ವಿಶ್ವದ ದೊಡ್ಡ ಲೀ-ಐಯಾನ್ ಬ್ಯಾಟರಿ ತಯಾರಿಕೆ ಹಿಂದಿತ್ತು 50 ಮಿಲಿಯನ್ ಡಾಲರ್ ಚಾಲೆಂಜ್!!

ವಿಶ್ವದ ಅತಿದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ ನಿರ್ಮಾಣದ ಹಿಂದೆ ಎಲಾನ್ ಮಸ್ಕ್ ಅವರ 322 ಕೋಟಿ ರೂ. ಚಾಲೆಂಜ್ ಕೂಡ ಕಾರಣ ಎಂದರೆ ನೀವು ನಂಬಲೆಬೇಕು.!!

|

ಸಾಧಕರಿಗೆ ಸಾಧನೆ ಮಾಡುವ ಹಂಬಲಕ್ಕೆ ಉದಾಹರಣೆ ಮಲ್ಟಿ ಬಿಲೆನಿಯಯರ್ ಎಲಾನ್ ಮಸ್ಕ್ ಅವರ ಮತ್ತೊಂದು ಸಾಧನೆ! ಹೌದು, ಆಸ್ಟ್ರೇಲಿಯಾದಲ್ಲಿ ಕೇವಲ 100 ದಿನಗಳಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ ನಿರ್ಮಾಣದ ಹಿಂದೆ ಎಲಾನ್ ಮಸ್ಕ್ ಅವರ 322 ಕೋಟಿ ರೂ. ಚಾಲೆಂಜ್ ಕೂಡ ಕಾರಣ ಎಂದರೆ ನೀವು ನಂಬಲೆಬೇಕು.!!

ದೊಡ್ಡ ಲೀ-ಐಯಾನ್ ಬ್ಯಾಟರಿ ತಯಾರಿಕೆ ಹಿಂದಿತ್ತು 50 ಮಿಲಿಯನ್ ಡಾಲರ್ ಚಾಲೆಂಜ್!!

ಆಸ್ಟ್ರೇಲಿಯಾದಲ್ಲಿ ಎಲಾನ್ ಮಸ್ಕ್ ಅವರ ಕಂಪೆನಿ ಟೆಸ್ಲಾ ನಿರ್ಮಾಣ ಮಾಡಿರುವ ವಿಶ್ವದ ಅತಿದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ ಇಂದು ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದೆ. ಈ ಅಚ್ಚರಿಯ ಹಿಂದೆ ಅಡಗಿದ್ದ ಎಲಾನ್ ಮಸ್ಕ್ ಅವರ 50 ಮಿಲಿಯನ್ ಡಾಲರ್(ಅಂದಾಜು 322 ಕೋಟಿ ರೂ.) ಚಾಲೆಂಜ್ ಇದೀಗ ವೈರೆಲ್ ಆಗಿದೆ.!! ಹಾಗಾದರೆ, ಏನದು ಎಲಾನ್ ಮಸ್ಕ್ ಅವರ ಚಾಲೆಂಜ್? ವಿಶ್ವದ ಅತಿದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ ಸಾಮರ್ಥ್ಯವೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಿಶ್ವದ ದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ!!

ವಿಶ್ವದ ದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ!!

ಇಡೀ ವಿಶ್ವವೇ ಬರಗಾಗುವಂತೆ ದಕ್ಷಿಣ ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ 100 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ.!! ಈ ದಕ್ಷಿಣ ಆಸ್ಟ್ರೇಲಿಯಾಗೆ ವಿದ್ಯುತ್ ಅನ್ನು ಪೂರೈಸುವ ಉದ್ದೇಶ ಹೊಂದಿರುವ ಈ ಲೀಥಿಯಂ ಐಯಾನ್ ಬ್ಯಾಟರಿಯೊಂದು ವಿಶ್ವದ ಅಚ್ಚರಿಗೆ ಕಾರಣವಾಗಿದೆ.!!

ಬಹುದೊಡ್ಡ ಬ್ಯಾಟರಿ ನಿರ್ಮಾಣಕ್ಕೆ ಕಾರಣ!?

ಬಹುದೊಡ್ಡ ಬ್ಯಾಟರಿ ನಿರ್ಮಾಣಕ್ಕೆ ಕಾರಣ!?

2016 ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಬೀಸಿದ ಒಂದು ದೊಡ್ಡ ಚಂಡಮಾರುತಕ್ಕೆ 17 ಲಕ್ಷ ಜನರು ಕತ್ತಲೆಯಲ್ಲಿ ಕಳೆಯುವಂತಾಗಿತ್ತು. ಈ ಸಮಯದಲ್ಲಿ ಆಸ್ಟ್ರೇಲಿಯಾ ಸರ್ಕಾರ ದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ ನಿರ್ಮಣ ಪೂರೈಕೆದಾರರನ್ನು ಹುಡುಕುತ್ತಿರುವಾಗ ಎಲಾನ್ ಮಸ್ಕ್ ಅವರು ಈ ಯೋಜನೆ ಸಾಕಾರಗೊಳಿಸಲು ಮುಂದಾಗಿದ್ದಾರೆ.!!

50 ಮಿಲಿಯನ್ ಡಾಲರ್ ಚಾಲೆಂಜ್!!

50 ಮಿಲಿಯನ್ ಡಾಲರ್ ಚಾಲೆಂಜ್!!

ಆಸ್ಟ್ರೇಲಿಯಾ ಸರ್ಕಾರದ ಈ ಯೋಜನೆಗೆ ಎಲಾನ್ ಮಸ್ಕ್ ಅವರು ಒಂದು ಚಾಲೆಂಜ್ ತೆಗೆದುಕೊಂಡಿದ್ದಾರೆ. ವಿಶ್ವದ ಅತಿದೊಡ್ಡ ಬ್ಯಾಟರಿ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕುವ ವೇಳೆ 100 ದಿನಗಳಲ್ಲಿ ಈ ಕಾರ್ಯ ಪೂರ್ಣ ಮಾಡಲಾಗುವುದು. ಅದು ಸಾಧ್ಯವಾಗದಿದ್ದರೆ $ 50 ಮಿಲಿಯನ್ ಡಾಲರ್ ಹಣವನ್ನು ತಾನೆ ಸರ್ಕಾರಕ್ಕೆ ನೀಡುವುದಾಗಿ ಈ ಬಿಲೇನಿಯರ್ ಹೇಳುತ್ತಾರೆ.!!

55 ದಿನಗಳಲ್ಲಿಯೇ ನಿರ್ಮಾಣ!!

55 ದಿನಗಳಲ್ಲಿಯೇ ನಿರ್ಮಾಣ!!

ಇನ್ನು ಈ ಬ್ಯಾಟರಿ ನಿರ್ಮಾಣಕ್ಕೆ 100 ದಿನಗಳ ಗಡುವು ಪಡೆದುಕೊಂಡಿದ್ದ ಎಲಾನ್ ಮಸ್ಕ್ ಅವರಿಗೆ ಡಿಸೆಂಬರ್ 1 ವರೆಗೆ ಸಮಯವಿತ್ತು. ಆದರೆ ಆಸ್ಟ್ರೇಲಿಯಾ ಸರ್ಕಾರ ಈ ಯೋಜನೆ ಯಶಸ್ವಿಯಾಗಿ ಮುಗಿದಿದೆ ಎಂದು ಘೋಷಿಸಿದ್ದು, ಕೇವಲ 56 ದಿವಸಗಳಲ್ಲಿಯೇ ವಿಶ್ವದ ದೊಡ್ಡ ಲೀಥಿಯಂ ಐಯಾನ್ ಬ್ಯಾಟರಿ ನಿರ್ಮಾಣವಾಗಿದೆ. ಮತ್ತು ಎಲಾನ್ ಮಸ್ಕ್ ಅವರು ಸಾಧಿಸಿದ್ದಾರೆ.!!

ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಇರುವ ಅದ್ಬುತ 5 ಗ್ಯಾಜೆಟ್‌ಗಳು ಇವು!!ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಇರುವ ಅದ್ಬುತ 5 ಗ್ಯಾಜೆಟ್‌ಗಳು ಇವು!!

Best Mobiles in India

English summary
Elon Musk Wins $50 Million Bet for Building World’s Largest Lithium-Ion Battery. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X