ಐಫೋನ್‌ನಲ್ಲಿ ಸ್ಪೇಸ್ ಕ್ಲಿಯರ್ ಮಾಡುವುದು ಹೇಗೆ?

By Shwetha
|

64 ಜಿಬಿಯ ಐಫೋನ್ ಭಾರತದಲ್ಲಿ ಹೆಚ್ಚು ವೈಭವೋಪೇತ ಎಂಬುದಾಗಿ ಪರಿಗಣಿತವಾಗಿದೆ. ತಮ್ಮ 16 ಜಿಬಿ ಐಫೋನ್‌ಗಳಲ್ಲಿ ಬೇರೆ ಬೇರೆ ಫೀಚರ್‌ಗಳನ್ನು ಪ್ರಯತ್ನಿಸಿದ ಬಳಿಕೆ ಬಳಕೆದಾರರಿಗೆ ಸ್ಟೋರೇಜ್ ಸಮಸ್ಯೆ ಉಂಟಾಗುವುದು ಸಹಜವಾಗಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹೊಂದಿಲ್ಲದೇ ಇರುವುದು ಕೂಡ ಸಮಸ್ಯೆಯನ್ನು ತಂದೊಡ್ಡಬಹುದು.

ಓದಿರಿ: ರಿಲಾಯನ್ಸ್ ಜಿಯೊ ಉಚಿತ 4ಜಿ ಸಿಮ್ ನಿಮ್ಮದಾಗಬೇಕೇ?

ಹಾಗಿದ್ದರೆ ಸಂಗ್ರಹಣೆ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದಕ್ಕಾಗಿ ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನೀಡುತ್ತಿದ್ದು ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ.

ವೈಫೈ ಹೆಚ್ಚುವರಿ ಸ್ಟೋರೇಜ್ ಡಿವೈಸ್

ವೈಫೈ ಹೆಚ್ಚುವರಿ ಸ್ಟೋರೇಜ್ ಡಿವೈಸ್

ಹೆಚ್ಚು ಚಲನ ಚಿತ್ರಗಳು, ಹಾಡುಗಳು, ಮತ್ತು ಪುಸ್ತಕಗಳ ಹೆಸರನ್ನು ತಮ್ಮ ಐಫೋನ್‌ನಲ್ಲಿ ಇರಿಸಬೇಕು ಎಂದು ಬಯಸುವವರಿಗೆ, ವೈಫೈ ಕಾರ್ಡ್ ರೀಡರ್ ಅಥವಾ ಸ್ಟೋರೇಜ್ ಡ್ರೈವ್ ಹೆಚ್ಚು ಉಪಯುಕ್ತ. ಇದು ರೂ 2,000 ದಿಂದ 3,000 ರೂಪಾಯಿಯೊಳಗೆ ದೊರೆಯಲಿದೆ.

ಬ್ಯಾಕಪ್ ಮಾಡಿ ಮತ್ತು ಫೋಟೋ ಡಿಲೀಟ್ ಮಾಡಿ

ಬ್ಯಾಕಪ್ ಮಾಡಿ ಮತ್ತು ಫೋಟೋ ಡಿಲೀಟ್ ಮಾಡಿ

ಕ್ಯಾಮೆರಾ ಫೋಟೋಗಳು ಒಮ್ಮೊಮ್ಮೆ ಹೆಚ್ಚುವರಿ ಸ್ಥಳವನ್ನು ಪಡೆದುಕೊಳ್ಳುತ್ತವೆ. ಆದ್ದರಿಂದ ಹಳೆಯ ಫೋಟೋಗಳನ್ನು ಆದಷ್ಟು ಬ್ಯಾಕಪ್ ಮಾಡಿ.

ಹಳೆಯ ಸಂದೇಶಗಳನ್ನು ಅಳಿಸಿ

ಹಳೆಯ ಸಂದೇಶಗಳನ್ನು ಅಳಿಸಿ

ನಿಮಗೆ ಹೆಚ್ಚು ಉಪಯುಕ್ತ ಎಂದೆನಿಸಿರುವ ಸಂದೇಶಗಳನ್ನು ಮಾತ್ರವೇ ಫೋನ್‌ನಲ್ಲಿ ಇರಿಸಿಕೊಳ್ಳಿ. ವಿಶೇಷವಾಗಿ ಐಮೆಸೇಜ್‌ಗಳನ್ನು ಅಳಿಸಿ ಹೊಸ ಅಪ್ಲಿಕೇಶನ್‌ಗೆ ಜಾಗ ಬಿಟ್ಟುಕೊಡಿ.

