ರಿಲಾಯನ್ಸ್ ಜಿಯೊ ಉಚಿತ 4ಜಿ ಸಿಮ್ ನಿಮ್ಮದಾಗಬೇಕೇ?

By Shwetha
|

ಹೆಚ್ಚು ನಿರೀಕ್ಷಿತ ರಿಲಾಯನ್ಸ್ ಜಿಯೋ 4ಜಿ ಸೇವೆಯ ಆರಂಭವು ಇನ್ನೇನು ಸಮೀಪದಲ್ಲಿದೆ. ವಿಶ್ವದ ಅತಿದೊಡ್ಡ ಸ್ಟಾರ್ಟಪ್ ಎಂಬುದಾಗಿ ಇದು ಕರೆಯಿಸಿಕೊಂಡಿದ್ದು, ನಿಮಗಾಗಿ ಇದು ಶುಭ ಸುದ್ದಿಯನ್ನು ಹೊರತಂದಿದೆ. ರಿಲಾಯನ್ಸ್ ಜಿಯೊ ಉಚಿತ 4ಜಿ ಸಿಮ್ ಅನ್ನು ಒದಗಿಸುತ್ತಿದ್ದು ರೂ 10,000 ಮತ್ತು ಅದಕ್ಕಿಂತ ಮೇಲ್ಪಟ್ಟ ದರಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಈ ಸಿಮ್ ದೊರೆಯಲಿದೆ.

ಓದಿರಿ: ಬ್ಲಾಕ್ ಆದ ವೆಬ್‌ಸೈಟ್ ಪ್ರವೇಶಿಸುವುದು ಹೇಗೆ?

ಈ ಮೊದಲು ಜಿಯೊ ಸಂಪರ್ಕಗಳು ಕೇವಲ ಇನ್‌ವೈಟ್ ಬೇಸಿಸ್ ಮಾದರಿಯಲ್ಲಿ ದೊರೆಯುತ್ತಿತ್ತು ಅಂದರೆ ಸ್ನೇಹಿತರು ಮತ್ತು ಜಿಯೋ ಕುಟುಂಬದ ಸದಸ್ಯರಿಗೆ ಈ ಅವಕಾಶ ಸಿಗುತ್ತಿತ್ತು. ಜಿಯೋ ವೆಬ್‌ಸೈಟ್‌ನಲ್ಲಿ ತಮ್ಮ 4 ಜಿ ನೆಟ್‌ವರ್ಕ್ ಅನ್ನು ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಯಾರು ಬೇಕಾದರೂ ನೋಂದಾವಣೆ ಮಾಡುವವರಿಗೆ ನಂತರ ಕಂಪೆನಿ ಇದನ್ನು ನೀಡಲಿದೆ. ಟೆಸ್ಟರ್‌ಗಳು ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬೇಕಾಗಿದ್ದು ಅಂತಹವರಿಗೆ ಮಾತ್ರವೇ ಜಿಯೊ ಪ್ರಿವ್ಯೂ ಆಫರ್ ಮೂಲಕ 90 ದಿನಗಳಿಗೆ 4ಜಿಯನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

ಓದಿರಿ: ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಕಾಂಟ್ಯಾಕ್ಟ್‌ಗಳ ವರ್ಗಾವಣೆ ಹೇಗೆ?

ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಕುರಿತು ಮತ್ತಷ್ಟು ಅಂಶಗಳನ್ನು ಅರಿತುಕೊಳ್ಳೋಣ.

ಪ್ರಿವ್ಯೂ ಆಫರ್

ಪ್ರಿವ್ಯೂ ಆಫರ್

ಈ ಪ್ರಿವ್ಯೂ ಆಫರ್ ಅಡಿಯಲ್ಲಿ ಅನಿಯಮಿತ 4ಜಿ ಡೇಟಾವನ್ನು ಬಳಕೆದಾರರಿಗೆ ನೀಡಲಿದ್ದು, ಅನಿಯಮಿತ ವೀಡಿಯೊ ಕರೆಗಳು ಮತ್ತು ಅನಿಯಮಿತ ಎಸ್‌ಎಮ್‌ಎಸ್, 4500 ನಿಮಿಷಗಳ ವಾಯ್ಸ್ ಕಾಲ್ ಹಾಗೂ ಉಚಿತ ಜಿಯೊ ಪ್ರಿಮಿಯಮ್ ರೇಜಿಂಗ್ ಕ್ಲೌಡ್ ಸ್ಟೋರೇಜ್‌ಗೆ ಪ್ರವೇಶವನ್ನು ಒದಗಿಸಲಿದೆ.

ರೂ 2,899 ಲಭ್ಯ

ರೂ 2,899 ಲಭ್ಯ

ಜಿಯೊ ತನ್ನ ಜಿಯೊ ಪ್ರಿವ್ಯೂ ಆಫರ್ ಅನ್ನು ಎಚ್‌ಪಿ ಬಳಕೆದಾರರಿಗೂ ಒದಗಿಸಿದ್ದು ಇದು 'ಜಿಯೊಎಫ್ಐ2' ಹಾಟ್‌ಸ್ಪಾಟ್ ಡಿವೈಸ್ ಆಗಿ ರೂ 2,899 ಕ್ಕೆ ಲಭ್ಯವಾಗುತ್ತಿದೆ.

ಉಚಿತ ಜಿಯೊ ಸಿಮ್

ಉಚಿತ ಜಿಯೊ ಸಿಮ್

ಇತ್ತೀಚಿನ ವರದಿಯ ಪ್ರಕಾರ, ಜಿಯೊ, ಉಚಿತ ಜಿಯೊ ಸಿಮ್ ಅನ್ನು ಒದಗಿಸುತ್ತಿದ್ದು ರೂ 10,000 ಕ್ಕಿಂತ ಮೇಲ್ಪಟ್ಟ ಫೋನ್ ಖರೀದಿಸುವವರಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ವಾರಾಂತ್ಯಕ್ಕಾಗಿ ಈ ಆಫರ್ ಅನ್ನು ಲಭ್ಯವಾಗುವಂತೆ ಮಾಡಿದ್ದು ಜಿಯೊ 4ಜಿಯ ಕಮರ್ಶಿಯಲ್ ಲಾಂಚ್‌ಗೆ ಇದನ್ನು ನಿರೀಕ್ಷಿಸಲಾಗಿದೆ.

ಜಿಯೊ ಸಿಮ್

ಜಿಯೊ ಸಿಮ್

ರೂ 10,000 ಮತ್ತು ಅದಕ್ಕಿಂತ ಮೇಲ್ಪಟ್ಟ ದರದಲ್ಲಿ ಫೋನ್ ಖರೀದಿಸುವವರಿಗೆ ಜಿಯೊ ಸಿಮ್ ಅನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯವರೆಗೆ ಈ ಆಫರ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಹೊಸ ಸಿಮ್

ಹೊಸ ಸಿಮ್

ಈ ಪ್ರಿವ್ಯೂ ಆಫರ್ ಪರವಾಗಿ ಹೊಸ ಸಿಮ್ ಅನ್ನು ನೀಡುತ್ತಿದ್ದು ಇದರಲ್ಲಿ ಅನಿಯಮಿತ ಡೇಟಾ ಮತ್ತು 90 ದಿನಗಳ ಕರೆ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಎಲ್‌ವೈಎಫ್ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಸೌಲಭ್ಯ

ಎಲ್‌ವೈಎಫ್ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಸೌಲಭ್ಯ

ಒಂದು ವರದಿಯ ಪ್ರಕಾರ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ನೊಂದಿಗೆ 4ಜಿ ಸಿಮ್ ಜೊತೆಯಾಗಿ ಬಂದಿದ್ದು 90 ದಿನಗಳ ಕಾಲ ಡಿವೈಸ್‌ನಲ್ಲಿ ಲಾಕ್ ಆಗಿರುತ್ತದೆ.

ಎಲ್‌ವೈಎಫ್ ಸ್ಮಾರ್ಟ್‌ಫೋನ್

ಎಲ್‌ವೈಎಫ್ ಸ್ಮಾರ್ಟ್‌ಫೋನ್

ನೀವು 90 ದಿನಗಳಿಗಿಂತ ಹೆಚ್ಚು ಸಮಯ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತೀರಿ ಎಂದಾದಲ್ಲಿ ನಿಮ್ಮ ಆಯ್ಕೆಯ ಯಾವುದೇ ಡಿವೈಸ್‌ನಲ್ಲಿ ಜಿಯೊ ಸಿಮ್ ಅನ್ನು ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
we have some good news for you. Reliance Jio is planning to offer free Jio 4G SIM to anyone who purchases smartphone costing Rs. 10,000 and above.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X