ಆಂಡ್ರಾಯ್ಡ್ ಫೋನ್ ವೇಗವರ್ಧನೆಗಾಗಿ 11 ಟಿಪ್ಸ್

By Shwetha
|

ಯಾವುದೇ ಫೋನ್ ಆಗಿರಲಿ ಅದು ಅತ್ಯುತ್ತಮವಾಗಿ ಕೆಲಸ ಮಾಡಬೇಕು ಎಂಬುದೇ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರ ಮನದಾಸೆಯಾಗಿರುತ್ತದೆ. ಆದರೆ ಒಮ್ಮೊಮ್ಮೆ ನಿಮ್ಮ ಫೋನ್ ತುರ್ತು ಸಂದರ್ಭದಲ್ಲಿ ಕೈಕೊಡುವುದೇ ಜಾಸ್ತಿ ಅಲ್ಲವೇ? ಎಷ್ಟೇ ರಿಪೇರಿಗಳನ್ನು ನಡೆಸಿದರೂ ಆಮೆಗತಿಯಲ್ಲಿ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಚಾಲನೆಯಾಗುತ್ತವೆ. ಅಸಲಿಗೆ ಈ ದೋಷವನ್ನು ಸರಿಪಡಿಸಲು ನೀವು ಯಾವುದೇ ಫೋನ್ ರಿಪೇರಿಯವರನ್ನು ಎಡತಾಕಬೇಕಾಗಿಲ್ಲ.

ಓದಿರಿ: ಆಂಡ್ರಾಯ್ಡ್ ಫೋನ್ ಸರಳ ಬಳಕೆಗೆ 7 ಸೂತ್ರಗಳು

ಹೌದು ಓದುಗರೇ ನಿಮ್ಮ ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದು ಖಂಡಿತ ನಿಮಗೆ ಸಹಕಾರಿ ಎಂದೆನಿಸಲಿದೆ. ಹಾಗಿದ್ದರೆ ಬನ್ನಿ ನಿಮ್ಮ ಫೋನ್‌ನ ಸೆಟ್ಟಿಂಗ್‌ನೊಳಗೆ ಅವಿತಿರುವ ಈ ಟ್ರಿಕ್ಸ್‌ಗಳನ್ನು ಅರಿತುಕೊಂಡು ನಿಮ್ಮ ಫೋನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಿ.

ಅಪ್‌ಡೇಟ್

ಅಪ್‌ಡೇಟ್

ಅತ್ಯಾಧುನಿಕ ಸಾಫ್ಟ್‌ವೇರ್ ದೋಷಗಳನ್ನು ನಿವಾರಿಸುವಲ್ಲಿ ಮತ್ತು ಸಾಮಾನ್ಯ ಸುಧಾರಣೆಗಳನ್ನು ಮಾಡುವಲ್ಲಿ ನಿಮಗೆ ಸಹಕಾರಿಯಾಗಲಿವೆ. ಈ ಅಪ್‌ಡೇಟ್ ಪರಿಶೀಲಿಸಲು ಸೆಟ್ಟಿಂಗ್ಸ್ > ಅಬೌಟ್ ಡಿವೈಸ್ > ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಚೆಕ್ ಫಾರ್ ಅಪ್‌ಡೇಟ್ಸ್ ಇಲ್ಲಿಗೆ ಹೋಗಿ.

ಹೋಮ್ ಸ್ಕ್ರೀನ್ ಕ್ಲೀನ್ ಮಾಡಿ

ಹೋಮ್ ಸ್ಕ್ರೀನ್ ಕ್ಲೀನ್ ಮಾಡಿ

ನೀವು ಲೈವ್ ವಾಲ್‌ಪೇಪರ್ ಅನ್ನು ಆರಿಸಿದ್ದೀರಿ ಎಂದಾದಲ್ಲಿ ಅದನ್ನು ಉತ್ತಮ ಇಮೇಜ್‌ನಿಂದ ಸ್ಥಳಾಂತರಿಸಿ. ಬಳಕೆಯಾಗದ ಐಕಾನ್‌ಗಳನ್ನು ತೆರವುಗೊಳಿಸಿ ಮತ್ತು ನಿಮ್ಮ ವಿಜೆಟ್‌ಗಳನ್ನು ಸೀಮಿತಗೊಳಿಸಿ.

ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ನಿಮ್ಮ ಡಿವೈಸ್‌ನ ಹೆಚ್ಚಿನ ಸ್ಥಳವನ್ನು ಆಕ್ರಮಿಸುವ ಅಪ್ಲಿಕೇಶನ್‌ಗಳಿಗೆ ಲಗಾಮು ಹಾಕಿ. ಸೆಟ್ಟಿಂಗ್ಸ್ > ಆಪ್ಸ್ ಏಂಡ್ ನಂತರ ಇಲ್ಲಿಂದ ಆಲ್ ಟ್ಯಬ್‌ಗೆ ಹೋಗಿ. ಇಲ್ಲಿ ನಿಮಗೆ ಬೇಡವಾಗಿರುವ ಅಪ್ಲಿಕೇಶನ್‌ಗಳನ್ನು ತೆರವುಗೊಳಿಸಿ. ಸೆಟ್ಟಿಂಗ್ಸ್ > ಆಪ್ಸ್ ಎಟ್ ದ ರನ್ನಿಂಗ್ ಟ್ಯಾಬ್ ಇಲ್ಲೂ ಹೋಗಿ ನಿಮಗೆ ಪರಿಶೀಲಿಸಬಹುದಾಗಿದೆ.

ಅನಿಮೇಶನ್‌ಗಳನ್ನು ಕಡಿಮೆ ಮಾಡಿ

ಅನಿಮೇಶನ್‌ಗಳನ್ನು ಕಡಿಮೆ ಮಾಡಿ

ಕೆಲವೊಂದು ಅನಿಮೇಶನ್‌ಗಳನ್ನು ಆಫ್ ಮಾಡುವುದರ ಮೂಲಕ ನಿಮ್ಮ ಫೋನ್ ಅನ್ನು ವೇಗಗೊಳಿಸಬಹುದಾಗಿದೆ. ಸೆಟ್ಟಿಂಗ್ಸ್ > ಅಬೌಟ್ ಫೋನ್ ಮತ್ತು ಸಿಸ್ಟಮ್‌ಗೆ ಸ್ಕ್ರಾಲ್ ಡೌನ್ ಮಾಡಿ ಇಲ್ಲಿ ಬಿಲ್ಡ್ ನಂಬರ್ ನಿಮಗೆ ದೊರಕುತ್ತದೆ. ಇದರ ಮೇಲೆ ಏಳು ಬಾರಿ ತಟ್ಟಿರಿ ಇಲ್ಲಿ ಡೆವಲಪರ್‌ನಿಂದ ಸಂದೇಶ ದೊರೆಯುತ್ತದೆ.

ಕ್ಯಾಶ್ ಅಪ್ಲಿಕೇಶನ್ ಡೇಟಾ ತೆರವು

ಕ್ಯಾಶ್ ಅಪ್ಲಿಕೇಶನ್ ಡೇಟಾ ತೆರವು

ಅಪ್ಲಿಕೇಶನ್‌ಗಳಲ್ಲಿ ಕ್ಯಾಶ್ಡ್ ಡೇಟಾ ಹೆಚ್ಚು ಬೇಗನೇ ಲೋಡ್ ಆಗುತ್ತದೆ. ಇದು ನಿಮ್ಮ ಫೋನ್‌ನ ಹೆಚ್ಚುವರಿ ಸ್ಥಳವನ್ನು ಆಕ್ರಮಿಸಿಕೊಳ್ಳಬಹುದು. ಸಿಸಿ ಕ್ಲೀನರ್ ಕೂಡ ನಿಮ್ಮ ಅಪ್ಲಿಕೇಶನ್ ಕ್ಯಾಶ್ ತೆರವುಗೊಳಿಸುವಲ್ಲಿ ನಿಮಗೆ ಸಹಕಾರಿಯಾಗಲಿದೆ.

ಆಟೊ ಸಿಂಕ್ ಆಫ್ ಮಾಡಿ

ಆಟೊ ಸಿಂಕ್ ಆಫ್ ಮಾಡಿ

ಸೆಟ್ಟಿಂಗ್ಸ್ > ಅಕೌಂಟ್ಸ್ ಅಡಿಯಲ್ಲಿ ಆಟೊ ಸಿಂಕ್ ಆಪ್ಶನ್ ನಿಮಗೆ ದೊರೆಯುತ್ತದೆ. ಇನ್ನು ನಿಮಗೆ ಬೇಡದೇ ಇರುವ ಖಾತೆಗಳನ್ನು ತಕ್ಷಣವೇ ನಿವಾರಿಸಿಕೊಳ್ಳಿ.

ಕ್ಯಾಶ್ ಪಾರ್ಟಿಶನ್ ನಿವಾರಿಸಿಕೊಳ್ಳಿ

ಕ್ಯಾಶ್ ಪಾರ್ಟಿಶನ್ ನಿವಾರಿಸಿಕೊಳ್ಳಿ

ನಿಮ್ಮ ಅಪ್ಲಿಕೇಶನ್ ಡೇಟಾ ಕ್ಯಾಶ್‌ಗಿಂತ ಕ್ಯಾಶ್ ಪಾರ್ಟಿಶನ್ ಭಿನ್ನವಾದುದು. ಇದು ತಾತ್ಕಾಲಿಕ ಫೈಲ್‌ಗಳನ್ನು ಒಳಗೊಂಡಿರುತ್ತದೆ. ಒಮ್ಮೆಯಾದರೂ ಇದನ್ನು ತೆರವುಗೊಳಿಸಲೇಬೇಕು. ಗೂಗಲ್ ಸರ್ಚ್ ಮಾಡುವುದರ ಮೂಲಕ ಇದನ್ನು ಹುಡುಕಿಕೊಳ್ಳಬಹುದಾಗಿದೆ.

ಥರ್ಡ್ ಪಾರ್ಟಿ ಲಾಂಚರ್

ಥರ್ಡ್ ಪಾರ್ಟಿ ಲಾಂಚರ್

ಕೆಲವೊಂದು ಓಇಎಮ್‌ಗಳು ತಮ್ಮ ಡಿವೈಸ್‌ಗಳನ್ನು ಹೆವಿ ಮಾಡಿಬಿಡುತ್ತವೆ. ಇದನ್ನು ಬದಲಾಯಿಸಬೇಕು ಎಂದಾದಲ್ಲಿ ಕೆಲವೊಂದು ಥರ್ಡ್ ಪಾರ್ಟಿ ಲಾಂಚರ್ ಅನ್ನು ನೀವು ಪ್ರಯತ್ನಿಸಬೇಕು. ನೋವಾ ಲಾಂಚರ್, ಗೋ ಲಾಂಚರ್ ಎಕ್ಸ್, ಅಪೆಕ್ಸ್ ಲಾಂಚರ್ ಮುಂತಾದುವು ಈ ಅಪ್ಲಿಕೇಶನ್‌ಗಳಾಗಿವೆ.

ಫ್ಯಾಕ್ಟಿ ರೀಸೆಟ್

ಫ್ಯಾಕ್ಟಿ ರೀಸೆಟ್

ಇದನ್ನು ನಿರ್ವಹಿಸಲು ಸೆಟ್ಟಿಂಗ್ಸ್ > ಬ್ಯಾಕಪ್ ಏಂಡ್ ರೀಸೆಟ್ > ಫ್ಯಾಕ್ಟ್ರಿ ಡೇಟಾ ರೀಸೆಟ್ ನಿಮ್ಮ ಡಿವೈಸ್ ಅನ್ನು ಕ್ಲೀನ್ ಮಾಡುವ ಶಾರ್ಟ್ ಕಟ್ ಇದಾಗಿದೆ. ಇದನ್ನು ನೀವು ನಿರ್ವಹಿಸುತ್ತೀರಿ ಎಂದಾದಲ್ಲಿ ಡಿವೈಸ್‌ನಲ್ಲಿರುವ ಫೈಲ್‌ಗಳನ್ನು ಬ್ಯಾಕಪ್ ಮಾಡಿಟ್ಟುಕೊಳ್ಳಿ.

ಡಿವೈಸ್ ಓವರ್ ಲಾಕ್

ಡಿವೈಸ್ ಓವರ್ ಲಾಕ್

ನಿಮ್ಮ ಆಂಡ್ರಾಯ್ಡ್ ಡಿವೈಸ್ ಅನ್ನು ರೂಟ್ ಮಾಡಬೇಕು ಎಂದು ನೀವು ಬಯಸಿದ್ದಲ್ಲಿ ಸೆಟ್ ಸಿಪಿಯು ಅಥವಾ ಆಂಡ್ರಾಯ್ಡ್ ಓವರ್ ಲಾಕ್ ಅಪ್ಲಿಕೇಶನ್ ಬಳಸಿ ನಿಮ್ಮ ಡಿವೈಸ್ ಅನ್ನು ಓವರ್ ಲಾಕ್ ಮಾಡಬಹುದಾಗಿದೆ.

ಕಸ್ಟಮ್ ROM ಇನ್‌ಸ್ಟಾಲ್ ಮಾಡಿ

ಕಸ್ಟಮ್ ROM ಇನ್‌ಸ್ಟಾಲ್ ಮಾಡಿ

ನಿಮ್ಮ ಆಂಡ್ರಾಯ್ಡ್ ಡಿವೈಸ್ ಅನ್ನು ರೂಟ್ ಮಾಡುವುದು ಸ್ವಯಂಚಾಲಿತವಾಗಿ ಯಾವುದೇ ಕಾರ್ಯಕ್ಷಮತೆ ಸುಧಾರಣೆಗಳನ್ನು ಉಂಟುಮಾಡುವುದಿಲ್ಲ ಆದರೆ ಕಸ್ಟಮ್ ROM ಇದನ್ನು ನಿರ್ವಹಿಸುತ್ತದೆ. ಸೂಕ್ತವಾದ ಕಸ್ಟಮ್ ROM ಅನ್ನು ಹುಡುಕಾಡಲು ಕೆಲವೊಂದು ಸಂಶೋಧನೆಗಳನ್ನು ನೀವು ನಡೆಸಬೇಕಾಗುತ್ತದೆ.

Best Mobiles in India

English summary
There are various ways to speed up that Android performance, and a few things you can do to make it feel faster.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X