ಯುವ ಜನಾಂಗವನ್ನು ಹೆಚ್ಚು ಆಕರ್ಷಿಸುತ್ತಿರುವ 'ಒಟಿಜಿ' ಕೇಬಲ್‌ ಬಗ್ಗೆ ನಿಮಗೆಷ್ಟು ಗೊತ್ತು?!

|

ಇತ್ತೀಚೆಗೆ, ಒಟಿಜಿ ಎನ್ನುವ ಕೇಬಲ್ ಯುವ ಜನಾಂಗವನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿರುವುದನ್ನು ನೀವು ನೋಡಬಹುದು. ಕಂಪ್ಯೂಟರ್‌ನಲ್ಲಿ ಮಾಡುವಂಥಹ ಕೆಲಸವನ್ನು ನೇರವಾಗಿ ಮೊಬೈಲಿನಲ್ಲೇ ಮಾಡಲು ಸಹಾಯ ಮಾಡುವ ಈ ಒಂದು ಉತ್ತಮ ಡಿವೈಸ್ ಬಗ್ಗೆ ನೀವು ತಿಳಿಯದೇ ಇರಬಹುದು. ಹಾಗಾಗಿ, ಇಂದಿನ ಲೇಖನ 'ಒಟಿಜಿ' ಕೇಬಲ್‌ಗೆ ಸೀಮಿತ.!

ಮೊಬೈಲ್‌ನಿಂದ ಇತರ ಕಾರ್ಯಗಳ ಪ್ರಯೋಜನ ಪಡೆಯಲು ಅನುವಾಗುವಂತೆ, ಡಾಟಾ ಕೇಬಲ್, ಇಯರ್ ಫೋನ್ ಹುಟ್ಟಿಕೊಂಡಂತೆ ಹುಟ್ಟಿರುವ ಹೊಸ ಅಸೆಸರಿಸ್ ಈ 'ಒಟಿಜಿ ಕೇಬಲ್' ನೀವು ಮೊಬೈಲ್‌ನಲ್ಲೂ ಶೇಖರಿಸಿದ ಡಾಟಾ ಹಾಗೂ ದೃಶ್ಯಾವಳಿಗಳನ್ನು ಯಾವುದೇ ಮೂರನೇ ಸಾಧನ (ಲ್ಯಾಪ್‌ಟಾಪ್) ಬಳಸದೇ ನೇರವಾಗಿ ಪೆನ್ ಡ್ರೈವ್‌ಗೆ ರವಾನಿಸುವಂಥಹ ಸಾಧನ.!

ಯುವ ಜನಾಂಗವನ್ನು ಹೆಚ್ಚು ಆಕರ್ಷಿಸುತ್ತಿರುವ 'ಒಟಿಜಿ' ಕೇಬಲ್‌!!

ಕೇವಲ ನೂರಿನ್ನೂರು ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯನ್ನು ಹೊಂದಿರುವ ಈ ಒಟಿಜಿ ಕೇಬಲ್‌ಗಳು ಈಗ ಮೊಬೈಲ್ ಬಳಕೆದಾರರ ಕಾರ್ಯವನ್ನು ಅತ್ಯಂತ ಸರಳವಾಗಿಸಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಈ ಒಟಿಜಿ ಸಾಧನ ಯಾವೆಲ್ಲಾ ಕೆಲಸ ಮಾಡುತ್ತದೆ? ನಮ್ಮಫೋನ್‌ನಲ್ಲೂ ಒಟಿಜಿ ಸೌಲಭ್ಯ ಇದೆಯೇ? ಎಂಬ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಯೋಣ.

ಏನಿದು ಒಟಿಜಿ ಕೇಬಲ್?

ಏನಿದು ಒಟಿಜಿ ಕೇಬಲ್?

ಒಟಿಜಿಯ ಪೂರ್ಣ ವಿವರಣೆ 'ಓನ್ ದ ಗೋ' ಎಂದಾಗಿದ್ದು, ಯಾವುದೇ ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ಬಳಸದೇ, ನೀವು ಮೊಬೈಲ್‌ನಲ್ಲೂ ಶೇಖರಿಸಿದ ಡಾಟಾ ಹಾಗೂ ದೃಶ್ಯಾವಳಿಗಳನ್ನು ಯಾವುದೇ ಮೂರನೇ ಸಾಧನ (ಲ್ಯಾಪ್‌ಟಾಪ್) ಬಳಸದೇ ನೇರವಾಗಿ ಪೆನ್ ಡ್ರೈವ್‌ಗೆ ರವಾನಿಸುವಂಥಹ ಸಾಧನ. ಇದು ನೋಡಲು ಚಾರ್ಜರ್ ಕೇಬಲ್‌ನಂತೆಯೇ ಕಾಣುತ್ತದೆ.

ಒಟಿಜಿ ಕೆಲಸದ ವೈಖರಿ ಹೇಗೆ?

ಒಟಿಜಿ ಕೆಲಸದ ವೈಖರಿ ಹೇಗೆ?

