ಆಮೆಜಾನ್-ಗೂಗಲ್‌ಗೆ ಸೆಡ್ಡು: ಶಿಯೋಮಿಯಿಂದ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ ಸ್ಪೀಕರ್..!

|

ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುಗಳು ಸ್ಮಾರ್ಟ್‌ ಆಗುತ್ತಿವೆ. ಇದೇ ಮಾದರಿಯಲ್ಲಿ ನಮ್ಮ ಅವಶ್ಯಕತೆಗೆ ಮತ್ತೊಂದು ಸೇರ್ಪಡೆಯಾಗುತ್ತಿದ್ದು, ಅದೇ ಸ್ಮಾರ್ಟ್‌ ಸ್ಪೀಕರ್‌ಗಳು, ವಾಯ್ಸ್ ಅಸಿಸ್ಟೆಂಟ್‌ಗಳು. ಸದ್ಯ ವಿಸ್ತಾರವಾದ ಭಾರತೀಯ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ಸ್ಮಾರ್ಟ್‌ ಸ್ಪೀಕರ್‌ಗಳು ಕಾಲಿಡುತ್ತಿದೆ.

ಆಮೆಜಾನ್-ಗೂಗಲ್‌ಗೆ ಸೆಡ್ಡು: ಶಿಯೋಮಿಯಿಂದ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ ಸ್ಪೀಕರ್

ಓದಿರಿ: BSNLನಿಂದ ನ್ಯೂಯಿರ್ ಕಾಂಬೋ ಪ್ಲಾನ್: ಜಿಯೋ-ಏರ್‌ಟೆಲ್‌ನಲ್ಲೂ ಇಲ್ಲ..!

ಅಮೆಜಾನ್ ಈಗಾಗಲೇ ತನ್ನ ಅಲೆಕ್ಸ್ ವಾಯ್ಸ್ ಅಸಿಸ್ಟೆಂಟ್ ಮೂಲಕ ಕಾರ್ಯನಿರ್ವಹಿಸುವ ಇಕೋ ಸ್ಪೀಕರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗೂಗಲ್ ಸಹ ತನ್ನ ಅಸಿಸ್ಟೆಂಟ್ ಮೂಲಕ ಕಾರ್ಯನಿರ್ವಹಿಸುವ ಗೂಗಲ್ ಹೋಮ್ ಸ್ಪೀಕರ್ ಬಿಡುಗಡೆ ಮಾಡುವ ಸನಿಹದಲ್ಲಿದೆ. ಇದೇ ಸಂದರ್ಭದಲ್ಲಿ ಶಿಯೋಮಿ ಸಹ ತನ್ನವೇ ಸ್ಮಾರ್ಟ್ ಸ್ಪೀಕರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಶಿಯೋಮಿ ಸ್ಮಾರ್ಟ್ ಸ್ಪೀಕರ್:

ಶಿಯೋಮಿ ಸ್ಮಾರ್ಟ್ ಸ್ಪೀಕರ್:

ಶಿಯೋಮಿ ಮಾಲೀಕತ್ವದ ಯೇಲೈಟ್ ಕಂಪನಿಯೂ ಮೊದಲ ಸ್ಮಾರ್ಟ್ ಸ್ಪೀಕರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೂ. 2000ದ ಅಸುಪಾಸಿನಲ್ಲಿ ದೊರೆಯುವ ಈ ಸ್ಮಾರ್ಟ್‌ ಸ್ಪೀಕರ್ ಅಮೆಜಾನ್ ಇಕೋ ಡಾಟ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಅದರಂತೆ ಕಾರ್ಯನಿರ್ವಹಿಸಲಿದೆ. ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ದೊರೆಯುತ್ತಿದೆ.

ಮೆಕ್ರೋಸಾಫ್ಟ್ ಕರೋಟನಾ:

ಮೆಕ್ರೋಸಾಫ್ಟ್ ಕರೋಟನಾ:

ಈಗಾಗಲೇ ಅಮೆಜಾನ್, ಗೂಗಲ್ ಮತ್ತು ಆಪಲ್ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುವ ವಾಯ್ಸ್ ಅಸಿಸ್ಟೆಂಟ್‌ಗಳು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಶಿಯೋಮಿ ಸ್ಮಾರ್ಟ್‌ ಸ್ಪೀಕರ್ ಮೈಕ್ರೋ ಸಾಫ್ಟ್ ನೀಡುತ್ತಿರುವ ಕರೋಟನಾ ವಾಯ್ಸ್ ಅಸಿಸ್ಟೆಂಟ್ ಮೂಲಕ ಕಾರ್ಯನಿರ್ವಹಿಸಲಿದೆ.

ಶೀಘ್ರವೇ ಭಾರತೀಯ ಮಾರುಕಟ್ಟೆ:

ಶೀಘ್ರವೇ ಭಾರತೀಯ ಮಾರುಕಟ್ಟೆ:

ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಸಹ ಸ್ಮಾರ್ಟ್ ಸ್ಪೀಕರ್ ಗಳು ಸದ್ದು ಶುರು ಮಾಡಿಲ್ಲ. ಆದರೆ ಭಾರತೀಯರು ಸ್ಮಾರ್ಟ್‌ ಸ್ಪೀಕರ್ ಕಡೆಗೆ ವಾಲುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರವೇ ಶಿಯೋಮಿ ಸ್ಮಾರ್ಟ್ ಸ್ಪೀಕರ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

Best Mobiles in India

English summary
Xiaomi's new Yeelight voice assistant smart speaker looks ridiculously like the Amazon Echo Dot. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X