Subscribe to Gizbot

ಬಿದ್ದರೂ ಒಡೆಯಲ್ಲ, ನೀರಲ್ಲಿದ್ದರೂ ಹಾಳಾಗುವುದಿಲ್ಲ ಈ ಸ್ವೀಕರ್..!!!

Written By:

ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಪೋರ್ಟಬಲ್ ಸ್ವೀಕರ್ ಗಳ ಬಳಕೆಯೂ ಹೆಚ್ಚಾಗುತ್ತಿದ್ದು, ಬೇಡಿಕೆಯೂ ಸಹ ಅಧಿಕವಾಗುತ್ತಿದೆ. ದೊಡ್ಡ ದೊಡ್ಡ ಸ್ವೀಕರ್ ಜಾಗಗಳನ್ನು ಈ ಚಿಕ್ಕ ಗಾತ್ರದ ಸ್ವೀಕರ್ ಗಳು ಆವರಿಸುತ್ತಿವೆ. ಇದೇ ಮಾದರಿಯಲ್ಲಿ ಅಲ್‌ಟಿಮೆಟ್ ಇಯರ್ ಕಂಪನಿಯೂ ಮತ್ತೊಂದು ಸ್ವೀಕರ್ ಬಿಡುಗಡೆ ಮಾಡಿದೆ. ಇದು ಬಿದ್ದರೂ ಒಡೆಯಲ್ಲ, ನೀರಲ್ಲಿದ್ದರೂ ಹಾಳಾಗುವುದಿಲ್ಲ.

ಬಿದ್ದರೂ ಒಡೆಯಲ್ಲ, ನೀರಲ್ಲಿದ್ದರೂ ಹಾಳಾಗುವುದಿಲ್ಲ ಈ ಸ್ವೀಕರ್..!!!

ಓದಿರಿ: ಶುರುವಾಗಲಿದೆ ಸ್ಮಾರ್ಟ್‌ಫೋನ್ ಜರ್ನಲಿಸಂ: ನೀವು ಕೇಳಿರದ ಅಚ್ಚರಿಯ ಸುದ್ದಿ..!!!

ಅಲ್‌ಟಿಮೆಟ್ ಇಯರ್ ಕಂಪನಿಯೂ ವಂಡರ್ ಬೂಮ್ ಎನ್ನುವ ಸ್ವೀಕರ್ ಲಾಂಚ್ ಮಾಡಿದ್ದು, ರೂ.7995ಕ್ಕೆ ದೊರೆಯುತ್ತಿರುವ ಈ ಸ್ವೀಕರ್ ಅಸಾಮಾನ್ಯವಾಗಿದೆ ಎಂದರೆ ತಪ್ಪಾಗುವುದಿಲ್ಲ ಇದರಲ್ಲಿರುವ ವಿಶೇಷತೆಗಳು ಇದರ ಬೇಡಿಕೆಯನ್ನು ಹೆಚ್ಚು ಮಾಡಲಿದೆ. ಸುಮಾರು 10 ಗಂಟೆಗಳ ಕಾಲ ಇದು ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಗ್ ಸೌಂಡ್:

ಬಿಗ್ ಸೌಂಡ್:

ಈ ಚಿಕ್ಕ ಗಾತ್ರ ಸ್ವೀಕರ್ ನಲ್ಲಿ ದೊಡ್ಡ ಪ್ರಮಾಣದ ಸೌಂಡ್ ಕೇಳಬಹುದಾಗಿದ್ದು, 360 ಡಿಗ್ರಿ ಯಲ್ಲಿ ಸೌಂಡ್ ಹೊರಡಿಸಲಿದೆ. ಇದು ಪೋರ್ಟಬಲ್ ಸೈಜಿನಲ್ಲಿದೆ.

ಸಂಪೂರ್ಣ ವಾಟರ್ ಫ್ರೂಫ್;

ಸಂಪೂರ್ಣ ವಾಟರ್ ಫ್ರೂಫ್;

ಈ ಪೋರ್ಟಬಲ್ ವಂಡರ್ ಬೂಮ್ ಸ್ವೀಕರ್ ಸಂಪೂರ್ಣವಾಗಿ ವಾಟರ್ ಫ್ರೂಫ್ ಆಗಿದ್ದು, ನೀರಿನಲ್ಲಿ ಬಿದಿದ್ದರು ಧ್ವನಿಯನ್ನು ಹೊರಡಿಸಲಿದೆ. ನೀರಿನಲ್ಲಿ ಸುಮಾರು 30 ನಿಮಿಷ ಇದ್ದರೂ ಸ್ವೀಕರ್ ಗೆ ಯಾವುದೇ ತೊಂದರೆ ಇಲ್ಲ.

10 ಗಂಟೆಗಳ ಕಾರ್ಯಚರಣೆ:

10 ಗಂಟೆಗಳ ಕಾರ್ಯಚರಣೆ:

ಇದಲ್ಲದೇ ಈ ಸ್ವೀಕರ್ ಒಮ್ಮೆಗೆ ಸುಮಾರು 10 ಗಂಟೆಗಳ ಕಾಲ ನಿರಂತರ ಕಾರ್ಯಚರಣೆಯನ್ನು ನಡೆಸಲಿದೆ ಎನ್ನಲಾಗಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ.

ಆರು ಬಣ್ಣದಲ್ಲಿ ಲಭ್ಯ: ನೋಡಲು ಸುಂದರ:

ಆರು ಬಣ್ಣದಲ್ಲಿ ಲಭ್ಯ: ನೋಡಲು ಸುಂದರ:

ಈ ಪೋರ್ಟಬಲ್ ಸ್ವೀಕರ್ ಒಟ್ಟು ಆರು ಬಣ್ಣದಲ್ಲಿ ಲಭ್ಯವಿದ್ದು, ನೋಡಲು ವಿನ್ಯಾಸವು ಉತ್ತಮವಾಗಿದೆ. ಕೈನಲ್ಲಿ ಹಿಡಿದುಕೊಳ್ಳುವ ಅನುಭವವು ಸುಂದರವಾಗಿದೆ.

ಎರಡು ಸ್ವೀಕರ್ ಗಳನ್ನು ಪೇರ್ ಮಾಡಬಹುದು:

ಎರಡು ಸ್ವೀಕರ್ ಗಳನ್ನು ಪೇರ್ ಮಾಡಬಹುದು:

ಈ ಪೋರ್ಟಬಲ್ ಸ್ವೀಕರ್ ಅನ್ನು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಬ್ಲೂಟೂತ್ ಸಪೋರ್ಟ್ ಮಾಡುವ ಡಿವೈಸ್ ನೊಂದಿಗೆ ಪೇರ್ ಮಾಡಬಹುದಾಗಿದೆ ಅಲ್ಲದೇ ಎರಡು ಸ್ವೀಕರ್ ಗಳನ್ನ ಒಂದೇ ಡಿವೈಸ್‌ಗೆ ಕನೆಕ್ಟ್ ಮಾಡಲುಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Turn up your morning routine with the surprisingly big sounds of WONDERBOOM. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot