ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?

Written By:

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ದೊಡ್ಡ ಡಿಸ್‌ಪ್ಲೇ ಮತ್ತು ಶಕ್ತಿಯುತ ಗ್ರಾಫಿಕ್ ಯೂನಿಟ್‌ನೊಂದಿಗೆ ಬರುತ್ತಿವೆ ಆದರೆ ಇವುಗಳು ಹೆಚ್ಚು ಬ್ಯಾಟರಿ ಶಕ್ತಿಯನ್ನು ಬಳಸಿಕೊಳ್ಳುತ್ತಿವೆ. ಫೋನ್ ಚಾರ್ಜ್ ಆಗಲು ಕೆಲವು ಗಂಟೆಗಳು ಬೇಕಾಗಿದ್ದು, ನಿಮಗೆ ತರಾತುರಿಯಲ್ಲಿ ಫೋನ್ ಚಾರ್ಜ್ ಆಗಬೇಕು ಎನ್ನುವ ಸಂದರ್ಭದಲ್ಲಿ ಫೋನ್ ಚಾರ್ಜಿಂಗ್‌ಗಾಗಿ ಕಾಯುವುದು ವ್ಯರ್ಥ ಸಮಯ ಪೋಲು ಎಂದೆನಿಸುತ್ತದೆ.

ಹಾಗಿದ್ದರೆ ವೇಗವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳಲು ಸಹಕಾರಿಯಾಗಿರುವ ಕೆಲವೊಂದು ಟಿಪ್ಸ್‌ಗಳನ್ನು ಇಲ್ಲಿ ನೀಡುತ್ತಿದ್ದು ಇದು ನಿಮಗೆ ಸಹಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ನೊಂದಿಗೆ ಸಂಯೋಜನೆಗೊಳ್ಳುವಂತಹ ಚಾರ್ಜರ್

ಸ್ಮಾರ್ಟ್‌ಫೋನ್‌ನೊಂದಿಗೆ ಸಂಯೋಜನೆಗೊಳ್ಳುವಂತಹ ಚಾರ್ಜರ್

ಸರಿಯಾದ ಚಾರ್ಜರ್ ಬಳಸಿ

ಯೂನಿವರ್ಸಲ್ ಚಾರ್ಜರ್ ಅಥವಾ ಬ್ರ್ಯಾಂಡೆಡ್ ಅಲ್ಲದ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ. ಸ್ಮಾರ್ಟ್‌ಫೋನ್‌ನೊಂದಿಗೆ ಸಂಯೋಜನೆಗೊಳ್ಳುವಂತಹ ಚಾರ್ಜರ್ ಬಳಕೆ ಮಾಡಿ

ವೇಗವಾದ ಚಾರ್ಜಿಂಗ್‌

ವೇಗವಾದ ಚಾರ್ಜಿಂಗ್‌

ವಾಲ್ ಚಾರ್ಜರ್ ಬಳಕೆ

ವೇಗವಾದ ಚಾರ್ಜಿಂಗ್‌ಗಾಗಿ, ವಾಲ್ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡಿ. ನಿಮ್ಮ ಫೋನ್ ಯುಎಸ್‌ಬಿ ಕೇಬಲ್ ಅನ್ನು ಮಾತ್ರ ಹೊಂದಿಕೊಂಡಿದೆ ಎಂದಾದಲ್ಲಿ ಸಂಯೋಜನೆಗೊಳ್ಳುವ ಸ್ಟ್ಯಾಂಡರ್ಡ್ ಏಸಿ ಅಡಾಪ್ಟರ್ ಅನ್ನು ಬಳಸಿ

ವೇಗ

ವೇಗ

ಯುಎಸ್‌ಬಿ 3.0 ಆಯ್ಕೆಮಾಡಿಕೊಳ್ಳಿ

ಫೋನ್ ಚಾರ್ಜ್ ಮಾಡಲು ಯುಎಸ್‌ಬಿ 3.0 ಉತ್ತಮ ಮತ್ತು ವೇಗವಾದ ವಿಧಾನವಾಗಿದೆ. ಪ್ರಮಾಣಿತ ಏಸಿ ವಾಲ್ ಚಾರ್ಜರ್‌ಗಳಿಗಿಂತಲೂ ಹೆಚ್ಚು ಶಕ್ತಿಯುತವಾಗಿರುವ ಯುಎಸ್‌ಬಿ 3.0 900 Ma ಗಿಂತ ವೇಗದಲ್ಲಿ ಚಾರ್ಜ್ ಮಾಡಬಲ್ಲುದು.

ಚಾರ್ಜಿಂಗ್ ವೇಗ ಇಳಿಕೆ

ಚಾರ್ಜಿಂಗ್ ವೇಗ ಇಳಿಕೆ

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡುವುದನ್ನು ನಿಲ್ಲಿಸಿ

ಯುಎಸ್‌ಬಿ ಹಬ್‌ನೊಂದಿಗೆ ಫೋನ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ ಇದು ಚಾರ್ಜಿಂಗ್ ವೇಗವನ್ನು 50 ಶೇಕಡಾದಷ್ಟು ಇಳಿಸುತ್ತದೆ.

ಹೆಚ್ಚಿನ ಶಕ್ತಿ

ಹೆಚ್ಚಿನ ಶಕ್ತಿ

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಲ್ಯಾಪ್‌ಟಾಪ್‌ಗಿಂತಲೂ ಡೆಸ್ಕ್‌ಟಾಪ್ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ, ಆದ್ದರಿಂದ ಡೆಸ್ಕ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್ ಅನ್ನು ಬಳಸಿಕೊಂಡು ಚಾರ್ಜ್ ಮಾಡಲಾಗುತ್ತದೆ.

ವೇಗ ಚಾರ್ಜ್

ವೇಗ ಚಾರ್ಜ್

ಯುಎಸ್‌ಬಿ ಡಾಕಿಂಗ್ ಸ್ಟೇಶನ್

ವಾಲ್ ಚಾರ್ಜರ್‌ನಂತೆ ಡಾಕಿಂಗ್ ಸ್ಟೇಶನ್ ಅಷ್ಟೊಂದು ವೇಗವಾಗಿ ಚಾರ್ಜ್ ಮಾಡುವುದಿಲ್ಲ, ಆದರೆ ಇದು ಕೂಡ ವೇಗವಾಗಿ ಚಾರ್ಜ್ ಮಾಡಬಲ್ಲುದು.

ಎರಡು ಪಟ್ಟು ವೇಗ

ಎರಡು ಪಟ್ಟು ವೇಗ

ಕಾರು ಚಾರ್ಜರ್

ಕಾರು ಚಾಲನೆಯಲ್ಲಿರುವಾಗ ಚಾರ್ಜಿಂಗ್ ಕಾರ್ಡ್ ಅನ್ನು ಬಳಸಿಕೊಂಡು ಎರಡು ಪಟ್ಟು ವೇಗವಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಆಗುತ್ತದೆ.

ಸಿಂಕ್

ಸಿಂಕ್

ಬಳಕೆಯಲ್ಲಿಲ್ಲದ ಸೆಟ್ಟಿಂಗ್ಸ್ ಆಫ್ ಮಾಡಿ

ವೇಗವಾದ ಚಾರ್ಜಿಂಗ್ ಅನ್ನು ಪಡೆದುಕೊಳ್ಳಲು, ವೈಫೈ, ಬ್ಲ್ಯೂಟೂತ್, ಜಿಪಿಎಸ್ ಅನ್ನು ಆಫ್ ಮಾಡಿ ಹಾಗೂ ಚಾರ್ಜಿಂಗ್ ಆಗುತ್ತಿರುವಾಗ ಸಿಂಕ್ ಮಾಡಿ.

ಫೋನ್ ಬಳಕೆ ನಿಧಾನ

ಫೋನ್ ಬಳಕೆ ನಿಧಾನ

ಚಾರ್ಜ್ ಆಗುತ್ತಿರುವಾಗ ಬಳಸಬೇಡಿ

ಚಾರ್ಜ್ ಆಗುತ್ತಿರುವಾಗ ಫೋನ್ ಬಳಕೆ ಮಾಡುವುದು ಅದನ್ನು ನಿಧಾನವಾಗಿಸುತ್ತದೆ. ಆದ್ದರಿಂದ ಫೋನ್ ಚಾರ್ಜ್‌ನಲ್ಲಿರುವಾಗ ಅದನ್ನು ಬಳಸುವುದನ್ನು ನಿಲ್ಲಿಸಿ.

ತ್ವರಿತ ಗತಿ

ತ್ವರಿತ ಗತಿ

ಚಾರ್ಜ್ ಆಗುತ್ತಿರುವಾಗ ಸ್ವಿಚ್ ಆಫ್ ಮಾಡಿ

ಫೋನ್ ಅನ್ನು ಆಫ್ ಮಾಡಿ ಚಾರ್ಜ್ ಮಾಡುವುದು ಇನ್ನಷ್ಟು ತ್ವರಿತ ಗತಿಯಲ್ಲಿ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are some tips on how you can get your Android phone to charge faster.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot