ಫೋನ್‌ನಲ್ಲಿ ಈ ಲಾಕ್‌ಗಳಿಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!

Written By:

ಸ್ಮಾರ್ಟ್‌ಫೋನ್ ಖರೀದಿ ಇಂದಿನ ಯುಗದಲ್ಲಿ ಬಹು ಸರಳವಾದ ಪ್ರಕ್ರಿಯೆಯಾಗಿದೆ. ನಿಮ್ಮ ಕೈಗೆಟಕುವ ಬೆಲೆಯಲ್ಲಿ ಇಂದು ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು ನಿಮ್ಮ ಫೋನ್ ಖರೀದಿಸುವ ಆಸೆಯನ್ನು ಕೆಲವೇ ಸಮಯಗಳಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಅದರಲ್ಲೂ ಹೊಸ ಹೊಸ ತಂತ್ರಜ್ಞಾನ ಫೋನ್‌ನಲ್ಲಿ ಅಳವಡಿತವಾಗಿದ್ದು ಇದರಿಂದ ಫೋನ್‌ನಿಂದ ಆದಷ್ಟು ಪ್ರಯೋಜನವೇ ನಮಗುಂಟಾಗುತ್ತಿದೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಇನ್ನು ಫೋನ್ ಅನ್ನು ಖರೀದಿಸಿ ಅದನ್ನು ಬಳಸಿದರೆ ಮಾತ್ರ ಸಾಲದು ಜಾಗರೂಕರಾಗಿ ಅದನ್ನು ಕಾಪಾಡುವ ಸಾಮರ್ಥ್ಯ ಕೂಡ ನಮ್ಮಲ್ಲಿರಬೇಕು. ಕಳ್ಳರಿಂದ ಇಲ್ಲವೇ ಫೋನ್‌ನಲ್ಲಿರುವ ಗೌಪ್ಯ ಮಾಹಿತಿಗಳನ್ನು ಇತತರರಿಂದ ರಕ್ಷಿಸಿಕೊಳ್ಳುವ ವಿಧಾನ ನಮಗೆ ತಿಳಿದಿರಬೇಕು. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ನಾವು ನಿಮಗೆ ತಿಳಿಸುತ್ತಿದ್ದು ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಕ್ ಮಾಡಿ

ಲಾಕ್ ಮಾಡಿ

ಸ್ಮಾರ್ಟ್‌ಫೋನ್ ಲಾಕ್ ಮಾಡಿ

ನಿಮ್ಮ ಫೋನ್ ಅನ್ನು ಲಾಕ್ ಮಾಡುವುದು ಫೋನ್‌ನ ಸುರಕ್ಷೆಗೆ ಹೆಚ್ಚು ಪ್ರಯೋಜನಕಾರಿ ವಿಧಾನವಾಗಿದೆ. ಫೋನ್‌ನ ಸುರಕ್ಷೆಯಲ್ಲಿ ಲಾಕಿಂಗ್ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಆದ್ದರಿಂದ ಫೋನ್ ಲಾಕಿಂಗ್‌ಗೆ ಹೆಚ್ಚಿನ ಮಹತ್ವ ನೀಡಿ.

ನಂಬಿಕಸ್ಥ ಡಿವೈಸ್‌

ನಂಬಿಕಸ್ಥ ಡಿವೈಸ್‌

ಬ್ಲ್ಯೂಟೂತ್

ಬ್ಲ್ಯೂಟೂತ್ ಅನ್ನು ಬಳಸಿ ನಿಮ್ಮ ಫೋನ್‌ನ ಸುರಕ್ಷತೆಯನ್ನು ಮಾಡಬಹುದಾಗಿದೆ. ನಂಬಿಕಸ್ಥ ಡಿವೈಸ್‌ಗೆ ಸಂಪರ್ಕವನ್ನು ಪಡೆದುಕೊಂಡು ಫೋನ್ ಅನ್ನು ಅನ್‌ಲಾಕ್ ಮಾಡಿ.

ಪೆಬಲ್ ಲಾಕರ್

ಪೆಬಲ್ ಲಾಕರ್

ವೈಫೈ

ಪೆಬಲ್ ಲಾಕರ್ ವೈಫೈ ನೆಟ್‌ವರ್ಕ್‌ಗಳಲ್ಲಿ ನಿಮ್ಮ ಡಿವೈಸ್ ಅನ್ನು ಲಾಕ್ ಮಾಡಲು ಅನುಮತಿಸುತ್ತವೆ. ಸ್ಕಿಪ್ ಲಾಕ್ ಎಂಬ ಇನ್ನೊಂದು ಆಯ್ಕೆ ಕೂಡ ಇಲ್ಲಿದೆ.

ಎಲ್‌ಜಿ

ಎಲ್‌ಜಿ

ನಾಕ್ ಕೋಡ್

ಎಲ್‌ಜಿ ತನ್ನ ಡಿವೈಸ್‌ಗಳಲ್ಲಿ ಹೊಸದಾಗಿ ಸೇರಿಸಿರುವ ಫೀಚರ್ ಆಗಿದೆ ನಾಕ್ ಕೋಡ್. ಪಿನ್ ಮತ್ತು ಪಾಸ್‌ವರ್ಡ್ ಲಾಕ್‌ನಂತೆಯೇ ಈ ನಾಕ್ ಕೋಡ್ ಕಾರ್ಯನಿರ್ವಹಿಸುತ್ತದೆ.

ಮೋಟೋ ಎಕ್ಸ್

ಮೋಟೋ ಎಕ್ಸ್

ಎನ್‌ಎಫ್‌ಸಿ ಅನ್‌ಲಾಕ್

ಮೋಟೋ ಎಕ್ಸ್ ಒದಗಿಸಿರುವ ಇನ್ನೊಂದು ಫೀಚರ್ ಇದಾಗಿದ್ದು ಎನ್‌ಎಫ್‌ಸಿ ಲಾಕ್ ಆಗಿದೆ. ನೀವು ಸ್ಪರ್ಶಿಸಿದರೆ ಸಾಕು ನಿಮ್ಮ ಫೋನ್ ಅನ್‌ಲಾಕ್ ಆಗುತ್ತದೆ.

ಉತ್ತಮ ವಿಧಾನ

ಉತ್ತಮ ವಿಧಾನ

ಫಿಂಗರ್ ಪ್ರಿಂಟ್ಸ್

ನಮ್ಮದೇ ಬೆರಳಚ್ಚಿನಿಂದ ಫೋನ್ ಅನ್ನು ಲಾಕ್ ಮಾಡುವುದು ಕೂಡ ಅತ್ಯಂತ ಭದ್ರ ವಿಧಾನವಾಗಿದೆ. ಬೆರಳಚ್ಚನ್ನು ಯಾರಿಗೂ ಕದಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದೊಂದು ಉತ್ತಮ ವಿಧಾನವಾಗಿದೆ.

ಕ್ವಾರ್ಟಿ ಪಾಸ್‌ವರ್ಡ್

ಕ್ವಾರ್ಟಿ ಪಾಸ್‌ವರ್ಡ್

ಪಾಸ್‌ವರ್ಡ್

ಕ್ವಾರ್ಟಿ ಪಾಸ್‌ವರ್ಡ್ ಬಳಸಿ ನಿಮ್ಮ ಫೋನ್ ಅನ್ನು ಭದ್ರಪಡಿಸುವುದು ಸುರಕ್ಷಾ ವಿಧಾನವಾಗಿದೆ. ಈ ವಿಧಾನವನ್ನು ಹೆಚ್ಚಿನ ಫೋನ್ ಬಳಕೆದಾರರು ಅನುಸರಿಸುತ್ತಿದ್ದಾರೆ. ಮತ್ತು ಇದು ಸುಲಭ ಕೂಡ.

ಪ್ರಚಲಿತ ಲಾಕ್

ಪ್ರಚಲಿತ ಲಾಕ್

ಪ್ಯಾಟ್ರನ್

ಪ್ಯಾಟ್ರನ್ ಲಾಕ್ ಕೂಡ ಹೆಚ್ಚು ಪ್ರಚಲಿತದಲ್ಲಿರುವ ಲಾಕ್ ಆಗಿದ್ದು ಇದು ಹೆಚ್ಚು ಭದ್ರವಾಗಿದೆ. ಸಂಖ್ಯೆಯನ್ನು ಬಳಸಿ ಫೋನ್ ಪ್ಯಾಟ್ರನ್‌ ವಿಧಾನವನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ.

ಸುರಕ್ಷಿತವಲ್ಲ

ಸುರಕ್ಷಿತವಲ್ಲ

ಫೇಸ್ ಅನ್‌ಲಾಕ್

ಪಿನ್, ಪಾಸ್‌ವರ್ಡ್ ಇಲ್ಲವೇ ಪ್ಯಾಟ್ರನ್ ಅನ್‌ಲಾಕ್‌ಗಿಂತ ಫೇಸ್‌ ಅನ್‌ಲಾಕ್ ಹೆಚ್ಚು ಸುರಕ್ಷಿತವಲ್ಲ. ನಿಮ್ಮಂತೇ ಹೋಲುವ ಮತ್ತೊಬ್ಬರು ಕೂಡ ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಬಹುದು.

ಲಾಕ್ ಮಾಡಿ

ಲಾಕ್ ಮಾಡಿ

ಫೋನ್ ಲಾಕ್ ಮಾಡಿ

ಇಷ್ಟೆಲ್ಲಾ ಲಾಕಿಂಗ್ ವಿಧಾನವನ್ನು ನಾವು ನಿಮಗೆ ನೀಡಿದ್ದು ನಿಮ್ಮ ಫೋನ್ ಅನ್ನು ಲಾಕ್ ಮಾಡುವ ಕ್ರಿಯೆಯನ್ನು ನೀವು ಈಗಲೇ ಅನುಸರಿಸಿ. ಫೋನ್‌ನ ಭದ್ರತೆಗೆ ಈ ಲಾಕಿಂಗ್ ವ್ಯವಸ್ಥೆ ಹೆಚ್ಚು ಮಹತ್ವದ್ದಾಗಿದೆ ಎಂಬುದನ್ನು ಮರೆಯದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Buying a smartphone is not a big deal in this era. But keeping it safely is more important than protecting it. Today we are giving some best methods to keep your phone more secure. These phone locking protections giving your phone hard security.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot