ಫೇಸ್ ಬುಕ್ಕಿನಲ್ಲಿ ಮಾಡಬಹುದಾದ ನಿಮಗೆ ಗೊತ್ತಿಲ್ಲದ ಹತ್ತು ಅದ್ಭುತ ಸಂಗತಿಗಳು

Posted By:

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಮ್ಮಲ್ಲನೇಕರ ಜೀವನದ ಭಾಗವಾಗಿಬಿಟ್ಟಿದೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಂವಹಿಸಲು ಫೇಸ್ ಬುಕ್ಕಿನ ಮೇಲೆ ಅವಲಂಬಿತರಾಗಿದ್ದೇವೆ.

ಓದಿರಿ:  ಮನಸೆಳೆಯುವ ಅದ್ಭುತ ಕ್ಯಾಮೆರಾ ಫೋನ್ ಲೀ ಮ್ಯಾಕ್ಸ್2

ಈ ಜನಪ್ರಿಯ ಸಾಮಾಜಿಕ ಜಾಲತಾಣವನ್ನು ಪ್ರತಿನಿತ್ಯ ಉಪಯೋಗಿಸಿದರೂ, ಫೇಸ್ ಬುಕ್ಕನ್ನು ಉಪಯೋಗಿಸುವುದನ್ನು ಸಲೀಸಾಗಿಸುವ ಹತ್ತಲವು ವಿಷಯಗಳಿವೆ. ಫೇಸ್ ಬುಕ್ಕನ್ನು ಇನ್ನೂ ಚೆನ್ನಾಗಿ ಉಪಯೋಗಿಸುವುದಕ್ಕಾಗಿ ಇವತ್ತು ಕೆಲವು ಸಲಹೆ ಮತ್ತು ಟ್ರಿಕ್ಕುಗಳನ್ನು ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್ ಬುಕ್ ಟಿಪ್ 1

ಫೇಸ್ ಬುಕ್ ಟಿಪ್ 1

ನೀವು ಉಪಯೋಗಿಸುವ ಆ್ಯಪುಗಳನ್ನು ಯಾರ್ಯಾರು ನೋಡಬಹುದೆಂದು ನಿಯಂತ್ರಿಸಿ

ತಮ್ಮ ನ್ಯೂಸ್ ಫೀಡಿನಲ್ಲಿ ನಿಮ್ಮ ಗೆಳೆಯರು ನೀವು ಉಪಯೋಗಿಸುವ ಆ್ಯಪುಗಳ ಬಗೆಗಿನ ಮಾಹಿತಿಯನ್ನು ನೋಡಬಹುದು, ನೀವು ಕೇಳಿದ ಹಾಡು, ಕ್ಯಾಂಡಿ ಕ್ರಷ್ಷಿನಲ್ಲಿ ನಿಮ್ಮ ಸ್ಕೋರು, ಇವೆಲ್ಲವೂ ಅವರಿಗೆ ತಲುಪಿ ಅವರನ್ನು ಮುಜುಗರಕ್ಕೀಡು ಮಾಡಬಹುದು. ನಿಮ್ಮ ಟೈಮ್ ಲೈನಿನಲ್ಲಿ ಈ ರೀತಿಯ ಚಟುವಟಿಕೆ ಮೂಡುವುದನ್ನು ನೀವು ತಡೆಯಬಹುದು.

ನಿಮ್ಮ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಿ.

ಪರದೆಯ ಎಡ ಭಾಗದಲ್ಲಿ, ಆ್ಯಪ್ ವಿಭಾಗದಲ್ಲಿ ಮೋರ್ ಆಯ್ಕೆ ಮಾಡಿ.

ಸೆಟ್ಟಿಂಗ್ಸ್ ಅನ್ನು ಆಯ್ದುಕೊಳ್ಳಿ. ಈಗ ಫೇಸ್ ಬುಕ್ ಖಾತೆಯನ್ನು ಉಪಯೋಗಿಸಿಕೊಂಡು ನೀವು ಯಾವ ಯಾವ ಆ್ಯಪ್ ಗೆ ಲಾಗಿನ್ ಆಗಿದ್ದೀರಾ ಎನ್ನುವ ಮಾಹಿತಿ ಬರುತ್ತದೆ.

