ಶಿಯೋಮಿಯಿಂದ ಸ್ಮಾರ್ಟ್ ಶೂ ಬಿಡುಗಡೆ: ವಿಶೇಷತೆ ಕೇಳಿದ್ರೆ ಖರೀದಿಸುವ ಮನಸಾಗಲಿದೆ..!
ಸ್ಮಾರ್ಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಕಂಪನಿ ಈ ಬಾರಿ ಸ್ಮಾರ್ಟ್ ಶೂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿರುವ ಶಿಯೋಮಿ ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಸ್ಮಾರ್ಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಕಂಪನಿ ಈ ಬಾರಿ ಸ್ಮಾರ್ಟ್ ಶೂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಓದಿರಿ: ಭಾರತೀಯರ ದೇಶಪ್ರೇಮಕ್ಕೆ ಬೆಲೆ ತೆತ್ತ ವೀವೊ & ಒಪ್ಪೋ: ಭಾರೀ ನಷ್ಟಕ್ಕೆ ಗುರಿಯಾದ ಚೀನಾ ಕಂಪನಿಗಳು ಮಾಡಿದ್ದೇನು?
ಈಗಾಗಲೇ ಮಿ ಬ್ಯಾಂಡ್, ಎರ್‌ಫಿಲ್ಟರ್ ಬಿಡುಗಡೆ ಮಾಡಿರುವ ಶಿಯೋಮಿ, ಈ ಬಾರಿ ಸ್ಮಾರ್ಟ್ ಶೂ ಬಿಡುಗಡೆ ಮಾಡಿದ್ದು, ನೀವು ಕೊಡುವ ಬೆಲೆಗೆ ತಕ್ಕನಾದ ಶೂ ಇದಾಗಿದೆ ಎನ್ನಲಾಗಿದೆ.

ನಿಮ್ಮ ವರ್ಕ್ ಔಟ್ ರೆಕಾರ್ಡ್ ಮಾಡಲಿದೆ:
ಶಿಯೋಮಿಯ ಹೊಸ ಸ್ಮಾರ್ಟ್ ಶೂ ನಿಮ್ಮ ವರ್ಕ್ ಔಟ್ ಅನ್ನು ರೆಕಾರ್ಡ್ ಮಾಡಿಕೊಳ್ಳಲಿದ್ದು, ನಿಮ್ಮ ಮೊಬೈಲ್ ನಲ್ಲಿರುವ ಆಪ್ ನೊಂದಿಗೆ ಸಿಂಕ್ ಆಗಲಿದೆ ಅಲ್ಲಿ ಎಲ್ಲಾ ಮಾಹಿತಿಗಳನ್ನು ಸಾಝಲಿಸಿದೆ.

ಉತ್ತಮ ವಿನ್ಯಾಸವನ್ನು ಹೊಂದಿದೆ:
ಇದಲ್ಲದೇ ಶಿಯೋಮಿ ಸ್ಮಾರ್ಟ್ ಶೂ ಉತ್ತಮ ವಿನ್ಯಾಸವನ್ನು ಹೊಂದಿದ್ದು, ಟ್ರೆಂಡಿಯಾಗಿದೆ. ನೋಡಲು ಸುಂದರ ಮತ್ತು ಹಗುರವಾಗಿದೆ. ಇದು ಸ್ಪೋಡ್ಸ್ ಸೇರಿದಂತೆ ಎಲ್ಲಾ ಮಾದರಿಗೂ ಸರಿಯಾಗಲಿದೆ.

ಶೂ ನಲ್ಲೇ ಸೆನ್ಸಾರ್ ಇದೆ, ಬ್ಲೂಟೂತ್ ನಿಂದ ಕಾರ್ಯನಿರ್ವಹಿಸಲಿದೆ:
ಈ ಶೂನಲ್ಲಿ ಸೆನ್ಸಾರ್ ಗಳನ್ನು ಅಳವಡಿಸಲಾಗಿದ್ದು, ಇದು ನಿಮ್ಮ ನಡಿಗೆ, ಓಟವನ್ನು ಲೆಕ್ಕಹಾಕಲಿದೆ. ಅಲ್ಲದೇ ಇದು ಬ್ಲೂಟೂತ್ ನೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್ ಆಗಲಿದೆ.


ಬ್ಯಾಟರಿ ಸಹ ಇದೆ:
ಈ ಸೆನ್ಸಾರ್ ಗಳು ಕಾರ್ಯನಿರ್ವಹಿಸುವ ಸಲುವಾಗಿ ಇದರಲ್ಲಿ ಬ್ಯಾಟರಿಯನ್ನು ಸಹ ಅಳವಡಿಸಲಾಗಿದೆ. ಇದು 60 ದಿನಗ ಕಾಲ ಬಾಳಿಕೆಯನ್ನು ಬರಲಿದೆ. ಆದಾದ ನಂತರದಲ್ಲಿ ಚಾರ್ಜ್ ಮಾಡಬೇಕಾಗಿದೆ.


Click it and Unblock the Notifications








