Subscribe to Gizbot

ಶಿಯೋಮಿ ಸ್ಮಾರ್ಟ್ ಸ್ಪೀಕರ್ ಲಾಂಚ್: ಅಮೆಜಾನ್, ಗೂಗಲ್ ಗೆ ಸೆಡ್ಡು..!

Written By:

ಶಿಯೋಮಿ ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರುವ ಸಲುವಾಗಿ ಒಂದೊಂದೇ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ ವಾಯ್ಸ್ ಅಸಿಸ್ಟೆಂಟ್ ಅನ್ನು ಹೊಂದಿರುವ Mi AI ಸ್ಪೀಕರ್ ಮಿನಿಯನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ ಸ್ಪೀಕರ್ ಮಾರುಕಟ್ಟೆಯಲ್ಲಿ ಕಡಿಮೆ ದೊರೆಯಲಿದ್ದು, ಹೆಚ್ಚಿನ ಜನರನ್ನು ತಲುಪುವ ಸಾಧ್ಯತೆ ದಟ್ಟವಾಗಿದೆ.

ಶಿಯೋಮಿ ಸ್ಮಾರ್ಟ್ ಸ್ಪೀಕರ್ ಲಾಂಚ್: ಅಮೆಜಾನ್, ಗೂಗಲ್ ಗೆ ಸೆಡ್ಡು..!

ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಅಮೆಜಾನ್ ಇಕೋ ಡಾಟ್, ಗೂಗಲ್ ಹೋಮ್ ಮಿನಿ ಮತ್ತು ಆಪಲ್ ಹೋಮ್ ಪ್ಯಾಡ್ ಗಳಿಗೆ ನೇರಾ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದ್ದು, ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ Mi AI ಸ್ಪೀಕರ್ ಮಿನಿ ರೂ.1800ರ ಆಸುಪಾಸಿನಲ್ಲಿ ಕಾಣಿಸಿಕೊಂಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಮಾರಾಟವಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಗಳಿಗೆ ಕ್ವಾಲಿಟಿ ಮತ್ತು ಬೆಲೆಗಳ ಮೂಲಕವೇ ಸ್ಪರ್ಧೇಯನ್ನು ನೀಡುತ್ತಿರುವ ಶಿಯೋಮಿ, ಸ್ಮಾರ್ಟ್‌ ಫೋನ್, ಸ್ಮಾರ್ಟ್‌ ಟಿವಿ ಮತ್ತು ಲ್ಯಾಪ್‌ಟಾಪ್‌ ಮೂಲಕ ಹೆಚ್ಚಿನ ಜನರನ್ನು ತಲುಪುವ ಕಾರ್ಯವನ್ನು ಮಾಡುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಸ್ಮಾರ್ಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸನಿಹದಲ್ಲಿದೆ. ಇದೇ ಯೋಜನೆಯ ಭಾಗವಾಗಿ Mi AI ಸ್ಪೀಕರ್ ಮಿನಿ ಕಾಣಿಸಿಕೊಂಡಿದೆ.

ಶಿಯೋಮಿ ಸ್ಮಾರ್ಟ್ ಸ್ಪೀಕರ್ ಲಾಂಚ್: ಅಮೆಜಾನ್, ಗೂಗಲ್ ಗೆ ಸೆಡ್ಡು..!

Mi AI ಸ್ಪೀಕರ್ ಮಿನಿ ಯಾವ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. Mi AI ಸ್ಪೀಕರ್ ಮಿನಿ ವಿನ್ಯಾಸ ಉತ್ತಮವಾಗಿದ್ದು, ನಾಲ್ಕು ಬಟನ್‌ಗಳನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ವಾಯ್ಸ್ ಕಮೆಂಡ್ ಮೂಲಕ ಇಡೀ ಮನೆಯ ಸ್ಮಾರ್ಟ್ ವಸ್ತುಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.

How To Link Aadhaar With EPF Account Without Login (KANNADA)

ಈಗಾಗಲೇ ಸ್ಮಾರ್ಟ್ ಸ್ಪೀಕರ್ ಮಾರುಕಟ್ಟೆಯೂ ಬಹಳ ವಿಸ್ತಾರವಾಗಿ ಬೆಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಕಂಪನಿಗಳು ಮಾರುಕಟ್ಟೆಗೆ ಸ್ಮಾರ್ಟ್ ಸ್ಪೀಕರ್ ಗಳನ್ನು ಲಾಂಚ್ ಮಾಡಲಿವೆ, ಆದರೆ ಶಿಯೋಮಿ ಕಡಿಮೆ ಬೆಲೆಗೆ ಮಾರುವುದರಿಂದ ಬಳಕೆದಾರರಿಗೆ ಹೆಚ್ಚು ಆತ್ಮೀಯವಾಗಲಿದೆ.

English summary
Xiaomi Mi AI Speaker Mini With Voice-Activated Assistant Launched: Price, Features. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot