟಾಪ್‌ ಖರೀದಿಸುವ ಯೋಚನೆಯಲ್ಲಿದ್ದರೆ ಖಂಡಿತವಾಗಿ ನೀವು ಗೊಂದಲಕ್ಕೆ ಸಿಲುಕಿಕೊಂಡಿರಬಹುದು. ಏಕೆಂದರೆ, ಯಾವ ಕಂಪನಿಯ ಹಾಗೂ ಎಷ್ಟು ಸಾಮರ್ಥ್ಯದ (ಕಾನ್ಫಿಗರೇಷನ್) ಲ್ಯಾಪ್‌ಟಾಪ್‌ ಖರೀದಿಸಬೇಕು?, ಲ್ಯಾಪ್‌ಟಾಪ್ ಹಾರ್ಡ್‌ವೇರ್ ಹೇಗಿದ್ದರೆ ಚೆನ್ನ?, ಮತ್ತು ಯಾವ ಉದ್ದೇಶಕ್ಕೆ ಲ್ಯಾಪ್‌ಟಾಪ್ ಬೇಕು ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ.

'ಲ್ಯಾಪ್‌ಟಾಪ್' ಖರೀದಿಸುವಾಗ ನೀವು ಮಾಡಲೇಬಾರದ ತಪ್ಪುಗಳು!

ಹಾಗಾಗಿ, ಇಂದಿನ ಲೇಖನದಲ್ಲಿ ಪರದೆ ಮತ್ತು ಮಲ್ಟಿಮೀಡಿಯಾ ಕನೆಕ್ಟಿವಿಟಿ, ಅಪ್ಲಿಕೇಶನ್ ಬಳಕೆ ಮತ್ತು ವೃತ್ತಿಯ ಹಾಗೂ ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್‌ ಮತ್ತು ಪರದೆಯನ್ನು ಮೂರು ವರ್ಗಗಳಾಗಿ ವಿಂಗಡಿಸಿ ನಿಮ್ಮ ಲ್ಯಾಪ್‌ಟಾಪ್ ಖರೀದಿಗೆ ಸಹಾಯವಾಗುವ ಇಚ್ಚೆ ನಮ್ಮದು. ಇವುಗಳಲ್ಲಿ ನಿಮಗೆ ಯಾವುದು ಅನುಕೂಲಕರ ಎಂಬುದನ್ನು ತೀರ್ಮಾನಿಸಿ, ಆಯ್ಕೆ ಮಾಡಿಕೊಳ್ಳಿ.

ಲ್ಯಾಪ್‌ಟಾಪ್‌ ಖರೀದಿಸುವಾಗ ಈ ಮುಖ್ಯ ವಿಷಯ ನೆನಪಿನಲ್ಲಿರಲಿ!

ಲ್ಯಾಪ್‌ಟಾಪ್‌ ಖರೀದಿಸುವಾಗ ಈ ಮುಖ್ಯ ವಿಷಯ ನೆನಪಿನಲ್ಲಿರಲಿ!

ಮೊದಲಿಗೆ, ನೀವು ಯಾವ ಉದ್ದೇಶಕ್ಕಾಗಿ ಲ್ಯಾಪ್‌ಟಾಪ್ ಖರೀದಿಸಬೇಕೆಂದಿದ್ದಿರಿ ಎಂಬುದನ್ನು ನೀವೇ ಸ್ಪಷ್ಟಪಡಿಸಿಕೊಳ್ಳಬೇಕು. ನಂತರ ಹಾರ್ಡ್‌ವೇರ್. ಹೀಗೆ ಲ್ಯಾಪ್‌ಟಾಪ್ ಖರೀದಿಸಲು ತಿಳಿಯಬೇಕಾದ ಪ್ರಮುಖವಾದಂತಹ ವಿಷಯಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ. ಮುಂದಿನ ಸ್ಲೈಡರ್‌ಗಳಲ್ಲಿ ಲ್ಯಾಪ್‌ಟಾಪ್ ಖರೀದಿಗೆ ಬೇಕಾದ ಮುಖ್ಯ ಅಂಶಗಳನ್ನು ನೀಡಲಾಗಿದೆ.

ಟೆಕ್ಸ್ಟ್ ಮತ್ತು ಇಂಟರ್ನೆಟ್!

ಟೆಕ್ಸ್ಟ್ ಮತ್ತು ಇಂಟರ್ನೆಟ್!

ಕೇವಲ ಟೈಪಿಂಗ್ ಮತ್ತು ಇಂಟರ್‌ನೆಟ್‌ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಸಾಧಾರಣ ಸಾಮರ್ಥ್ಯದ ಹಾರ್ಡ್‌ವೇರ್‌ ಲ್ಯಾಪ್‌ಟಾಪ್ ಸಾಕಾಗುತ್ತದೆ. ಉದಾಹರಣೆಗೆ ಸೆಕೆಂಡಿಗೆ 2.0 ghz ಸ್ಪೀಡ್ ಇರುವ ಐ-3 ಪ್ರೊಸೆಸರ್, 3ಜಿಬಿ ರಾಮ್, ಇನ್‌ಬಿಲ್ಟ್ ಗ್ರಾಫಿಕ್ಸ್, ನಿಮ್ಮ ಅವಶ್ಯಕತೆಗೆ ಬೇಕಾದ ಸಾಮರ್ಥ್ಯದ ಹಾರ್ಡ್ ಡ್ರೈವ್ ಸಾಕು. (ಕಡಿಮೆ ಎಂದರೆ 500 ಜಿಬಿ ಅಥವಾ ಹೆಚ್ಚು ಬೇಕಾದಲ್ಲಿ 1 ಟಿಬಿ). ಇನ್ನು ಟೆಕ್ಸ್ಟ್ ಬಳಕೆದಾರರಿಗೆ 13ಇಂಚಿನ, ರೆಡಿ ಎಚ್‌ಡಿ (730x 1280) ಡಿಸ್‌ಪ್ಲೇ ಸಾಕಾದರೂ, ಹೆಚ್ಚು ಸಿನಿಮಾ ನೋಡುವ ಆಸಕ್ತಿ ಇದ್ದರೆ ಎಚ್‌ಡಿ (1090x1920) ಪರದೆ ಇರುವ ಲ್ಯಾಪ್‌ಟಾಪ್ ಅನ್ನು ಆಯ್ದುಕೊಳ್ಳಿ.

ಫೋಟೊ ವರ್ಕ್ ಮತ್ತು ಡಿಸೈನಿಂಗ್

ಫೋಟೊ ವರ್ಕ್ ಮತ್ತು ಡಿಸೈನಿಂಗ್

ನಿಮಗೆ ಲ್ಯಾಪ್‌ಟಾಪ್ ಫೋಟೊ ಹಾಗೂ ಡಿಸೈನಿಂಗ್ ವಿಚಾರಕ್ಕೆ ಬಳಸುವ ಉದ್ದೇಶವಿದ್ದರೆ, ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಹೆಚ್ಚು ಸಾಮರ್ಥ್ಯದ ಹಾರ್ಡ್‌ವೇರ್ ಅಗತ್ಯವಿರುತ್ತದೆ. ಅದಕ್ಕಾಗಿ 6 ರಿಂದ 8ನೇ ಜನರೇಷನ್‌ನಿನ ಸೆಕೆಂಡಿಗೆ 2.7 ghz ಅಥವಾ ಅದಕ್ಕಿಂತ ಅಧಿಕ ಕ್ಲಾಕ್ ಸ್ವೀಡಿರುವ ಐ-5 ಅಥವಾ ಐ- 7 ಪ್ರೊಸೆಸರ್ ಲ್ಯಾಪ್‌ಟಾಪ್ ಖರೀದಿಸಿ. 4 ರಿಂದ 8 ಜಿಬಿ RAM, 1 ಟಿಬಿ ಹಾರ್ಡ್ ಡ್ರೈವ್ ಮತ್ತು 1 ಅಥವಾ 2 ಜಿಬಿ ಗ್ರಾಫಿಕ್ಸ್ ಅವಶ್ಯಕತೆ ಇರುತ್ತದೆ .ಫೋಟೊ ಹಾಗೂ ಡಿಸೈನಿಂಗ್ ಬಳಕೆಗೆ 15 ಇಂಚಿನ ಎಚ್‌ಡಿ (1090x1920) ಪರದೆ ಅವಶ್ಯಕ.

ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್

ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್

ಮೊದಲೆರಡು ಉದ್ದೇಶಗಳಿಗಿಂತ ವಿಡಿಯೊ ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್ ಕೆಲಸಕ್ಕೆ ಲ್ಯಾಪ್‌ಟಾಪ್ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಅತಿ ಹೆಚ್ಚು ಸಾಮರ್ಥ್ಯದ ಹಾರ್ಡ್‌ವೇರ್ ಅಗತ್ಯವಿರುತ್ತದೆ. ಸೆಕೆಂಡಿಗೆ 2.8ghz ಸ್ಪೀಡ್ ಇರುವ (ಅಥವಾ ಅದಕ್ಕಿಂತ ಹೆಚ್ಚಿನ) ಐ-7 ಅಥವಾ ಕ್ಸಿಯಾನ್ ಪ್ರೊಸೆಸರ್, 8 ರಿಂದ 16 ಜಿಬಿ ರಾಮ್, 500 ಜಿಬಿ ಎಸ್ಎಸ್‌ಡಿ ಹಾರ್ಡ್ ಡ್ರೈವ್ ಮತ್ತು 2ಜಿಬಿ ಗ್ರಾಫಿಕ್ಸ್ ಇದ್ದರೆ ಉತ್ತಮ ಆಯ್ಕೆ ಎನ್ನಬಹುದು. ಗ್ರಾಫಿಕ್ಸ್ ಮತ್ತು ಗೇಮಿಂಗ್ ಬಳಕೆಗೆ 15 ಇಂಚಿನ ಎಚ್‌ಡಿ (1090x1920) ಪರದೆ ಅವಶ್ಯಕವಾಗಿರುತ್ತದೆ. ವಿಡಿಯೊ ಎಡಿಟಿಂಗ್ ಮತ್ತು ಈ ಗ್ರಾಫಿಕ್ಸ್ ವೇಳೆ ಎಕ್ಸ್‌ಟರ್ನಲ್ ಇ-ಜಿಪಿ ಇದ್ದರೆ ಗ್ರಾಫಿಕ್ಸ್ ವೇಳೆ ಪ್ಲೇಬ್ಯಾಕ್ ಉತ್ತಮವಾಗಿರುತ್ತದೆ.

ಲ್ಯಾಪ್‌ಟಾಪ್ ಬೆಲೆಯನ್ನು ಗಮನಿಸಿ!

ಲ್ಯಾಪ್‌ಟಾಪ್ ಬೆಲೆಯನ್ನು ಗಮನಿಸಿ!

ಕೇವಲ RAM ಮತ್ತು ಹಾರ್ಡ್‌ಡ್ರೈವ್‌ ಸಾಮರ್ಥ್ಯವನ್ನು ಪರಿಗಣಿಸಿ ಲ್ಯಾಪ್‌ಟಾಪ್‌ ಖರೀದಿಸುವುದನ್ನು ಬಿಟ್ಟು ಪ್ರೊಸೆಸರ್ ಮತ್ತು ಅದರ ಜೆನರೇಷನ್ ಹಾಗೂ ಕ್ಲಾಕ್ ಸ್ಪೀಡನ್ನು ಗಮನಿಸಿ ನೋಡಿ. ಇವುಗಳಲ್ಲಿನ ಒಂದೊಂದು ಸಣ್ಣ ಬದಲಾವಣೆಯೂ ಲ್ಯಾಪ್‌ಟಾಪ್‌ನ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. .ಗ್ರಾಫಿಕ್ಸ್ ಮತ್ತು ಡಿಸೈನಿಂಗ್ ಕ್ಷೇತ್ರದವರು ಇದರೊಟ್ಟಿಗೆ ಗ್ರಾಫಿಕ್ಸ್ ಕಾರ್ಡ್ ಮತ್ತು ಪರದೆಯ ಅಳತೆ ಹಾಗೂ ರೆಸಲ್ಯೂಶನನ್ನು ಸಹ ಗಮನಿಸಿಲೇಬೇಕು. ಇನ್ನು , ಎಚ್‌ಡಿಎಂಐ, ಯುಎಸ್‌ಬಿ 3, ಹೆಡ್‌ಫೋನ್‌ ಲಭ್ಯವಿರಲಿದೆಯೇ ಎಂದು ಗಮನಿಸಬೇಕು.

ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ಚೆಕ್ ಮಾಡಿ!

ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ಚೆಕ್ ಮಾಡಿ!

ಲ್ಯಾಪ್‌ಟಾಪ್‌ನಲ್ಲಿ RAM ಮತ್ತು ಹಾರ್ಡ್‌ಡ್ರೈವ್‌ ಬಗ್ಗೆ ತಿಳಿಯುವ ನಿಮಗೆ ಅದರಲ್ಲಿನ ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ಚೆಕ್ ಮಾಡುವುದು ಸುಲಭ ಎನ್ನುವುದು ತಿಳಿಯದೇ ಇರಬಹುದು. ಹಾಗಾಗಿ, ಲ್ಯಾಪ್‌ಟಾಪ್‌ ತೆರೆದ ನಂತರ ಮೈ ಕಂಪ್ಯೂಟರ್ ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ. ಪ್ರಾಪರ್ಟಿಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದು ತೆರೆದ ನಂತರ ನೀವು ಸುಲಭವಾಗಿ ಪ್ರೊಸೆಸರ್ ಮತ್ತು ಕ್ಲಾಕ್ ಸ್ಪೀಡ್‌ ಅನ್ನು ಗಮನಿಸಬಹುದು. ಹೀಗೆ ಒಂದು ಅತ್ಯುತ್ತಮ ಲ್ಯಾಪ್‌ಟಾಪ್ ಖರೀದಿಸಲು ನಿಮಗೆ ಸಾಧ್ಯವಾಗಬಹುದು.

Best Mobiles in India

English summary
The top things to consider when buying a new laptop. Size. When it comes to laptops, size matters. Screen quality. Since you'll probably end up staring at your laptop screen hours at a time, you'll probably want to make sure you get a screen that is comfortable to look at and use. to know more visit to kannada.gizbot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X