ನಿಮ್ಮ ದುಬಾರಿ ಫೋನ್ ಕಳೆದುಹೋಗುವ ಮುನ್ನ ಈ ಟ್ರಿಕ್ಸ್ ಅನುಸರಿಸಿ

By Shwetha
|

ಜನನಿಬಿಡ ಪ್ರದೇಶದಲ್ಲಿ ನೀವು ಸಂಚರಿಸುತ್ತಿರುವಾಗ ಅಚಾನಕ್ಕಾಗಿ ನಿಮ್ಮ ಫೋನ್ ಕಳೆದುಹೋಯಿತು. ನಿಮ್ಮ ಪಾಕೆಟ್‌ನಿಂದ ಫೋನ್ ಅನ್ನು ಯಾರೋ ಎಗರಿಸಿದ್ದಾರೆ ಎಂಬುದು ನಿಮಗೆ ಗೊತ್ತಾಗಿದೆ. ಆದರೆ ಈ ಸಂದರ್ಭದಲ್ಲಿ ನೀವು ಏನೂ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ನಿಮಗೆ ಏನು ಮಾಡಬೇಕು ಎಂಬುದು ತೋಚುವುದೂ ಇಲ್ಲ .ಹೆಚ್ಚಿನ ಫೋನ್ ಬಳಕೆದಾರರು ಇಂತಹ ಸ್ಥಿತಿಯಲ್ಲಿ ತಮ್ಮ ಫೋನ್‌ಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕಾಗಿದ್ದು ಆದಷ್ಟು ಡಿವೈಸ್‌ಗಳ ಸಂರಕ್ಷಣೆಯನ್ನು ಮಾಡಬೇಕು.

ಹಾಗಿದ್ದರೆ ಫೋನ್ ಕಳುವಾಗಿ ನಂತರ ಅಳುವುದರ ಬದಲಿಗೆ ಕಳುವಾಗುವ ಮುನ್ನ ಅನುಸರಿಸಬೇಕಾದ ವಿಧಾನಗಳನ್ನು ಕಂಡುಕೊಂಡರೆ ಅದೂ ಉತ್ತಮ ಉಪಾಯವಲ್ಲವೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಫೋನ್ ಸುರಕ್ಷತೆಯನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಸಲಹೆಗಳು ಖಂಡಿತ ನಿಮ್ಮ ಫೋನ್‌ನ ಸಂರಕ್ಷಣೆಗೆ ನೆರವಾಗಲಿವೆ. ಬನ್ನಿ ಹಾಗಿದ್ದರೆ ಆ ಸಂರಕ್ಷಣೆಗಳೇನು ಎಂಬುದನ್ನು ಅರಿತುಕೊಳ್ಳೋಣ.

#1

#1

ನಿಮ್ಮ ಫೋನ್‌ನಲ್ಲಿ ಸೈಲೆಂಟ್ ಮೋಡ್ ಅನ್ನು ಇರಿಸುವುದಾದರೂ ಅದಕ್ಕೆ ಸಮಯವನ್ನು ಹೊಂದಿಸಿಕೊಳ್ಳಿ. ಆ ಸಂದರ್ಭದಲ್ಲಿ ನೀವು ಫೋನ್ ಅನ್ನು ಮರೆತಿದ್ದರೂ ಸಮಯಕ್ಕೆ ಸರಿಯಾಗಿ ಕೂಗಿ ನಿಮ್ಮನ್ನು ಎಚ್ಚರಿಸುತ್ತದೆ.

#2

#2

ಈ ಸ್ಟ್ಯಾಂಡ್ ಅನ್ನು ಖರೀದಿಸಿ ನೀವು ಇದರಲ್ಲಿ ನಿಮ್ಮ ಫೋನ್ ಅನ್ನು ಇರಿಸಿಕೊಳ್ಳಬಹುದಾಗಿದೆ. ನಿಮ್ಮ ಕಾರಿನಲ್ಲಿ ನಿಮ್ಮ ಮನೆಯಲ್ಲಿ ಇದೇ ಸ್ಟ್ಯಾಂಡ್ ಅನ್ನು ಇರಿಸಿಕೊಂಡು ಫೋನ್ ಅನ್ನು ಇದರಲ್ಲಿ ಇರಿಸಿಕೊಳ್ಳಬಹುದು. ಇದರಿಂದ ಫೋನ್‌ಗಾಗಿ ನೀವು ಹುಡುಕಾಡುವುದು ತಪ್ಪುತ್ತದೆ.

#3

#3

ನೀವು ಪಾರ್ಟಿಯಲ್ಲಿ ಹೆಚ್ಚು ಹೊತ್ತು ಇರಬೇಕು ಎಂಬಂತಹ ಸಂದರ್ಭದಲ್ಲಿ ನಿಮ್ಮ ಸ್ನೇಹಿತರ ಬಳಿ ಫೋನ್ ಅನ್ನು ಇರಿಸಿಕೊಳ್ಳಲು ಕೊಡಿ. ಇದರಿಂದ ಪಾರ್ಟಿಯನ್ನು ನಿಮಗೆ ಅನುಭವಿಸಬಹುದು ಅಂತೆಯೇ ಫೋನ್ ಅನ್ನು ಎಲ್ಲಿಡುವುದು ಎಂಬ ಚಿಂತೆ ಕಾಡುವುದಿಲ್ಲ.

#4

#4

ಕ್ವಿಕ್ ಹೀಲ್ ಇನ್ಶೂರೆನ್ಸ್ ಸೆಕ್ಯುರೆನ್ಸಿ ಇದು ನಿಮ್ಮ ಫೋನ್‌ಗೆ ಸುಭದ್ರತೆಯನ್ನು ಒದಗಿಸುತ್ತದೆ ಮತ್ತು ಪ್ರೀಮಿಯಮ್ ಇನ್‌ಶೂರೆನ್ಸ್ ಅನ್ನು ಮಾಡಿಕೊಳ್ಳಬಹುದಾಗಿದೆ.

#5

#5

ನಿಮ್ಮ ನೋಟ್ಸ್ ಅಪ್ಲಿಕೇಶನ್‌ನಲ್ಲಿ ಟೈಪ್ ಮಾಡಿ, ಸ್ಕ್ರೀನ್ ಶಾಟ್ ತೆಗೆಯಿರಿ ಮತ್ತು ನಿಮ್ಮ ಲಾಕ್ ಸ್ಕ್ರೀನ್‌ಗೆ ಅದನ್ನು ಬದಲಾಯಿಸಿ.

#6

#6

ನಿಮ್ಮ ಫೋನ್ ಅನ್ನು ಹಿಂಭಾಗ ಪಾಕೆಟ್‌ನಲ್ಲಿರಿಸುವುದರಿಂದ ಫೋನ್ ಕದಿಯುವವರಿಗೆ ನೀವೇ ಸ್ಥಳ ಮಾಡಿಕೊಟ್ಟಂತಾಗುತ್ತದೆ. ಆದಷ್ಟು ಫೋನ್ ಅನ್ನು ನಿಮ್ಮ ಪಕ್ಕದ ಪಾಕೆಟ್‌ನಲ್ಲಿಯೇ ಇರಿಸಿಕೊಳ್ಳಿ.

#7

#7

ನಿಮ್ಮ ಫೋನ್‌ಗಾಗಿ ಆರ್ಮರ್ಡ್ ಕೇಸ್ ಅನ್ನು ಬಳಸಿ ಇದರಿಂದ ಯಾರಿಗಾದರೂ ನಿಮ್ಮ ಫೋನ್ ಅನ್ನು ಎಗರಿಸುವುದು ಸುಲಭವಾಗುವುದಿಲ್ಲ.

#8

#8

ನಿಮ್ಮ ಫೋನ್ ಅನ್ನು ಚಾರ್ಜ್‌ನಲ್ಲಿರಿಸಿದ ಸಂದರ್ಭದಲ್ಲಿ ಅದನ್ನು ಬಿಟ್ಟು ಹೋಗಬೇಕಾಗುತ್ತದೆ. ಅದರೆ ಪವರ್ ಬ್ಯಾಂಕ್ ಇದೆ ಎಂದಾದಲ್ಲಿ ನಿಮ್ಮ ಫೋನ್‌ಗೆ ಯಾವಾಗ ಬೇಕಾದರೂ ಚಾರ್ಜ್ ಮಾಡಬಹುದಾಗಿದೆ.

#9

#9

ಇದರಿಂದಾಗಿ ನಿಮ್ಮ ಫೋನ್ ಅನ್ನು ಅರ್ಧ ಅರ್ಧ ಗಂಟೆಗೊಮ್ಮೆ ಆಗಾಗ್ಗೆ ಪರಿಶೀಲಿಸುತ್ತಾ ಇರಬಹುದು.

#10

#10

ನಿಮ್ಮ ಫೋನ್ ಕಳೆದು ಹೋಗಿದೆ ಎಂಬ ಸಂದರ್ಭದಲ್ಲಿ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಥವಾ ಫೈಂಡ್ ಮೈ ಐಫೋನ್ ಆನ್ ಮಾಡಿ ಇದರಿಂದ ಫೋನ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?</a><br /><a href=ಈ ಸುಂದರಿ ರೊಬೋಟ್ ಎಂದರೆ ನೀವು ಖಂಡಿತ ನಂಬಲಾರಿರಿ!!
ಹೊಸ ಐಫೋನ್‌ಗಾಗಿ ಆಪಲ್‌ಗೆ ತಗಲಿದ ವೆಚ್ಚ ರೂ 10,720 ಅಂತೆ
ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ" title="ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?
ಈ ಸುಂದರಿ ರೊಬೋಟ್ ಎಂದರೆ ನೀವು ಖಂಡಿತ ನಂಬಲಾರಿರಿ!!
ಹೊಸ ಐಫೋನ್‌ಗಾಗಿ ಆಪಲ್‌ಗೆ ತಗಲಿದ ವೆಚ್ಚ ರೂ 10,720 ಅಂತೆ
ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ" />ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?
ಈ ಸುಂದರಿ ರೊಬೋಟ್ ಎಂದರೆ ನೀವು ಖಂಡಿತ ನಂಬಲಾರಿರಿ!!
ಹೊಸ ಐಫೋನ್‌ಗಾಗಿ ಆಪಲ್‌ಗೆ ತಗಲಿದ ವೆಚ್ಚ ರೂ 10,720 ಅಂತೆ
ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
we're here to save the day for you with these 10 simple-never-lose-your-phone-again hacks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X