5.8 ಗ್ರಾಂ ತೂಕದ 'ಮೀ ಏರ್​ಡಾಟ್ಸ್'​ ಬಿಡುಗಡೆ!...ಬೆಲೆ ಕೇವಲ___?!

|

2016ರಲ್ಲಿ ಆಪಲ್‌ ಬಿಡುಗಡೆ ಮಾಡಿದ್ದ ಏರ್​ಪೋಡ್ ನಕಲಿಯಂತಿರುವ ನೂತನ 'ಶಿಯೋಮಿ ಮೀ ಏರ್​ಡಾಟ್ಸ್ ಪ್ರೊ'​ ಚೀನಾದಲ್ಲಿ ಇದೀಗ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಹಿಂದೆ ಐಫೋನ್​ನ ಕೆಲವು ಫೀಚರ್​ಗಳನ್ನೇ ನಕಲಿಸಿರುವ ಆರೊಪ ಹೊತ್ತಿರವ ಶಿಯೋಮಿ, ಇದೀಗ ಐಫೋನ್​ನ ದುಬಾರಿ ಏರ್​ಪೋಡ್​​ಗೆ ಸ್ಫರ್ಧಿಯಾಗಿ 'ಮೀ ಏರ್​ಡಾಟ್ಸ್ ಪ್ರೊ'​ ಇಯರ್​ ಫೋನ್​ ಅನ್ನು ಮಾರುಕಟ್ಟೆಗೆ ತಂದಿದೆ.

ನೋಡಲು ಥೇಟ್ ಆಪಲ್​ನ ಏರ್​ಪೋಡ್ಸ್​ನಂತೆಯೇ ಕಾಣುತ್ತಿರುವ ಈ ನೂತನ ಶಿಯೋಮಿ 'ಮೀ ಏರ್​ಡಾಟ್ಸ್ ಪ್ರೊ'​ ಇಯರ್​ ಫೋನಿನ ಫೀಚರ್ಸ್ ಮತ್ತು ವಿನ್ಯಾಸಗಳೆಲ್ಲವೂ ಅದೇ ರೀತಿಯಲ್ಲಿದೆ. ಆದರೆ, ಈ 'ಮೀ ಏರ್​ಡಾಟ್ಸ್ ಪ್ರೊ'​ ಆಪಲ್ ಏರ್​ಪೋಡ್ಸ್ ಖರೀದಿಗಿಂತ ಬೆಸ್ಟ್ ಆಗಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗದಂತಹ ಬೆಲೆ ಮತ್ತು ಫೀಚರ್ಸ್‌ಗಳನ್ನು ಹೊಂದಿರುವುದು ವಿಶೇಷವಾಗಿದೆ.

5.8 ಗ್ರಾಂ ತೂಕದ 'ಮೀ ಏರ್​ಡಾಟ್ಸ್'​ ಬಿಡುಗಡೆ!...ಬೆಲೆ ಕೇವಲ___?!

ಶಿಯೋಮಿಯ ಹೊಸ ಇಯರ್​ ಬಡ್ಸ್​​​ ಅನ್ನು ಆಂಡ್ರಾಯ್ಡ್​ ಮತ್ತು ಐಒಎಸ್​ ಸ್ಮಾರ್ಟ್​ಫೋನ್​ಗಳಲ್ಲಿ ಕನೆಕ್ಟ್​ ಮಾಡಿಕೊಳ್ಳಬಹುದಾಗಿದ್ದು, ಇದರ ತೂಕ ಕೇವಲ 5.8 ಗ್ರಾಂಗಳಷ್ಟಿದೆ. ಕಿವಿಗೂ ಮತ್ತು ಜೇಬಿಗೂ ಭಾರವೆನಿಸುವುದಂತಹ ಫೀಚರ್ಸ್ ಹೊಂದಿರುವ ಇದು ಚೀನಾದಲ್ಲಿ ಈಗ ಬಿಡುಗಡೆಯಾಗಿದೆ. ಹಾಗಾದರೆ, ಶಿಯೋಮಿ 'ಮೀ ಏರ್​ಡಾಟ್ಸ್ ಪ್ರೊ'​ ಇಯರ್​ ಫೋನಿನ ಫೀಚರ್ಸ್ ಮತ್ತು ಬೆಲೆಗಳನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ 'ಮೀ ಏರ್​ಡಾಟ್ಸ್ ಪ್ರೊ'? ​

ಹೇಗಿದೆ 'ಮೀ ಏರ್​ಡಾಟ್ಸ್ ಪ್ರೊ'? ​

'ಮೀ ಏರ್​ಡಾಟ್ಸ್ ಪ್ರೊ' 7mm ನಿಯೋಡಿಮಿಯಮ್ ಕಬ್ಬಿಣದ ಬೋರಾನ್ ಮ್ಯಾಗ್ನೆಟಿಕ್ ಮತ್ತು ಟೈಟಾನಿಯಮ್-ಲೇಪಿತ ಡಯಾಫ್ರಾಮ್ ಡೈನಾಮಿಕ್ ರಿಂಗ್ ಸ್ಪೀಕರ್ ಅನ್ನು ಹೊಂದಿದ್ದು, ಟಚ್​ ಮೂಲಕವೇ ಸಂಗೀತವನ್ನು ಆಲಿಸಲು ಮತ್ತು ಕರೆಗಳನ್ನು ಸ್ವೀಕರಿಸುವ ಸೌಲಭ್ಯ ಇದರಲ್ಲಿ ನೀಡಲಾಗಿದೆ. ಇದರ ಒಟ್ಟು ತೂಕ ಕೇವಲ 5.8 ಗ್ರಾಂಗಳಷ್ಟಿದೆ ಎಂದು ಶಿಯೋಮಿ ತಿಳಿಸಿದೆ.

ಆಪಲ್​ನ ಏರ್​ಪೋಡ್ಸ್ ಫೀಚರ್ಸ್!

ಆಪಲ್​ನ ಏರ್​ಪೋಡ್ಸ್ ಫೀಚರ್ಸ್!

ಆಪಲ್​ನ ಏರ್​ಪೋಡ್ಸ್​ನಲ್ಲಿ ನೀಡಲಾಗಿರುವ ಬಹುತೇಕ ಎಲ್ಲಾ ಫೀಚರ್​ಗಳನ್ನು ಈ 'ಮಿ ಏರ್​ಡಾಟ್ಸ್ ಪ್ರೊ​'ನಲ್ಲಿ ನೀಡಲಾಗಿದೆ. ಇದರ ಇಯರ್​ಬಡ್ಸ್​ ಅನ್ನು ಕೂಡ ಚಾರ್ಜರ್ ಬಾಕ್ಸ್​ನಲ್ಲಿರಿಸಿ ಚಾರ್ಜ್​ ಮಾಡಿಕೊಳ್ಳಬಹುದಾದ ಆಯ್ಕೆ ಲಭ್ಯವಿದೆ. ಈ 'ಏರ್​ಡಾಟ್ಸ್ ಪ್ರೊ'​ ಬಾಕ್ಸ್​ನ್ನು ಯುಎಸ್​ಬಿ ಟೈಪ್​ ಸಿ ಚಾರ್ಜರ್​ನಿಂದ ಚಾರ್ಜ್​ ಮಾಡಬೇಕಾಗುತ್ತದೆ ಎಂದು ಪ್ರಾಡೆಕ್ಟ್ ರಿವ್ಯೂವಿನಲ್ಲಿ ತಿಳಿದುಬಂದಿದೆ.

10 ಗಂಟೆಗಳವರೆಗೆ ಸತತ ಬಳಕೆ!

10 ಗಂಟೆಗಳವರೆಗೆ ಸತತ ಬಳಕೆ!

ಈ ನೂತನ ಮಿ ಏರ್‌ಡಾಟ್ಸ್ ಪ್ರೊ ಅ​ನ್ನು ಕೇವಲ ಒಂದು ಗಂಟೆಯಲ್ಲಿ ಪೂರ್ಣ ಚಾರ್ಜ್ ಮಾಡಿಕೊಳ್ಳಬಹುದು ಎಂದು ಶಿಯೋಮಿ ಕಂಪೆನಿಯುವ ಬಿಡುಗಡೆ ವೇಳೆ ತಿಳಿಸಿದೆ. ಹಾಗೆಯೇ, ಒಂದು ಬಾರಿ ಇದ​ನ್ನು ಪೂರ್ತಿ ಚಾರ್ಜ್​ ಮಾಡಿಕೊಂಡರೆ ಸತತವಾಗಿ 10 ಗಂಟೆಗಳವರೆಗೆ ಅನಿಯಮಿತವಾಗಿ ಉತ್ಕೃಷ್ಟ ಗುಣಮಟ್ಟದ ಸಂಗೀತವನ್ನು ಆಲಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಇನ್ನಿತರ ಫೀಚರ್ಸ್ ಯಾವುವು?

ಇನ್ನಿತರ ಫೀಚರ್ಸ್ ಯಾವುವು?

ನೂತನ ಮಿ ಏರ್‌ಡಾಟ್ಸ್ ಪ್ರೊ ಬ್ಲೂಟೂತ್ 4.2 ಬೆಂಬಲಿಸಲಿದ್ದು, ವರ್ಧಿತ ಆಡಿಯೊಗಾಗಿ ಎಎಸಿ ಕೋಡೆಕ್ (ಸಕ್ರಿಯ ಶಬ್ದ ರದ್ದತಿ) ಅನ್ನು ಬೆಂಬಲಿಸುತ್ತದೆ ಮತ್ತು ಐಪಿಎಕ್ಸ್4 ವಾಟರ್ ರೆಸಿಸ್ಟೆಂಟ್ ಫೀಚರ್ ಇದರ ಮತ್ತೊಂದು ಪ್ರಮುಖ ವಿಶೇಷತೆ ಎನ್ನಬಹುದು. ಇನ್ನುಳಿದಂತೆ ಈ ಇಯರ್​ ಬಡ್ಸ್​​​ ಅನ್ನು ಆಂಡ್ರಾಯ್ಡ್​ ಮತ್ತು ಐಒಎಸ್​ ಸ್ಮಾರ್ಟ್​ಫೋನ್​ಗಳಲ್ಲಿ ಕನೆಕ್ಟ್​ ಮಾಡಿಕೊಳ್ಳಬಹುದು.

ಬೆಲೆ ಎಷ್ಟು?

ಬೆಲೆ ಎಷ್ಟು?

ಸದ್ಯ ಈ ಮಿ ಏರ್‌ಡಾಟ್ಸ್ ಪ್ರೊ ಚೀನಾದಲ್ಲಿ ಮಾತ್ರ ಬಿಡುಗಡೆಗಿದ್ದು, ಅಲ್ಲಿ ಇದರ ಬೆಲೆ 399 ಸಿಎನ್​ಐ. ಅಂದರೆ ಭಾರತದಲ್ಲಿ ಇದರ ಬೆಲೆ ಸರಿಸುಮಾರು 4 ಸಾವಿರ ಆಗಿರಲಿದೆ ಎಂದು ಅಂದಾಜಿಸಬಹುದು. ಸದ್ಯ ದೇಶದಲ್ಲಿ ಐಫೋನ್ ಏರ್​ಪೋಡ್​ ಬೆಲೆ 12 ಸಾವಿರವಿದ್ದು, ಮೀ ಏರ್​ಡಾಟ್ಸ್ ಬಿಡುಗಡೆಯಾದರೆ ಆಪಲ್​ ಏರ್​ಪೋಡ್‌ಗೆ ಹೊಡೆತಬೀಳುವುದು ಖಂಡಿತ.

Best Mobiles in India

English summary
Xiaomi has launched a new pair of Bluetooth earbuds in China called the Mi AirDots Pro. Mimicking Apple’s AirPods which were launched back in December 2016. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X