Subscribe to Gizbot

ಭಾರತದಲ್ಲಿ ಬಿಡುಗಡೆಯಾಗುವ ಶಿಯೋಮಿಯ ಮೊದಲ 'ಆಂಡ್ರಾಯ್ಡ್ ಟಿವಿ' ಹೇಗಿದೆ?..ಬೆಲೆ ಎಷ್ಟು!?

Written By:

ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಶಿಯೋಮಿ ಹೆಚ್ಚಿನ ಗ್ಯಾಜೆಟ್ ಉತ್ಪನ್ನಗಳನ್ನು ತರಲು ಅನುಮೋದನೆಗೆ ಕಾಯುತ್ತಿದ್ದು, ಕೆಲವೇ ದಿನಗಳಲ್ಲಿ ಶಿಯೋಮಿಯ Mi TV 4A ಸ್ಮಾರ್ಟ್‌ಟಿವಿ ಭಾರತದಲ್ಲಿ ಬಿಡುಗಡೆಯಾಗಲಿದೆ.! ಭಾರತದ ಟೆಲಿಕಾಂ ಪ್ರಪಂಚದಲ್ಲಿ ಧೂಳೆಬ್ಬಿಸುತ್ತಿರುವ ಜಿಯೋ ಸಹ ಶಿಯೋಮಿ ಜೊತೆ ಕೈಜೋಡಿಸಿದೆ.!

ಭಾರತದಲ್ಲಿ ಬಿಡುಗಡೆಯಾಗುವ ಶಿಯೋಮಿಯ ಮೊದಲ 'ಆಂಡ್ರಾಯ್ಡ್ ಟಿವಿ' ಹೇಗಿದೆ?..ಬೆಲೆ?

ಹೌದು, ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಭಾರತೀಯರ ಮನಗೆದ್ದಿರುವ ಶಿಯೋಮಿ ತನ್ನ ಆಂಡ್ರಾಯ್ಡ್ ಟಿವಿಗಳನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು, ಭಾರತದಲ್ಲಿರುವ ಶಿಯೋಮಿ ಮೈ ಹೋಮ್‌ಗಳಲ್ಲಿ ಈಗಾಗಲೇ Mi TV 4A ಸ್ಮಾರ್ಟ್‌ಟಿವಿಯನ್ನು ಡಿಸ್‌ಪ್ಲೇ ಮಾಡಿದೆ.!!

ಭಾರತದಲ್ಲಿ ಬಿಡುಗಡೆಯಾಗುವ ಶಿಯೋಮಿಯ ಮೊದಲ 'ಆಂಡ್ರಾಯ್ಡ್ ಟಿವಿ' ಹೇಗಿದೆ?..ಬೆಲೆ?

ಶೀಯೋಮಿ ಟಿವಿಗಳನ್ನು ಮಾರಾಟ ಮಾಡುವ ಸಲುವಾಗಿ ಜಿಯೋ ಶಿಯೋಮಿ ಜೊತೆ ಮಾತುಕತೆಯನ್ನು ಮುಗಿಸಿದ್ದು, ಭಾರತದಲ್ಲಿ ಶಿಯೋಮಿ ಟಿವಿಗಳು ಬಿಡುಗಡೆಯಾದ ತಕ್ಷಣವೇ ಎರಡೂ ಕಂಪೆನಿಗಳು ಒಟ್ಟಾಗಿ ಟಿವಿ ಮಾರಾಟವನ್ನು ಶುರು ಮಾಡಲಿವೆ ಎಂದು ವರದಿಗಳು ಹೇಳಿವೆ.!! ಹಾಗಾದರೆ, Mi TV 4A ಸ್ಮಾರ್ಟ್‌ಟಿವಿ ಫೀಚರ್ಸ್ ಏನು? ಬೆಲೆ ಎಷ್ಟು? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ಆಂಡ್ರಾಯ್ಡ್ ಟಿವಿ!!

ಶಿಯೋಮಿ ಆಂಡ್ರಾಯ್ಡ್ ಟಿವಿ!!

ಶಿಯೋಮಿ ಭಾರತೀಯ ಮಾರುಕಟ್ಟೆಗೆ ಮೊದಲು ಬಿಡುಗಡೆ ಮಾಡುತ್ತಿರುವ Mi TV 4A ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸಲಿದೆ.!! ಸಾಮಾನ್ಯ ಟಿವಿಗಳಂತೆಯೂ ಕಾರ್ಯನಿರ್ವಹಣೆ ನೀಡುವ ಈ ಟಿವಿಯನ್ನು ಒಂದು ಸ್ಮಾರ್ಟ್‌ಫೋನ್ ರೀತಿ ಕೂಡ ಉಪಯೋಗಿಸಬಹುದು.!!