ಅನಗತ್ಯ ಅಪ್ಲಿಕೇಶನ್‌ಗಳನ್ನು ತ್ಯಜಿಸಿ

ಅನಗತ್ಯ ಅಪ್ಲಿಕೇಶನ್‌ಗಳನ್ನು ತ್ಯಜಿಸಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಹೆಚ್ಚುವರಿ ಸ್ಥಳವನ್ನು ಆಶ್ರಯಿಸಿಕೊಳ್ಳುತ್ತವೆ. ಆದ್ದರಿಂದ ಆದಷ್ಟು ಅನಗತ್ಯ ಅಪ್ಲಿಕೇಶನ್‌ಗಳನ್ನು ಅಳಿಸಿ.

ಬುಕ್ಸ್ ಅಳಿಸಿ

ಬುಕ್ಸ್ ಅಳಿಸಿ

ತಮ್ಮ ಫೋನ್‌ನಲ್ಲಿ ಐಬುಕ್‌ಗಳನ್ನು ಯಾವ ಓದುಗರೂ ಓದುವುದಿಲ್ಲ. ಆದ್ದರಿಂದ ನಿಮಗೆ ಬೇಕಾದಾಗ ಮಾತ್ರವೇ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ.

"ಕೀಪ್ ನಾರ್ಮಲ್ ಫೋಟೋ" ಆಫ್ ಮಾಡಿ

ಫೋಟೋಗಳು ಅಡಿಯಲ್ಲಿ ಸೆಟ್ಟಿಂಗ್ಸ್ ಮೆನುವಿನಲ್ಲಿ, "ಕೀಪ್ ನಾರ್ಮಲ್ ಫೋಟೋಸ್" ಎಂಬ ಆಪ್ಶನ್ ಇದ್ದು ಅದನ್ನು ಆಫ್ ಮಾಡಿ.

ಮ್ಯೂಸಿಕ್ ಪ್ಲೇ ಲಿಸ್ಟ್ ಕ್ಲಿಯರ್ ಮಾಡಿ

ಮ್ಯೂಸಿಕ್ ಪ್ಲೇ ಲಿಸ್ಟ್ ಕ್ಲಿಯರ್ ಮಾಡಿ

ನೀವು ಹೆಚ್ಚು ಸಮಯ ಆಲಿಸದೇ ಇರುವ ಹಾಡುಗಳನ್ನು ಡಿಲೀಟ್ ಮಾಡಿ.

ಆಫ್‌ಲೈನ್ ಡೇಟಾ ಕ್ಲಿಯರ್ ಮಾಡಿ

ಆಫ್‌ಲೈನ್ ಡೇಟಾ ಕ್ಲಿಯರ್ ಮಾಡಿ

ಆಫ್‌ಲೈನ್ ಡೇಟಾ ಅಂದರೆ ಸಫಾರಿ ಅಥವಾ ಕ್ರೋಮ್ ಹೆಚ್ಚುವರಿ ಸ್ಥಳವನ್ನು ಆಕ್ರಮಿಸುತ್ತದೆ. ಆದ್ದರಿಂದ ಬ್ರೌಸರ್ ಕ್ಯಾಶ್ ನಿವಾರಿಸಿಕೊಳ್ಳಿ.

ನಕಲಿಗಳನ್ನು ಅಳಿಸಿ

ನಕಲಿಗಳನ್ನು ಅಳಿಸಿ

ಹೆಚ್ಚಿನ ಫೋನ್‌ಗಳು ನಕಲಿ ಡೇಟಾವನ್ನು ಒಳಗೊಂಡಿರುತ್ತವೆ. ಇದರಲ್ಲಿ ಫೋಟೋಗಳು, ಹಾಡುಗಳು ಮತ್ತು ಇತರ ಫೈಲ್‌ಗಳು ಇರುತ್ತವೆ.

ವೀಡಿಯೊ ಮತ್ತು ಚಲನ ಚಿತ್ರಗಳನ್ನು ಮೈಗ್ರೇಟ್ ಮಾಡಿ

ವೀಡಿಯೊ ಮತ್ತು ಚಲನ ಚಿತ್ರಗಳನ್ನು ಮೈಗ್ರೇಟ್ ಮಾಡಿ

ಫೋನ್‌ಗಳಲ್ಲಿ ವೀಡಿಯೊಗಳು ಮತ್ತು ಚಲನ ಚಿತ್ರಗಳನ್ನು ಒಂದು ಸಲ ನೋಡಿದರೆ ಸಾಕು. ಆದ್ದರಿಂದ ಇದನ್ನು ವೈಫೈ ಹೆಚ್ಚುವರಿ ಸ್ಟೋರೇಜ್‌ಗೆ ಮೈಗ್ರೇಟ್ ಮಾಡಿಕೊಳ್ಳಿ ಅಥವಾ ಗೂಗಲ್ ಡ್ರೈವ್‌ನಲ್ಲಿ ಬ್ಯಾಕಪ್ ಮಾಡಿ.

Best Mobiles in India

English summary
Here are 10 best practices to never run out of GBs when needed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X