ಆಂಡ್ರಾಯ್ಡ್ ಪ್ರೇಮಿಗಳು ತಿಳಿದುಕೊಂಡಿರಲೇಬೇಕಾದ ಟಿಪ್ಸ್

Written By:

ನೀವು ಬಳಸುವ ನಿಮ್ಮ ಆಂಡ್ರಾಯ್ಡ್ ಫೋನ್ ನಿಮ್ಮ ಅತ್ಯುತ್ತಮ ಸ್ನೇಹಿ ಎಂದೆನಿಸಿದ್ದರೂ ನೀವು ಈ ಡಿವೈಸ್‌ನಲ್ಲಿ ಇನ್ನಷ್ಟು ಕಮಾಲುಗಳನ್ನು ಮಾಡಬಹುದಾಗಿದೆ. ಆದರೆ ಈ ಟ್ರಿಕ್ಸ್‌ಗಳನ್ನು ನೀವು ಅರಿತುಕೊಂಡಿರಬೇಕು ಎಂಬುದೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಸಲಹೆಯಾಗಿದೆ. ನಿಮ್ಮ ಫೋನ್ ಜಾದೂವಿನಂತಹ ಹತ್ತು ಕ್ರಿಯೆಗಳನ್ನು ನಡೆಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಅವುಗಳೇನು ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ.

ಈ ಸಲಹೆಗಳನ್ನು ಪಾಲಿಸಿಕೊಂಡು ನಿಮ್ಮ ಫೋನ್‌ನಲ್ಲಿ ಸಾಕಷ್ಟನ್ನು ನೀವು ನಡೆಸಬಹುದಾಗಿದೆ. ಈ ಹಿಡನ್ ಟ್ರಿಕ್ಸ್‌ಗಳು ನಿಜಕ್ಕೂ ನಿಮಗೆ ಪ್ರಯೋಜನಕಾರಿಯಾಗಿದ್ದು ಫೋನ್‌ನ ಯಾವುದೇ ಸಮಸ್ಯೆಗಳನ್ನು ಪರಿಹರಿಸುವಷ್ಟರ ಮಟ್ಟಿಗೆ ಅತ್ಯುತ್ತಮ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಚಿತವಾಗಿ ಫೋಟೋಗಳನ್ನು ಬ್ಯಾಕಪ್ ಮಾಡಿ

#1

ನಿಮ್ಮ ಗೂಗಲ್ + ಖಾತೆಯಲ್ಲಿ ನಿಮ್ಮೆಲ್ಲಾ ಫೋಟೋಗಳನ್ನು ಉಚಿತವಾಗಿ ಬ್ಯಾಕಪ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಮಾಡಲು ಗೂಗಲ್ + > ಸೆಟ್ಟಿಂಗ್ಸ್ > ಆಟೊ ಬ್ಯಾಕಪ್ ಆಯ್ಕೆಮಾಡಿ ಈ ರೀತಿ ಸಲಹೆಗಳನ್ನು ಪಾಲಿಸಿಕೊಂಡು ಫೋಟೋಗಳನ್ನು ಉಚಿತವಾಗಿ ಬ್ಯಾಕಪ್ ಮಾಡಬಹುದಾಗಿದೆ.

ಫೋನ್ ವೇಗಗೊಳಿಸುವುದು

#2

ನಿಮ್ಮ ಫೋನ್ ವೇಗವಾಗಿ ಕಾರ್ಯನಿರ್ವಹಿಸಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ, ಅನಿಮೇಶನ್ ಮತ್ತು ಟ್ರಾನ್ಸಿಶನ್‌ಗಳನ್ನು ನೀವು ನಿಷ್ಕ್ರಿಯಗೊಳಿಸಲೇಬೇಕು. ಸೆಟ್ಟಿಂಗ್ > ಅಬೌಟ್ ಡಿವೈಸ್ > ಬಿಲ್ಡ್ ನಂಬರ್ ಇದೀಗ ಇದನ್ನು ಏಳು ಬಾರಿ ಒತ್ತಿರಿ ಮತ್ತು ಡೆವಲಪ್ ಆಕ್ಸೆಸ್ ನಿಮಗೆ ಬೇಕಾಗಿರುತ್ತದೆ. ಡೆವಲಪ್ ಆಪ್ಶನ್ ಕೆಳಗೆ ವಿಂಡೊ ಅನಿಮೇಶನ್ ಸ್ಕೇಲ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಗೂಗಲ್ ಸರ್ಚ್

#3

ಓಕೆ ಗೂಗಲ್ ಅನ್ನು ಬಳಸಿಕೊಂಡು ಎಲ್ಲಿಂದ ಬೇಕಾದರೂ ನಿಮಗೆ ಸರ್ಚ್ ಮಾಡಬಹುದಾಗಿದೆ. ಓಕೆ ಗೂಗಲ್ ಎಂಬುದಾಗಿ ಹೇಳಿ ಇದು ನಿಮಗೆ ಬೇಕಾದ ಹುಡುಕಾಟವನ್ನು ನೆರವೇರಿಸಿಕೊಡುತ್ತದೆ. ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಲು ಗೂಗಲ್ ಅಪ್ಲಿಕೇಶನ್ > ಗೂಗಲ್ ನೌ > ಸೆಟ್ಟಿಂಗ್ಸ್ > ವಾಯ್ಸ್ > ಓಕೆ ಗೂಗಲ್ ದೊರೆಯುತ್ತದೆ.

ಲಾಕ್ ಸ್ಕ್ರೀನ್‌ನಲ್ಲಿ ಉಪಯುಕ್ತ ಮಾಹಿತಿ

#4

ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿ ನೀವು ದಣಿದಿದ್ದೀರಾ? ಹಾಗಿದ್ದರೆ ನಿಮಗೆ ಖುಷಿ ಕೊಡುವ ಇನ್ನಷ್ಟು ಸಂಗತಿಗಳನ್ನು ನಾವು ತಿಳಿಸುತ್ತಿದ್ದೇವೆ. ಸೆಟ್ಟಿಂಗ್ಸ್ > ಸೆಕ್ಯುರಿಟಿ > ವಿಜೆಟ್ಸ್ ಸಕ್ರಿಯಗೊಳಿಸಿ ನಂತರ ಲಾಕ್ ಸ್ಕ್ರೀನ್‌ಗೆ ಹೋಗಿ - ಎಡಕ್ಕೆ ಸ್ವೈಪ್ ಮಾಡಿ ಮತ್ತು ಬಿಗ್ ಪ್ಲಸ್ ಚಿಹ್ನೆಯನ್ನು ಒತ್ತಿರಿ. ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ಯಾವ ವಿಜೆಟ್ ಅನ್ನು ಹೊಂದಿಸಬೇಕು ಎಂಬುದನ್ನು ನಿಮಗೆ ಈಗ ಆಯ್ಕೆಮಾಡಿಕೊಳ್ಳಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್ ಎಲ್ಲವೂ ಇಲ್ಲಿಯೇ ಇದೆ

#5

ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬುದು ನಿಮ್ಮ ಯೋಚನೆಯಾಗಿದ್ದರೆ ಇನ್ನೊಮ್ಮೆ ಯೋಚಿಸಿ. ಅಮೆಜಾನ್ ತನ್ನದೇ ಆದ ಅಪ್ಲಿಕೇಶನ್ ಸ್ಟೋರ್ ಅನ್ನು ಹೊಂದಿದ್ದು ಒಮ್ಮೊಮ್ಮೆ ಉಚಿತವಾಗಿ ಅಪ್ಲಿಕೇಶನ್‌ಗಳನ್ನು ಒದಗಿಸುತ್ತದೆ. ಇದೇ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ನಲ್ಲಿ ಹಣ ನೀಡಬೇಕಾಗುತ್ತದೆ.

ಡೀಫಾಲ್ಟ್ ಅಪ್ಲಿಕೇಶನ್ ಬದಲಾವಣೆ

#6

ನಿಮ್ಮ ಫೋನ್‌ನಲ್ಲಿ ಕಂಪೆನಿ ಒದಗಿಸಿರುವ ಡೀಫಾಲ್ಟ್ ಅಪ್ಲಿಕೇಶನ್‌ಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಸೆಟ್ಟಿಂಗ್ಸ್ > ಅಪ್ಲಿಕೇಶನ್ > ಬಲಕ್ಕೆ ಸ್ವೈಪ್ ಮಾಡಿ ಹಾಗೂ ಆಲ್ ಟ್ಯಾಬ್‌ಗೆ ಹೋಗಿ ಮತ್ತು ಅಪ್ಲಿಕೇಶನ್ ಆಯ್ಕೆಮಾಡಿ ಇಲ್ಲಿ ಕ್ಲಿಯರ್ ಡೀಫಾಲ್ಟ್ ಕ್ಲಿಕ್ಕಿಸಿ.

ಜಿಪಿಎಸ್ ಮೋಡ್‌ನಲ್ಲಿ ಬ್ಯಾಟರಿ ಉಳಿಕೆ

#7

ನೀವು ಸಾಕಷ್ಟು ಜಿಪಿಎಸ್ ಸೇವೆಗಳನ್ನು ಬಳಸಿಕೊಳ್ಳದೇ ಇರುವ ಸಂದರ್ಭದಲ್ಲಿ ಮತ್ತು ಪ್ರಯಾಣದಲ್ಲಿ ಸಾಕಷ್ಟು ಬ್ಯಾಟರಿಯನ್ನು ಉಳಿಸಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಬಿಲ್ಟ್ ಇನ್ ಸೆಟ್ಟಿಂಗ್‌ಗಳನ್ನು ಹೊಂದಿದ್ದು ಬೇರೆ ಬೇರೆ ಮೋಡ್‌ಗಳನ್ನು ಆಯ್ಕೆಮಾಡಿಕೊಳ್ಳಲು ಇದು ಅನುಮತಿಸುತ್ತದೆ. ಹೈ ಅಕ್ಯುರಿಸಿ, ಬ್ಯಾಟರಿ ಸೇವಿಂಗ್, ಮತ್ತು ಡಿವೈಸ್ ಓನ್ಲೀ ಇತ್ಯಾದಿ. ಸೆಟ್ಟಿಂಗ್ > ಲೊಕೇಶನ್ > ಮೋಡ್ ಈ ರೀತಿಯಾಗಿ ಎಷ್ಟು ಬೇಕೋ ಅಷ್ಟು ಬ್ಯಾಟರಿಯನ್ನು ಉಳಿಸಿಕೊಳ್ಳಬಹುದಾಗಿದೆ.

ಹೋಮ್ ಬಟನ್ ಶಾರ್ಟ್ ಕಟ್

#8

ಹೋಮ್ ಬಟನ್‌ನಲ್ಲಿ ಸ್ವೈಪ್ ಅಪ್ ಮಾಡುವ ಮೂಲಕ ಅಥವಾ ಹೋಮ್ ಬಟನ್ ಅನ್ನು ದೀರ್ಘವಾಗಿ ಒತ್ತುವುದರಿಂದ ಗೂಗಲ್ ಸರ್ಚ್ ಅನ್ನು ನಿಮಗೆ ಲಾಂಚ್ ಮಾಡಿಕೊಳ್ಳಬಹುದಾಗಿದೆ. ಹೋಮ್ ಲಾಂಚರ್ ಅಪ್ಲಿಕೇಶನ್ ಸನ್ನೆಯನ್ನು ಬಳಸಿಕೊಂಡು ಅಪ್ಲಿಕೇಶನ್ ಲಾಂಚ್ ಮಾಡಲು ನೆರವು ನೀಡುತ್ತದೆ. ಗೂಗಲ್ ಪ್ಲೇ ನಲ್ಲಿ ಹೋಮ್ ಬಟನ್ ಲಾಂಚರ್ ಅನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಆಟೊ ಕರೆಕ್ಟ್ ಆಫ್ ಮಾಡುವುದು

#9

ಆಟೊ ಕರೆಕ್ಟ್ ಆಪ್ಶನ್ ನಿಮಗೆ ಬೇಡವೆಂದಾದಲ್ಲಿ ಅದನ್ನು ಆಫ್ ಮಾಡಿಕೊಳ್ಳಬಹುದಾಗಿದೆ. ಸೆಟ್ಟಿಂಗ್ಸ್ > ಲಾಂಗ್ವೇಜ್ ಏಂಡ್ ಇನ್‌ಪುಟ್ > ಸೆಟ್ಟಿಂಗ್ ಐಕಾನ್ ಸ್ಪರ್ಶಿಸಿ ಇದು ನೀವು ಬಳಸುತ್ತಿರುವ ಕೀಬೋರ್ಡ್ ಪಕ್ಕದಲ್ಲಿರುತ್ತದೆ. ಉದಾ. ಗೂಗಲ್ ಕೀಬೋರ್ಡ್. ಆಟೊ ಕರೆಕ್ಶನ್‌ಗಾಗಿ ಹುಡುಕಿ ಮತ್ತು ಅದನ್ನು ಆಫ್ ಮಾಡಿ.

ವಿಭಿನ್ನ ಲಾಂಚರ್‌ಗಳನ್ನು ಪ್ರಯತ್ನಿಸಿ

#10

ಅದೇ ಹಳೆಯ ಮೊಬೈಲ್ ಇಂಟರ್ಫೇಸ್‌ನಿಂದ ನೀವು ಬೇಸರಗೊಂಡಿದ್ದೀರಿ ಎಂದಾದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಲಭ್ಯವಿರುವ ಲಾಂಚರ್‌ಗಳನ್ನು ನಿಮಗೆ ಬಳಸಬಹುದಾಗಿದೆ. ನೋವಾ, ಯಾಹೂ ಆವಿಯೇಟ್, ಏಡಿಡಬ್ಲ್ಯೂ ಮತ್ತು ಬಜ್ ಹೆಚ್ಚು ಜನಪ್ರಿಯ ಹಾಗೂ ಉಚಿತ ಲಾಂಚರ್‌ಗಳಾಗಿದ್ದು ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿದೆ. ನಿಮ್ಮ ಮೊಬೈಲ್ ಇಂಟರ್ಫೇಸ್ ಅನ್ನು ಈ ಲಾಂಚರ್‌ಗಳು ಹೆಚ್ಚು ವೇಗಗೊಳಿಸಲಿದೆ ಮತ್ತು ಆಸಕ್ತಿಕರವನ್ನಾಗಿಸಲಿದೆ.

ಕಳೆದು ಹೋದ ಫೋನ್ ಅನ್ನು ಲೊಕೇಟ್ ಮಾಡುವುದು ಮತ್ತು ವೈಪ್ ಮಾಡುವುದು

#11

ಮೊಬೈಲ್ ಕದ್ದು ಹೋಗುವುದು ಅಥವಾ ಎಲ್ಲಿಯಾದರೂ ಅದನ್ನಿಟ್ಟು ಅದಕ್ಕಾಗಿ ಹುಡುಕುವುದು ನಿಜಕ್ಕೂ ಖೇದಕರವಾಗಿದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು? ಹೆದರದಿರಿ! ಅದನ್ನು ಲೊಕೇಟಿಂಗ್ ಮಾಡುವ ಮೂಲಕ ನಿಮ್ಮ ಕಳೆದು ಹೋದ ಫೋನ್ ಅನ್ನು ಪತ್ತೆಮಾಡಬಹುದಾಗಿದೆ. ಅಂತೆಯೇ ಫೋನ್ ಲಾಕಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಪ್ಲಿಕೇಶನ್‌ಗಳು ಲಭ್ಯವಿದ್ದು ಇದು ಇನ್ ಬಿಲ್ಟ್ ಫೀಚರ್ ಅನ್ನು ಒಳಗೊಂಡಿದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್‌ನೊಂದಿಗೆ ಇಂತಹದ್ದನ್ನೇ ಮಾಡಬಹುದಾಗಿದೆ, ಗೂಗಲ್.ಕಾಮ್‌ಗೆ ಹೋಗಿ/ಆಂಡ್ರಾಯ್ಡ್/ಡಿವೈಸ್ ಮ್ಯಾನೇಜರ್ ಇಲ್ಲಿ ನಿಮ್ಮ ಫೋನ್ ಅನ್ನು ಆಯ್ಕೆಮಾಡಿ ಮತ್ತು ಅದನ್ನು ಲೊಕೇಟ್ ಮಾಡಲು ಆರಿಸಿ, ರಿಂಗ್ ಮಾಡಿ, ಲಾಕ್ ಮಾಡಿ, ಇಲ್ಲವೇ ಅದನ್ನು ಅಳಿಸಿ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

10 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವದಲ್ಲೇ ಹೆಚ್ಚು ಪ್ರಬಲ ದೇಶ ಭಾರತ
ಬೆಂಗಳೂರಿಗರಿಗೂ ಬಂತು ಆಪಲ್‌ನಲ್ಲಿ ಕೆಲಸ ಮಾಡುವ ಭಾಗ್ಯ
ಕರಾಳ ತಾಣದಲ್ಲಿದೆ ನಿಮ್ಮನ್ನು ತಲ್ಲಣಗೊಳಿಸುವ ಸಂಗತಿಗಳು

ಭೇಟಿ ನೀಡಿ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 10 cool tricks to optimise your Android phone, let's check them out.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot