ಜೆಬ್ರಾನಿಕ್ಸ್'ನಿಂದ 4242 ರೂಗೆ ಮಲ್ಟಿಮೀಡಿಯಾ ಸ್ಪೀಕರ್ ಲಾಂಚ್‌: ಏನಿದರ ವಿಶೇಷತೆ?

By Suneel
|

ಜೆಬ್ರಾನಿಕ್ಸ್ ಇಂಡಿಯಾ ಪ್ರೈ ಲಿ., ಭಾರತದಲ್ಲಿ ಐಟಿ ಬಿಡಿಭಾಗಗಳು ಮತ್ತು ಆಡಿಯೋ ಹಾಗೂ ವೀಡಿಯೋ ಉತ್ಪನ್ನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ ಆಗಿದ್ದು, ಈಗ ಆಡಿಯೋ ವಲಯದಲ್ಲಿ ತನ್ನ ಪೋರ್ಟ್ ಫೋಲಿಯೋಗೆ ಮತ್ತೊಂದು ಉತ್ಪನ್ನವನ್ನು ಸೇರಿಸಿದೆ. ಆಡಿಯೋ ಉತ್ಪನ್ನಗಳಾದ -ಬ್ಲೂಟೂತ್ ಸ್ಪೀಕರ್ ಗಳು, ಟವರ್ ಸ್ಪೀಕರ್ ಗಳು ಮತ್ತು ಹೋಂ ಥಿಯೇಟರ್ ಸಿಸ್ಟಂಗಳಿಗೆ ಗ್ರಾಹಕರಿಂದ ಇರುವ ಬೇಡಿಕೆಯನ್ನು ಪರಿಗಣಿಸಿ, ಜೆಬ್ರಾನಿಕ್ಸ್ ಬ್ರಾಂಡ್ ಪ್ರತೀ ತಿಂಗಳೂ ಹೊಸ ಉತ್ಪನ್ನಗಳ ಶ್ರೇಣಿ ಬಿಡುಗಡೆ ಮಾಡುತ್ತಿದೆ.

ಜೆಬ್ರಾನಿಕ್ಸ್'ನಿಂದ 4242 ರೂಗೆ ಮಲ್ಟಿಮೀಡಿಯಾ ಸ್ಪೀಕರ್  ಲಾಂಚ್‌: ಏನಿದರ ವಿಶೇಷತೆ

2.2 ಮಲ್ಟಿಮೀಡಿಯಾ ಸ್ಪೀಕರ್ ಬಿಡುಗಡೆಯಾಗಲಿರುವ ಅತ್ಯಾಧುನಿಕ ಪ್ರಾಡಕ್ಟ್ ಆಗಿದೆ. ZEB-BT361RUCF, 2.2 ಸ್ಪೀಕರ್ ಹೆಚ್ಚಿನ ಜನರ ಗಮನ ಸೆಳೆಯುವ ಮತ್ತು ಸಂಗೀತ ಗುನುಗಲು ಮತ್ತು ಮನೆಯಲ್ಲಿ ಚಲನಚಿತ್ರ ವೀಕ್ಷಿಸಲು ಬಯಸುವ ಸಂಗೀತಪ್ರಿಯರ ಹೃದಯ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಯಾಟಲೈಟ್ ಗಳ ವುಡನ್ ಆವರಣ ಮತ್ತು ವೂಫರ್ ಆಡಿಯೋಪ್ರೇಮಿಗಳು ಬಯಸುವ ದೃಢ ಮತ್ತು ಒರಟಾದ ನೋಟ ಪ್ರದರ್ಶಿಸುತ್ತದೆ.


ಎರಡು 4-ಇಂಚುಗಳ ಸಬ್ ವೂಫರ್ ಡ್ರೈವರ್ಸ್ ಒಂದೇ ಕ್ಯಾಬಿನೆಟ್ ನಲ್ಲಿ ಸೇರಿಸಿರುವುದರಿಂದ ಲಿವಿಂಗ್ ರೂಂನಲ್ಲಿ ಥಿಯೇಟರ್ ನಂತಹ ವಾತಾವರಣ ನೀಡುತ್ತದೆ, ಎಂದು ಜೆಬ್ರಾನಿಕ್ಸ್ ನಿರ್ದೇಶಕರಾದ ಮಿ. ಪ್ರದೀಪ್ ದೋಷಿ ಹೇಳಿದ್ದಾರೆ. ಜೆಬ್ರಾನಿಕ್ಸ್ ನ ಹೊಸ ಸ್ಪೀಕರ್ ಗಳು ಬ್ಲೂಟೂತ್ ಸಂಪರ್ಕ, ಯುಎಸ್‌ಬಿ ಪೋರ್ಟ್, ಎಸ್‌ಡಿ ಕಾರ್ಡ್‌ ಸಪೋರ್ಟ್ ಮತ್ತು ಪೂರ್ವನಿರ್ಮಿತ ಎಫ್ಎಂ ಟ್ಯೂನರ್ ನೊಂದಿಗೆ ಬರುತ್ತಿವೆ. ಸಬ್ ವೂಫರ್‌ನ ಔಟ್ ಪುಟ್ ಪವರ್ 25 ವ್ಯಾಟ್ಸ್ ಆಗಿದ್ದು, ಪ್ರತಿಯೊಂದು ಸ್ಯಾಟಲೈಟ್ 12 ವ್ಯಾಟ್ಸ್ ಔಟ್ ಪುಟ್ ನೀಡುತ್ತದೆ; ಇದು ಉತ್ತಮ ನೋಟ್ ನ ಸಂಯೋಜನೆಯೊಂದಿಗೆ, ಸರಿಯಾದ ಬಿಟ್ ಇರುವ ಬಾಸ್ ನೀಡುವ ಭರವಸೆ ಹೊಂದಿದೆ.

ಜೆಬ್ರಾನಿಕ್ಸ್'ನಿಂದ 4242 ರೂಗೆ ಮಲ್ಟಿಮೀಡಿಯಾ ಸ್ಪೀಕರ್  ಲಾಂಚ್‌: ಏನಿದರ ವಿಶೇಷತೆ

ಎಲ್ ಇ ಡಿ ಪ್ರದರ್ಶನವಿರುವ ಸುಂದರವಾಗಿ ಸಂಯೋಜಿತವಾದ ಕಂಟ್ರೋಲ್ ಪ್ಯಾನೆಲ್ ಮಲ್ಟಿಮೀಡಿಯಾ ನಿಯಂತ್ರಣಗಳನ್ನು ನಿರ್ವಹಿಸಲು ನೆರವಾಗುತ್ತದೆ. ಧ್ವನಿಯ ಪ್ರಮಾಣ, ಬಾಸ್ ಮತ್ತು ಟ್ರೆಬಲ್ ನಿಯಂತ್ರಣಗಳನ್ನು ಸಬ್ ವೂಫರ್ ನ ಮುಂಭಾಗದಲ್ಲಿ ಅತ್ಯಾಕರ್ಷಕವಾಗಿ ಹೊಂದಿಸಲಾಗಿದೆ. 2.2 ಸ್ಪೀಕರ್ ರಿಮೋಟ್ ಕಂಟ್ರೋಲ್ ನೊಂದಿಗೆ ಲಭ್ಯವಿದ್ದು, ಇದು ದೂರದಿಂದ ಪ್ರತಿಯೊಂದನ್ನೂ ನಿಯಂತ್ರಿಸುವ ಆಯ್ಕೆ ಹೊಂದಿದೆ.


ಜೆಬ್ರಾನಿಕ್ಸ್ 2.2 ಮಲ್ಟಿಮೀಡಿಯಾ ಸ್ಪೀಕರ್ ಆನ್ ಲೈನ್ ನಲ್ಲಿ ಮತ್ತು ಭಾರತದಾದ್ಯಂತ ಕಂಪನಿಯ ವಿತರಣಾ ನೆಟ್ ವರ್ಕ್ ಗಳಲ್ಲಿ ಲಭ್ಯ. ಇದು ರೂ 4242 ರ ಬಜೆಟ್ ಬೆಲೆ ಪ್ರಾಡಕ್ಟ್ ಆಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Zebronics Launches 2.2 Multimedia Speaker at Rs 4242. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X