ಒಟಿಜಿ ಕೇಬಲ್‌ನ ಎರಡು ಬದಿಯಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್‌ ಅನ್ನು ಸಿಕ್ಕಿಸಿ, ಮೊಬೈಲ್‌ನ ಫೈಲ್ ಮ್ಯಾನೇಜರ್ ಫೋಲ್ಡರ್ ತೆರೆಯಿರಿ. ನಂತರ ನೀವು ನಿಮ್ಮ ಮೊಬೈಲ್‌ನಿಂದ ಎಕ್ಷಟರ್ನಲ್ ಡ್ರೈವ್‌ಗೆ ನೇರ ಸಂಪರ್ಕ ಪಡೆಯಬಹುದು. ಇದರಿಂದ ನಿಮ್ಮ ಫೋನ್‌ನಲ್ಲಿ ಸಂಗ್ರಹವಿರದ ಯಾವುದೇ ಸಿನೆಮಾ ಮತ್ತು ಹಾಡನ್ನು ನೋಡಬಹುದು ಹಾಗೂ ಕೇಳಬಹುದು.

ಮೊಬೈಲ್ ಮೆಮೊರಿ ಉಳಿಸುತ್ತದೆ.!

ಮೊಬೈಲ್ ಮೆಮೊರಿ ಉಳಿಸುತ್ತದೆ.!

ಈ ಒಟಿಜಿ ಕೇಬಲ್‌ನ ಸಹಾಯದಿಂದ ನಿಮ್ಮ ಫೋನ್‌ನಲ್ಲಿ ಸಂಗ್ರಹವಿರದ ಯಾವುದೇ ಸಿನೆಮಾ ಮತ್ತು ಹಾಡನ್ನು ನೋಡಬಹುದು ಹಾಗೂ ಕೇಳಬಹುದು ಎಮದು ನಾನು ಹೇಳಿದೆ ಅಲ್ಲವೇ?. ಇದರ ಮತ್ತೊಂದು ಮುಖ ಮೊಬೈಲ್ ಮೆಮೊರಿ ಉಳಿತಾಯ.! ಹೆಚ್ಚು ಮೆಮೊರಿ ಹೊಂದಿರುವ ಫೋನ್ ಇಲ್ಲದಿದ್ದರೆ ಈ ಒಂದು ಕೇಬಲ್ ಮತ್ತು ಪೆನ್‌ಡ್ರೈವ್‌ ಇದ್ದರೆ ಸಾಕಾಗುತ್ತದೆ.!

ನಮ್ಮ ಫೋನ್‌ನಲ್ಲೂ ಒಟಿಜಿ ಸೌಲಭ್ಯ ಇದೆಯೇ?

ನಮ್ಮ ಫೋನ್‌ನಲ್ಲೂ ಒಟಿಜಿ ಸೌಲಭ್ಯ ಇದೆಯೇ?

ಇತ್ತಿಚಿಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಒಟಿಜಿ ಸಪೋರ್ಟ್ ಮಾಡುವ ತಂತ್ರಜ್ಞಾನವನ್ನು ನೀಡಲಾಗಿರುತ್ತದೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್ ಸ್ವಲ್ಪ ಹಳೆಯದಾಗಿದ್ದರೆ, ಯುಎಸ್‌ಬಿ ಒಟಿಜಿ ಚೆಕರ್ (USB OTG Checker) ಎಂಬ ಉಚಿತ ಆಪ್ ಇನ್‌ಸ್ಟಾಲ್ ಮಾಡಿ ಕೊಂಡು ಈ ಸೌಲಭ್ಯವಿದೆಯೇ ಎಂಬುದನ್ನು ಪರೀಕ್ಷಿಸಬಹುದು.

ಗುಣಮಟ್ಟದ ಒಟಿಜಿ ಕೇಬಲ್!

ಗುಣಮಟ್ಟದ ಒಟಿಜಿ ಕೇಬಲ್!

ಈ ಒಟಿಜಿ ಸಾಧನದಲ್ಲೂ ಸ್ಥಳೀಯ ಅಥವಾ ಕಳಪೆ ದರ್ಜೆಯ ಮತ್ತು ಉತ್ತಮ ದರ್ಜೆ ಎಂಬುದಿದೆ. ಒಟಿಜಿ ಕೇಬಲ್ ಅನ್ನು ಖರಿದಿಸುವಾಗ ಗುಣಮಟ್ಟದ ಒಟಿಜಿ ಸಾಧನವನ್ನು ಖರೀದಿಸಿ. ಕೇವಲ ನೂರರಿಂದ ಇನ್ನೂರು ರೂಪಾಯಿ ವ್ಯತ್ಯಾಸದಲ್ಲಿಯೇ ಉತ್ತಮ ದರ್ಜೆ ಒಟಿಜಿ ಕೇಬಲ್ ಅನ್ನು ನೀವು ಖರೀದಿಸಬಹುದಾಗಿದೆ.

Best Mobiles in India

English summary
USB On-The-Go, often abbreviated to USB OTG or just OTG, is a specification first used in late 2001 that allows USB devices. to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X