50 ಇಂಚಿನ ಶಿಯೋಮಿ ಟಿವಿ.!!

50 ಇಂಚಿನ ಶಿಯೋಮಿ ಟಿವಿ.!!

ಶಿಯೋಮಿ ಮೈ ಹೋಮ್‌ಗಳಲ್ಲಿ ಈಗಾಗಲೇ ಡಿಸ್‌ಪ್ಲೇ ಮಾಡಿರುವ Mi TV 4A ಸ್ಮಾರ್ಟ್‌ಟಿವಿ 50 ಇಂಚಿನ ಸ್ಕ್ರೀನ್ ಹೊಂದಿದೆ. 3840 x 2160 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸ್ಕ್ರೀನ್ ಹೈ ಹೆಚ್‌ಡಿ ಪ್ಲಸ್ ಮತ್ತು 4K ವಿಡಿಯೋಗಳನ್ನು ಪ್ಲೇ ಸಾಮರ್ಥ್ಯವನ್ನು ಹೊಂದಿದ್ದು, ಈ ಟಿವಿ ವೀಕ್ಷಣೆಯ ವಿಧಾನವನ್ನು ಬದಲಾವಣೆ ಮಾಡಲಿದೆ ಎನ್ನಲಾಗಿದೆ.

ಕೃತಕ ಬುದ್ದಿಮತ್ತೆ!!

ಕೃತಕ ಬುದ್ದಿಮತ್ತೆ!!

ಶಿಯೋಮಿ Mi TV 4A ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುವುದರ ಜೊತೆಗೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ.!! ಟಿವಿಯಲ್ಲಿ ಪ್ಲೇ ಆಗುವ ವಿಡಿಯೋಗಳ ಬಣ್ಣಗಳ ಹೊಂದಾಣಿಕೆಯಲ್ಲಿ ಮತ್ತು ವಿಡಿಯೋ ಗೇಮ್ ಕಾರ್ಯದಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆಯಾಗಲಿದೆ.!!

10 ಸ್ಪೀಕರ್ ಹೊಂದಿದೆ ಟಿವಿ!!

10 ಸ್ಪೀಕರ್ ಹೊಂದಿದೆ ಟಿವಿ!!

ವಿಡಿಯೋಗಳ ಗುಣಮಟ್ಟಕ್ಕೆ ಸರಿಸಮಾನವಾದ ಸ್ಪೀಕರ್ ತಂತ್ರಜ್ಞಾನವನ್ನು ಶಿಯೋಮಿ ಟಿವಿಯ ಜೊತೆ ಒದಗಿಸಲಿದೆ.! ಶಿಯೋಮಿ Mi TV 4A ಸ್ಮಾರ್ಟ್‌ಟಿವಿಯಲ್ಲಿ Mi TV ಸೌಂಡ್‌ ಬಾರ್ ಸಹ ನೀಡಲಾಗಿದ್ದು, ಒಟ್ಟು 10 ಸ್ಪೀಕರ್‌ಗಳು ಟಿವಿಯನ್ನು ಅಲಂಕರಿಸಿವೆ ಎಂದು ಶಿಯೋಮಿಯ ಚೀನಾ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.!!

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಶಿಯೋಮಿ Mi TV 4A ಟಿವಿ ಬೆಲೆ ಎಷ್ಟು?

ಶಿಯೋಮಿ Mi TV 4A ಟಿವಿ ಬೆಲೆ ಎಷ್ಟು?

ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಈ ಸ್ಮಾರ್ಟ್ ಟಿವಿ ಭಾರತದ ರೂಪಾಯಿಗಳಲ್ಲಿ 23,800 (CNY 2,399) ರೂಪಾಯಿಗಳ ಬೆಲೆಯನ್ನು ಹೊಂದಿದೆ.!! ಶಿಯೋಮಿಯ ಎಲ್ಲಾ ಪ್ರಾಡೆಕ್ಟ್‌ಗಳ ಬೆಲೆ ಭಾರತದಲ್ಲಿ ಕಡಿಮೆ ಬೆಲೆಗೆ ಬಿಡುಗಡೆಯಾಗುವುದರಿಂದ ಈ ಟಿವಿ ಭಾರತದಲ್ಲಿ ಇನ್ನು ಕಡಿಮೆ ಬೆಲೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.!!

ಓದಿರಿ:ಶಿಯೋಮಿ ಭಾರತದ ನಂ.1 ಮೊಬೈಲ್ ಕಂಪೆನಿ ಆಗಿದ್ದೇಗೆ!?..ಭವಿಷ್ಯದಲ್ಲಿಯೂ ಮಣಿಸಲು ಸಾಧ್ಯವಿಲ್ಲವೇ?!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
it’s been a long time since Xiaomi launched their upgraded Android TV console. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot