ಐಫೋನ್ ಛಾಯಾಗ್ರಹಣದಲ್ಲಿ ಮಾಡುವ ಹತ್ತು ಸಾಮಾನ್ಯ ತಪ್ಪುಗಳು.. ಅದನ್ನು ತಪ್ಪಿಸುವುದೇಗೆ

|

ಐಫೋನ್ ಛಾಯಾಗ್ರಹಣದಲ್ಲಿ ಮಾಡುವ ಹತ್ತು ಸಾಮಾನ್ಯ ತಪ್ಪುಗಳು.. ಅದನ್ನು ತಪ್ಪಿಸುವುದೇಗೆ

ಐಫೋನ್ ಛಾಯಾಗ್ರಹಣದಲ್ಲಿ ಮಾಡುವ ಹತ್ತು ಸಾಮಾನ್ಯ ತಪ್ಪುಗಳು.. ಅದನ್ನು ತಪ್ಪಿಸುವುದೇ

ಐಫೋನಿನಲ್ಲಿ ಅದೇಗೆ ಅಷ್ಟು ಚೆಂದದ ಚಿತ್ರಗಳನ್ನು ತೆಗೆಯುತ್ತಾರೆ ಎಂದು ನೀವು ಯಾವಾಗಾದರೂ ಅಚ್ಚರಿ ಪಟ್ಟಿದ್ದುಂಟಾ?! ಐಫೋನ್ ಹತ್ತಲವು ಸಾಧನಗಳನ್ನು ಇಲ್ಲವಾಗಿಸಿದೆ; ಛಾಯಾಗ್ರಹಣದ ಅರ್ಥವನ್ನು ಬದಲಿಸಿದೆ.

ಓದಿರಿ: ಮನಸೆಳೆಯುವ ಅದ್ಭುತ ಕ್ಯಾಮೆರಾ ಫೋನ್ ಲೀ ಮ್ಯಾಕ್ಸ್2

ಈಗಂತೂ ಸ್ಮಾರ್ಟ್ ಫೋನುಗಳಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾ ಲಭ್ಯವಿದೆ. ಸ್ಮಾರ್ಟ್ ಫೋನಿನ ಕ್ಯಾಮೆರಾಗಳು ಕಳೆದ ಕೆಲವು ವರುಷಗಳಿಂದ ತಾಂತ್ರಿಕವಾಗಿ ಉತ್ತಮಗೊಂಡಿದೆ. ಅನುಮಾನವೇ ಬೇಡ ಮಾರುಕಟ್ಟೆಯಲ್ಲಿರುವ ಉತ್ತಮ ಸ್ಮಾರ್ಟ್ ಫೋನುಗಳಲ್ಲಿ ಆ್ಯಪಲ್ಲಿನ ಐಫೋನಿಗೇ ಮೊದಲ ಸ್ಥಾನ. ಐಫೋನ್ 6 ಮತ್ತು ಐಫೋನ್ 6 ಪ್ಲಸ್ಸಿನಲ್ಲಿ ಕೇವಲ 8 ಮೆಗಾಪಿಕ್ಸಲ್ಲಿನ ಕ್ಯಾಮೆರಾ ಕೊಟ್ಟಿತ್ತು ಆ್ಯಪಲ್. ಇದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ
ಈಗ, ಆ್ಯಪಲ್ ತನ್ನ ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ನಲ್ಲಿ 12 ಮೆಗಾಪಿಕ್ಸಲ್ಲಿನ ಐಸೈಟ್ ಕ್ಯಾಮೆರಾವನ್ನು ಹಿಂಬದಿಯಲ್ಲಿ ನೀಡಿದ್ದರೆ ಮುಂಭಾಗದಲ್ಲಿ 5 ಮೆಗಾಪಿಕ್ಸಲ್ಲಿನ ಫೇಸ್ ಟೈಮ್ ಕ್ಯಾಮೆರಾವನ್ನು ನೀಡಿದೆ.

ಐಫೋನ್ ಉಪಯೋಗಿಸಿ ಅತ್ಯಾಕರ್ಷಕ ಫೋಟೋಗಳನ್ನು ತೆಗೆಯುವುದು ಹೇಗೆ ಮತ್ತು ತಪ್ಪುಗಳನ್ನು ಮಾಡದಿರುವುದು ಹೇಗೆ ಎಂದು ಈ ಲೇಖನ ನಿಮಗೆ ತಿಳಿಸುತ್ತದೆ.

ಐಫೋನ್ ಛಾಯಾಗ್ರಹಣ ಟಿಪ್ 1

ಐಫೋನ್ ಛಾಯಾಗ್ರಹಣ ಟಿಪ್ 1

ಫೋಕಲ್ ಪಾಯಿಂಟ್ ಇಲ್ಲದಿರುವುದು

ನಿಮ್ಮ ಚಿತ್ರದಲ್ಲಿ ಆಸಕ್ತಿ ಮೂಡಿಸುವ ವಸ್ತು ಇಲ್ಲದೇ ಹೋದಲ್ಲಿ, ನೋಡುಗರ ಗಮನವನ್ನು ಸೆಳೆಯುವುದಿಲ್ಲ. ನಿಮ್ಮ ಕಣ್ಣುಗಳು ಎಲ್ಲಿ ಸುಲಭವಾಗಿ ಹೋಗುತ್ತದೋ, ಎಲ್ಲಿ ವಿರಮಿಸುತ್ತದೋ ಅಲ್ಲಿರುವ ವಸ್ತುವಿನ ಬಗ್ಗೆ ಯಾವಾಗಲೂ ಯೋಚಿಸಿ. ಒಂದು ನಿರ್ದಿಷ್ಟ ವಸ್ತು ಫೋಕಲ್ ಪಾಯಿಂಟಿನಲ್ಲಿ ಇಲ್ಲದೇ ಹೋದರೆ ಆಸಕ್ತಿಕರ ವಸ್ತುವನ್ನೊಳಗೊಳ್ಳಬಹುದಾದ ವಿಭಿನ್ನ ಕೋನವನ್ನು ಪ್ರಯತ್ನಿಸಿ.

ಐಫೋನ್ ಛಾಯಾಗ್ರಹಣ ಟಿಪ್ 2

ಐಫೋನ್ ಛಾಯಾಗ್ರಹಣ ಟಿಪ್ 2

ಸರಿಯಾಗಿ ಫೋಕಸ್ ಮಾಡದಿರುವುದು

ಚಿತ್ರಗಳನ್ನು ತೆಗೆಯುವಾಗ, ನಿಮ್ಮ ಚಿತ್ರದ ಪ್ರಮುಖ ವಸ್ತು/ವ್ಯಕ್ತಿಯನ್ನು ಮ್ಯಾನುಯಲ್ ಫೋಕಸ್ ಮಾಡಲು ಮರೆಯದಿರಿ. ಕ್ಯಾಮೆರಾದ ಆಟೋ ಫೋಕಸ್ಸಿಗೆ ಫೋಕಸ್ ಮಾಡುವ ಕೆಲಸ ಬಿಟ್ಟುಬಿಡುವುದಕ್ಕಿಂತ ಮ್ಯಾನುಯಲ್ ಫೋಕಸ್ ಉತ್ತಮ. ಚಿತ್ರದ ಚೌಕಟ್ಟಿನ ವಿವಿಧ ಭಾಗಗಳನ್ನು ಫೋಕಸ್ ಮಾಡಿ ಪ್ರಯೋಗಿಸಿದರೆ ಅಂತಿಮ ಚಿತ್ರ ಹೇಗೆ ಮೂಡಿಬರುತ್ತದೆ ಎನ್ನುವುದರ ಕುರಿತು ನಿಮಗೊಂದು ಕಲ್ಪನೆ ಬರುತ್ತದೆ.

ಐಫೋನ್ ಛಾಯಾಗ್ರಹಣ ಟಿಪ್ 3

ಐಫೋನ್ ಛಾಯಾಗ್ರಹಣ ಟಿಪ್ 3

ಎಕ್ಸ್ ಪೋಷರ್ ಜಾಸ್ತಿಯಿರಬೇಕಾ ಕಡಿಮೆಯಿರಬೇಕಾ?

ಆ್ಯಪಲ್ ಐಫೋನಿನ ಕ್ಯಾಮೆರಾ ದೃಶ್ಯವನ್ನು ವಿಶ್ಲೇಷಿಸಿ ಒಳ್ಳೆಯ ಚಿತ್ರ ಮೂಡಲು ಎಷ್ಟು ಬೆಳಕು ಕ್ಯಾಮೆರಾದ ಒಳಗೆ ಪ್ರವೇಶಿಸಬೇಕೆಂದು ನಿರ್ಧರಿಸಿ ಎಕ್ಸ್ ಪೋಷರನ್ನು ನಿಯಂತ್ರಿಸುತ್ತದೆ. ಕ್ಯಾಮೆರಾಗೆ ಸರಿಯಾದ ಎಕ್ಸ್ ಪೋಷರ್ ಪಡೆಯಲು ಸಾಧ್ಯವಾಗದೇ ಹೋದಲ್ಲಿ, ತುಂಬಾ ಪ್ರಖರವಾದ ಅಥವಾ ಕತ್ತಲೆ ತುಂಬಿದ ಚಿತ್ರ ಮೂಡುತ್ತದೆ. ಹಾಗಾಗಿ ಎಕ್ಸ್ ಪೋಷರನ್ನು ನೀವೇ ನಿಯಂತ್ರಿಸುವುದು ಮುಖ್ಯ.

ಐಫೋನ್ ಛಾಯಾಗ್ರಹಣ ಟಿಪ್ 4

ಐಫೋನ್ ಛಾಯಾಗ್ರಹಣ ಟಿಪ್ 4

ಮಬ್ಬು ಮಬ್ಬಾದ ಚಿತ್ರಗಳು

ಚಿತ್ರ ತೆಗೆಯುವಾಗ ಐಫೋನನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಚಿತ್ರ ತೆಗೆಯುವಾಗ ಐಫೋನನ್ನು ಚೂರು ಅಲುಗಾಡಿಸಿದರೂ ಚಿತ್ರ ಮಬ್ಬಾಗಿ ಬಿಡುತ್ತದೆ; ನಿಮ್ಮ ಕ್ಯಾಮೆರಾದಲ್ಲಿ ಇಮೇಜ್ ಸ್ಟೆಬಿಲೈಜರ್ ಇಲ್ಲದೇ ಹೋದಲ್ಲಿ ಮಬ್ಬಾಗುವಿಕೆ ಮತ್ತಷ್ಟು ಹೆಚ್ಚಾಗುತ್ತದೆ.

ಐಫೋನ್ ಛಾಯಾಗ್ರಹಣ ಟಿಪ್ 5

ಐಫೋನ್ ಛಾಯಾಗ್ರಹಣ ಟಿಪ್ 5

ಕಳಪೆ ಸಂಯೋಜನೆ

ಛಾಯಾಗ್ರಹಣದಲ್ಲಿ ಚೌಕಟ್ಟನ್ನು ಸಂಯೋಜಿಸುವುದು ಪ್ರಮುಖವಾದುದು. ಆರಂಭಿಗರು ಮಾಡುವ ಸಾಮಾನ್ಯ ತಪ್ಪೆಂದರೆ ವಸ್ತು ಚೌಕಟ್ಟಿನ ಮಧ್ಯದಲ್ಲಿ ಇರಿಸುವುದು. ಮಧ್ಯದಿಂದಾಚೆಗೆ ವಸ್ತುವನ್ನು ಇರಿಸುವುದು ಸಹಜ ಸುಂದರ ಸಂಯೋಜನೆಯಾಗುತ್ತದೆ ಎನ್ನುವುದನ್ನು ನೆನಪಿಡಿ.

ಐಫೋನ್ ಛಾಯಾಗ್ರಹಣ ಟಿಪ್ 6

ಐಫೋನ್ ಛಾಯಾಗ್ರಹಣ ಟಿಪ್ 6

ಅಸ್ತವ್ಯಸ್ತ ಹಿನ್ನೆಲೆ

ಕೆಲವೊಮ್ಮೆ ನಾವು ಮುಖ್ಯ ವಸ್ತುವಿನ ಕಡೆಗೆ ಎಷ್ಟು ಗಮನ ಕೊಡುತ್ತಿರುತ್ತೇವೆಂದರೆ ಹಿನ್ನೆಲೆಯಲ್ಲೇನಿದೆ ಎನ್ನುವುದನ್ನೇ ಮರೆತುಬಿಟ್ಟಿರುತ್ತೇವೆ! ಚಿತ್ರ ತೆಗೆಯುವುದಕ್ಕೂ ಮುಂಚೆ ಹಿನ್ನೆಲೆಯಲ್ಲೇನಿದೆ ಎನ್ನುವುದನ್ನು ಮರೆಯದೇ ಗಮನಿಸಿ.

ಐಫೋನ್ ಛಾಯಾಗ್ರಹಣ ಟಿಪ್ 7

ಐಫೋನ್ ಛಾಯಾಗ್ರಹಣ ಟಿಪ್ 7

ವಸ್ತು ತುಂಬಾ ದೂರದಲ್ಲಿರುವುದು

ಕೆಲವೊಮ್ಮೆ, ನಾವು ಆಸಕ್ತಿಕರ ವಸ್ತು ಮತ್ತು ಚೆಂದ ಕಾಣುವ ಹಿನ್ನೆಲೆಯನ್ನು ಚೌಕಟ್ಟಿನಲ್ಲಿ ಸೇರಿಸಿದ್ದರೂ, ಅದನ್ನು ಬಹಳ ಚಿಕ್ಕದಾಗಿ ಕಾಣುವಂತೆ ಮಾಡಿಬಿಟ್ಟು ಎಲ್ಲಿದೆ ಎಂದು ಹುಡುಕುವಂತಾಗುತ್ತದೆ. ನಿಮ್ಮ ಚಿತ್ರದ ವಸ್ತು ಎದ್ದು ಕಾಣಬೇಕಂದರೆ ವಸ್ತುವಿನ ಸನಿಹಕ್ಕೆ ಹೋಗಿ ಚಿತ್ರ ತೆಗೆಯಿರಿ.

ಐಫೋನ್ ಛಾಯಾಗ್ರಹಣ ಟಿಪ್ 8

ಐಫೋನ್ ಛಾಯಾಗ್ರಹಣ ಟಿಪ್ 8

ಡಿಜಿಟಲ್ ಜೂಮನ್ನು ಉಪಯೋಗಿಸುವುದು

ಡಿಜಿಟಲ್ ಜೂಮ್ ನಿಮ್ಮ ಚಿತ್ರಗಳಲ್ಲಿರುವ ವಸ್ತುವನ್ನು ದೊಡ್ಡದಂತೆ ಕಾಣಿಸುತ್ತಾದರೂ, ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವುದಿಲ್ಲ. ಡಿಜಿಟಲ್ ಜೂಮ್ ಉಪಯೋಗಿಸುವ ಬದಲು ನಿಮ್ಮ ವಸ್ತುವಿಗೆ ಮತ್ತಷ್ಟು ಸಮೀಪ ಹೋಗಿ.

ಐಫೋನ್ ಛಾಯಾಗ್ರಹಣ ಟಿಪ್ 9

ಐಫೋನ್ ಛಾಯಾಗ್ರಹಣ ಟಿಪ್ 9

ಸಂಕಲನ

ಚಿತ್ರಗಳನ್ನು ಸಂಕಲನ ಮಾಡಲು ಆ್ಯಪಲ್ ಆ್ಯಪ್ ಸ್ಟೋರಿನಲ್ಲಿ ಹಲವು ತಂತ್ರಾಂಶಗಳು ಲಭ್ಯವಿದೆ. ಐಫೋನಿನಲ್ಲೇ ಇರುವ ಫೋಟೋ ಆ್ಯಪ್ ಉಪಯೋಗಿಸಿಯೂ ಚಿತ್ರಗಳನ್ನು ಎಡಿಟ್ ಮಾಡಬಹುದು. ತಂತ್ರಾಂಶಗಳನ್ನುಪಯೋಗಿಸಿಕೊಂಡು ಬೆಳಕು, ಕಂಟ್ರಾಸ್ಟ್ ಮತ್ತು ಬಣ್ಣಗಳನ್ನು ಸುಲಭವಾಗಿ ಸರಿಪಡಿಸಬಹುದು. ಜೊತೆಗೆ ಫಿಲ್ಟರ್, ವಿಗ್ನೆಟ್, ಟೆಕ್ಸ್ಚರುಗಳನ್ನು ಸೇರಿಸಬಹುದು. ನಿಮ್ಮ ಚಿತ್ರಗಳನ್ನು ಹೆಚ್ಚು ಸ್ಪಷ್ಟವಾಗಿಸಬಹುದು, ಮೃದುವಾಗಿಸಬಹುದು.

ಐಫೋನ್ ಛಾಯಾಗ್ರಹಣ ಟಿಪ್ 10

ಐಫೋನ್ ಛಾಯಾಗ್ರಹಣ ಟಿಪ್ 10

ಫ್ಲಾಷನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿ

ಬೆಳಕಿನ ಅಭಾವವಿದ್ದಾಗ ಸ್ಮಾರ್ಟ್ ಫೋನಿನ ಕ್ಯಾಮೆರಾದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಫ್ಲಾಷ್ ಸಹಕಾರಿ ಎನ್ನುವುದೇನೋ ನಿಜ. ಆದರೆ ಫ್ಲಾಷ್ ಉಪಯೋಗಿಸುವಾಗ ಎಚ್ಚರದಿಂದಿರಿ. ಹೆಚ್ಚಿನ ಫ್ಲಾಷ್ ಇಡೀ ಚಿತ್ರದ ಅಂದವನ್ನೇ ಹಾಳುಗೆಡವಬಹುದು.

Best Mobiles in India

English summary
Have you ever wonder how other people manage to capture such impressive pictures with their iPhone!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X