ಆ್ಯಪ್ ಒಂದನ್ನು ಮರೆಮಾಚಲು, ನನಗಷ್ಟೇ ಎಂಬ ಆಯ್ಕೆಯನ್ನು ಆರಿಸಿ.

ಫೇಸ್ ಬುಕ್ ಟಿಪ್ 2

ಫೇಸ್ ಬುಕ್ ಟಿಪ್ 2

ಕಿರಿಕಿರಿಯುಂಟುಮಾಡುವ ಆಟದ ನೋಟಿಫಿಕೇಷನ್ನನ್ನು ಆಫ್ ಮಾಡಿ

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಿಮ್ಮ ಫೇಸ್ ಬುಕ್ ಗೆಳೆಯರಿಂದ ಕ್ಯಾಂಡಿ ಕ್ರಷ್ ಆಡಿ, ಪೈರೇಟ್ ಕಿಂಗ್ಸ್ ಆಡಿ ಎಂಬ ನೋಟಿಫಿಕೇಷನ್ನುಗಳು ಪದೇ ಪದೇ ಬಂದು ನಿಮಗೆ ಕಿರಿಕಿರಿಯಾಗುತ್ತಿದೆಯೇ? ಅದನ್ನು ತಡೆಯುವ ವಿಧಾನ ಇಲ್ಲಿದೆ.

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಫೇಸ್ ಬುಕ್ ಆ್ಯಪ್ ಅನ್ನು ತೆರೆದು ಆ್ಯಪ್ ಸೆಟ್ಟಿಂಗ್ಸಿಗೆ ಹೋಗಿ ಮತ್ತು ಅಪ್ಲಿಕೇಷನ್ಸ್ ಮನವಿಯನ್ನು ಆಫ್ ಮಾಡಿ.

ಫೇಸ್ ಬುಕ್ ಟಿಪ್ 3

ಫೇಸ್ ಬುಕ್ ಟಿಪ್ 3

ನಿಮ್ಮ ಫೇಸ್ ಬುಕ್ ಖಾತೆಯಿಂದ ಆ್ಯಪುಗಳನ್ನು ತೆಗೆದು ಹಾಕಿ

ಫೇಸ್ ಬುಕ್ ಮುಖಾಂತರ ನೀವು ಯಾವುದಾದರು ಆ್ಯಪ್ ಗೆ ಲಾಗಿನ್ ಆಗಿದ್ದರೆ, ನೀವು ಆ ತಂತ್ರಾಂಶವನ್ನು ಉಪಯೋಗಿಸದೇ ಇದ್ದರೂ ಆ ಆ್ಯಪ್ ನಿಮ್ಮ ಫೇಸ್ ಬುಕ್ ಖಾತೆಯ ವಿವರಗಳನ್ನು ಸಂಗ್ರಹಿಸುತ್ತಿರುತ್ತದೆ. ಸೆಟ್ಟಿಂಗ್ಸಿಗೆ ಹೋಗಿ ಆ ಆ್ಯಪ್ ಗಳನ್ನು ತೆಗೆದು ಹಾಕಬಹುದು.

ಆ್ಯಪ್ ಸೆಟ್ಟಿಂಗ್ಸಿಗೆ ಹೋಗಿ, ಆ್ಯಪ್ ನ ಪಕ್ಕದಲ್ಲಿರುವ X ಬಟನನ್ನು ಒತ್ತಿರಿ

ಫೇಸ್ ಬುಕ್ ಟಿಪ್ 4

ಫೇಸ್ ಬುಕ್ ಟಿಪ್ 4

ಟ್ವಿಟರಿನಿಂದ ಫೇಸ್ ಬುಕ್ಕಿಗೆ ಪೋಸ್ಟ್ ಮಾಡಿ

ಒಂದೇ ವಿಷಯವನ್ನು ಏಕಕಾಲದಲ್ಲಿ ಫೇಸ್ ಬುಕ್ ಮತ್ತು ಟ್ವಿಟರಿನಲ್ಲಿ ಪ್ರಕಟಿಸಬಹುದು. ನಿಮ್ಮ ಟ್ವಿಟರ್ ಖಾತೆಗೆ ಲಾಗಿನ್ ಆಗಿ, ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ಕಿಸಿ ಮತ್ತು ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಹಂಚಿಕೊಳ್ಳಲು ಫೇಸ್ ಬುಕ್ ಜೊತೆಗೆ ಕನೆಕ್ಟ್ ಮಾಡಿ.

ಫೇಸ್ ಬುಕ್ ಟಿಪ್ 5

ಫೇಸ್ ಬುಕ್ ಟಿಪ್ 5

ನಿಮ್ಮ ಫೇಸ್ ಬುಕ್ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ

ನೀವು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿರುವ ಎಲ್ಲಾ ಪೋಸ್ಟು, ಚಿತ್ರಗಳನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು. ಸೆಟ್ಟಿಂಗ್ಸಿಗೆ ಹೋಗಿ, ಜೆನೆರಲ್ ಟ್ಯಾಬ್ ನಲ್ಲಿರುವ ಡೌನ್ ಲೋಡ್ ಎ ಕಾಪಿ ಮೇಲೆ ಕ್ಲಿಕ್ಕಿಸಿ.

ಫೇಸ್ ಬುಕ್ ಟಿಪ್ 6

ಫೇಸ್ ಬುಕ್ ಟಿಪ್ 6

ನಿಮ್ಮ ಪೋಸ್ಟುಗಳನ್ನು ಯಾರು ನೋಡುತ್ತಾರೆ ಎನ್ನುವುದನ್ನು ನೀವೇ ನಿಯಂತ್ರಿಸಿ

ನಿಮ್ಮ ಟೈಮ್ ಲೈನಿಗೆ ಪೋಸ್ಟ್ ಹಾಕುವ ಮೊದಲು, ಅದು ಯಾರು ಯಾರಿಗೆ ಕಾಣಿಸಬೇಕು ಎನ್ನುವುದನ್ನು ಆಯ್ದುಕೊಳ್ಳಬಹುದು. ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ಕಿಸಿ, ಯಾರು ನಿಮ್ಮ ಪೋಸ್ಟುಗಳನ್ನು ನೋಡಬೇಕು ಎನ್ನುವುದನ್ನು ನಿರ್ಧರಿಸಿ.

ಫೇಸ್ ಬುಕ್ ಟಿಪ್ 7

ಫೇಸ್ ಬುಕ್ ಟಿಪ್ 7

ಟೈಮ್ ಲೈನಿನ ವಿಮರ್ಶೆ

ನಿಮ್ಮನ್ನು ಟ್ಯಾಗ್ ಮಾಡಲಾಗಿರುವ ಎಲ್ಲಾ ಪೋಸ್ಟುಗಳನ್ನು ನೋಡಿ, ನಿಮ್ಮ ಟೈಮ್ ಲೈನಿನಲ್ಲಿ ಯಾವುದು ಕಾಣಬೇಕು ಯಾವುದು ಕಾಣಬಾರದು ಎಂದು ನಿರ್ಧರಿಸಿ.

ನಿಮ್ಮ ಖಾತೆಯ ಸೆಟ್ಟಿಂಗ್ಸಿಗೆ ಹೋಗಿ - ಟೈಮ್ ಲೈನ್ ಆಯ್ದುಕೊಳ್ಳಿ - ಟ್ಯಾಗಿಂಗ್ ಆಯ್ಕೆಯಲ್ಲಿ ನಿಮ್ಮ ಸ್ನೇಹಿತರು ಟ್ಯಾಗ್ ಮಾಡಿದ ಪೋಸ್ಟುಗಳು ನಿಮ್ಮ ಟೈಮ್ ಲೈನಿನಲ್ಲಿ ಮೂಡುವ ಮೊದಲು ನಿಮ್ಮ ಗಮನಕ್ಕೆ ಬರಬೇಕೆಂಬುದನ್ನು ಆಯ್ದುಕೊಳ್ಳಿ.

ಫೇಸ್ ಬುಕ್ ಟಿಪ್ 8

ಫೇಸ್ ಬುಕ್ ಟಿಪ್ 8

ಲಾಗಿನ್ ಅನುಮತಿ

ಲಾಗಿನ್ ಅನುಮತಿಯ ವಿಷಯದಲ್ಲಿ ಫೇಸ್ ಬುಕ್ ಒಂದು ಹೆಜ್ಜೆ ಮುಂದೆ ಹೋಗಿದೆ; ಅನಾಮಿಕ ವೆಬ್ ಬ್ರೌಸರಿನಲ್ಲಿ ಲಾಗಿನ್ ಆದಾಗ ಫೇಸ್ ಬುಕ್ ಅದರ ಕುರಿತಾದ ಮಾಹಿತಿಯನ್ನು ನಿಮಗೆ ನೀಡುತ್ತದೆ.

ಫೇಸ್ ಬುಕ್ ಅಕೌಂಟ್ ಸೆಟ್ಟಿಂಗಿಗೆ ಹೋಗಿ - ಸೆಕ್ಯುರಿಟಿಯನ್ನು ಆಯ್ಕೆ ಮಾಡಿ - ಲಾಗಿನ್ ಅನುಮತಿಯ ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಫೋನ್ ನಂಬರನ್ನು ದಾಖಲಿಸಿ, ಪ್ರತಿ ಬಾರಿ ಲಾಗಿನ್ ಆಗುವಾಗಲೂ ಲಾಗಿನ್ ಅನುಮತಿಯನ್ನು ಕೇಳುತ್ತದೆ.

ಫೇಸ್ ಬುಕ್ ಟಿಪ್ 9

ಫೇಸ್ ಬುಕ್ ಟಿಪ್ 9

ನೋಟಿಫಿಕೇಷನ್ನುಗಳನ್ನು ಮೌನವಾಗಿಸಿ

ವ್ಯಕ್ತಿಯೊಬ್ಬರ ಪೋಸ್ಟುಗಳನ್ನು ಅಥವಾ ಗುಂಪು ಮೆಸೇಜುಗಳನ್ನು ನೀವು ಮೌನವಾಗಿಸಬಹುದು.

ಪೋಸ್ಟಿಗೆ ಹೋಗಿ - ಬಾಣದ ಗುರುತನ್ನು ಆಯ್ದುಕೊಳ್ಳಿ - ಈ ಪೋಸ್ಟಿನ ನೋಟಿಫಿಕೇಷನ್ನನ್ನು ಆಫ್ ಮಾಡಿ ಎಂಬುದರ ಮೇಲೆ ಕ್ಲಿಕ್ಕಿಸಿ.

ಫೇಸ್ ಬುಕ್ ಟಿಪ್ 10

ಫೇಸ್ ಬುಕ್ ಟಿಪ್ 10

ನಿಮ್ಮನ್ನು ಟ್ಯಾಗ್ ಮಾಡಲಾಗಿರುವ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ

ನಿಮ್ಮನ್ನು ಟ್ಯಾಗ್ ಮಾಡಲಾಗಿರುವ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಿದ್ದಲ್ಲಿ, ಫೋಟೋ ಮೇಲೆ ಕ್ಲಿಕ್ ಮಾಡಿ ಮತ್ತು ಬಲಬದಿಯ ಕೆಳಗಿರುವ ಆಯ್ಕೆಗಳ ಬಟನನ್ನು ಒತ್ತಿ ಡೌನ್ ಲೋಡ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Despite the fact that we use the popular social networking every day, there are still some handy tips and tricks that make using Facebook a lot easier.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot