Subscribe to Gizbot

ನಿಮ್ಮ ಹೆಡ್‌ಫೋನ್ ಅನ್ನು ವೈರ್ ಲೈಸ್ ಮಾಡಬಹುದು..!

Written By:

ಐಟಿ ಬಿಡಿಭಾಗಗಳು, ಆಡಿಯೋ/ವೀಡಿಯೋ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಬ್ರಾಂಡ್ ಆದ ಜೆಬ್ರಾನಿಕ್ಸ್, ZEB-BE380T ಇಯರ್ ಫೋನ್ ನೊಂದಿಗೆ ಹೊಸ ಬ್ಲೂಟೂತ್ ಮಾಡ್ಯೂಲ್ ಬಿಡುಗಡೆ ಮಾಡಿದೆ. ಯಾವುದೇ ಇಯರ್ ಫೋನ್ ಅಥವಾ ಹೆಡ್ ಫೋನ್ ಈಗ ಈ ಬ್ಲೂಟೂತ್ ಮಾಡ್ಯೂಲ್ ನೊಂದಿಗೆ ವೈರ್ ಲೆಸ್ ಆಗಬಹುದಾಗಿದ್ದು. ಇದು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರೆಯಲಿದೆ.

ನೀವು ವೈರ್ ಲೆಸ್ ಆಡಿಯೋ ಬಯಸುವ ವ್ಯಕ್ತಿಯಾದಲ್ಲಿ, ಈ ಉತ್ಪನ್ನ ನಿಮಗೆ ಹೆಚ್ಚು ಅಗತ್ಯವಿರುತ್ತದೆ. ಈ ಬ್ಲೂಟೂತ್ ಮಾದರಿ 3.5 ಮಿಮೀ ಜ್ಯಾಕ್ ಹೊಂದಿದೆ, ಈ ತೆಳುವಾದ ಹಗುರ ಮಾಡ್ಯೂಲ್ ಅನ್ನು ಒಮ್ಮೆ ನೀವು ಪ್ಲಗ್ ಮಾಡಿದರೆ, ನಿಮ್ಮ ಆಯ್ಕೆಯ ಯಾವುದೇ ಇಯರ್ ಫೋನ್ ಅಥವಾ ಹೆಡ್ ಫೋನ್ ವೈರ್ ಲೆಸ್ ಆಗಲಿದೆ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್ ಫೋನ್ ನೊಂದಿಗಿನ ಬ್ಲೂಟೂತ್ ಮಾಡ್ಯೂಲ್ ಭಾರತದಾದ್ಯಂತ ಎಲ್ಲಾ ಪ್ರಮುಖ ರೀಟೇಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಲ್ಯೂಮ್ ಮತ್ತು ಮೀಡಿಯಾ ಕಂಟ್ರೋಲ್:

ವಾಲ್ಯೂಮ್ ಮತ್ತು ಮೀಡಿಯಾ ಕಂಟ್ರೋಲ್:

ಈ ಬ್ಲೂಟೂತ್ ಮಾಡ್ಯೂಲ್ ವಾಲ್ಯೂಮ್ ಮತ್ತು ಮೀಡಿಯಾ ಕಂಟ್ರೋಲ್ ಬಟನ್ ಗಳನ್ನು ಹೊಂದಿದ್ದು, ಇದು ಸುಲಭ ನಿಯಂತ್ರಣಕ್ಕೆ ನೆರವಾಗುತ್ತದೆ ಮತ್ತು ಇದರಲ್ಲಿ ಎಂಪಿ3 ಪ್ಲೇಬ್ಯಾಕ್ ಗಳಿಗೆ ಮೈಕ್ರೋ ಎಸ್ ಡಿ ಸ್ಲಾಟ್ ಹೊಂದಿದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಇನ್-ಇಯರ್ ವಿಧದ ಹೆಡ್ ಫೋನ್ ಈ ಮಾಡ್ಯೂಲ್ ನೊಂದಿಗೆ ಲಭ್ಯವಿದ್ದು, ಇದನ್ನು ಉತ್ತಮ ಗುಣಮಟ್ಟದಿಂದ ನಿರ್ಮಿಸಲಾಗಿದೆ. ಈ ಇಯರ್ ಫೋನ್ ಗಳು ನಿಜಕ್ಕೂ ಆರಾಮದಾಯಕ ಇಯರ್ ಕಪ್ ಹೊಂದಿದೆ ಮತ್ತು ಇದರ ಮೆಟಾಲಿಕ್ ವಿನ್ಯಾಸದ ಹಿಂಭಾಗದ ಫಿನಿಶ್ ಇದಕ್ಕೆ ಪ್ರೀಮಿಯಂ ನೋಟ ನೀಡಿದೆ.

ಆರಾಮವಾಗಿ ಕ್ಯಾರಿ ಮಾಡಬಹುದು:

ಆರಾಮವಾಗಿ ಕ್ಯಾರಿ ಮಾಡಬಹುದು:

ಈ ಮಾಡ್ಯೂಲ್ ಕ್ಲಿಪ್ ವಿನ್ಯಾಸದಲ್ಲಿ ಲಭ್ಯವಿದೆ, ಇದರಿಂದ ವ್ಯಕ್ತಿ ಯಾವುದೇ ಬಟ್ಟೆಗೆ ಇದನ್ನು ಸುಲಭವಾಗಿ ಪಿನ್ ಮಾಡಬಹುದಾಗಿದ್ದು ಪ್ರಯಾಣಿಸುವಾಗಲೂ ಮ್ಯೂಸಿಕ್ ಗೆ ಸಂಪರ್ಕಿಸಬಹುದು. ಜಾಗಿಂಗ್ ಮಾಡುವವರಿಗೆ, ಓಟಗಾರರಿಗೆ ಮತ್ತು ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಿದ್ದು ಕರೆ ಸ್ವೀಕರಿಸಲು ಅಥವಾ ಹಾಡುಗಳನ್ನು ವಿಲೀನ ಮಾಡಲು ಫೋನ್ ಹೊರತೆಗೆಯುವ ಅವಶ್ಯಕತೆ ಇರುವುದಿಲ್ಲ.

10 ಮೀಟರ್ ವ್ಯಾಪ್ತಿ:

10 ಮೀಟರ್ ವ್ಯಾಪ್ತಿ:

ಈ ಬ್ಲೂಟೂತ್ ಮಾಡ್ಯೂಲ್ ಯಾವುದೇ ಅಡಚಣೆಯಿಲ್ಲದೇ 10 ಮೀಟರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಕ್ಲಿಪ್ ವಿನ್ಯಾಸದ ಮಾಡ್ಯೂಲ್ ರಚನೆ ಇದನ್ನು ಕೈಯಿಂದ ಮುಕ್ತವಾಗಿಸಿ ಸುಲಭವಾಗಿ ಸಂಪರ್ಕಿಸಿ ತಡೆರಹಿತ ಸಂಗೀತ ಆನಂದಿಸುವಂತೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Any earphone or headphone can now turn wireless with this Bluetooth module ZEB-BE380T that comes along with a bundled earphones. It is available in black and white colors. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot